ನವದೆಹಲಿ(ಫೆ.27): ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ( SBI) ತನ್ನ ಗ್ರಾಹರಿಗೆ ಮಹತ್ವದ ನೊಟೀಸ್ ಹೊರಡಿಸಿದೆ. ಖಾತೆ ಹೊಂದಿದವರು KYC(ಗ್ರಾಹಕರ ವಿಳಾಸ, ಗುರುತಿನ ಚೀಟಿ) ಅಪ್‌ಡೇಟ್ ಮಾಡಿಕೊಳ್ಳಬೇಕು.  KYC ಅಪ್‌ಡೇಟ್ ಮಾಡಿಕೊಳ್ಳದ ಗ್ರಾಹಕರು ಫೆಬ್ರವರಿ 28ರೊಳಗೆ ಅಪ್‌ಡೇಟ್ ಮಾಡಿಕೊಳ್ಳಲು ಬ್ಯಾಂಕ್ ಸೂಚಿಸಿದೆ.

ಇದನ್ನೂ ಓದಿ: ಎಟಿಎಂಗಳಲ್ಲಿ 2000 ರು.ನೋಟಿನ ಅವಕಾಶವೇ ರದ್ದು!

ಫೆ.28ರ ಬಳಿಕ  KYC ಅಪ್‌ಡೇಟ್ ಮಾಡಿಕೊಳ್ಳದ ಖಾತೆಗಳು ಬ್ಲಾಕ್ ಆಗಲಿದೆ. ಒಂದು ಸಾರಿ ಬ್ಲಾಕ್ ಆದರೆ ಬಳಿಕ  KYC ಅಪ್‌ಡೇಟ್ ಮಾಡಿ 24 ಗಂಟೆ ಕಾಯಬೇಕಾದ ಪರಿಸ್ಥಿತಿ ಎದುರಾಗಬಹುದು. ಹೀಗಾಗಿ ಯಾರೆಲ್ಲಾ  KYC ಅಪ್‌ಡೇಟ್ ಮಾಡಿಕೊಳ್ಳದ ಗ್ರಾಹಕರು ತಕ್ಷಣವೇ ಅಪ್‌ಡೇಟ್ ಮಾಡಿಕೊಳ್ಳಲು SBI ಸೂಚಿಸಿದೆ.

ಇದನ್ನೂ ಓದಿ:ಗ್ರಾಹಕರ ಗಮನಕ್ಕೆ: ಮೂರು ದಿನ ಬ್ಯಾಂಕ್ ಬಂದ್!.

 KYC ಅಪ್‌ಡೇಟ್ ಮಾಡಿಕೊಳ್ಳದ ಗ್ರಾಹಕರಿಗೆ SBI ಬ್ಯಾಂಕ್ ಈಗಾಗಲೇ ಮೆಸೇಜ್, ಇ-ಮೇಲ್ ಮೂಲಕ ಸೂಟನೆ ನೀಡಿದೆ. ಟ್ವಿಟರ್ ಮೂಲಕ ಎಸ್‌ಬಿಐ ಬ್ಯಾಂಕ್ ಗ್ರಾಹಕರಲ್ಲಿ ಮನವಿ ಮಾಡಿದೆ.

ಯಾರು  KYC ಅಪ್‌ಡೇಟ್ ಮಾಡಿಕೊಳ್ಳಬೇಕು:
SBI ಖಾತೆ ಹೊಂದಿರುವವರು ಹಾಗೂ   KYC ಅಪ್‌ಡೇಟ್ ಮಾಡಿಕೊಳ್ಳದೇ ಇದ್ದವರು ತಕ್ಷಣವೇ  KYC ಅಪ್‌ಡೇಟ್ ಮಾಡಿಕೊಳ್ಳಬೇಕು. ಈಗಾಗಲೇ  KYC ಅಪ್‌ಡೇಟ್ ಮಾಡಿಕೊಂಡವರಿಗೆ ಸಮಸ್ಯೆ ಇಲ್ಲ. ಖಾತೆ ತೆರೆಯುವಾಗ KYC ಅಪ್‌ಡೇಟ್ ಮಾಡಿದರೆ ಕೆಲಸ ಮುಗಿದಿಲ್ಲ. ಖಾತೆಯ ಸುರಕ್ಷತೆಯ ದೃಷ್ಟಿಯಿಂದ ನಿಯತಕಾಲಿಕವಾಗಿ KYC ಅಪ್‌ಡೇಟ್ ಮಾಡಿಕೊಳ್ಳಬೇಕು.

KYC ಅಪ್‌ಡೇಟ್ ಮಾಡಿಕೊಳ್ಳುವುದು ಹೇಗೆ?
KYC ಅಪ್‌ಡೇಟ್ ಸಂದೇಶ ಪಡೆದಿರುವ SBI ಬ್ಯಾಂಕ್‌ ಗ್ರಾಹಕರು ಸಮೀಪದ ಬ್ರಾಂಚ್‌ಗೆ ತೆರಳಿ ಗುರುತಿನ ಚೀಟಿ(ID Proof) ಹಾಗೂ ವಿಳಾಸ ವಿವರ(Address Proof) ನೀಡಬೇಕು. ಈ ಮೂಲಕ ಬ್ಯಾಂಕ್ ಅಧಿಕಾರಿಗಳು ನಿಮ್ಮ KYC ಅಪ್‌ಡೇಟ್ ಮಾಡಿಕೊಡಲಿದ್ದಾರೆ. 

ಆನ್‌ಲೈನ್ ಬ್ಯಾಂಕಿಂಗ್ ಮೂಲಕವೂ KYC ಅಪ್‌ಡೇಟ್ ಮಾಡಿಕೊಳ್ಳಬಹುದು. ನೆಟ್‌ಬ್ಯಾಕಿಂಗ್ ಲಾಗಿನ್ ಮೂಲಕ KYC ಅಪ್‌ಡೇಟ್ ಸುಲಭವಾಗಿ ಮಾಡಿಕೊಳ್ಳಬಹುದು.

KYCಗೆ ಯಾವ ಡಾಕ್ಯುಮೆಂಟ್ ಮಾನ್ಯ:
ಚುನಾವಣಾ ಗುರುತಿನ ಚೀಟಿ
ಪಾಸ್‌ಪೋರ್ಟ್
ಡ್ರೈವಿಂಗ್ ಲೈಸೆನ್ಸ್
ಆಧಾರ ಕಾರ್ಡ್
NREGA ಕಾರ್ಡ್
ಪಾನ್ ಕಾರ್ಡ್
(ಇದರಲ್ಲಿ ಯಾವುದಾದರೂ ಗುರುತಿನ ಹಾಗೂ ವಿಳಾಸದ ಡಾಕ್ಯುಮೆಂಟ್ ಸ್ವೀಕರಿಸುತ್ತಾರೆ)

ಅಪ್ರಾಪ್ತರು:
10 ವರ್ಷಕ್ಕಿಂತ ಕೆಳಗಿನವರು SBI ಬ್ಯಾಂಕ್ ಖಾತೆ ಹೊಂದಿದ್ದರೆ, ಅವರ ಖಾತೆಯನ್ನು ಯಾರು ನಿರ್ವಹಿಸುತ್ತಾರೋ(ಪೋಷಕರು) ಅವರ ವಿಳಾಸ ಹಾಗೂ ಗುರುತಿನ ಚೀಟಿ ನೀಡಿ KYC ಅಪ್‌ಡೇಟ್ ಮಾಡಿಕೊಳ್ಳಬಹುದು.

ಎನ್ಆರ್‌ಐ
SBI ಬ್ಯಾಂಕ್ ಖಾತೆ ಹೊಂದಿದ ಎನ್‌ಆರ್‌ಐಗಳು(NRI)  ಫಾರಿನ್ ಆಫೀಸರ್ ಮೂಲಕ ಅಟೆಸ್ಟ್ ಮಾಡಿಸಿದ ಪಾಸ್‌ಪೋರ್ಟ್ ಹಾಗೂ ರೆಸಿಡೆನ್ಸ್ ವಿಸಾ ಕಾಪಿ, ಸಾರ್ವಜನಿಕ ನೊಟರಿ, ಇಂಡಿಯನ್ ಎಂಬಸಿಯ ಅಧೀಕೃತ ಪತ್ರ ಸೇರಿದಂತೆ ಕೆಲ ಡಾಕ್ಯುಮೆಂಟ್ ನೀಡಬಹುದು. 

KYC ಮಾರ್ಗಸೂಚಿ:
ಪ್ರೊವಿಶನ್ಸ್ ಆಫ್ ಪ್ರಿವೆನ್ಶನ್ ಆಫ್ ಮನಿ ಲಾಂಡರಿಂಗ್ ಆಕ್ಟ್ 2002 ಹಾಗೂ ಪ್ರಿವೆನ್ಶನ್ಸ್ ಆಫ್ ಮನಿ ಲಾಂಡರಿಂಗ್ ರೂಲ್ಸ್ 2005ರ ಪ್ರಕಾರ ಭಾರತದ ಪ್ರತಿ ಬ್ಯಾಂಕ್‌ಗಳು ತಮ್ಮ ಗ್ರಾಹಕರ ಸ್ಪಷ್ಟ ಮಾಹಿತಿ, ವಿಳಾಸ, ಗುರುತಿನ ಚೀಟಿಯನ್ನು ಇಟ್ಟುಕೊಂಡಿರಬೇಕು. ಫೆ.28, 2020ರೊಳಗೆ ಎಲ್ಲಾ SBI ಖಾತೆದಾರರು KYC ಅಪ್‌ಡೇಟ್ ಮಾಡಿಕೊಳ್ಳಬೇಕು ಎಂದು RBI ಹೇಳಿದೆ.

#NewsIn100Seconds ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್

"