Air India Takeover : ಏರಿಂಡಿಯಾ ಹಳೇ ಸಾಲ ತೀರಿಸಲು ಎಸ್ ಬಿಐ ಸಹಾಯ ಕೇಳಿದ ಟಾಟಾ!
ಎಸ್ ಬಿಐ, ಬ್ಯಾಂಕ್ ಆಫ್ ಬರೋಡ ಹಾಗೂ ಎಚ್ ಡಿಎಫ್ ಸಿಯಿಂದ ಸಾಲ
ಭಾರತೀಯ ಸ್ಟೇಟ್ ಬ್ಯಾಂಕ್ ನಿಂದ 10 ಸಾವಿರ ಕೋಟಿ ರೂ. ಸಾಲ
ವರ್ಷಕ್ಕೆ ಶೇ. 4.25ರ ಬಡ್ಡಿದರದಂತೆ ಸಾಲ ನೀಡಲಿರುವ ಬ್ಯಾಂಕ್ ಗಳು
ನವದೆಹಲಿ (ಜ.29): ದೇಶದ ಅತಿದೊಡ್ಡ ಅಂತಾರಾಷ್ಟ್ರೀಯ ಏರ್ ಲೈನ್ ಸಂಸ್ಥೆ ಏರಿಂಡಿಯಾವನ್ನು (Air India) ಸರ್ಕಾರದಿಂದ ಸ್ವಾಧೀನಪಡಿಸಿಕೊಂಡ ಟಾಟಾ ಸಮೂಹವು (Tata Group), ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank of India), ಬ್ಯಾಂಕ್ ಆಫ್ ಬರೋಡ (Bank of Barod) ಹಾಗೂ ಖಾಸಗಿ ಕ್ಷೇತ್ರದ ಪ್ರಮುಖ ಬ್ಯಾಂಕ್ ಎಚ್ ಡಿಎಫ್ ಸಿ ಬ್ಯಾಂಕ್ ಅನ್ನು (HDFC Bank ) ಆದ್ಯತೆಯ ಬ್ಯಾಂಕರ್ ಆಗಿ ಪರಿಗಣನೆ ಮಾಡಿದೆ ಎಂದು ಆಪ್ತ ಮೂಲಗಳು ತಿಳಿಸಿವೆ. ದೊಡ್ಡ ಮಟ್ಟದ ಸಾಲದ ಸುಳಿಯಲ್ಲಿ ಸಿಲುಕಿರುವ ಏರಿಂಡಿಯಾದ ಹಳೇ ಸಾಲ ಬಾಕಿ ಪಾವತಿಗೆ ಟಾಟಾ ಸನ್ಸ್ ಭಾರತೀಯ ಸ್ಟೇಟ್ ಬ್ಯಾಂಕ್ ನಿಂದ 10 ಸಾವಿರ ಕೋಟಿ ಹಾಗೂ ಬ್ಯಾಂಕ್ ಆಫ್ ಬರೋಡದಿಂದ 5 ಸಾವಿರ ಕೋಟಿ ರೂಪಾಯಿಗಳನ್ನು ಸಾಲವಾಗಿ ಪಡೆದುಕೊಳ್ಳಲಿದೆ ಎಂದು ತಿಳಿಸಿದೆ.
ಈ ಸಾಲಗಳು ಅನ್ ರೇಟೆಡ್ (Unrated)ಆಗಿದ್ದು, ಅಸುರಕ್ಷಿತವಾಗಿಯೂ (Unsecured) ಇದೆ. ವಾರ್ಷಿಕವಾಗಿ ಬ್ಯಾಂಕ್ ಗಳು ಈ ಸಾಲಕ್ಕೆ ಶೇ. 4.25ರಷ್ಟು ಬಡ್ಡಿ ವಿಧಿಸಲಿದೆ ಎಂದು ಬ್ಯಾಂಕ್ ನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಟಾಟಾ ಗ್ರೂಪ್‌ನಿಂದ ಪಡೆದ ಹೊಸ ಸಾಲವನ್ನು ಏರ್ ಇಂಡಿಯಾದ 10% ಕ್ಕಿಂತ ಹೆಚ್ಚು ಸಾಲವನ್ನು ಮರುಹಣಕಾಸು ಮಾಡಲು ಬಳಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಟಾಟಾ ಸನ್ಸ್ ಇನ್ನೂ ಎಚ್‌ಡಿಎಫ್‌ಸಿ ಬ್ಯಾಂಕ್‌ನಿಂದ ಸಾಲ ಪಡೆದಿದ್ದಾರೆಯೇ ಎನ್ನುವುದು ಖಚಿತವಾಗಿ ತಿಳಿದುಬಂದಿಲ್ಲ. ಟಾಟಾ ಗ್ರೂಪ್, ಎಸ್‌ಬಿಐ, ಬಿಒಬಿ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್ ಈ ಕುರಿತಾಗಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಕಳೆದ ತಿಂಗಳು, ಟಾಟಾ ಗ್ರೂಪ್ ಕನಿಷ್ಠ 12-15 ಬ್ಯಾಂಕ್‌ಗಳಿಂದ ಸಾಲ ಮಂಜೂರಾತಿ ಪತ್ರಗಳನ್ನು ಸ್ವೀಕರಿಸಿದೆ, ಏರಿಂಡಿಯಾದ ಸಾಲಕ್ಕೆ ಗರಿಷ್ಠ 35 ಸಾವಿರ ರೂಪಾಯಿಗಳ ವರೆಗೆ ಸಾಲ ಸೌಲಭ್ಯ ನೀಡುವುದಾಗಿ ತಿಳಿಸಲಾಗಿತ್ತು. ಇದಕ್ಕೂ ಮುನ್ನ ಟಾಟಾ ಸಮೂಹವು ಏರಿಂಡಿಯಾ ಸಲುವಾಗಿ 1 ವರ್ಷದ ಮಟ್ಟಿಗೆ 23 ಸಾವಿರ ಕೋಟಿ ರೂ. ಸಾಲವನ್ನು ಮಂಜೂರು ಮಾಡಲಾಗಿದೆ ಎಂದು ವರದಿಯಾಗಿತ್ತು. ದೇಶದ ಪ್ರತಿಷ್ಠಿತ ವಾಣಿಜ್ಯ ಬ್ಯಾಂಕ್ ಗಳಾದ ಎಸ್ ಬಿಐ, ಬಿಓಬಿ, ಪಂಜಾಬ್ ನ್ಯಾಷನಲ್ ಬ್ಯಾಂಕ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಎಚ್ ಡಿ ಎಫ್ ಸಿ ಬ್ಯಾಂಕ್, ಏರಿಂಡಿಯಾ ಸಲುವಾಗಿ 3 ಸಾವಿರ ಕೋಟಿಯಿಂದ 12 ಸಾವಿರ ಕೋಟಿಯವರೆಗೆ ಸಾಲದ ಮಿತಿಯನ್ನು ಅನುಮೋದಿಸಿದ್ದವು ಎಂದು ವರದಿಯಾಗಿದ್ದವು.
"ಎಲ್ಲಾ ಬ್ಯಾಂಕ್‌ಗಳು ನೀಡುವ ಸಾಲದ ಬಡ್ಡಿ ದರ ಮತ್ತು ಇತರ ಷರತ್ತುಗಳು ಬಹುತೇಕ ಒಂದೇ ರೀತಿಯದ್ದಾಗಿದೆ. ಟಾಟಾ ಗ್ರೂಪ್ ಕೆಲವು ಬ್ಯಾಂಕ್‌ಗಳಿಂದ ಹಣವನ್ನು ಪಡೆಯಲು ಆಯ್ಕೆ ಮಾಡಿಕೊಂಡಿದೆ" ಎಂದು ಬೆಳವಣಿಗೆಗಳ ಬಗ್ಗೆ ತಿಳಿದಿರುವ ಬ್ಯಾಂಕರ್ ಒಬ್ಬರು ಪ್ರತಿಕ್ರಿಯಿಸಿದ್ದಾರೆ. ಟಾಟಾ ಸನ್ಸ್-ಪ್ರವರ್ತಿತ ಟಾಲೇಸ್ ಏರಿಂಡಿಯಾವನ್ನು 18 ಸಾವಿರ ಕೋಟಿ ರೂಪಾಯಿ ನೀಡಿ ಸ್ವಾಧೀನಪಡಿಸಿಕೊಂಡಿದೆ. ಇದರಲ್ಲಿ 15,300 ಕೋಟಿ ರೂಪಾಯಿ ಈಗಾಗಲೇ ಏರಿಂಡಿಯಾ ಮಾಡಿರುವ ಸಾಲಕ್ಕೆ ಹೋಗಲಿದ್ದರೆ, 2700 ಕೋಟಿ ರೂಪಾಯಿಯನ್ನು ಟಾಟಾ ಗ್ರೂಪ್ ಸರ್ಕಾರಕ್ಕೆ ಸಲ್ಲಿಕೆ ಮಾಡಲಿದೆ.
Air India Takeover ಮರಳಿ ಅರಮನೆಗೆ ಬಂದ ಮಹಾರಾಜ, 69 ವರ್ಷಗಳ ಬಳಿಕ ಟಾಟಾ ಗ್ರೂಪ್‌ಗೆ ಏರ್ ಇಂಡಿಯಾ ಅಧಿಕೃತ ಹಸ್ತಾಂತರ!
ಇನ್ನು ಬ್ಯಾಂಕ್ ಗಳಿಂದ ಟಾಟಾ ಸನ್ಸ್ ಪಡೆದುಕೊಂಡಿರುವ 23 ಸಾವಿರ ಕೋಟಿ ರೂಪಾಯಿ ಸಾಲದಲ್ಲಿ 18 ಸಾವಿರ ಕೋಟಿ ರೂಪಾಯಿ ಏರಿಂಡಿಯಾದ ಸ್ವಾಧೀನಕ್ಕಾಗಿ ಖರ್ಚು ಮಾಡಲಿದ್ದರೆ, 5 ಸಾವಿರ ಕೋಟಿ ರೂಪಾಯಿಯನ್ನು ಕಾರ್ಯೋಪಯುಕ್ತ ಬಂಡವಾಳವಾಗಿ ಇರಿಸಲಿದೆ.
ಏರ್ ಇಂಡಿಯಾ ಇಂದು ಟಾಟಾಗೆ ಅಧಿಕೃತ ಹಸ್ತಾಂತರ
ಸರ್ಕಾರದೊಂದಿಗಿನ ಒಪ್ಪಂದದಲ್ಲಿ ಏರಿಂಡಿಯಾದ ಭೂಮಿ ಮತ್ತು ಕಟ್ಟಡಗಳು ಸೇರಿಲ್ಲ. ಒಪ್ಪಂದದ ಪ್ರಕಾರ, ಟಾಟಾ ಸನ್ಸ್ ಏರ್ ಇಂಡಿಯಾದ ಎಲ್ಲಾ ಉದ್ಯೋಗಿಗಳನ್ನು ಕನಿಷ್ಠ ಒಂದು ವರ್ಷದವರೆಗೆ ಉಳಿಸಿಕೊಳ್ಳುತ್ತದೆ. ಏರ್ ಇಂಡಿಯಾ ಪ್ರಸ್ತುತ 117 ವಿಮಾನಗಳನ್ನು ಹೊಂದಿದೆ. ಟಾಟಾ ಸನ್ಸ್ ಈಗಾಗಲೇ ವಿಸ್ತಾರಾ ಎನ್ನುವ ಹೆಸರಿನಲ್ಲಿ ಏರ್ ಲೈನ್ ಅನ್ನು ಹೊಂದಿದ್ದು, ಸಿಂಗಾಪುರ ಏರ್ ಲೈನ್ಸ್ ಪಾಲುದಾರಿಕೆಯಲ್ಲಿ ನಡೆಸುತ್ತಿದೆ. ಅದರೊಂದಿಗೆ ಏರ್ ಏಷ್ಯಾ ಇಂಡಿಯಾ ಹೆಸರಿನಲ್ಲಿ ಮಲೇಷ್ಯಾದ ಏರ್ ಏಷ್ಯಾ ಕಂಪನಿಯ ಪಾಲುದಾರಿಕೆಯೊಂದಿಗೆ ವಿಮಾನಯಾನ ಸೇವೆ ನೀಡುತ್ತಿದೆ.