ಎಸ್‌ಬಿಐ ಠೇವಣಿ, ಸಾಲದ ಬಡ್ಡಿದರ ಇಳಿಕೆ: ಮಾ.10ರಿಂದ ಜಾರಿ| ಗ್ರಾಹಕರಿಗೆ ಶಾಕ್

ಮುಂಬೈ[ಮಾ.12]: ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್‌ ಆಗಿರುವ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ, ನಿಶ್ಚಿತ ಠೇವಣಿ ಹಾಗೂ ವಿವಿಧ ಸಾಲದ ಮೇಲಿನ ಬಡ್ಡಿದರಗಳನ್ನು ಬುಧವಾರ ಕಡಿತಗೊಳಿಸಿದೆ. ಮಾಚ್‌ರ್‍ 10ರಿಂದ ಹೊಡ ಬಡ್ಡಿದರಗಳು ಜಾರಿಗೆ ಬರಲಿವೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

2 ಕೋಟಿ ರು.ಗಳಿಗಿಂತ ಕಮ್ಮಿ ಅವಧಿಯ ಎಫ್‌ಡಿ ಬಡ್ಡಿದರಗಳನ್ನು ಶೇ.0.10ರಿಂದ ಶೇ.0.50ವರೆಗೆ ಕಡಿಮೆ ಮಾಡಲಾಗಿದೆ. 1 ವರ್ಷ ಮತ್ತು ಅದಕ್ಕಿಂತ ಹೆಚ್ಚು ಅವಧಿಯ ಎಫ್‌ಡಿ (ನಿಶ್ಚಿತ ಠೇವಣಿ) ಬಡ್ಡಿದರಗಳನ್ನು ಶೇ.0.10ರಷ್ಟುಕಡಿತಗೊಳಿಸಲಾಗಿದೆ. 1ರಿಂದ 2 ವರ್ಷದ ಎಫ್‌ಡಿಗೆ ಇನ್ನು ಮುಂದೆ ಶೇ.6ರ ಬದಲು ಶೇ.5.90ರ ಬಡ್ಡಿದರ ಸಿಗಲಿದೆ. ಹಿರಿಯ ನಾಗರಿಕರಿಗೆ ಇಷ್ಟೇ ಅವಧಿಗೆ ಶೇ.6.50 ಬದಲು ಶೇ.6.40ರ ಬಡ್ಡಿ ದೊರಕಲಿದೆ.

ಇನ್ನು 1 ವರ್ಷ ಅವಧಿಯ ಸಾಲದ ಬಡ್ಡಿದರಗಳನ್ನು ಶೇ.0.10ರಷ್ಟುಕಡಿತ ಮಾಡಲಾಗಿದೆ. ಹೀಗಾಗಿ ಇದರ ಬಡ್ಡಿದರ ಇನ್ನು ಶೇ.7.85ರಿಂದ ಶೇ.7.75ಕ್ಕೆ ಇಳಿಯಲಿದೆ.

30 ವರ್ಷದ ಗೃಹ ಸಾಲದ ಇಎಂಐ ಪ್ರತಿ 1 ಲಕ್ಷ ರು.ಗೆ 7 ರು.ನಷ್ಟುಇಳಿಯಲಿದೆ. 7 ವರ್ಷ ಅವಧಿಯ 1 ಲಕ್ಷ ರು. ವಾಹನ ಸಾಲದ ಇಎಂಐ 5 ರು.ನಷ್ಟುಇಳಿಯಲಿದೆ.

ಫೆಬ್ರವರಿಯಲ್ಲಷ್ಟೇ ಬ್ಯಾಂಕ್‌, ಶೇ.0.10ರಿಂದ ಶೇ.0.50ರಷ್ಟುಬಡ್ಡಿದರ ಕಡಿತ ಮಾಡಿತ್ತು.

ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾ ಕೂಡ ಮಾ.11ರಿಂದ ಜಾರಿಯಾಗುವಂತೆ ಶೇ.0.10ರಷ್ಟು ಬಡ್ಡಿದರ ಕಡಿತಗೊಳಿಸಿತ್ತು.