ಇನ್ನೇನು ರಿಟೈರ್ಡ್ ಆಗಬೇಕಿರೋ ಸ್ಕೂಲ್ ಬಸ್ ಡ್ರೈವರ್‌ಗೆ ಹೊಡೀತು ಲಾಟರಿ, ಬದುಕು ಬಿಂದಾಸ್!
ಅದೃಷ್ಟವಿದ್ರೆ ತುರ್ತು ಸಮಯದಲ್ಲಿ ಹಣ ಕೈ ಸೇರುತ್ತದೆ. ಇದಕ್ಕೆ ಈ ಚಾಲಕ ನಿದರ್ಶನ. ನಿವೃತ್ತಿ ಪ್ಲಾನ್‌ನಲ್ಲಿದ್ದ ವ್ಯಕ್ತಿ ಪವರ್ಬಾಲ್ ಆಡುವ ಪ್ರಯತ್ನಕ್ಕೆ ಕೈ ಹಾಕಿದ್ದಾನೆ. ಲಕ್ ಖುಲಾಯಿಸಿದೆ. ಭರ್ಜರಿ ಮೊತ್ತ ಕೈ ಸೇರಿದೆ.

ಪ್ರತಿ ದಿನ ದುಡಿದು ತಿನ್ನೋರಿಗೆ, ತಿಂಗಳ ಸಂಬಳಕ್ಕಾಗಿ ಪ್ರತಿ ದಿನ ಹಗಲು ರಾತ್ರಿ ಕಷ್ಟಪಡುವವರಿಗೆ ಒಂದೇ ಬಾರಿ ಸ್ವಲ್ಪ ಹಣ ಸಿಕ್ಕಿದ್ರೂ ಖುಷಿಯಾಗುತ್ತದೆ. ಅನೇಕ ಉದ್ಯೋಗಿಗಳು ಹಬ್ಬದ ಸಮಯದಲ್ಲಿ ಕಂಪನಿ ನೀಡುವ ಬೋನಸ್ ಗಾಗಿ ಕಾದು ಕುಳಿತಿರುತ್ತಾರೆ. ಒಂದೊಂದು ರೂಪಾಯಿ ಕೂಡ ನಮ್ಮ ಜೀವನದಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ. ಕೆಲಸ ಯಾವುದೇ ಆದ್ರೂ ಅದಕ್ಕೊಂದು ಮಹತ್ವವಿದೆ.
ಸ್ಕೂಲ್ (School) ಬಸ್ ಓಡಿಸುವ ಚಾಲಕನಿಗೆ ಜವಾಬ್ದಾರಿ ಹೆಚ್ಚು. ಇದನ್ನು ಅನೇಕರು ಸಣ್ಣ ಕೆಲಸವೆಂದು ನೋಡ್ತಾರೆ. ಚಾಲಕ (Driver) ಎಂದಾಗ ಅವರನ್ನು ಕೀಳಾಗಿ ನೋಡುವವರಿದ್ದಾರೆ. ಆದ್ರೆ ಎಚ್ಚರಿಕೆಯಿಂದ ವಾಹನ ಚಲಾಯಿಸಿ ಮಕ್ಕಳನ್ನು ಸುರಕ್ಷಿತವಾಗಿ ಮನೆ ತಲುಪಿಸುವುದು ದೊಡ್ಡ ಜವಾಬ್ದಾರಿ. ಆದ್ರೆ ಈ ಕೆಲಸ ಮಾಡುವ ಚಾಲಕರಿಗೆ ಸಿಗೋದು ಅತ್ಯಲ್ಪ ಹಣ (Money). ಇದನ್ನೇ ನಂಬಿ ತಮ್ಮ ಕುಟುಂಬ ನಿರ್ವಹಣೆ ಮಾಡುವ ಅನೇಕರಿದ್ದಾರೆ. ವಯಸ್ಸಾಗ್ತಿದ್ದಂತೆ ಕೆಲಸ ಮಾಡೋದು ಕಠಿಣವಾಗ್ತಾ ಬರುತ್ತದೆ. ದೃಷ್ಟಿ ಸಮಸ್ಯೆ ಸೇರಿದಂತೆ ಅನೇಕ ಅನಾರೋಗ್ಯಗಳು ಅವರನ್ನು ಕಾಡುತ್ತದೆ. ಹಾಗಂತ ಸುಮ್ಮನೆ ಕುಳಿತುಕೊಳ್ಳಲು ಸಾಧ್ಯವಿಲ್ಲ. ಮನೆಯಲ್ಲಿದ್ರೆ ಹೊಟ್ಟೆ ತುಂಬೋದಿಲ್ಲ, ನಿವೃತ್ತಿ ಪಡೆದ್ರೆ ಪಿಂಚಣಿ ಸಿಗೋದಿಲ್ಲ. ಈ ಎಲ್ಲ ಗೊಂದಲದ ಮಧ್ಯೆಯೇ ಇನ್ಮುಂದೆ ಕೆಲಸ ಸಾಕು ಎನ್ನುವ ನಿರ್ಧಾರ ತೆಗೆದುಕೊಳ್ಳುತ್ತಿದ್ದ ವ್ಯಕ್ತಿ ಜೀವನದಲ್ಲಿ ಮ್ಯಾಜಿಕ್ ನಡೆದಿದೆ.
ಆರು ವರ್ಷ ನಯಾಪೈಸೆ ಸಂಪಾದನೆಯಿಲ್ಲದೆ ಒದ್ದಾಡಿದ್ದ ನೌಕರಿ ಡಾಟ್ ಕಾಮ್ ಸ್ಥಾಪಕ ಇಂದು 19 ಸಾವಿರ ಕೋಟಿ ಒಡೆಯ!
11 ವರ್ಷಗಳ ಕಾಲ ಶಾಲಾ ಬಸ್ ಚಾಲಕನಾಗಿ ಕೆಲಸ ಮಾಡಿದ ವ್ಯಕ್ತಿ ಜೇಮ್ಸ್ ಕಿಯೋನ್ಗೆ ಲಾಟರಿ ಪವರ್‌ಬಾಲ್ ಟಿಕೆಟ್‌ನಲ್ಲಿ 100,000 ಡಾಲರ್ ಸಿಕ್ಕಿದೆ. ಈ ಲಾಟರಿ ಗೆದ್ದ ನಂತರ ಚಾಲಕ ತನ್ನ ಕೆಲಸಕ್ಕೆ ನಿವೃತ್ತಿ ಘೋಷಿಸಿದ್ದಾನೆ. ಜೇಮ್ಸ್ ಕಿಯೋನ್ ಆಗಸ್ಟ್ 19ರಂದು ಪವರ್ ಬಾಲ್ ಲಾಟರಿ ಖರೀದಿ ಮಾಡಿದ್ದ.
ಪವರ್ ಬಾಲ್ ಆಡಲು ಬಯಸುವ ಜನರು 1 ರಿಂದ 69 ಸಂಖ್ಯೆ ಒಳಗೆ 5 ಸಂಖ್ಯೆಗಳನ್ನು ಆಯ್ಕೆ ಮಾಡಬೇಕಾಗುತ್ತದೆ. ಜೊತೆಗೆ 1 ರಿಂದ 26 ರವರೆಗಿನ ಒಂದು ಪವರ್‌ಬಾಲ್ ಸಂಖ್ಯೆಯನ್ನು ಆರಿಸಬೇಕಾಗುತ್ತದೆ. ಪವರ್‌ಬಾಲ್ ಆಪರೇಟರ್ ನಂತ್ರ ಸಂಖ್ಯೆಯನ್ನು ಘೋಷಣೆ ಮಾಡ್ತಾನೆ. ನೀವು ಆಯ್ಕೆ ಮಾಡಿದ ಸಂಖ್ಯೆ ಇದಕ್ಕೆ ಹೊಂದಿಕೆಯಾದ್ರೆ ನಿಮಗೆ ಹಣ ಸಿಗುತ್ತದೆ. ಒಂದು ಸಂಖ್ಯೆ ಹೊಂದಿಕೆಯಾದ್ರೆ, ಎರಡು ಹೊಂದಿಕೆಯಾದ್ರೆ, ಐದಕ್ಕೆ ಐದೂ ಹೊಂದಿಕೆಯಾದ್ರೆ ಬೇರೆ ಬೇರೆ ಮೊತ್ತ ನಿಮಗೆ ಸಿಗುತ್ತದೆ.
ಭಾರತದಲ್ಲಿ UPI ಎಟಿಎಂ ಕ್ರಾಂತಿ, ಡೆಬಿಟ್ ಕಾರ್ಡ್ ಇಲ್ಲದೆ ಸ್ಕ್ಯಾನ್ ಮೂಲಕ ಹಣ ವಿಥ್‌ಡ್ರಾ ಮಾಡಿ!
ಪವರ್ ಬಾಲ್ ಟಿಕೆಟ್ ಖರೀದಿ ಮಾಡಿದ್ದ ಜೇಮ್ಸ್ ಕಿಯಾನ್, ಮರುದಿನ ಮೊಬೈಲ್ ನಲ್ಲಿ ಚೆಕ್ ಮಾಡಿದ್ದಾನೆ. ಆಗ ನಾಲ್ಕು ಸಂಖ್ಯೆ ಹೊಂದಿಕೆಯಾಗಿರುವುದು ಕಂಡು ಬಂದಿದೆ. ಅಂದ್ರೆ ಅವರಿಗೆ 50 ಸಾವಿರ ಡಾಲರ್ ಹಣ ಸಿಗಬೇಕಿತ್ತು. ಆದ್ರೆ ಆಟದ ವೇಳೆ ಕಿಯಾನ್, ಪವರ್ ಪ್ಲೇ ಆಯ್ಕೆ ಮಾಡಿಕೊಂಡಿದ್ದ. ಹಾಗಾಗಿ 100,000 ಡಾಲರ್ ನಗದು ಸಿಕ್ಕಿದೆ.
ಇದ್ರಿಂದ ಖುಷಿಗೊಂದ ಕಿಯಾನ್ ಈ ವಿಷ್ಯವನ್ನು ಪತ್ನಿ ಮೊಂಟಾಗೆ ಹೇಳಿದ್ದಾನೆ. ಈ ವಿಷ್ಯ ಕೇಳಿದ ಮೊಂಟಾ ತುಂಬಾ ಖುಷಿಯಾಗಿದ್ದಳು. ಉತ್ಸುಕಳಾಗಿದ್ದಳು. ಈಗ ಕಿಯಾನ್ ಗೆ ಹಣ ಸಿಕ್ಕಿದೆ. 71,500 ಡಾಲರ್ ಚೆಕ್ ಕಿಯಾನ್ ಕೈ ಸೇರಿದೆ. ಲಾಟರಿ ಹೊಡೆಯುತ್ತಿದ್ದಂತೆ ತನ್ನ ಬಾಸ್ ಗೆ ಕರೆ ಮಾಡಿದ್ದ ಕಿಯಾನ್, ತಾನು ಕೆಲಸ ಬಿಡುವುದಾಗಿ ಹೇಳಿದ್ದ. ನನಗೆ ಲಾಟರಿ ಹೊಡೆದಿದೆ. ನಾನು ಕೆಲಸದಿಂದ ನಿವೃತ್ತಿ ಪಡೆಯುತ್ತೇನೆ ಎಂದಿದ್ದನಂತೆ. ವಿಕಲಾಂಗ ಬೆಕ್ಕುಗಳ ಸಂಖ್ಯೆ ಕಿಯಾನ್ ವಾಸವಾಗಿರುವ ಪ್ರದೇಶದಲ್ಲಿ ಹೆಚ್ಚಿದ್ದು, ಬೆಕ್ಕಿನ ಮರಿಗಳು ಹಾಗೂ ಬೆಕ್ಕುಗಳನ್ನು ರಕ್ಷಿಸುವ ಆಶ್ರಮಕ್ಕೆ ಬೆಂಬಲ ನೀಡುವ ಬಗ್ಗೆ ಈ ದಂಪತಿ ಆಲೋಚನೆ ಮಾಡ್ತಿವೆ.