Bank Customer Alert: ನಾಳೆಯಿಂದ ಹೊಸ ನಿಯಮ ಜಾರಿ; ನಗದು ವಿತ್ ಡ್ರಾ, ಠೇವಣಿಗೆ ಆಧಾರ್, ಪ್ಯಾನ್ ಕಡ್ಡಾಯ

* 20 ಲಕ್ಷ ರೂ. ಮೀರಿದ ನಗದು ವಿತ್ ಡ್ರಾ, ಠೇವಣಿಗೆ ಆಧಾರ್, ಪ್ಯಾನ್ ಕಡ್ಡಾಯ 
*ಕೋಆಪರೇಟಿವ್ ಬ್ಯಾಂಕುಗಳು, ಅಂಚೆ ಕಚೇರಿಗಳಿಗೂ ಅನ್ವಯ
*ಚಾಲ್ತಿ ಖಾತೆ ತೆರೆಯಲು ಕೂಡ ಈ ಹೊಸ ನಿಯಮ ಅನ್ವಯ
*ಅಧಿಕ ಮೊತ್ತದ ನಗದು ವಹಿವಾಟು ಪತ್ತೆ ಹಚ್ಚಲು ಐಟಿ ಇಲಾಖೆಗೆ ನೆರವು

PAN or Aadhaar number must for withdrawing or depositing above this amount in banks post offices

ನವದೆಹಲಿ (ಮೇ 25): ನಾಳೆಯಿಂದ (ಮೇ 26) ದೇಶಾದ್ಯಂತ ನಗದು (Cash) ಹಿಂಪಡೆಯುವಿಕೆ  (Withdraw) ಹಾಗೂ ಠೇವಣಿ  (Deposit) ವ್ಯವಸ್ಥೆಯಲ್ಲೊಂದು ಬದಲಾವಣೆಯಾಗಲಿದೆ.  ಒಂದು ಹಣಕಾಸು ಸಾಲಿನಲ್ಲಿ ಬ್ಯಾಂಕ್ ಖಾತೆಗಳಿಂದ 20 ಲಕ್ಷ ರೂ. ಮೀರಿದ ನಗದು ಹಿಂಪಡೆಯುವಿಕೆ  ಅಥವಾ ಠೇವಣಿಯಿಡಲು  ನಾಗರಿಕರು ತಮ್ಮ ಪ್ಯಾನ್ (PAN) ಅಥವಾ ಆಧಾರ್ ಸಂಖ್ಯೆ (Aadhaar number) ನಮೂದಿಸೋದನ್ನು ಕೇಂದ್ರ ಸರ್ಕಾರ ಕಡ್ಡಾಯ ಮಾಡಿದೆ. ಇದು ಕೋಆಪರೇಟಿವ್ ಬ್ಯಾಂಕುಗಳು (co-operative banks) ಹಾಗೂ ಅಂಚೆ ಕಚೇರಿಗಳು (post offices) ಸೇರಿದಂತೆ ಎಲ್ಲ ಬ್ಯಾಂಕುಗಳಿಗೂ ಅನ್ವಯಿಸಲಿದೆ.ಈ ನಿಯಮ ಚಾಲ್ತಿ ಖಾತೆ (Current account) ತೆರೆಯುವ ಸಂದರ್ಭದಲ್ಲಿ ಕೂಡ ಅನ್ವಯಿಸುತ್ತದೆ ಎಂದು ನೇರ ತೆರಿಗೆಗಳ ಕೇಂದ್ರೀಯ ಮಂಡಳಿ (CBDT) ಮೇ 10ರಂದು ಹೊರಡಿಸಿರುವ ಅಧಿಸೂಚನೆಯಲ್ಲಿ (Notification)ತಿಳಿಸಿದೆ. 

'ಪ್ರತಿ ವ್ಯಕ್ತಿ ಕೆಳಗೆ ನೀಡಲಾಗಿರುವ ಕಾಲಂ (2) ರಲ್ಲಿ ನಮೂದಿಸಿರುವ ವಹಿವಾಟು (Transaction) ನಡೆಸುವ ಸಂದರ್ಭದಲ್ಲಿ ಆತನ ಕಾಯಂ ಖಾತಾ ಸಂಖ್ಯೆ (PAN Number) ಅಥವಾ ಆಧಾರ್ ಸಂಖ್ಯೆ (Aadhaar number) ನಮೂದಿಸಬೇಕು.  ಇಂಥ ದಾಖಲೆಗಳನ್ನು ಸ್ವೀಕರಿಸುವ ಕಾಲಂ 3ರಲ್ಲಿ ನಮೂದಿಸಿರುವ ಪ್ರತಿ ವ್ಯಕ್ತಿ ಪ್ಯಾನ್ ಸಂಖ್ಯೆ  (PAN Number) ಸಮರ್ಪಕವಾಗಿ ನಮೂದಿಸಲ್ಪಟ್ಟಿದೆ ಹಾಗೂ ದೃಢೀಕರಿಸಲ್ಪಟ್ಟಿದೆ ಎಂಬುದನ್ನು ದೃಢೀಕರಿಸಬೇಕು. 

ಡಿಜಿಲಾಕರ್‌ನೊಂದಿಗೆ ಪಾಸ್‌ಪೋರ್ಟ್‌ಗಳಿಗೆ ಅರ್ಜಿ ಸಲ್ಲಿಸುವುದು ಇನ್ನಷ್ಟು ಸುಲಭ!

ಈ ಹಿಂದೆ ಒಂದು ದಿನದಲ್ಲಿ  50,000ರೂ. ಮೀರಿದ ನಗದು  (Cash) ಠೇವಣಿ ಇಡುವ ಸಂದರ್ಭದಲ್ಲಿ ಮಾತ್ರ ಪ್ಯಾನ್ ಕಾರ್ಡ್ ಅಗತ್ಯವಿತ್ತು. ಆದ್ರೆ ನಗದು ಜಮೆ ಅಥವಾ ವಿತ್ ಡ್ರಾಗೆ ಯಾವುದೇ ವಾರ್ಷಿಕ ಮಿತಿ ಇರಲಿಲ್ಲ. ಈ ಹೊಸ ವಿತ್ ಡ್ರಾ ಹಾಗೂ ಜಮೆ ನಿಯಮಗಳು ಹಣಕಾಸು ವಂಚನೆಗಳನ್ನು ತಗ್ಗಿಸುವ ಗುರಿ ಹೊಂದಿವೆ. ಪ್ಯಾನ್ ಸಂಖ್ಯೆ ನೀಡೋದ್ರಿಂದ ಆದಾಯ ತೆರಿಗೆ ಇಲಾಖೆಗೆ ಅಧಿಕ ಮೊತ್ತದ ನಗದು ವಹಿವಾಟನ್ನು ಮೇಲ್ವಿಚಾರಣೆ ನಡೆಸಲು ಸಾಧ್ಯವಾಗುತ್ತದೆ. ಅಲ್ಲದೆ, ಹಣದ ಚಲಾವಣೆಯನ್ನು ಪತ್ತೆ ಹಚ್ಚಲು ಕೂಡ ಇದು ನೆರವು ನೀಡುತ್ತದೆ' ಎಂದು ಸಿಬಿಡಿಟಿ ಹೇಳಿದೆ.

ಪ್ಯಾನ್ ಹಾಗೂ ಆಧಾರ್ ಸಂಖ್ಯೆ ಸ್ವೀಕರಿಸುವ ವ್ಯಕ್ತಿಗಳು ಕೂಡ ಅದನ್ನು ದೃಢೀಕರಿಸುವುದು ಅಗತ್ಯ ಎಂದು ನಿಯಮ ಹೇಳಿದೆ. ಇಂಥ ವಹಿವಾಟು ನಡೆಸುವ ವ್ಯಕ್ತಿಗಳು ಇಂಥ ವಹಿವಾಟುಗಳನ್ನು ನಡೆಸುವ 7 ದಿನ ಮುಂಚಿತವಾಗಿ ಪ್ಯಾನ್ ಕಾರ್ಡ್ ಗೆ ಅರ್ಜಿ ಸಲ್ಲಿಸಬೇಕು. ಒಂದು ವೇಳೆ ಇಂಥ ವಹಿವಾಟಿನಲ್ಲಿ ತೊಡಗುವ ವ್ಯಕ್ತಿ ಈಗಾಗಲೇ ಪ್ಯಾನ್ ಸಂಖ್ಯೆ ಹೊಂದಿದ್ದರೆ 20ಲಕ್ಷ ರೂ.ಗಿಂತ ಹೆಚ್ಚಿನ ಮೊತ್ತದ ನಗದು ಜಮೆ ಅಥವಾ ವಿತ್ ಡ್ರಾ ಮಾಡುವ ಸಮಯದಲ್ಲಿ ಹಾಗೂ ಚಾಲ್ತಿ ಖಾತೆ ಅಥವಾ ನಗದು ಕ್ರೆಡಿಟ್ ಖಾತೆ ತೆರೆಯುವ ಸಮಯದಲ್ಲಿ ಪ್ಯಾನ್ ಸಂಖ್ಯೆಯನ್ನು ನಮೂದಿಸಬೇಕು ಎಂದು ಸಿಬಿಡಿಟಿ ತಿಳಿಸಿದೆ.

Post Office Savings Account:ಅಂಚೆ ಕಚೇರಿ ಖಾತೆಯಿಂದ ಹಣ ವರ್ಗಾವಣೆ ಇನ್ನು ಸುಲಭ; ಗ್ರಾಹಕರಿಗೆ ನೆಫ್ಟ್, ಆರ್ ಟಿಜಿಎಸ್ ಸೌಲಭ್ಯ

ಗಮನಿಸಬೇಕಾದ ಪ್ರಮುಖಾಂಶಗಳು
ಅಧಿಸೂಚನೆ ಪ್ರಕಾರ ಪ್ರತಿ ವ್ಯಕ್ತಿ ಈ ಕೆಳಗಿನ ಯಾವುದೇ ವಹಿವಾಟುಗಳಲ್ಲಿ ತೊಡಗುವ ಮುನ್ನ ಪ್ಯಾನ್ ಸಂಖ್ಯೆ ನಮೂದಿಸಬೇಕು.
*ಒಂದು ಆರ್ಥಿಕ ಸಾಲಿನಲ್ಲಿ  ಬ್ಯಾಂಕ್ ಅಥವಾ ಅಂಚೆ ಕಚೇರಿಯ ಒಂದು ಅಥವಾ ಅದಕ್ಕಿಂತ ಹೆಚ್ಚಿನ ಖಾತೆಗಳಿಗೆ 20 ಲಕ್ಷ ರೂ. ಅಥವಾ ಅದಕ್ಕಿಂತ ಹೆಚ್ಚಿನ ನಗದು ಜಮೆ ಮಾಡುವಾಗ.
*ಒಂದು ಆರ್ಥಿಕ ಸಾಲಿನಲ್ಲಿ ಬ್ಯಾಂಕ್ ಅಥವಾ ಅಂಚೆ ಕಚೇರಿಯ ಒಂದು ಅಥವಾ ಹೆಚ್ಚಿನ ಖಾತೆಗಳಿಂದ 20 ಲಕ್ಷ ರೂ. ಅಥವಾ ಅದಕ್ಕಿಂತ ಹೆಚ್ಚಿನ ನಗದು ವಿತ್ ಡ್ರಾ ಮಾಡುವಾಗ
*ಬ್ಯಾಂಕಿನಲ್ಲಿ ಚಾಲ್ತಿ ಖಾತೆ ಅಥವಾ ನಗದು ಕ್ರೆಡಿಟ್ ಖಾತೆ  ತೆರೆಯುವ ಸಂದರ್ಭದಲ್ಲಿ.

Latest Videos
Follow Us:
Download App:
  • android
  • ios