ಮೋದಿ ಊರಲ್ಲಿಲ್ಲ: ಸರ್ಕಾರ ಈ ಆಘಾತ ಖಂಡಿತ ನಿರೀಕ್ಷಿಸಿರಲಿಲ್ಲ!
ಮೋದಿ ಸರ್ಕಾರಕ್ಕೆ ಮತ್ತೊಂದು ಭಾರೀ ಆಘಾತ/ ಆಘಾತ ನೀರಿಕ್ಷಿಸದ ಕೇಂದ್ರ ಸರ್ಕಾರ ಇಕ್ಕಟ್ಟಿನಲ್ಲಿ/ ಜಿಡಿಪಿ ಮಹಾ ಕುಸಿತದ ಸಂಭವನೀಯತೆ ಕಂಡು ಮೋದಿ ಸರ್ಕಾರ ಬೆಸ್ತು/ ದ್ವಿತೀಯ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆ ದರ ಶೇ.4.2ಕ್ಕೆ ಇಳಿಯುವ ಸಾಧ್ಯತೆ/ ಎಸ್‌ಬಿಐ ಇಕೋವ್ರಾಪ್ ವರದಿ ಬಹಿರಂಗ/ ಮೊದಲ ತ್ರೈಮಾಸಿಕಕ್ಕೆ ಹೋಲಿಸಿದಾಗ ಶೇ. 27ಕ್ಕೆ ಕ್ಕೆ ಇಳಿಕೆ ಕಂಡ ಅಭಿವೃದ್ಧಿ ದರ/ 2020ರಲ್ಲಿ ಜಿಡಿಪಿ ದತ್ತಾಂಶದ ಪರಿಷ್ಕರಣೆಯಲ್ಲಿ ಸ್ಥೂಲ ಚಿತ್ರಣ/ ಆರ್‌ಬಿಐ ದರ ಕಡಿತಕ್ಕೆ ಮುಂದಾಗುವ ಸಂಭವ ಹೆಚ್ಚು/
ಹೈದರಾಬಾದ್(ನ.13): ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಆರ್ಥಿಕ ಆಘಾತದ ಸರಣಿ ಮುಂದುವರೆದಿದ್ದು, ಜಿಡಿಪಿ ಮಹಾ ಕುಸಿತದ ಸಂಭವನೀಯತೆ ಮೋದಿ ಸರ್ಕಾರದ ನಿದ್ದೆಗೆಡೆಸಿದೆ.
ಮೊದಲ ತ್ರೈಮಾಸಿಕದಲ್ಲಿ ಆರು ವರ್ಷಗಳ ಕನಿಷ್ಟ ಶೇ.5ರಷ್ಟು ದಾಖಲಾಗಿದ್ದ ಜಿಡಿಪಿ, ಜುಲೈ-ಸೆಪ್ಟೆಂಬರ್ ಅವಧಿಯ ದ್ವಿತೀಯ ತ್ರೈಮಾಸಿಕದಲ್ಲಿ ಶೇ.4.2ಕ್ಕೆ ಇಳಿಯುವ ಸಾಧ್ಯತೆ ಇದೆ.
ಎಸ್‌ಬಿಐ ರಿಸರ್ಚ್ ವರದಿ ಈ ಕುರಿತು ಎಚ್ಚರಿಕೆ ನೀಡಿದ್ದು, ಹಣಕಾಸು ವರ್ಷದ ದ್ವಿತೀಯ ತ್ರೈಮಾಸಿಕದಲ್ಲಿ ಈ ಮುನ್ನ ಯೋಜಿಸಿರುವಂತೆ ಶೇ.6.1ರ ಬೆಳವಣಿಗೆಗೆ ಬದಲಾಗಿ ಶೇ.5ರ ಬೆಳವಣಿಗೆ ದಾಖಲಾಗಲಿದೆ ಎಂದು ಹೇಳಲಾಗಿದೆ.
ಆರ್ಥಿಕ ಪುನಶ್ಚೇತನ ಒಂದು ಊಹೆ: ಆ್ಯಕ್ಟೀವ್ ಆಯ್ತು ಆರ್‌ಬಿಐ ಗವರ್ನರ್ ಗುಹೆ!
ಎಸ್‌ಬಿಐ ಇಕೋವ್ರಾಪ್ ವರದಿಯನ್ವಯ ವಾಹನ ಮಾರಾಟದಲ್ಲಿನ ಮಂದಗತಿ, ಕಡಿಮೆಯಾದ ಗ್ರಾಹಕರ ಬೇಡಿಕೆ, ವಿಮಾನಯಾನ ಕ್ಷೇತ್ರದಲ್ಲಿನ ಹಿನ್ನಡೆಯಿಂದ ಆರ್ಥಿಕ ಪ್ರಗತಿ ಮತ್ತಷ್ಟು ಕುಂಠಿತಗೊಳ್ಳಲಿದೆ ಎನ್ನಲಾಗಿದೆ.
ಪ್ರಮುಖ ವಲಯಗಳಲ್ಲಿನ ವಹಿವಾಟು ಕುಂಠಿತವಾಗಿರುವುದು ಬಹುದೊಡ್ಡ ಆರ್ಥಿಕ ಹೊಡೆತ ಎನ್ನಲಾಗಿದ್ದು, ಜಿಡಿಪಿ ಬೆಳವಣಿಗೆ ಸುಮಾರು ಶೇ.4.2ರಷ್ಟು ಇರಲಿದೆ ಎಂದು ಅಂದಾಜಿಸಿದೆ.
ದೇಶದ ಆರ್ಥಿಕ ಬೆಳವಣಿಗೆ ಅಳೆಯಲು ಒಟ್ಟಾರೆ 3 ಮಾನದಂಡಗಳನ್ನುಪರಿಗಣಿಸಲಾಗಿದ್ದು, ಆರ್ಥಿಕ ವೃದ್ಧಿ ದರ ಮೊದಲ ತ್ರೈಮಾಸಿಕಕ್ಕೆ ಹೋಲಿಸಿದಾಗ ಶೇ. 27ಕ್ಕೆ ಕ್ಕೆ ಇಳಿಕೆಯಾಗಿದೆ ಎಂದು ಹೇಳಿದೆ.
ಕಾಣದಾಗಿದೆ ಪರಿಹಾರ: ಗುರಿ ಕಡಿತಗೊಳಿಸಿದ ಮೋದಿ ಸರ್ಕಾರ!
ಅದಾಗ್ಯೂ ಮುಂದಿನ ಹಣಕಾಸು ವರ್ಷ 2021ರಲ್ಲಿ ಜಿಡಿಪಿ ಬೆಳವಣಿಗೆ ದರ ಶೇ.6.2ರಷು ವೃದ್ಧಿಸುವ ನಿರೀಕ್ಷೆ ಇಡಲಾಗಿದ್ದು, 2020ರಲ್ಲಿ ಜಿಡಿಪಿ ದತ್ತಾಂಶದ ಪರಿಷ್ಕರಣೆಯಲ್ಲಿ ಸ್ಥೂಲ ಚಿತ್ರಣ ಸಿಗಲಿದೆ ಎಂದು ತಜ್ಞರು ಅಂದಾಜಿಸಿದ್ದಾರೆ.
ಇದೇ ವೇಳೆ ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸಲು ಆರ್‌ಬಿಐ ಡಿಸೆಂಬರ್ ಹಣಕಾಸು ನೀತಿ ಪರಿಶೀಲನೆಯಲ್ಲಿ ದರ ಕಡಿತಕ್ಕೆ ಮುಂದಾಗಬಹುದು ಎಂದು ವರದಿ ಅಂದಾಜಿಸಿದೆ.
GDP ಮಹಾ ಕುಸಿತ; ಆತಂಕ ಸೃಷ್ಟಿಸಿದ ಆರ್ಥಿಕ ಹಿಂಜರಿತ!
ನವೆಂಬರ್ 13ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: