ಮುಂಬೈ(ಮೇ.03): ಸರಕು, ಎಫ್ಎಂಸಿಜಿ, ಮಾಹಿತಿ ತಂತ್ರಜ್ಞಾನ, ತಂತ್ರಜ್ಞಾನ ವಲಯಗಳ ಷೇರುಗಳ ಮಾರಾಟ ಒತ್ತಡದಿಂದ ಮುಂಬೈ ಷೇರು ಪೇಟೆ ಸೂಚ್ಯಂಕ ಸತತ ಮೂರು ದಿನಗಳಿಂದ ಕುಸಿತ ಕಂಡಿದೆ. 

ಇಂದಿನ ದಿನದ ಅಂತ್ಯಕ್ಕೆ ಸೆನ್ಸೆಕ್ಸ್ 18.17 ಅಂಕ ಕುಸಿತದೊಂದಿಗೆ 38,963.26ಕ್ಕೆ ಇಳಿದು 39 ಸಾವಿರದ ಅಂಕಕ್ಕೆ ಇಳಿದಿದೆ. ಇದೇ ವೇಳೆ ನಿಫ್ಟಿ ಕೂಡ 12.50 ಅಂಕ ಇಳಿಕೆಯೊಂದಿಗೆ 11,712.25ಕ್ಕೆ ಇಳಿದಿದೆ. 

ಸರಕು, ಎಫ್ಎಂಸಿಜಿ, ಆರೋಗ್ಯ ರಕ್ಷಣೆ, ಮಾಹಿತಿ ತಂತ್ರಜ್ಞಾನ, ತಂತ್ರಜ್ಞಾನ ವಲಯದ ಷೇರುಗಳು ಸೂಚ್ಯಂಕ ಏರಿಕೆಗೆ ಅಡ್ಡಿಯಾಗಿವೆ. ಟಿಸಿಎಸ್, ಎಚ್ಎಲ್ಎಲ್, ಟಾಟಾ ಸ್ಟೀಲ್ ಮತ್ತು ಇನ್ಫೋಸಿಸ್ ಷೇರುಗಳುಗಳು ತೀವ್ರ ಮಾರಾಟದ ಒತ್ತಡಕ್ಕೆ ಒಳಗಾಗಿವೆ ಎನ್ನಲಾಗಿದೆ.