ಅಮೆರಿಕದ ಫೆಡರಲ್‌ ರಿಸರ್ವ್‌ ಬಡ್ಡಿದರ ಹೆಚ್ಚಳ ಮಾಡದೇ ಯಥಾಸ್ಥಿತಿ ಮುಂದುವರಿಸಿದೆ. ಜೊತೆಗೆ ಮುಂದಿನ ದಿನಗಳಲ್ಲಿ ಬಡ್ಡಿದರ ಕಡಿತದ ಸುಳಿವು ನೀಡಿದೆ. ಹೀಗಾಗಿ ಭಾರತೀಯ ಷೇರುಪೇಟೆ ಏರಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

ಮುಂಬೈ (ಡಿಸೆಂಬರ್ 16, 2023): ಭಾರತೀಯ ಷೇರುಪೇಟೆಗಳಾದ ಸೆನ್ಸೆಕ್ಸ್‌ ಮತ್ತು ನಿಫ್ಟಿ ಶುಕ್ರವಾರ ಕ್ರಮವಾಗಿ 71 ಸಾವಿರ ಮತ್ತು 21 ಸಾವಿರ ಅಂಕಗಳನ್ನು ದಾಟಿ ಮತ್ತೆ ತಮ್ಮ ನಾಗಾಲೋಟವನ್ನು ಮುಂದುವರೆಸಿದೆ.

ಶುಕ್ರವಾರ ಅಂತ್ಯದ ಹೊತ್ತಿಗೆ ಸೆನ್ಸೆಕ್ಸ್‌ 969.55 ಅಂಕ ಏರಿಕೆಯೊಂದಿಗೆ 71,483.75 ಅಂಕ ದಾಖಲಿಸಿದರೆ, ನಿಫ್ಟಿಯು 273.95 ಅಂಕ ಏರಿಕೆಯೊಂದಿಗೆ 21,456.65 ಅಂಕ ದಾಖಲಿಸಿ ವಹಿವಾಟು ಅಂತ್ಯಗೊಳಿಸಿದೆ. ಇದರಿಂದಾಗಿ ಒಟ್ಟು ಮಾರುಕಟ್ಟೆ ಮೌಲ್ಯ 2 ಲಕ್ಷ ಕೋಟಿ ರೂ. ಏರಿಕೆಯೊಂದಿಗೆ 357 ಲಕ್ಷ ಕೋಟಿ ರು. ದಾಖಲಿಸಿದೆ.

ಇದನ್ನು ಓದಿ: ಒಂದೇ ದಿನದಲ್ಲಿ 5 ಲಕ್ಷ ಕೋಟಿ ಹೆಚ್ಚಾದ ಷೇರುಪೇಟೆ ಹೂಡಿಕೆದಾರರ ಸಂಪತ್ತು: ಅದೃಷ್ಟ ಅಂದ್ರೆ ಇದಪ್ಪಾ!

ಈ ಹಿನ್ನೆಲೆಯಲ್ಲಿ ಹೆಚ್‌ಸಿಎಲ್ ಷೇರುಗಳಲ್ಲಿ ಶೇ.5.58ರಷ್ಟು ಏರಿಕೆ ಕಂಡು ದಾಖಲೆ ಮಾಡಿತು.

3 ದಿನದಲ್ಲಿ 8.11 ಲಕ್ಷ ಕೋಟಿ ರೂ. ಸಂಪತ್ತು ಹೆಚ್ಚಳ
ಷೇರುಪೇಟೆ ಸತತ 3 ದಿನದಿಂದ ಏರಿಕೆ ಕಂಡಿದ್ದು, ಹೂಡಿಕೆದಾರರ ಸಂಪತ್ತು ಈ 3 ದಿನದಲ್ಲಿ 8.11 ಲಕ್ಷ ಕೋಟಿ ರೂ. ನಷ್ಟು ಹೆಚ್ಚಿದೆ. ಮಾರುಕಟ್ಟೆ ಮೌಲ್ಯ 349 ಲಕ್ಷ ಕೋಟಿ ರೂ. ನಿಂದ 357.87 ಲಕ್ಷ ಕೋಟಿ ರೂ. ಗೆ ಹೆಚ್ಚಿದೆ. 

ಒಂದು ವಾರದಲ್ಲಿ 1.83 ಲಕ್ಷ ಕೋಟಿ ಸಂಪತ್ತು ಹೆಚ್ಚಿಸಿಕೊಂಡ ಗೌತಮ್‌ ಅದಾನಿ: ಶುಕ್ರದೆಸೆ ಅಂದ್ರೆ ಇದಪ್ಪಾ!

ಎನ್‌ಎಸ್‌ಇ 3 ದಿನದಲ್ಲಿ 1,932.72 ಅಂಕ ಏರಿದ್ದು, ಒಟ್ಟಾರೆ ಶೇ. 2.77 ರಷ್ಟು ಹೆಚ್ಚಿದೆ. ಅಮೆರಿಕದ ಫೆಡರಲ್‌ ರಿಸರ್ವ್‌ ತನ್ನ ಬಡ್ಡಿದರ ಬದಲಾವಣೆ ಮಾಡದೇ ಇರಲು ನಿರ್ಧರಿಸಿದ್ದು ಏರಿಕೆಗೆ ಕಾರಣವಾಗಿದೆ.

ನೆಗೆತಕ್ಕೆ ಕಾರಣ ಏನು?:
ಇತ್ತೀಚೆಗೆ ರಿಸರ್ವ್‌ ಬ್ಯಾಂಕು ಭಾರತದ ಜಿಡಿಪಿ ಶೇ.7.5ರ ದರದಲ್ಲಿ ಪ್ರಗತಿ ಕಾಣಲಿದೆ ಎಂದು ಅಂದಾಜಿಸಿದೆ. ಇದರ ಜತೆಗೆ ಐಟಿ, ಇತರ ತಂತ್ರಜ್ಞಾನ ಹಾಗೂ ರಿಯಲ್‌ ಎಸ್ಟೇಟ್‌ ಷೇರುಗಳಿಗೆ ಭಾರಿ ಬೇಡಿಕೆ ಬಂದಿದೆ. ಅಲ್ಲದೆ, ಅಮೆರಿಕದ ಫೆಡರಲ್‌ ರಿಸರ್ವ್‌ ಬಡ್ಡಿದರ ಹೆಚ್ಚಳ ಮಾಡದೇ ಯಥಾಸ್ಥಿತಿ ಮುಂದುವರಿಸಿದೆ. ಜೊತೆಗೆ ಮುಂದಿನ ದಿನಗಳಲ್ಲಿ ಬಡ್ಡಿದರ ಕಡಿತದ ಸುಳಿವು ನೀಡಿದೆ. ಹೀಗಾಗಿ ಭಾರತೀಯ ಷೇರುಪೇಟೆ ಏರಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

3 ರಾಜ್ಯಗಳಲ್ಲಿ ಕಮಲ ಕಿಲಕಿಲ: ಷೇರುಪೇಟೆಯಲ್ಲಿ ಭರ್ಜರಿ ಜಿಗಿತ; 15 ನಿಮಿಷದಲ್ಲಿ ಹರಿದುಬಂತು 4 ಲಕ್ಷ ಕೋಟಿ!