ಮುಂಬೈ(ಡಿ.21): ನಿನ್ನೆಯಷ್ಟೇ ಉತ್ತಮ ಅಂಕ ಗಳಿಸುವುದರೊಂದಿಗೆ ಏರಿಕೆಯತ್ತ ಮುಖ ಮಾಡಿದ್ದ ಭಾರತೀಯ ಷೇರು ಮಾರುಕಟ್ಟೆ, ಇಂದು ದಿಢೀರ್ ಕುಸಿತ ಕಾಣುವ ಮೂಲಕ ಅಚ್ಚರಿ ಮೂಡಿಸಿದೆ.

ರಿಯಾಲಿಟಿ, ಬ್ಯಾಂಕಿಂಗ್, ಐಟಿ ಮತ್ತು ಆಟೋ ಬ್ಲೂಚಿಪ್ ಕ್ಷೇತ್ರದಲ್ಲಿ ಜಾಗತಿಕ ಮಾರುಕಟ್ಟೆಗಳಿಂದ ನಿರುತ್ಸಾಹ ಕಂಡುಬಂದ ಹಿನ್ನೆಲೆಯಲ್ಲಿ ಸೆನ್ಸೆಕ್ಸ್ ಹಾಗೂ ನಿಫ್ಟಿ ಸೂಚ್ಯಂಕಗಳಲ್ಲಿ ಭಾರೀ ಇಳಿಕೆಯಾಗಿದೆ.

ಬಿಎಸ್ಇ ಸೆನ್ಸೆಕ್ಸ್ 689.60 ಪಾಯಿಂಟ್ ಕುಸಿದು 35,742.07 ಕ್ಕೆ ಇಳಿದಿದೆ. ಇದೇ ವೇಳೆ ನಿಫ್ಟಿ ಸೂಚ್ಯಂಕ ಕೂಡ 197.70 ಪಾಯಿಂಟ್ ಕುಸಿದಿದ್ದು 10,754 ಕ್ಕೆ ತಲುಪಿದೆ.

ರಿಲಯನ್ಸ್, ಇನ್ಫೋಸಿಸ್, ಟಿಸಿಎಸ್, ಐಸಿಐಸಿಐ ಬ್ಯಾಂಕ್, ಐಟಿಸಿ, ಮಾರುತಿ, ಎಲ್ ಆಂಡ್ ಟಿ, ಆಕ್ಸಿಸ್ ಬ್ಯಾಂಕ್, ವಿಪ್ರೋ ಮತ್ತು ಇಂಡಸ್ ಲ್ಯಾಂಡ್ ಬ್ಯಾಂಕ್ ಗಳು ಶೇ.4ರಷ್ಟು ನಷ್ಟ ಅನುಭವಿಸಿವೆ.

ತೈಲ ಬೆಲೆ ಭಾರೀ ಕುಸಿತ: ದಂಗಾದರು ಕಂಡು ಸೆನ್ಸೆಕ್ಸ್ ಜಿಗಿತ!

ಬಿಜೆಪಿ ಸೋತರೂ ಇಳಿದಿಲ್ಲ ಸೆನ್ಸೆಕ್ಸ್

ಊರ್ಜಿತ್ ಹೋದ್ರು, ಮಕಾಡೆ ಮಲಗಿತು ಸೆನ್ಸೆಕ್ಸ್!