Asianet Suvarna News Asianet Suvarna News

SBI Gift to Customers: 5 ಲಕ್ಷದವರೆಗಿನ IMPS ವಹಿವಾಟಿಗೆ ಇನ್ನು ಚಾರ್ಜ್ ಇರಲ್ಲ!

ಹಣ ವರ್ಗಾವಣೆ ಮಾಡುವ ತ್ವರಿತ ವಿಧಾನ ಐಎಂಪಿಎಸ್
ಇತ್ತೀಚೆಗಷ್ಟೇ IMPS ವಹಿವಾಟು ಮಿತಿಯನ್ನು 2 ರಿಂದ 5 ಲಕ್ಷಕ್ಕೆ ಏರಿಸಿದ್ದ ಆರ್ ಬಿಐ
ಎಸ್ ಬಿಐನಲ್ಲಿ ಇನ್ನು 5 ಲಕ್ಷದವರೆಗಿನ IMPS ವಹಿವಾಟಿಗೆ ನೋ ಚಾರ್ಜ್

SBIs gift to customers IMPS transfer up to Rs 5 lakh will not be charged san
Author
Bengaluru, First Published Jan 5, 2022, 1:59 PM IST

ಬೆಂಗಳೂರು (ಜ.5): ದೇಶದ ಅತಿದೊಡ್ಡ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank of India ) ತನ್ನ ಗ್ರಾಹಕರಿಗೆ ಹೊಸ ವರ್ಷದ ಉಡುಗೊರೆಯನ್ನು ನೀಡಿದೆ. ನೆಟ್ ಬ್ಯಾಂಕಿಂಗ್ (Net Banking) ಅಥವಾ ಮೊಬೈಲ್ ಬ್ಯಾಂಕಿಂಗ್ (Mobile Banking) ಮೂಲಕ ಮಾಡಲಾಗುವ 5 ಲಕ್ಷದವರೆಗಿನ ಇಮ್ಮಿಡಿಯೇಟ್ ಪೇಮೆಂಟ್ ಸರ್ವೀಸ್ (ಐಎಂಪಿಎಸ್) ಇನ್ನು ಮುಂದೆ ಯಾವುದೇ ಚಾರ್ಜ್ ಇರುವುದಿಲ್ಲ. ಆದರೆ, ಬ್ಯಾಂಕ್ ನ ಶಾಖೆಗೆ ತೆರಳಿ ಮಾಡಲಾಗುವ ಐಎಂಪಿಎಸ್ ಗೆ (Immediate Payment Service) ಚಾರ್ಜ್ ಮುಂದುವರಿಯಲಿದೆ ಎಂದು ಎಸ್ ಬಿಐ (SBI) ಪ್ರಕಟಣೆಯಲ್ಲಿ ತಿಳಿಸಿದೆ. ಇದಕ್ಕೂ ಮುನ್ನ 2 ಲಕ್ಷದವರೆಗಿನ ಆನ್ ಲೈನ್ ಐಎಂಪಿಎಸ್ (Online IMPS)ವಹಿವಾಟಿಗೆ ಯಾವುದೇ ಚಾರ್ಜ್ ಅನ್ನು ಬ್ಯಾಂಕ್ ಹಾಕುತ್ತಿರಲಿಲ್ಲ.

"ಗ್ರಾಹಕರು ಡಿಜಿಟಲ್ ಬ್ಯಾಂಕಿಂಗ್ ಅಳವಡಿಸಿಕೊಳ್ಳಲು ಪ್ರೋತ್ಸಾಹಿಸುವ ಉದ್ದೇಶದಿಂದ, ಎಸ್‌ಬಿಐ ಯೋನೋ (SBI YONO) ಸೇರಿದಂತೆ ಇಂಟರ್ನೆಟ್ ಬ್ಯಾಂಕಿಂಗ್ / ಮೊಬೈಲ್ ಬ್ಯಾಂಕಿಂಗ್ ಮೂಲಕ ಮಾಡಿದ 5 ಲಕ್ಷ ರೂ.ವರೆಗಿನ ಐಎಂಪಿಎಸ್ ವಹಿವಾಟುಗಳಿಗೆ ಯಾವುದೇ ಸೇವಾ ಶುಲ್ಕವನ್ನು ವಿಧಿಸುವುದಿಲ್ಲ" ಎಂದು ಬ್ಯಾಂಕ್ ಹೇಳಿಕೆಯಲ್ಲಿ ತಿಳಿಸಿದೆ. ಬ್ಯಾಂಕ್ ಶಾಖೆಗಳ ಮೂಲಕ ನಡೆಸುವ ಐಎಂಪಿಎಸ್ (IMPS) ವಹಿವಾಟುಗಳಿಗೆ, ಸೇವಾ ಶುಲ್ಕವನ್ನು ವಿಧಿಸಲು 2 ಲಕ್ಷದಿಂದ 5 ಲಕ್ಷದವರೆಗೆ ಹೊಸ ಸ್ಲ್ಯಾಬ್ ಅನ್ನು ಸೇರಿಸಲಾಗಿದೆ. "ಈ ಸ್ಲ್ಯಾಬ್‌ಗೆ ಪ್ರಸ್ತಾವಿತ ಸೇವಾ ಶುಲ್ಕಗಳು ರೂ 20 + ಜಿಎಸ್‌ಟಿ," ಈ ನಿರ್ದೇಶನವು ಫೆಬ್ರವರಿ 1, 2022 ರಿಂದ ಜಾರಿಗೆ ಬರಲಿದೆ ಎಂದು ಎಸ್‌ಬಿಐ ಹೇಳಿದೆ.

ಬಹುತೇಕ ಬ್ಯಾಂಕ್ ಶಾಖೆಯಲ್ಲಿ ರೂ 1,000 ರಿಂದ ರೂ 10,000 ವರೆಗಿನ ಮೊತ್ತದ ಐಎಂಪಿಎಸ್ ವಹಿವಾಟುಗಳು ರೂ 2 + ಜಿಎಸ್ ಟಿ ಸೇವಾ ಶುಲ್ಕವನ್ನು ಪಡೆಯುತ್ತವೆ. ವಹಿವಾಟಿನ ಮೊತ್ತವು ರೂ 10,000 ರಿಂದ ರೂ 1,00,000 ವರೆಗೆ ಇದ್ದರೆ, ರೂ 4 + ಜಿಎಸ್ ಟಿ ಶುಲ್ಕವನ್ನು ವಿಧಿಸಲಾಗುತ್ತದೆ. ರೂ 1,00,000 ಮತ್ತು ರೂ 2,00,000 ನಡುವಿನ ಮೊತ್ತದ ವಹಿವಾಟುಗಳ ಮೇಲೆ, ರೂ 12 + ಜಿಎಸ್ ಟಿ ವಿಧಿಸಲಾಗುತ್ತದೆ. ಇನ್ನು ಬ್ಯಾಂಕ್ ಶಾಖೆಯ ಮೂಲಕ ಮಾಡಲಾಗುವ ಎನ್ ಇಎಫ್ ಟಿ (NEFT), ಆರ್ ಟಿಜಿಎಸ್ (RTGS) ವಹಿವಾಟುಗಳಿಗೂ ಇದೇ ರೀತಿಯ ಸೇವಾಶುಲ್ಕವನ್ನು ವಿಧಿಸಲಾಗುತ್ತದೆ. 
 


ನೆಫ್ಟ್ ಹಾಗೂ ಆರ್ ಟಿಜಿಎಸ್ ಗೆ ಹೋಲಿಸಿದರೆ, ಐಂಎಪಿಎಸ್ ನೆಟ್ ಬ್ಯಾಂಕಿಂಗ್ ಬಳಕೆದಾರರ ಫೇವರಿಟ್ ಮಾರ್ಗವಾಗಿದೆ. ಅತ್ಯಂತ ತ್ವರಿತವಾಗಿ ಹಣ ವರ್ಗಾವಣೆಯಾಗುವುದು ಮಾತ್ರವಲ್ಲ, ದಿನದ 24 ಗಂಟೆಯೂ ಇದರ ಲಭ್ಯತೆ ಇರುವ ಕಾರಣ ಹೆಚ್ಚಿನ ಬಳಕೆದಾರರು ಹಣ ಕಳಿಸಲು ಈ ಮಾರ್ಗವನ್ನು ಬಳಸುತ್ತಾರೆ. ಅದಲ್ಲದೇ, ಭಾನುವಾರವೂ ಈ ಸೇವೆ ಚಾಲ್ತಿಯಲ್ಲಿದೆ.

Doorstep Banking: ಮನೆ ಬಾಗಿಲಿಗೇ ಬ್ಯಾಂಕಿಂಗ್ ಸೇವೆ ಪಡೆಯಲು ಏನ್ಮಾಡ್ಬೇಕು? ಯಾವೆಲ್ಲ ಬ್ಯಾಂಕುಗಳಲ್ಲಿದೆ ಈ ಸೌಲಭ್ಯ?
ಅಕ್ಟೋಬರ್ ನಲ್ಲಿ ಮಿತಿ ಏರಿಸಿದ್ದ ಆರ್ ಬಿಐ: ಕಳೆದ ಅಕ್ಟೋಬರ್ ವರೆಗೂ ನೆಟ್ ಬ್ಯಾಕಿಂಗ್ ಹಾಗೂ ಮೊಬೈಲ್ ಬ್ಯಾಂಕಿಂಗ್ ಮೂಲಕ ದಿನಕ್ಕೆ ಗರಿಷ್ಠ 2 ಲಕ್ಷವನ್ನು ಮಾತ್ರವೇ ವರ್ಗಾವಣೆ ಮಾಡಬಹುದಿತ್ತು. ಆದರೆ, ಡಿಜಿಟಲ್ ಬ್ಯಾಂಕಿಂಗ್ ಹೆ ಹೆಚ್ಚಿನ ಪ್ರೋತ್ಸಾಹ ನೀಡುವ ಉದ್ದೇಶ ಹೊಂದಿದ್ದ ಆರ್ ಬಿಐ (RBI) ಇದರ ಮಿತಿಯನ್ನು 2 ರಿಂದ 5 ಲಕ್ಷಕ್ಕೆ ಏರಿಸಿತ್ತು. ಇದರಿಂದಾಗಿ ಬ್ಯಾಂಕ್ ಗಳು ಹೊಸ ಸ್ಲ್ಯಾಬ್ ಗೆ ತನ್ನ ಸೇವಾ ಶುಲ್ಕ ಅನ್ನು ಫಿಕ್ಸ್ ಮಾಡಬೇಕಿತ್ತು. ಎಸ್ ಬಿಐ ಮಾತ್ರ ಈ ಸೇವೆಗೆ ಚಾರ್ಜ್ ಇರುವುದಿಲ್ಲ ಎಂದು ತಿಳಿಸಿದೆ.

Follow Us:
Download App:
  • android
  • ios