Asianet Suvarna News Asianet Suvarna News

ಎಟಿಎಂಗಳಲ್ಲಿ 2000 ರು.ನೋಟಿನ ಅವಕಾಶವೇ ರದ್ದು!

ಎಟಿಎಂಗಳಲ್ಲಿ 2000 ರು.ನೋಟಿನ ಅವಕಾಶವೇ ರದ್ದು!| ಎಟಿಎಂಗಳಲ್ಲಿ ನೋಟು ಇಡುವ ಬಾಕ್ಸ್‌ಗಳ ಮರುವಿನ್ಯಾಸ| ಹಂತ ಹಂತವಾಗಿ .2000 ನೋಟು ಚಲಾವಣೆಯಿಂದ ಹಿಂದಕ್ಕೆ| 2000 ರು. ಬದಲು, 500, 200, 100 ರು. ನೋಟು ಲಭ್ಯತೆ

Bank ATMs start dispensing more of Rs 500 notes instead of Rs 2000
Author
Bangalore, First Published Feb 27, 2020, 7:58 AM IST

ನವದೆಹಲಿ[ಫೆ.27]: ಅಪನಗದೀಕರಣದ ವೇಳೆ ಚಲಾವಣೆಗೆ ಬಂದಿದ್ದ 2000 ರು. ನೋಟುಗಳನ್ನು ಸರ್ಕಾರ ಹಂತ ಹಂತವಾಗಿ ಚಲಾವಣೆಯಿಂದ ಹಿಂದಕ್ಕೆ ಪಡೆಯಲಿದೆ ಎಂಬ ವರದಿಗಳ ಬೆನ್ನಲ್ಲೇ, ಎಟಿಎಂಗಳಲ್ಲಿ 2000 ರು.ಮೌಲ್ಯದ ನೋಟುಗಳನ್ನು ವಿತರಿಸಲು ಇರುವ ಅವಕಾಶವನ್ನೇ ರದ್ದುಪಡಿಸುವ ಪ್ರಕ್ರಿಯೆಗೆ ಬ್ಯಾಂಕ್‌ಗಳು ಚಾಲನೆ ನೀಡಿರುವ ವಿಷಯ ಬೆಳಕಿಗೆ ಬಂದಿದೆ. ಹೀಗಾಗಿ ಬಹುಷಃ ಇನ್ನೊಂದು ವರ್ಷದೊಳಗೆ ದೇಶದ ಯಾವುದೇ ಎಟಿಎಂಗಳಲ್ಲೂ 2000 ರು.ಮೌಲ್ಯದ ನೋಟುಗಳು ವಿತರಣೆಯಾಗುವುದಿಲ್ಲ.

ಈಗ ಎಟಿಎಂನಲ್ಲಿ 100 ರು., 200 ರು., 500 ರು., ಹಾಗೂ 2000 ರು., ನೋಟುಗಳನ್ನು ಭರ್ತಿ ಮಾಡಲು ಅವಕಾಶವಿದೆ. ಒಂದು ಎಟಿಎಂನಲ್ಲಿ 2,300ರಿಂದ 2600 ನೋಟುಗಳನ್ನು ಶೇಖರಿಸಿ ಇಡಬಹುದು. ಆದರೆ ಇದೀಗ ಎಟಿಎಂಗಳಲ್ಲಿ 2000 ರು. ನೋಟು ಇರಿಸಲಾಗುವ ಬಾಕ್ಸ್‌ ತೆಗೆದು ಹಾಕಿ ಅಲ್ಲಿ ಕೇವಲ 500 ರು. ನೋಟುಗಳನ್ನು ಭರ್ತಿ ಮಾಡುವಂತೆ ಬಾಕ್ಸ್‌ ಮರುವಿನ್ಯಾಸಗೊಳಿಸಲಾಗುತ್ತದೆ. 4 ಬಾಕ್ಸ್‌ಗಳ ಪೈಕಿ 3ರಲ್ಲಿ 500 ರು. ಮೌಲ್ಯದ ನೋಟುಗಳು ಮತ್ತು ಉಳಿದ ಒಂದರಲ್ಲಿ 200 ಮತ್ತು 100 ರು.ಮೌಲ್ಯದ ನೋಟು ವಿತರಣೆಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ವರದಿಯೊಂದು ತಿಳಿಸಿದೆ.

ಪ್ರಸ್ತುತ ದೇಶದಲ್ಲಿ 2.40 ಲಕ್ಷ ಎಟಿಎಂ ಯಂತ್ರಗಳಿದ್ದು, ಅವುಗಳನ್ನು ಹಂತಹಂತವಾಗಿ ಹೊಸ ಮಾದರಿಗೆ ಬದಲಾವಣೆ ಮಾಡಲಾಗುವುದು.ಇತ್ತೀಚೆಗೆ ಇಂಡಿಯನ್‌ ಬ್ಯಾಂಕ್‌ ಹಾಗೂ ಇನ್ನೊಂದು ರಾಷ್ಟ್ರೀಕೃತ ಬ್ಯಾಂಕ್‌, ಈ ನೋಟುಗಳನ್ನು ಎಟಿಎಂಗಳಲ್ಲಿ ಹಾಗೂ ಬ್ಯಾಂಕ್‌ ಶಾಖೆಗಳಲ್ಲಿ ನೀಡದೇ ಇರುವ ನಿರ್ಧಾರ ಕೈಗೊಂಡಿದ್ದವು. ಇದರ ಬೆನ್ನಲ್ಲೇ ಎಲ್ಲ ಬ್ಯಾಂಕ್‌ಗಳಲ್ಲೂ ಈ ಪ್ರಕ್ರಿಯೆಗೆ ಚಾಲನೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.

ಆತಂಕ ಬೇಡ, ನೋಟು ರದ್ದಾಗಲ್ಲ

ಆದರೆ ಗ್ರಾಹಕರು ಇದರಿಂದ ಆತಂಕ ಪಡಬೇಕಿಲ್ಲ. ಈ ನೋಟುಗಳನ್ನು ಈ ಹಿಂದೆ 500 ರು. ಹಾಗೂ 1000 ರು. ನೋಟುಗಳನ್ನು ರದ್ದು ಮಾಡಿದಂತೆ ಮಾಡುವುದಿಲ್ಲ. ಅವು ಸಕ್ರಮ ನೋಟುಗಳಾಗಿಯೇ ಇರುತ್ತವೆ. ಬದಲಾಗಿ ಬ್ಯಾಂಕ್‌ಗಳಲ್ಲಿ ಇವನ್ನು ಜಮೆ ಸಂದರ್ಭದಲ್ಲಿ ಸ್ವೀಕರಿಸಲಾಗುತ್ತದೆ. ಹಣ ಹಿಂತೆಗೆತದ ಸಂದರ್ಭದಲ್ಲಿ 100, 200 ಅಥವಾ 500 ರು. ನೋಟುಗಳನ್ನು ನೀಡಲಾಗುತ್ತದೆ. ಒಂದು ವರ್ಷದಲ್ಲಿ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಸಂಗ್ರಹವಾದ 2000 ರು. ನೋಟುಗಳನ್ನು ಬ್ಯಾಂಕ್‌ಗಳು ಆರ್‌ಬಿಐಗೆ ಮರಳಿಸಲಿವೆ ಎಂದು ವರದಿಯಾಗಿದೆ.

Follow Us:
Download App:
  • android
  • ios