ಮುನ್ನುಗ್ಗಿದ ಸೆನ್ಸೆಕ್ಸ್ ಗೂಳಿ: 11 ಸಾವಿರದ ಗಡಿ ದಾಟಿದ ನಿಫ್ಟಿ

Sensex edges past 36,900 to touch a new high, Nifty holds above 11,100
Highlights

ದಾಖಲೆ ಏರಿಕೆ ಕಂಡ ಸೆನ್ಸೆಕ್ಸ್

11 ಸಾವಿರದ ಗಡಿ ದಾಟಿದ ನಿಫ್ಟಿ

150 ಅಂಕಗಳ ಏರಿಕೆ ಕಂಡ ಸೆನ್ಸೆಕ್ಸ್

ಏಷ್ಯಾ ಮಾರುಕಟ್ಟೆಯಲ್ಲಿ ಸಕಾರಾತ್ಮಕ ಬೆಳವಣಿಗೆ

ಮುಂಬೈ(ಜು.24): ವಾರದ ಆರಂಭದ ದಿನ ಚೇತರಿಕೆ ಕಂಡಿದ್ದ ಭಾರತೀಯ ಷೇರುಮಾರುಕಟ್ಟೆ, ಮಂಗಳವಾರವೂ ಅದೇ ಟ್ರೆಂಡ್ ಮುಂದುವರೆಸಿದೆ. ಮಂಗಳವಾರ ಬೆಳಗ್ಗೆ ವಹಿವಾಟು ಆರಂಭವಾಗುತ್ತಿದ್ದಂತೆಯೇ ಸೆನ್ಸೆಕ್ಸ್ ದಾಖಲೆ ಅಂಶಗಳ ಏರಿಕೆ ಕಂಡಿದೆ.

ಇಂದು ಬೆಳಗ್ಗೆ ವಹಿವಾಟು ಆರಂಭವಾಗುತ್ತಿದ್ದಂತೆಯೇ 150 ಅಂಕಗಳ ಏರಿಕೆ ಕಂಡ ಸೆನ್ಸೆಕ್ಸ್ ದಾಖಲೆ 36,869.34  ಅಂಕಗಳಿಗೆ ಏರಿಕೆ ಕಂಡಿತು. ಪ್ರಮುಖವಾಗಿ ಏಷ್ಯಾ ಮಾರುಕಟ್ಟೆಯಲ್ಲಿ ಕಂಡುಬಂದ ಸಕಾರಾತ್ಮಕ ಬೆಳವಣಿಗೆ ಮತ್ತು ಹೂಡಿಕೆದಾರರು ಹೆಚ್ಚಿನ ಪ್ರಮಾಣದಲ್ಲಿ ಹೂಡಿಕೆ ಮಾಡಲು ಮುಂದಾಗಿರುವುದರಿಂದ ಸೆನ್ಸೆಕ್ಸ್ ದಾಖಲೆಯ ಏರಿಕೆ ಕಂಡಿದೆ.

ಅಂತೆಯೇ ನಿಫ್ಚಿ ಕೂಡ ಏರಿಕೆಯತ್ತ ಮುಖ ಮಾಡಿದ್ದು ನಿಫ್ಟಿ 11 ಸಾವಿರದ ಗಡಿ ದಾಟಿದೆ.. ಆ ಮೂಲಕ ಕಳೆದ ಎರಡು ದಿನಗಳಲ್ಲಿ ಸೆನ್ಸೆಕ್ಸ್ 367.37 ಅಂಕಗಳಿಕೆ ಮಾಡಿದ್ದು, ನಿಫ್ಟಿ 0.37ರಷ್ಟು ಏರಿಕೆ ಕಂಡಿದೆ. ಇನ್ನು ಇಂದಿನ ದಾಖಲೆಯ ಏರಿಕೆ ಮೂಲಕ  ಉಕ್ಕು, ಇಂಧನ, ಗ್ಯಾಸ್ ಮತ್ತು ಮೂಲಭೂತ ಸೌಕರ್ಯಕ್ಷೇತ್ರಗಳ ಷೇರುಗಳು ಉತ್ತಮ ವಹಿವಾಟು ಕಂಡಿವೆ. ಇದಲ್ಲದೆ ಕ್ಯಾಪಿಟಲ್ ಗೂಡ್ಸ್ ವಹಿವಾಟಿನಲ್ಲಿ 0.88ರಷ್ಟು ಏರಿಕೆ ಕಂಡಿದೆ.

ಮಾರುತಿ ಸುಜುಕಿ. ಟಾಟಾ ಮೋಟರ್ಸ್. ಎಂಅಂಡ್ಎಂ, ಟಾಟಾ ಸ್ಟೀಲ್, ಅಡಾನಿ ಪೋರ್ಟ್ಸ, ಎಲ್ ಅಂಡ್ ಟಿ, ಐಸಿಐಸಿಐ ಬ್ಯಾಂಕ್. ಕೋಲ್ ಇಂಡಿಯಾ, ಇಂಡಸ್ ಇಂಡ್, ಎಚ್ ಡಿಎಫ್ ಸಿ ಬ್ಯಾಂಕ್, ಇನ್ಫೋಸಿಸ್, ಪವರ್ ಗ್ರಿಡ್, ಕೋಟಕ್ ಬ್ಯಾಂಕ್, ಎಸ್ ಬಿಐ, ಏಷ್ಯನ್ ಪೇಂಟ್ಸ್, ಏಕ್ಸಿಸ್ ಬ್ಯಾಂಕ್, ಸನ್ ಫಾರ್ಮಾ ಷೇರುಗಳ ಮೌಲ್ಯದಲ್ಲಿ ಶೇ.1.42ರಷ್ಟು ಏರಿಕೆ ಕಂಡುಬಂದಿದೆ.

loader