ಇನ್ಮುಂದೆ ವೈಯಕ್ತಿಕ ಸಾಲ ಪಡೆಯಲು SBI ಶಾಖೆಗೆ ಭೇಟಿ ನೀಡಬೇಕಾಗಿಲ್ಲ,YONO App ಇದ್ರೆ ಸಾಕು

*ಗ್ರಾಹಕರಿಗೆ ಅನುಕೂಲ ಕಲ್ಪಿಸುವ ಜೊತೆಗೆ ಡಿಜಿಟಲಿ ಸಬಲೀಕರಣಗೊಳಿಸುವ ಉದ್ದೇಶ
*ಯೋನೋ ಅಪ್ಲಿಕೇಷನ್ ಮೂಲಕ ವೈಯಕ್ತಿಕ ಸಾಲ ಸೌಲಭ್ಯ
*ಇದು ಶೇ.100ರಷ್ಟು ಕಾಗದರಹಿತ ಹಾಗೂ ಡಿಜಿಟಲ್ ವ್ಯವಸ್ಥೆ 

SBI Offers up to Rs 35 Lakh Instant Loan via YONO App Eligibility Key Details to Know

ನವದೆಹಲಿ (ಮೇ 26):  ದೇಶದ ಸಾರ್ವಜನಿಕ ವಲಯದ ಅತೀದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಇತ್ತೀಚೆಗೆ ಮಹಾತ್ವಾಕಾಂಕ್ಷೆಯ ವೈಯಕ್ತಿಕ ಸಾಲ ನೀಡುವಿಕೆಗೆ ಸಂಬಂಧಿಸಿದ ರಿಯಲ್ ಟೈಮ್ ಎಕ್ಸ್ ಪ್ರೆಸ್ ಕ್ರೆಡಿಟ್ (RTXC) ವ್ಯವಸ್ಥೆಯನ್ನು ಯೋನೋ ಅಪ್ಲಿಕೇಷನ್ ನಲ್ಲಿ (YONO app) ಪರಿಚಯಿಸಿದೆ.  ಗ್ರಾಹಕರಿಗೆ ಅನುಕೂಲ ಒದಗಿಸುವುದು ಹಾಗೂ ಅವರನ್ನು ಡಿಜಿಟಲಿ ಸಬಲೀಕರಣಗೊಳಿಸುವುದು ಇದರ ಮುಖ್ಯ ಉದ್ದೇಶ. ಈ ವ್ಯವಸ್ಥೆಯಿಂದಾಗಿ ವೈಯಕ್ತಿಕ ಸಾಲಕ್ಕೆ ಅರ್ಜಿ ಸಲ್ಲಿಸಲು ಅವರು ಎಸ್ ಬಿಐ ಶಾಖೆಗಳಿಗೆ ಭೇಟಿ ನೀಡಬೇಕಾದ ಅಗತ್ಯವಿಲ್ಲ. ಎಸ್ ಬಿಐಯಲ್ಲಿ (SBI) ವೇತನ ಖಾತೆ ಹೊಂದಿರುವ ಉದ್ಯೋಗಿಗಳಿಗೆ ರಿಯಲ್ ಟೈಮ್ ಎಕ್ಸ್ ಪ್ರೆಸ್ ಕ್ರೆಡಿಟ್ (RTXC) ವೈಯಕ್ತಿಕ ಸಾಲ ವ್ಯವಸ್ಥೆ ಲಭ್ಯವಿದೆ.

'ಗ್ರಾಹಕರಿಗೆ ಅನುಕೂಲ ಒದಗಿಸೋದು ಹಾಗೂ ಡಿಜಿಟಲಿ ಸಬಲೀಕರಣಗೊಳಿಸುವ ಗುರಿಯೊಂದಿಗೆ ದೇಶದ ಅತೀದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಯೋನೋದಲ್ಲಿ ರಿಯಲ್ ಟೈಮ್ ಎಕ್ಸ್ ಪ್ರೆಸ್ ಕ್ರೆಡಿಟ್  (RTXC) ವೈಯಕ್ತಿಕ ಸಾಲ ಉತ್ಪನ್ನವನ್ನು ಪರಿಚಯಿಸಿದೆ. ವೇತನ ಪಡೆಯೋ ಗ್ರಾಹಕರಿಗೆ ಬ್ಯಾಂಕಿನ ಮಹತ್ವಾಕಾಂಕ್ಷೆಯ ವೈಯಕ್ತಿಕ ಸಾಲ ಉತ್ಪನ್ನ ಎಕ್ಸ್ ಪ್ರೆಸ್ ಕ್ರೆಡಿಟ್ ಈಗ ಡಿಜಿಟಲ್ ಅವತಾರದಲ್ಲಿದೆ' ಎಂದು ಎಸ್ ಬಿಐ ಮೇ 23ರಂದು ಬಿಡುಗಡೆ ಮಾಡಿರುವ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. 

Privatization OF Banks:ಸಾರ್ವಜನಿಕ ವಲಯದ 2 ಬ್ಯಾಂಕುಗಳ ಖಾಸಗೀಕರಣ ಪ್ರಕ್ರಿಯೆ ಚುರುಕು; ಆ ಎರಡು ಬ್ಯಾಂಕುಗಳು ಯಾವುವು?

ಗ್ರಾಹಕರು ಈಗ ಮನೆಯಲ್ಲೇ ಕುಳಿತು ಎಸ್ ಬಿಐ ಯೋನೋ ಮುಖಾಂತರ ಆರ್ ಟಿಎಕ್ಸ್ ಸಿ (RTXC) ಪ್ರಯೋಜನ ಪಡೆಯಬಹುದು. ಇದು ಶೇ.100ರಷ್ಟು ಕಾಗದರಹಿತ ಹಾಗೂ ಡಿಜಿಟಲ್ ವ್ಯವಸ್ಥೆ ಆಗಿರಲಿದೆ. ಇದರಲ್ಲಿನ 8 ಹಂತಗಳನ್ನು ಗ್ರಾಹಕರು ಸುಲಭ ಮತ್ತು ತ್ವರಿತವಾಗಿ ಪೂರ್ಣಗೊಳಿಸಬಹುದು ಎಂದು ಎಸ್ ಬಿಐ (SBI) ಹೇಳಿದೆ. 
ಎಸ್ ಬಿಐ ಯೋನೋ ಅಪ್ಲಿಕೇಷನ್ ನಲ್ಲಿ ಎಕ್ಸ್ ಪ್ರೆಸ್ ಕ್ರೆಡಿಟ್ ಸೌಲಭ್ಯ ಕಲ್ಪಿಸಿದ ಬಳಿಕ ಆರ್ಹತೆ, ಕ್ರೆಡಿಟ್ ಚೆಕ್, ದಾಖಲೀಕರಣ ಹಾಗೂ ಇತರ ಪ್ರಕ್ರಿಯೆಗಳನ್ನು ಸಂಪೂರ್ಣವಾಗಿ ಡಿಜಿಟಲ್ ಹಾಗೂ ತ್ವರಿತವಾಗಿ ಪೂರ್ಣಗೊಳಿಸಬಹುದು. ರಿಯಲ್ ಟೈಮ್ ಎಕ್ಸ್ ಪ್ರೆಸ್ ಕ್ರೆಡಿಟ್ ವ್ಯವಸ್ಥೆಯಲ್ಲಿ ಎಸ್ ಬಿಐಯ  ಕೇಂದ್ರ ಅಥವಾ ರಾಜ್ಯ ಸರ್ಕಾರದ ಹಾಗೂ ರಕ್ಷಣಾ ಸೇವೆಯಲ್ಲಿರುವ ಗ್ರಾಹಕರು ವೈಯಕ್ತಿಕ ಸಾಲ ಸೌಲಭ್ಯ ಪಡೆಯಲು ಬ್ಯಾಂಕ್ ಶಾಖೆಗೆ ಭೇಟಿ ನೀಡಬೇಕಾದ ಅಗತ್ಯವಿಲ್ಲ. 

ಈ ಸೌಲಭ್ಯ ಪಡೆಯಲು ಅರ್ಹತೆಗಳೇನು?
ರಿಯಲ್ ಟೈಮ ಎಕ್ಸ್ ಪ್ರೆಸ್ ಕ್ರೆಡಿಟ್ ಅಡಿಯಲ್ಲಿ ಕೇಂದ್ರ ಅಥವಾ ರಾಜ್ಯ ಸರ್ಕಾರದ ಹಾಗೂ ರಕ್ಷಣಾ ಇಲಾಖೆಯ ವೇತನ ಪಡೆಯೋ ಎಸ್ ಬಿಐ ಗ್ರಾಹಕರು ಸಾಲಗಳನ್ನು ಪಡೆಯಬಹುದಾಗಿದೆ. ಎಸ್ ಬಿಐ ಎಕ್ಸ್ ಪ್ರೆಸ್ ಕ್ರೆಡಿಟ್ ಸೌಲಭ್ಯವನ್ನು ಈ ಕೆಳಗಿನವರು ಕೂಡ ಪಡೆದುಕೊಳ್ಳಬಹುದು.
*ಎಸ್ ಬಿಐಯಲ್ಲಿ ವೇತನ ಖಾತೆ ಹೊಂದಿರುವ ವ್ಯಕ್ತಿಗಳು
*ಮಾಸಿಕ ಕನಿಷ್ಠ 15,000ರೂ. ವೇತನ ಹೊಂದಿರೋರು
*ಕೇಂದ್ರ, ರಾಜ್ಯ, ಅರೆಸರ್ಕಾರಿ, ಕೇಂದ್ರ ಪಿಎಸ್ ಯುಎಸ್ ಹಾಗೂ ಲಾಭ ಗಳಿಕೆಯ ರಾಜ್ಯ ಪಿಎಸ್ ಯುಎಸ್, ರಾಷ್ಟ್ರಮಟ್ಟದ ಪ್ರಖ್ಯಾತ ಶಿಕ್ಷಣ ಸಂಸ್ಥೆಗಳು, ಆಯ್ದ ಕಾರ್ಪೋರೇಟ್ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಬ್ಯಾಂಕಿನೊಂದಿಗೆ ಸಂಬಂಧ ಹೊಂದಿರುವ ಹಾಗೂ ಹೊಂದಿರದ ವ್ಯಕ್ತಿಗಳು.

Bank Customer Alert: ನಾಳೆಯಿಂದ ಹೊಸ ನಿಯಮ ಜಾರಿ; ನಗದು ವಿತ್ ಡ್ರಾ, ಠೇವಣಿಗೆ ಆಧಾರ್, ಪ್ಯಾನ್ ಕಡ್ಡಾಯ

ಎಕ್ಸ್ ಪ್ರೆಸ್ ಕ್ರೆಡಿಟ್ ವಿತರಣೆಯ ಡಿಜಿಟಲೀಕರಣದಿಂದ ಬ್ಯಾಂಕಿಗೆ ಸಾಕಷ್ಟು ಕಾಗದಪತ್ರಗಳನ್ನು ಸಂಗ್ರಹಿಸುವ ಹಾಗೂ ನಿರ್ವಹಿಸುವ ಕೆಲಸ ತಪ್ಪಿದೆ. ಎಸ್ ಬಿಐ ಎಕ್ಸ್ ಪ್ರೆಸ್ ಕ್ರೆಡಿಟ್ ವೈಯಕ್ತಿಕ ಸಾಲ ಸೌಲಭ್ಯದಡಿಯಲ್ಲಿ ಗರಿಷ್ಠ 35ಲಕ್ಷ ರೂ. ಸಾಲ ಪಡೆಯಬಹುದು. ಈ ಸಾಲಕ್ಕೆ ಕಡಿಮೆ ಬಡ್ಡಿದರ ವಿಧಿಸೋದಾಗಿ ಬ್ಯಾಂಕ್ ತಿಳಿಸಿದೆ. ಈ ಸಾಲ ಸೌಲಭ್ಯ ಪಡೆಯಲು ಯಾವುದೇ ಭದ್ರತೆ ಅಥವಾ ಜಾಮೀನಿನ ಅಗತ್ಯವಿಲ್ಲ.

Latest Videos
Follow Us:
Download App:
  • android
  • ios