ಗೃಹ, ವಾಣಿಜ್ಯ ಸಾಲದ ಬಡ್ಡಿ ಬಳಿಕ ಠೇವಣಿ ದರ ಹೆಚ್ಚಳ ಮಾಡಿದ ಎಸ್‌ಬಿಐ
ಹೊಸ ವರ್ಷಕ್ಕೂ ಮುನ್ನ ತನ್ನ ಗ್ರಾಹಕರಿಗೆ ಭರ್ಜರಿ ಉಡುಗೊರೆ ನೀಡಿರುವ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ) 2 ಕೋಟಿ ರೂ.ಗಿಂತ ಕಡಿಮೆ ಇರುವ ವಿವಿಧ ಅವಧಿಯ ಸ್ಥಿರ ಠೇವಣಿಗಳ ಮೇಲಿನ ಬಡ್ಡಿದರವನ್ನು ಶೇ.0.50ರವರೆಗೂ ಹೆಚ್ಚಿಸಿರುವುದಾಗಿ ಘೋಷಿಸಿದೆ.
ನವದೆಹಲಿ: ಹೊಸ ವರ್ಷಕ್ಕೂ ಮುನ್ನ ತನ್ನ ಗ್ರಾಹಕರಿಗೆ ಭರ್ಜರಿ ಉಡುಗೊರೆ ನೀಡಿರುವ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ) 2 ಕೋಟಿ ರೂ.ಗಿಂತ ಕಡಿಮೆ ಇರುವ ವಿವಿಧ ಅವಧಿಯ ಸ್ಥಿರ ಠೇವಣಿಗಳ ಮೇಲಿನ ಬಡ್ಡಿದರವನ್ನು ಶೇ.0.50ರವರೆಗೂ ಹೆಚ್ಚಿಸಿರುವುದಾಗಿ ಘೋಷಿಸಿದೆ. ಹೊಸ ಬಡ್ಡಿದರ ಪ್ರಮಾಣವು ಡಿ.27, 2023ರಿಂದಲೇ ಅನ್ವಯವಾಗಲಿದೆ. ಇತ್ತೀಚೆಗಷ್ಟೇ ಬ್ಯಾಂಕ್ ಗೃಹ, ವಾಣಿಜ್ಯ ಮತ್ತು ಇತರೆ ಸಾಲಗಳ ಮೇಲಿನ ಬಡ್ಡಿದರ ಹೆಚ್ಚಳ ಮಾಡಿತ್ತು. ಅದರ ಬಳಿಕ ಇದೀಗ ಠೇವಣಿಗಳ ಬಡ್ಡಿದರ ಹೆಚ್ಚಿಸಿದೆ.
ಯಾವುದು ಏರಿಕೆ?:
7ರಿಂದ 45 ದಿನದ ಬಡ್ಡಿದರ ಶೇ.3ರಿಂದ ಶೇ.3.50ಕ್ಕೆ, 46-179 ದಿನ ಶೇ.4.50ರಿಂದ ಶೇ.4.75ಕ್ಕೆ, 180-210 ದಿನ ಶೇ.5.25ರಿಂದ ಶೇ.5.75, 211ದಿನದಿಂದ 1 ವರ್ಷ ಶೇ.5.75ರಿಂದ ಶೇ.6ಕ್ಕೆ ಹೆಚ್ಚಳವಾಗಿದೆ.. ಇನ್ನು ಇದೇ ಅವಧಿಯ ಹಿರಿಯ ನಾಗರಿಕರ ಠೇವಣಿ ಮೇಲಿನ ದರವು ಸಾಮಾನ್ಯ ವರ್ಗಕ್ಕಿಂತ ಸ್ವಲ್ಪ ಹೆಚ್ಚಳವಾಗಿದೆ.
ಮತ್ತೆ ಸೆನ್ಸೆಕ್ಸ್ ಧಮಾಕಾ; 3 ದಿನದಲ್ಲಿ ಹೂಡಿಕೆದಾರರಿಗೆ 8.11 ಲಕ್ಷ ಕೋಟಿ ರೂ. ಲಾಭ!
ನಾಗರಿಕರ ಹತ್ಯೆ ಘಟನೆ ಮರುಕಳಿಸದಂತೆ ಎಚ್ಚರ ವಹಿಸಿ: ಸೇನೆಗೆ ಸಿಂಗ್
ನವದೆಹಲಿ: ನಾಗರೀಕರ ಹತ್ಯೆ ಘಟನೆ ಮರುಕಳಿಸದಂತೆ ಎಚ್ಚರ ವಹಿಸಬೇಕು. ಯೋಧರು ದೇಶದ ಗಡಿ ಕಾಯುವ ಜೊತೆಗೆ ದೇಶದ ಜನರ ಹೃದಯಕ್ಕೆ ಘಾಸಿಯಾಗದಂತೆ ನೋಡಿಕೊಳ್ಳಬೆಕು ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭಾರತೀಯ ಸೇನೆಗೆ ಸಲಹೆ ನೀಡಿದ್ದಾರೆ. ಇತ್ತೀಚೆಗೆ ಪೂಂಛ್‌ನಲ್ಲಿ ಉಗ್ರ ದಾಳಿಗೆ ಐದು ಯೋಧರು ಬಲಿಯಾದ ಬಳಿಕ 8 ಸ್ಥಳೀಯ ನಾಗರಿಕರನ್ನು ಸೇನೆ ವಿಚಾರಣೆಗಾಗಿ ವಶಕ್ಕೆ ಪಡೆದಿತ್ತು. ಈ ಪೈಕಿ ಮೂವರು ನಿಗೂಢವಾಗಿ ಸಾವನ್ನಪ್ಪಿದ್ದರು. ಈ ವಿಷಯ ಕಾಶ್ಮೀರದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ರಾಜ್‌ನಾಥ್ ಸೇನೆಗೆ ಈ ಸಲಹೆ ನೀಡಿದ್ದಾರೆ. ದೇಶ ಕಾಯುವ ನಿಮ್ಮಿಂದ ಕೆಲವೊಮ್ಮೆ ತಪ್ಪಾಗುವುದು ಸಹಜ. ಆದರೆ ಅಂಥ ಘಟನೆಗಳು ಆಗದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಹೇಳಿದರು.
ಈ 9 ಪೋಸ್ಟ್ ಆಫೀಸ್ ಸ್ಕೀಂಗಳಲ್ಲಿ ಹೂಡಿಕೆ ಮಾಡಿ: ತೆರಿಗೆ ಪ್ರಯೋಜನ, ಗ್ಯಾರಂಟಿ ಆದಾಯ ತಗೊಳ್ಳಿ!