ಇತಿಹಾಸ ಸೃಷ್ಟಿಸುವತ್ತ ಷೇರು ಮಾರುಕಟ್ಟೆ: ಸಾರ್ವಕಾಲಿಕ ದಾಖಲೆ!

Sensex Conquers 37,000 Peak, Nifty At All-Time High Of 11,179: 10 Points
Highlights

ಏರುತ್ತಲೇ ಇರುವ ಮುಂಬೈ ಷೇರು ಮಾರುಕಟ್ಟೆ

ಸೆನ್ಸೆಕ್ಸ್ ಸಾರ್ವಕಾಲಿಕ ದಾಖಲೆ ನಿರ್ಮಾಣ

37 ಸಾವಿರ ಗಡಿದಾಟಿದ ಬಿಎಸ್ ಇ ಸೆನ್ಸೆಕ್ಸ್

ತ್ರೈಮಾಸಿಕ ವರದಿಗಳ ಸಕಾರಾತ್ಮಕ ಅಂಶ 

ಮುಂಬೈ(ಜು26): ಭಾರತೀಯ ಷೇರು ಮಾರುಕಟ್ಟೆ ಮತ್ತೆ ಸಾರ್ವಕಾಲಿಕ ದಾಖಲೆ ನಿರ್ಮಾಣ ಮಾಡಿದ್ದು, ಸೆನ್ಸೆಕ್ಸ್ 37 ಸಾವಿರ ಗಡಿದಾಟುವ ಮೂಲಕ ಈ ಹಿಂದಿನ ದಾಖಲೆಗಳನ್ನು ಹಿಂದಿಕ್ಕಿದೆ.

ಕಳೆದ ಮೂರು ದಿನಗಳಿಂದ ಏರುಗತಿಯಲ್ಲಿ ಸಾಗುತ್ತಿರುವ ಬಿಎಸ್ ಇ ಸೆನ್ಸೆಕ್ಸ್, ಇದೇ ಮೊದಲ ಬಾರಿಗೆ 37 ಸಾವಿರ ಗಡಿ ದಾಟಿದೆ. ಪ್ರಸ್ತುತ ಬಿಎಸ್‌ಇ ಸೆನ್ಸೆಕ್ಸ್ ಶೇ.042ರಷ್ಟು ಏರಿಕೆಯೊಂದಿಗೆ  37,014.65 ಅಂಕಗಳಲ್ಲಿ ವಹಿವಾಟು ನಡೆಸುತ್ತಿದ್ದು, 40.20 ಅಂಕಗಳ ಏರಿಕೆಯೊಂದಿಗೆ 11, 100 ಅಂಕಗಳಿಗೇರಿದೆ.

ಇಂದಿನ ವಹಿವಾಟಿನಿಂದ ಪ್ರಮುಖವಾಗಿ ಬಂಡವಾಳ ಸರಕು ಕ್ಷೇತ್ರ, ಎಫ್ ಎಂಸಿಜಿ, ರಿಯಲ್ ಎಸ್ಟೇಟ್ ಮತ್ತು ಬ್ಯಾಂಕಿಂಗ್ ಕ್ಷೇತ್ರಗಳ ಷೇರುಗಳಿಗೆ ಹೆಚ್ಚಿನ ಬೇಡಿಕೆ ಕಂಡುಬಂದಿದೆ. ಪ್ರಮುಖವಾಗಿ ದೇಶೀಯ ಹೂಡಿಕೆದಾರರೇ ಈ ಕ್ಷೇತ್ರದ ಷೇರುಗಳ ಮೇಲೆ ಭರವಸೆ ಇಟ್ಟು ಖರೀದಿ ಮಾಡುತ್ತಿರುವುದರಿಂದ ಷೇರುಗಳ ಮೌಲ್ಯದಲ್ಲಿ ಏರಿಕೆಯಾಗಿದೆ.

ಸಂಸ್ಥೆಗಳ ಮೊದಲ ತ್ರೈಮಾಸಿಕ ವರದಿಗಳ ಸಕಾರಾತ್ಮಕ ಅಂಶ ಷೇರು ಮಾರುಕಟ್ಟೆ ಮೇಲೆ ಪರಿಣಾಮ ಬೀರಿದ್ದು, ಎಸ್‌ಬಿಐ, ಭಾರ್ತಿ ಏರ್ ಟೆಲ್, ಟಾಟಾ ಮೋಟಾರ್ಸ್, ಐಟಿಸಿ, ಕೋಲ್ ಇಂಡಿಯಾ, ಎಲ್ ಅಂಡ್ ಟಿ, ಒಎನ್‌ಜಿಸಿ, ಎಚ್ ಡಿಎಫ್‌ಸಿ ಬ್ಯಾಂಕ್ ಸೇರಿದಂತೆ ಹಲವು ಸಂಸ್ಥೆಗಳು ಲಾಭ ಗಳಿಸಿವೆ.

loader