ಚಿಲ್ಲರೆ ವಹಿವಾಟಿನಲ್ಲಿ ಡಿಜಿಟಲ್ ಕರೆನ್ಸಿ ಬಳಕೆಗೆ ಎಸ್ ಬಿಐ, ಐಸಿಐಸಿಐ ಸೇರಿ 5 ಬ್ಯಾಂಕ್ ಗಳು ಆಯ್ಕೆ

ದೇಶದಲ್ಲಿ ಈಗಾಗಲೇ ಡಿಜಿಟಲ್ ಕರೆನ್ಸಿ ಪರಿಚಯಿಸಲಾಗಿದೆ. ಸಗಟು ವಹಿವಾಟಿನಲ್ಲಿ ಬಳಕೆ ಮಾಡಲಾಗಿದೆ ಕೂಡ. ಈಗ ಚಿಲ್ಲರೆ ವ್ಯವಹಾರದಲ್ಲಿ ಡಿಜಿಟಲ್ ಕರೆನ್ಸಿ ಬಳಕೆಗೆ ಆರ್ ಬಿಐ ಮುಂದಾಗಿದ್ದು, ಅದರ ಅನುಷ್ಠಾನಕ್ಕೆ ಎಸ್ ಬಿಐ, ಐಸಿಐಸಿಐ, ಐಡಿಎಫ್ ಸಿ ಹಾಗೂ ಎಚ್ ಡಿಎಫ್ ಸಿ ಸೇರಿದಂತೆ ಐದು ಬ್ಯಾಂಕ್ ಗಳನ್ನು ಆಯ್ಕೆ ಮಾಡಿದೆ. 
 

SBI ICICI IDFC HDFC in RBIs list for digital currency pilot

ನವದೆಹಲಿ (ನ.15):  ದೇಶದಲ್ಲಿ ಡಿಜಿಟಲ್ ಕರೆನ್ಸಿ ಅಥವಾ ಡಿಜಿಟಲ್ ರುಪಿ ಚಲಾವಣೆಗೆ ಸಂಬಂಧಿಸಿದ ಚಿಲ್ಲರೆ ಪೈಲಟ್ ಯೋಜನೆಗೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ ಬಿಐ), ಐಸಿಐಸಿಐ ಬ್ಯಾಂಕ್, ಐಡಿಎಫ್ ಸಿ ಫಸ್ಟ್ ಬ್ಯಾಂಕ್ ಹಾಗೂ ಎಚ್ ಡಿಎಫ್ ಸಿ ಬ್ಯಾಂಕ್ ಸೇರಿದಂತೆ ಐದು ಬ್ಯಾಂಕ್ ಗಳನ್ನು ಆಯ್ಕೆ ಮಾಡಿದೆ ಎಂದು ಮೂಲಗಳು ತಿಳಿಸಿವೆ. ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ (ಸಿಬಿಡಿಸಿ-ಆರ್) ಚಿಲ್ಲರೆ ವಹಿವಾಟನ್ನು ಪ್ರಸ್ತುತವಿರುವ ಡಿಜಿಟಲ್ ಪಾವತಿ ವ್ಯವಸ್ಥೆ ಜೊತೆಗೆ ಸಂಯೋಜಿಸಬೇಕೇ ಅಥವಾ ಹೊಸ ವ್ಯವಸ್ಥೆಯನ್ನು ನಿರ್ಮಿಸಬೇಕೇ ಎಂಬ ಬಗ್ಗೆ ಆರ್ ಬಿಐ ಪರಿಶೀಲಿಸುತ್ತಿದೆ.  ಶೀಘ್ರದಲ್ಲಿಯೇ ಡಿಜಿಟಲ್ ಕರೆನ್ಸಿಯ ಪ್ರಯೋಗಿಕ ಚಿಲ್ಲರೆ ವಹಿವಾಟು ನಡೆಯಲಿದೆ. ಇದಕ್ಕಾಗಿ ಆರ್ ಬಿಐ ಹಾಗೂ ಭಾರತದ ರಾಷ್ಟ್ರೀಯ ಪಾವತಿಗಳ ನಿಗಮದೊಂದಿಗೆ (ಎನ್ ಪಿಸಿಐ) ಸೇರಿ ಈ ಪೈಲಟ್ ಯೋಜನೆ ಮುನ್ನಡೆಸಲು ಐದು ಬ್ಯಾಂಕುಗಳನ್ನು ಆಯ್ಕೆ ಮಾಡಲಾಗಿದೆ. ಈ ಯೋಜನೆ ಅನುಷ್ಠಾನಕ್ಕೆ ಕೆಲವು ವ್ಯಾಪಾರಿಗಳು ಹಾಗೂ ಗ್ರಾಹಕರ ಖಾತೆಗಳನ್ನು ಆಯ್ಕೆ ಮಾಡಲಾಗುತ್ತದೆ ಎಂದು ಹೇಳಲಾಗಿದೆ. 

ಆರ್ ಬಿಐ  50,000 ರೂ. ತನಕದ ಸಣ್ಣ ಮೊತ್ತದ ಚಿಲ್ಲರೆ ಪಾವತಿಗಳಿಗೆ ನಗದು ಬದಲು ಡಿಜಿಟಲ್ ಕರೆನ್ಸಿ ಅಂದರೆ ಸಿಬಿಡಿಸಿ-ಆರ್ ಆಯ್ಕೆ ಮಾಡಲು ಯೋಜಿಸಿದೆ. ಡಿಜಿಟಲ್ ಕರೆನ್ಸಿಯನ್ನು ಈಗಾಗಲೇ ಸಗಟು ವಹಿವಾಟಿನಲ್ಲಿ ಬಳಕೆ ಮಾಡಲಾಗಿದೆ. ನ.1ರಂದು ಭಾರತದ ಮೊದಲ ಡಿಟಿಟಲ್‌ ರುಪಿಗೆ (Digital Rupee) ಚಾಲನೆ ನೀಡಲಾಗಿತ್ತು. ಕ್ರಿಪ್ಟೋ ಕರೆನ್ಸಿಗೆ ತೀವ್ರ ವಿರೋಧ ವ್ಯಕ್ತಪಡಿಸುತ್ತ ಬಂದಿದ್ದಆರ್ ಬಿಐ, ಈ ಹಿಂದೆ ತನ್ನದೇ ಆದ ಡಿಜಿಟಲ್ ಕರೆನ್ಸಿ ಬಿಡುಗಡೆ ಮಾಡೋದಾಗಿ ತಿಳಿಸಿತ್ತು. ಆ ಬಳಿಕ ಡಿಜಿಟಲ್ ಕರೆನ್ಸಿ ಅಥವಾ ಇ-ರುಪಿಯನ್ನು ಪರಿಚಯಿಸಿದೆ. 

ಸಾಲದ ಕನಿಷ್ಠ ಬಡ್ಡಿದರ ಹೆಚ್ಚಿಸಿದ ಎಸ್ ಬಿಐ; ಸಾಲಗಾರರ ಮೇಲೆ ಹೆಚ್ಚಿದ ಇಎಂಐ ಹೊರೆ!

ಭಾರತದಲ್ಲಿ ಚಲಾವಣೆಯಲ್ಲಿರುವ ನಾಣ್ಯ ಹಾಗೂ ನೋಟುಗಳನ್ನು ಆರ್ ಬಿಐ ಬಿಡುಗಡೆ ಮಾಡುತ್ತದೆ ಎಂಬುದು ಎಲ್ಲರಿಗೂ ಗೊತ್ತು. ಈ ನಾಣ್ಯ ಮತ್ತು ನೋಟುಗಳಿಗೆ ಆರ್ ಬಿಐ ಭದ್ರತೆ ಇರುತ್ತದೆ. ಆದರೆ, ಬಿಟ್ ಕಾಯಿನ್ ಮುಂತಾದ ಡಿಜಿಟಲ್ ಕರೆನ್ಸಿಗಳಿಗೆ ಆರ್ ಬಿಐ ಮಾನ್ಯತೆ ಇಲ್ಲ. ಹೀಗಾಗಿ ಭಾರತದಲ್ಲಿ ಇವನ್ನು ಅಧಿಕೃತ ಎಂದು ಪರಿಗಣಿಸಲಾಗೋದಿಲ್ಲ. ಆದರೆ, ಇದೀಗ ಆರ್ ಬಿಐ ಅಧಿಕೃತವಾಗಿ ಡಿಜಿಟಲ್ ಕರೆನ್ಸಿ ಬಿಡುಗಡೆ ಮಾಡಿದೆ. ಇದಕ್ಕೆ ನಾಣ್ಯಗಳು ಹಾಗೂ ನೋಟಿನ ಮಾದರಿಯಲ್ಲೇ ಆರ್ ಬಿಐ ಭದ್ರತೆಯಿದೆ. ಹೀಗಾಗಿ ದೇಶದ ನಾಗರಿಕರು ಯಾವುದೇ ಅಂಜಿಕೆಯಿಲ್ಲದೆ ಡಿಜಿಟಲ್ ಕರೆನ್ಸಿಗಳ ಮೂಲಕ ವಹಿವಾಟು ನಡೆಸಲು ಸಾಧ್ಯವಾಗಲಿದೆ. 

ಪ್ರಯೋಜನ ಏನು?
ಡಿಜಿಟಲ್ ಕರೆನ್ಸಿ ಬಳಕೆಯಿಂದ ಭೌತಿಕ ರೂಪದಲ್ಲಿ ನಾಣ್ಯ (Coins) ಅಥವಾ ನೋಟುಗಳನ್ನು (Notes) ಮುದ್ರಿಸಬೇಕಾದ ಅಗತ್ಯವಿಲ್ಲ. ಇದ್ರಿಂದ ಮುದ್ರಣ ವೆಚ್ಚ (Printing charge) ತಪ್ಪುತ್ತದೆ. ಇನ್ನು ನಾಣ್ಯ ಅಥವಾ ನೋಟು ಹಾಳಾಗಬಹುದು. ಆದರೆ, ಡಿಜಿಟಲ್ ಕರೆನ್ಸಿಗೆ ಇಂಥ ಯಾವುದೇ ಸಮಸ್ಯೆಯಿಲ್ಲ. ಸಂಗ್ರಹಣೆ ಕೂಡ ಸುಲಭ. ಅಲ್ಲದೆ, ನಗದು (Cash), ಕ್ರೆಡಿಟ್ (Credit) ಅಥವಾ ಡೆಬಿಟ್‌ ಕಾರ್ಡ್ (Debit card) , ಮೊಬೈಲ್‌ ಆಪ್ (Mobile app), ಇ—ಬ್ಯಾಂಕಿಂಗ್ (e-banking) ಯಾವುದರ ಅಗತ್ಯವಿಲ್ಲದೆ ಡಿಜಿಟಲ್ ಕರೆನ್ಸಿ (Digital currency) ಮೂಲಕ ವಹಿವಾಟು ನಡೆಸಬಹುದು. 

ಎಲ್ಐಸಿ ಈ ಯೋಜನೆಯಲ್ಲಿ ಹೂಡಿಕೆ ಮಾಡಿದ್ರೆ ಪ್ರತಿ ತಿಂಗಳು ಸಿಗುತ್ತೆ 36,000ರೂ. ಪಿಂಚಣಿ!

ಡಿಜಿಟಲ್ ಕರೆನ್ಸಿ ಅಥವಾ ಇ-ರುಪಿ (e-Rupee) ಇ-ವೋಚರ್  (e-Vocher) ರೂಪದಲ್ಲಿ ಇರಲಿದೆ. ಇದನ್ನು ಫಲಾನುಭವಿಗಳ ಮೊಬೈಲ್ ಗೆ ಎಸ್ ಎಂಎಸ್ ಅಥವಾ ಕ್ಯುಆರ್ ಕೋಡ್ ಮಾದರಿಯಲ್ಲಿ ಕಳುಹಿಸಲು ಸಾಧ್ಯವಿದೆ. 
 

Latest Videos
Follow Us:
Download App:
  • android
  • ios