ಆರ್ ಡಿ ಖಾತೆಗೆ ಯಾವ ಬ್ಯಾಂಕ್ ಹೆಚ್ಚಿನ ಬಡ್ಡಿ ನೀಡುತ್ತೆ? ಇಲ್ಲಿದೆ ಮಾಹಿತಿ

ಕಳೆದ ಒಂದು ವರ್ಷದಲ್ಲಿ ಆರ್ ಬಿಐ ರೆಪೋ ದರದಲ್ಲಿ ಭಾರೀ ಏರಿಕೆ ಮಾಡಿದೆ.ಇದ್ರಿಂದ ಬ್ಯಾಂಕ್ ಗಳು  ರಿಕರಿಂಗ್ ಡೆಫಾಸಿಟ್ ಅಥವಾ ಆರ್ ಡಿ ಬಡ್ಡಿದರ ಹೆಚ್ಚಳ ಮಾಡಿವೆ. ಈ ಹಿನ್ನೆಲೆಯಲ್ಲಿ ಬ್ಯಾಂಕ್ ಗಳಲ್ಲಿ ಆರ್ ಡಿ ಖಾತೆ ತೆಗೆಯುವವರ ಸಂಖ್ಯೆ ಹೆಚ್ಚಿದೆ. ಹಾಗಾದ್ರೆ ಎಸ್ ಬಿಐ, ಎಚ್ ಡಿಎಫ್ ಸಿ, ಐಸಿಐಸಿಐ ಸೇರಿದಂತೆ ಪ್ರಮುಖ ಬ್ಯಾಂಕ್ ಗಳಲ್ಲಿ ಆರ್ ಡಿ ಮೇಲಿನ ಬಡ್ಡಿದರ ಎಷ್ಟಿದೆ? ಇಲ್ಲಿದೆ ಮಾಹಿತಿ. 
 

Recurring Deposit SBI HDFC ICICI other major banks increase interest rates anu

Business Desk:ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ರೆಪೋ ದರ ಏರಿಕೆ ಮಾಡಿದ ಬೆನ್ನಲ್ಲೇ ಬ್ಯಾಂಕ್ ಗಳು ಸ್ಥಿರ ಠೇವಣಿ ಹಾಗೂ ರಿಕರಿಂಗ್ ಡೆಫಾಸಿಟ್ (ಆರ್ ಡಿ) ಮೇಲಿನ ಬಡ್ಡಿದರ ಹೆಚ್ಚಳ ಮಾಡುತ್ತಿವೆ.  ಫೆಬ್ರವರಿ 8ರಂದು ಆರ್ ಬಿಐ ರೆಪೋ ದರವನ್ನು 25 ಬೇಸಿಸ್ ಪಾಯಿಂಟ್ಸ್  ಏರಿಕೆ ಮಾಡಿದೆ. ಇದರಿಂದ ಪ್ರಸ್ತುತ ರೆಪೋ ದರ ಶೇ. 6.50ಕ್ಕೆ ಏರಿಕೆಯಾಗಿದೆ. ಕಳೆದ ಒಂದು ವರ್ಷದಿಂದ ರೆಪೋ ದರದಲ್ಲಿ ಭಾರೀ ಏರಿಕೆಯಾದ ಕಾರಣ ಎಫ್ ಡಿ ಹಾಗೂ ಆರ್ ಡಿ ಮೇಲಿನ ಬಡ್ಡಿದರ ಹೆಚ್ಚಳಗೊಂಡಿದೆ. ಹೀಗಾಗಿ ಹೂಡಿಕೆದಾರರು ಬ್ಯಾಂಕ್ ಗಳ ಆರ್ ಡಿಗಳಲ್ಲಿ ಹೂಡಿಕೆ ಮಾಡಲು ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ. ಬ್ಯಾಂಕ್ ಆರ್ ಡಿಗಳಲ್ಲಿ ಹೂಡಿಕೆ ಮಾಡಿದ್ರೆ ರಿಸ್ಕ್ ಕಡಿಮೆ, ಜೊತೆಗೆ ಉತ್ತಮ ರಿಟರ್ನ್ಸ್ ಕೂಡ ಸಿಗುತ್ತದೆ. ಹೀಗಾಗಿ ಬ್ಯಾಂಕ್ ಆರ್ ಡಿಗಳು ಇತ್ತೀಚೆಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಆಕರ್ಷಿಸುತ್ತಿವೆ. ಆರ್ ಡಿ ಮೇಲಿ ಬಡ್ಡಿದರ ಬ್ಯಾಂಕಿನಿಂದ ಬ್ಯಾಂಕಿಗೆ ಬದಲಾಗುತ್ತವೆ. ಅಲ್ಲದೆ, ಆರ್ ಡಿ ಅವಧಿ ಆಧರಿಸಿಯೂ ಬಡ್ಡಿ ದರದಲ್ಲಿ ಬದಲಾವಣೆ ಆಗುತ್ತದೆ. ಹಾಗಾದ್ರೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಎಚ್ ಡಿಎಫ್ ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಸೇರಿದಂತೆ ಪ್ರಮುಖ ಬ್ಯಾಂಕ್ ಗಳಲ್ಲಿ ಆರ್ ಡಿ ಮೇಲಿನ ಬಡ್ಡಿದರ ಎಷ್ಟಿದೆ? 

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
ಎಸ್ ಬಿಐಯಲ್ಲಿ (SBI) 12ರಿಂದ 120 ತಿಂಗಳ ಅವಧಿಯ ರಿಕರಿಂಗ್ ಡೆಫಾಸಿಟ್ (ಆರ್ ಡಿ) ಮೇಲಿನ ಬಡ್ಡಿದರವನ್ನು ಶೇ.6.80 ರಿಂದ ಶೇ.7ಕ್ಕೆ ಏರಿಕೆ ಮಾಡಲಾಗಿದೆ. ಈ ಬಡ್ಡಿದರ ಏರಿಕೆಯು 2023ರ ಫೆಬ್ರವರಿ 15ರಿಂದ ಜಾರಿಗೆ ಬಂದಿದೆ. \

ಯುಪಿಐ ಪಾವತಿ ಅಪ್ಲಿಕೇಷನ್ ಬಳಸುತ್ತಿದ್ದೀರಾ? ಹಾಗಾದ್ರೆ ಮರೆಯದೆ ಈ 5 ಟಿಪ್ಸ್ ಫಾಲೋ ಮಾಡಿ

ಪಂಜಾಬ್ ನ್ಯಾಷನಲ್ ಬ್ಯಾಂಕ್
ಪಿಎನ್ ಬಿ ತನ್ನ ಗ್ರಾಹಕರಿಗೆ 6 ತಿಂಗಳಿಂದ 10 ವರ್ಷಗಳ ಅವಧಿಯ ರಿಕರಿಂಗ್ ಡೆಫಾಸಿಟ್ (ಆರ್ ಡಿ) ಮೇಲೆ ಶೇ.5.5ರಿಂದ ಶೇ.7.25ರ ತನಕ ಬಡ್ಡಿ ನೀಡುತ್ತಿದೆ. ಈ ಬಡ್ಡಿದರ ಫೆಬ್ರವರಿ 20ರಿಂದ ಜಾರಿಗೆ ಬಂದಿದೆ.

ಎಚ್ ಡಿಎಫ್ ಸಿ ಬ್ಯಾಂಕ್
ಎಚ್ ಡಿಎಫ್ ಸಿ ಬ್ಯಾಂಕ್ 6 ತಿಂಗಳಿಂದ 120 ತಿಂಗಳ ಅವಧಿಯ ರಿಕರಿಂಗ್ ಡೆಫಾಸಿಟ್ ಅಥವಾ ಆರ್ ಡಿ ಮೇಲೆ ಶೇ.4.5ರಿಂದ ಶೇ.7ರಷ್ಟು ಬಡ್ಡಿ ನೀಡುತ್ತಿದೆ. ಈ ಹೊಸ ದರವು ಫೆ.24ರಿಂದಲೇ ಜಾರಿಗೆ ಬಂದಿದೆ.

ಯೆಸ್ ಬ್ಯಾಂಕ್
ಯೆಸ್ ಬ್ಯಾಂಕ್ ತನ್ನ ಗ್ರಾಹಕರಿಗೆ 6 ತಿಂಗಳಿಂದ 10 ವರ್ಷಗಳ ಅವಧಿಯ ರಿಕರಿಂಗ್ ಡೆಫಾಸಿಟ್ ಮೇಲೆ ಶೇ.6ರಿಂದ ಶೇ.7.50ರ ತನಕ ಬಡ್ಡಿದರ ನೀಡುತ್ತದೆ. ಈ ಹೊಸ ಬಡ್ಡಿದರ ಫೆ.21ರಿಂದ ಜಾರಿಗೆ ಬಂದಿದೆ. 

ಭಾರತದ ಶ್ರೀಮಂತ ಉದ್ಯಮಿಗಳು ಯಾವ ನಗರದಲ್ಲಿ ನೆಲೆಸಿದ್ದಾರೆ? ಅವರ ಐಷಾರಾಮಿ ಮನೆಗಳು ಹೇಗಿವೆ? ಇಲ್ಲಿದೆ ಮಾಹಿತಿ

ಐಸಿಐಸಿಐ ಬ್ಯಾಂಕ್
ಐಸಿಐಸಿಐ ಬ್ಯಾಂಕ್ ತನ್ನ ಗ್ರಾಹಕರಿಗೆ 6 ತಿಂಗಳಿಂದ 10 ವರ್ಷಗಳ ಅವಧಿಯ ರಿಕರಿಂಗ್ ಡೆಫಾಸಿಟ್ (ಆರ್ ಡಿ) ಮೇಲೆ ಶೇ.4.75ರಿಂದ ಶೇ.7.10ರಷ್ಟು ಬಡ್ಡಿ ನೀಡುತ್ತಿದೆ. ಈ ಬಡ್ಡಿದರವು ಫೆ.24ರಿಂದಲೇ ಜಾರಿಗೆ ಬರಲಿದೆ.

ಒಂದು ವೇಳೆ ನೀವು ರಿಕರಿಂಗ್ ಡೆಫಾಸಿಟ್ ನಲ್ಲಿ (ಆರ್ ಡಿ) ಹೂಡಿಕೆ ಮಾಡಲು ಬಯಸಿದ್ದರೆ, ವಿವಿಧ ಬ್ಯಾಂಕ್ ಗಳು ಎಷ್ಟು ಬಡ್ಡಿದರ ನೀಡುತ್ತಿವೆ ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು. ಹಾಗೆಯೇ ಎಷ್ಟು ಅವಧಿಯ ಆರ್ ಡಿ ಖಾತೆ ತೆರೆಯಲು ಬಯಸಿದ್ದೀರಿ ಎಂಬುದನ್ನು ಕೂಡ ನಿರ್ಧರಿಸಬೇಕು. ಅಂಚೆ ಕಚೇರಿಗಳಲ್ಲಿ ಕೂಡ ಆರ್ ಡಿ ಖಾತೆಗಳನ್ನು ತೆರೆಯಲು ಅವಕಾಶವಿದೆ. ಅಲ್ಲಿನ ಬಡ್ಡಿದರವನ್ನು ಕೂಡ ಪರಿಶೀಲಿಸಿ ಮುಂದಿನ ನಿರ್ಧಾರ ಕೈಗೊಳ್ಳಿ. 

Latest Videos
Follow Us:
Download App:
  • android
  • ios