ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್‌ ಎಸ್‌ಬಿಐನ ಇಂಟರ್ನೆಟ್‌ ಬ್ಯಾಂಕಿಂಗ್‌, ಯುಪಿಐ ಪಾವತಿ ಸೇವೆಗಳು ಹಾಗೂ ಎಸ್‌ಬಿಐ ಯೋನೋ ಆ್ಯಪ್‌ ಸೇವೆಗಳು ಸೋಮವಾರ ದೇಶಾದ್ಯಂತ ಲಭ್ಯವಾಗದೇ ಖಾತೆದಾರರು ಪರದಾಡಿದ ಪ್ರಸಂಗ ನಡೆದಿದೆ.

ಮುಂಬೈ: ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್‌ ಎಸ್‌ಬಿಐನ ಇಂಟರ್ನೆಟ್‌ ಬ್ಯಾಂಕಿಂಗ್‌, ಯುಪಿಐ ಪಾವತಿ ಸೇವೆಗಳು ಹಾಗೂ ಎಸ್‌ಬಿಐ ಯೋನೋ ಆ್ಯಪ್‌ ಸೇವೆಗಳು ಸೋಮವಾರ ದೇಶಾದ್ಯಂತ ಲಭ್ಯವಾಗದೇ ಖಾತೆದಾರರು ಪರದಾಡಿದ ಪ್ರಸಂಗ ನಡೆದಿದೆ. ಅನೇಕ ಎಸ್‌ಬಿಐ ಖಾತೆದಾರರು ಸಾಮಾಜಿಕ ಮಾಧ್ಯಮಗಳ ಮೂಲಕ ಬ್ಯಾಂಕ್‌ ವಿರುದ್ಧ ಈ ಬಗ್ಗೆ ಆಕ್ರೋಶ ಹೊರಹಾಕಿದ್ದಾರೆ. ನೆಟ್‌ ಬ್ಯಾಂಕಿಂಗ್‌, ಗೂಗಲ್‌ ಪೇನಂತಹ ಯುಪಿಐ ಪಾವತಿ ಸೇವೆಗಳು ಲಭ್ಯವಿರದೇ ಹಣಕಳಿಸಲು ತೊಂದರೆಯಾಗಿದೆ ಎಂದು ಅವರು ಕಿಡಿಕಾರಿದ್ದಾರೆ.

ಇದರ ಬೆನ್ನಲ್ಲೇ ಬ್ಯಾಂಕ್‌ ಸ್ಪಷ್ಟನೆ ನೀಡಿದ್ದು, ತಾಂತ್ರಿಕ ದೋಷದಿಂದಾಗಿ, ನಮ್ಮ ಕೆಲವು ಡಿಜಿಟಲ್‌ ಸೇವೆಗಳು ಸೋಮವಾರ ಕೆಲ ಗಂಟೆಗಳ ಕಾಲ ಬಾಧಿತವಾಗಿವೆ ಎಂದು ನಿಮಗೆ ತಿಳಿಸಲು ನಾವು ವಿಷಾದಿಸುತ್ತೇವೆ. ಆದಾಗ್ಯೂ, ಸಮಸ್ಯೆಯನ್ನು ಪರಿಹರಿಸಲಾಗಿದೆ ಮತ್ತು ಡಿಜಿಟಲ್‌ ಸೇವೆಗಳನ್ನು ಮರುಸ್ಥಾಪಿಸಲಾಗಿದೆ. ಆದ ಆನಾನುಕೂಲಕ್ಕೆ ಕ್ಷಮೆ ಯಾಚಿಸುತ್ತೇವೆ ಎಂದಿದೆ.

ಆರ್ ಡಿ ಖಾತೆಗೆ ಯಾವ ಬ್ಯಾಂಕ್ ಹೆಚ್ಚಿನ ಬಡ್ಡಿ ನೀಡುತ್ತೆ? ಇಲ್ಲಿದೆ ಮಾಹಿತಿ


SBI ಗ್ರಾಹಕರೇ ಗಮನಿಸಿ; ಬ್ಯಾಂಕ್ ಖಾತೆಗೆ ಮೊಬೈಲ್ ಸಂಖ್ಯೆ ಲಿಂಕ್ ಮಾಡಲು ಹೀಗೆ ಮಾಡಿ

Business Desk:ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (ಎಸ್ ಬಿಐ) ಗ್ರಾಹಕರು ತಮ್ಮ ಎಲ್ಲ ವಹಿವಾಟುಗಳ ಬಗ್ಗೆ ಮಾಹಿತಿ ಹೊಂದಿರಲು ತಮ್ಮ ಮೊಬೈಲ್ ಸಂಖ್ಯೆಯನ್ನು ಬ್ಯಾಂಕ್ ಉಳಿತಾಯ ಖಾತೆಯೊಂದಿಗೆ ನೋಂದಣಿ ಮಾಡೋದು ಅಗತ್ಯ. ಇದರಿಂದ ಖಾತೆದಾರರಿಗೆ ತಮ್ಮ ಖಾತೆಯಿಂದ ನಡೆಯುವ ಎಲ್ಲ ವಹಿವಾಟುಗಳ ಮಾಹಿತಿ ಪಡೆಯಲು ಸಾಧ್ಯವಾಗುತ್ತದೆ. ಅಲ್ಲದೆ, ಗ್ರಾಹಕನ ಬ್ಯಾಂಕ್ ಖಾತೆಯಿಂದ ಯಾವುದಾದ್ರೂ ಅನಧಿಕೃತ ಹಣದ ವಹಿವಾಟು ನಡೆದಿದ್ದರೂ ತಕ್ಷಣ ಮಾಹಿತಿ ಸಿಗುತ್ತದೆ. ಈ ಎಲ್ಲ ಕಾರಣಗಳಿಂದ ನಿಮ್ಮ ಮೊಬೈಲ್ ಸಂಖ್ಯೆ ನಿಮ್ಮ ಎಸ್ ಬಿಐ ಉಳಿತಾಯ ಖಾತೆಯೊಂದಿಗೆ ಲಿಂಕ್ ಆಗಿರೋದು ಮುಖ್ಯ. ಇತ್ತೀಚಿನ ದಿನಗಳಲ್ಲಿ ಆನ್ ಲೈನ್ ವಂಚನೆ ಪ್ರಕರಣಗಳು ಹೆಚ್ಚುತ್ತಿವೆ. ಇಂಥ ಸಮಯದಲ್ಲಿ ನಮ್ಮ ಬ್ಯಾಂಕ್ ಖಾತೆಯ ಸುರಕ್ಷತೆ ದೃಷ್ಟಿಯಿಂದ ಮೊಬೈಲ್ ಸಂಖ್ಯೆಯನ್ನು ಜೋಡಣೆ ಮಾಡೋದು ಅಗತ್ಯ. ಆದರೆ, ಕೆಲವರು ಇನ್ನೂ ಬ್ಯಾಂಕ್ ಖಾತೆಗೆ ತಮ್ಮ ಮೊಬೈಲ್ ಸಂಖ್ಯೆ ಜೋಡಣೆ ಮಾಡಿರೋದಿಲ್ಲ. ಒಂದು ವೇಳೆ ನೀವು ಎಸ್ ಬಿಐ ಗ್ರಾಹಕರಾಗಿದ್ದು, ನಿಮ್ಮ ಮೊಬೈಲ್ ಸಂಖ್ಯೆಯನ್ನು ಬ್ಯಾಂಕ್ ಉಳಿತಾಯ ಖಾತೆಗೆ ಜೋಡಣೆ ಮಾಡದಿದ್ರೆ ಈ ಕೆಳಗಿನ ಹಂತಗಳನ್ನು ಅನುಸರಿಸುವ ಮೂಲಕ ಲಿಂಕ್ ಮಾಡಿ.

ಎಸ್ ಬಿಐ ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ಹೇಗೆ?
- www.onlinesbi.com ಗೆ ಲಾಗಿನ್ ಆಗಿ.
-ಆ ಬಳಿಕ ಪ್ರೊಫೈಲ್ ಗೆ ಹೋಗಿ ವೈಯಕ್ತಿಕ ಮಾಹಿತಿ ವಿಭಾಗಕ್ಕೆ ಭೇಟಿ ನೀಡಿ. 
-ಈಗ 'My Accounts'ಅಡಿಯಲ್ಲಿ ಮೊಬೈಲ್ ಸಂಖ್ಯೆ ಬದಲಾಯಿಸಿ ಆಯ್ಕೆ ಮಾಡಿ.
-ಮುಂದಿನ ಪುಟದಲ್ಲಿ ಖಾತೆ ಸಂಖ್ಯೆ ಆಯ್ಕೆ ಮಾಡಿ. ಮೊಬೈಲ್ ಸಂಖ್ಯೆ ನಮೂದಿಸಿ ಹಾಗೂ Submit ಮೇಲೆ ಕ್ಲಿಕ್ ಮಾಡಿ.
-ಈಗ ನೋಂದಾಯಿತ ಮೊಬೈಲ್ ಸಂಖ್ಯೆಯ ಕೊನೆಯ ಎರಡು ಅಂಕೆಗಳು ನಿಮಗೆ ಕಾಣಿಸುತ್ತವೆ.

ಎಸ್ ಬಿಐ ಶಾಖೆಯಲ್ಲಿ ಅಪ್ಡೇಟ್ ಮಾಡೋದು ಹೇಗೆ?
ನಿಮ್ಮ ಸಮೀಪದ ಎಸ್ ಬಿಐ (SBI) ಶಾಖೆಗೆ ಭೇಟಿ ನೀಡಿ. ಮನವಿ ಪತ್ರ ಭರ್ತಿ ಮಾಡಿ. ಆ ಬಳಿಕ ಅದನ್ನು ಸಲ್ಲಿಕೆ ಮಾಡಿ. ಅಗತ್ಯ ಪರಿಶೀಲನೆಗಳ ಬಳಿಕ ನಿಮ್ಮ ಬ್ಯಾಂಕ್ ಖಾತೆಗೆ ಮೊಬೈಲ್ ಸಂಖ್ಯೆಯನ್ನು ಲಿಂಕ್ (link) ಮಾಡುತ್ತಾರೆ. ಅಪ್ಡೇಟ್ ಸ್ಟೇಟಸ್ ಬಗ್ಗೆ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಎಸ್ ಎಂಎಸ್ (SMS) ಬರುತ್ತದೆ.

BHIM SBI Pay ಪ್ರಾರಂಭ; ಎಸ್ ಬಿಐ ಗ್ರಾಹಕರು ಇನ್ಮುಂದೆ ಕ್ಷಣಾರ್ಧದಲ್ಲಿ ಸಿಂಗಾಪುರಕ್ಕೆ ಹಣ ಕಳುಹಿಸ್ಬಹುದು!