ಬೆಂಗಳೂರು(ಫೆ.23): ಹೊಸ ಪಿಂಚಣಿ ಯೋಜನೆ ರದ್ದತಿ, ವೇತನ ಹೆಚ್ಚಳ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಷ್ಟ್ರೀಕೃತ ಹಾಗೂ ಖಾಸಗಿ ಬ್ಯಾಂಕ್‌ಗಳ ನೌಕರರ ಸಂಘಟನೆಗಳು ಮಾ.11 ರಿಂದ ಮೂರು ದಿನಗಳ ಕಾಲ ಮುಷ್ಕರ ನಡೆಸಲು ನಿರ್ಧರಿಸಿವೆ.

ಮಾರ್ಚ್ ಎರಡನೇ ವಾರ ಹೋಳಿ ಹಬ್ಬ ಇದ್ದು, ಮುಷ್ಕರವೂ ನಡೆಯುವುದರಿಂದ ನಗದು ಮೂಲಕ ವ್ಯವಹರಿಸುವ ಸಾರ್ವಜನಿಕರಿಗೆ ಸಮಸ್ಯೆ ಉಂಟಾಗುವ ಸಾಧ್ಯತೆಯಿದೆ. ಮಾರ್ಚ್ 8 ಭಾನುವಾರ, ಮಾ. 10 ಹೋಳಿ ಹುಣ್ಣಿಮೆ ರಜೆಯಿರುತ್ತದೆ. ಮಾ.11ರಿಂದ 13ರವರೆಗೂ ಬ್ಯಾಂಕ್‌ ನೌಕರರು ಮುಷ್ಕರ ನಡೆಯುವ ಸಾಧ್ಯತೆಯಿದೆ. ಇನ್ನು ಮಾ. 14 ರಂದು ಎರಡನೇ ಶನಿವಾರ, ಮಾ.15 ಭಾನುವಾರವಿದೆ. ಹೀಗಾಗಿ ಮಾರ್ಚ್ ಎರಡನೇ ವಾರ ಬ್ಯಾಂಕ್‌ಗಳು ಕಾರ್ಯ ನಿರ್ವಹಿಸದಂತಹ ಪರಿಸ್ಥಿತಿ ಬರುವ ಸಾಧ್ಯತೆಯಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಹೀಗಾಗಿ, ದಿನನಿತ್ಯದ ವ್ಯವಹಾರಗಳಿಗೆ ಬ್ಯಾಂಕ್‌ಗಳನ್ನು ಅವಲಂಬಿಸಿರುವವರು, ಬ್ಯಾಂಕ್‌ಗಳ ಮೂಲಕ ವಿವಿಧ ಶುಲ್ಕ ಪಾವತಿ ಮಾಡುವವರು ಮತ್ತು ಡಿಡಿ ಮೂಲಕ ಹಣ ವರ್ಗಾವಣೆ ಮಾಡುವವರು ಮಾ.7 ಅಂತ್ಯದ ವೇಳೆ ಎಲ್ಲ ಕಾರ್ಯಗಳನ್ನು ಪೂರ್ಣಗೊಳಿಸಿಕೊಳ್ಳುವುದು ಉತ್ತಮ.