Asianet Suvarna News Asianet Suvarna News

ಎಸ್ ಬಿಐಯ ಈ ಯೋಜನೆಯಲ್ಲಿ ಒಮ್ಮೆ ಹೂಡಿಕೆ ಮಾಡಿದ್ರೆ ಸಾಕು, ಪ್ರತಿ ತಿಂಗಳು ಸಿಗುತ್ತೆ ಪಿಂಚಣಿ!

*ನಿವೃತ್ತಿ ಬದುಕಿಗೆ ಹೂಡಿಕೆ ಮಾಡಲು ಎಸ್ ಬಿಐ ವಾರ್ಷಿಕ ವರ್ಷಾಶನ ಠೇವಣಿ ಯೋಜನೆ ಉತ್ತಮ
*ಪ್ರತಿ ತಿಂಗಳು ಇಎಂಐ ರೂಪದಲ್ಲಿ ಪಿಂಚಣಿ 
*ಈ ಯೋಜನೆಯಲ್ಲಿ ಮಾಸಿಕ ಕನಿಷ್ಠ ವರ್ಷಾಶನ 1000 ರೂ. 

SBI Annuity Deposit Scheme Invest one time  get monthly pension check features other details
Author
First Published Oct 27, 2022, 5:15 PM IST

Business Desk:ನಿವೃತ್ತಿ ನಂತರದ ಬದುಕಿಗೆ ಹೂಡಿಕೆ ಮಾಡಲು ಬಯಸೋರಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (ಎಸ್ ಬಿಐ) ವಾರ್ಷಿಕ ವರ್ಷಾಶನ ಠೇವಣಿ ಯೋಜನೆ ಉತ್ತಮ ಆಯ್ಕೆಯಾಗಿದೆ. ಈ ಯೋಜನೆಯಲ್ಲಿ ಒಮ್ಮೆ ಹೂಡಿಕೆ ಮಾಡಿದ್ರೆ ಸಾಕು, ಪ್ರತಿ ತಿಂಗಳು ಪಿಂಚಣಿ ಪಡೆಯಬಹುದಾಗಿದೆ. ನೀವು ಈ ಯೋಜನೆಯಲ್ಲಿ ಹೂಡಿಕೆ ಮಾಡಿದ ಹಣ ಹಾಗೂ ಅದಕ್ಕೆ ದೊರೆತ ಬಡ್ಡಿಯ ಒಂದು ಭಾಗವನ್ನು ಪ್ರತಿ ತಿಂಗಳು ಪಿಂಚಣಿ ರೂಪದಲ್ಲಿ ನಿಮಗೆ ಪಾವತಿಸುತ್ತಾರೆ. ಅಂದರೆ ಪ್ರತಿ ತಿಂಗಳು ಇಎಂಐ ರೂಪದಲ್ಲಿ ನಿಮಗೆ ಪಿಂಚಣಿ ಸಿಗಲಿದೆ. ಈ ಯೋಜನೆಯಲ್ಲಿ ನೀವು ಅನೇಕ ಅವಧಿಗೆ ಹೂಡಿಕೆ ಮಾಡಬಹುದಾಗಿದೆ. ಅಂದರೆ 36/60/84  ಅಥವಾ 120 ತಿಂಗಳ ಅವಧಿಗೆ ಹೂಡಿಕೆ ಮಾಡಬಹುದಾಗಿದೆ.  ಈ ಯೋಜನೆಯಲ್ಲಿ ಮಾಸಿಕ ಕನಿಷ್ಠ ವರ್ಷಾಶನ 1000 ರೂ. ಸಿಗಲಿದೆ. 15,00,000ರೂ. ತನಕ ಹಣವನ್ನು ಮೆಚ್ಯುರಿಟಿಗೂ ಮುನ್ನವೇ ಪಾವತಿ ಮಾಡಲು ಅವಕಾಶವಿದೆ. ಹಾಗೆಯೇ ಠೇವಣಿ ಮೊತ್ತಕ್ಕೆ ಯಾವುದೇ ಗರಿಷ್ಠ ಮಿತಿಯಿಲ್ಲ. ಇನ್ನು ಹೂಡಿಕೆದಾರರು ವಿಶೇಷ ಪ್ರಕರಣಗಳಲ್ಲಿ ವರ್ಷಾಶನದ ಬ್ಯಾಲೆನ್ಸ್ ಮೊತ್ತದ ಶೇ. 75ರಷ್ಟನ್ನು ಓವರ್ ಡ್ರಾಫ್ಟ್ ಅಥವಾ ಸಾಲದ ರೂಪದಲ್ಲಿ ಪಡೆಯಲು ಅವಕಾಶವಿದೆ. 

ಬಡ್ಡಿದರ ಎಷ್ಟಿದೆ?
ಈ ಯೋಜನೆಯಲ್ಲಿ ಹೂಡಿಕೆ ಮಾಡಿದ ಹಣಕ್ಕೆ ಸಾಮಾನ್ಯ ಜನರಿಗೆ ಹಾಗೂ ಹಿರಿಯ ನಾಗರಿಕರಿಗೆ ಒಂದೇ ರೀತಿಯ ಬಡ್ಡಿದರ (Interest rate) ಇರಲಿದೆ. ಇದರಲ್ಲಿ ಯಾವುದೇ ಬದಲಾವಣೆಯಿಲ್ಲ. ಎಸ್ ಬಿಐ (SBI) ಇತ್ತೀಚೆಗೆ ಸ್ಥಿರ ಠೇವಣಿ  (Fixed Deposit) ಮೇಲಿನ ಬಡ್ಡಿದರವನ್ನು ಹೆಚ್ಚಳ ಮಾಡಿದೆ. ಅದರ ಅನ್ವಯ  ಸಾಮಾನ್ಯ ನಾಗರಿಕರಿಗೆ ಎಫ್‌ಡಿ ಮೇಲೆ ಶೇ. 6.1 ಹಾಗೂ  ಹಿರಿಯ ನಾಗರಿಕರಿಗೆ ಶೇ. 6.9ರಷ್ಟು ಬಡ್ಡಿದರ ನೀಡಲಾಗುತ್ತಿದೆ. ಇನ್ನು ಈ ಯೋಜನೆಯಲ್ಲಿ ನಾಲ್ಕು ಅವಧಿಯ ಠೇವಣಿಗೆ ಅವಕಾಶವಿದೆ. ಹೀಗಾಗಿ ಠೇವಣಿ ಅವಧಿ ಅನ್ವಯ ಬಡ್ಡಿದರ ಕೂಡ ಬದಲಾಗುತ್ತದೆ. ಒಂದು ವೇಳೆ ನೀವು 36 ತಿಂಗಳ ಅವಧಿಗೆ ಠೇವಣಿಯಿಟ್ಟರೆ ನಿಮಗೆ ಶೇ. 6.25ರಷ್ಟು ಬಡ್ಡಿದರ ಸಿಗಲಿದೆ. ಇನ್ನು 60 ತಿಂಗಳ ಅವಧಿಯ ಠೇವಣಿಗಳ ಮೇಲೆ ಸಾಮಾನ್ಯ ನಾಗರಿಕರಿಗೆ ಶೇ.6.10 ಹಾಗೂ ಹಿರಿಯ ನಾಗರಿಕರಿಗೆ ಶೇ.6.5 ಬಡ್ಡಿ ಸಿಗಲಿದೆ. 84 ತಿಂಗಳು ಹಾಗೂ 120 ತಿಂಗಳ ಅವಧಿಯ ಠೇವಣಿ ಮೇಲೆ ಸಾಮಾನ್ಯ ನಾಗರಿಕರಿಗೆ ಶೇ.6.1 ಹಾಗೂ ಹಿರಿಯ ನಾಗರಿಕರಿಗೆ ಶೇ. 6.9ರಷ್ಟು ಬಡ್ಡಿ ನೀಡಲಾಗುತ್ತಿದೆ. 

ಕರೆನ್ಸಿ ನೋಟಿನಲ್ಲಿ ಫೋಟೋ ವಿವಾದ, ಪ್ರಧಾನಿ ಮೋದಿ ಚಿತ್ರಕ್ಕೆ ಆಗ್ರಹಿಸಿದ ನಾಯಕ!

ಠೇವಣಿದಾರರು (Depositor) ಮರಣ ಹೊಂದಿದ ಸಂದರ್ಭದಲ್ಲಿ ಅವಧಿಗೂ ಮುನ್ನ ಠೇವಣಿ (Deposit) ಕ್ಲೋಸ್ ಮಾಡಲು ಅನುಮತಿ ನೀಡಲಾಗಿದೆ. ಹಾಗೆಯೇ 15ಲಕ್ಷ ರೂ. ತನಕ ಅವಧಿಗೂ ಮುನ್ನ ಹಣ ಪಾವತಿಗೆ ಅವಕಾಶವಿದೆ.ಈ ಯೋಜನೆಯಲ್ಲಿ ನಿಮಗೆ ಯುನಿವರ್ಸಲ್ ಪಾಸ್ ಬುಕ್ ನೀಡಲಾಗುತ್ತದೆ. ಈ ಖಾತೆಯನ್ನು ನೀವು ಎಸ್ ಬಿಐ ಒಂದು ಶಾಖೆಯಿಂದ ಇನ್ನೊಂದು ಶಾಖೆಗೆ ವರ್ಗಾಯಿಸಲು ಅವಕಾಶವಿದೆ. ಈ ಯೋಜನೆ ಖಾತೆಯನ್ನು ಜಂಟಿಯಾಗಿ ಕೂಡ ನಿರ್ವಹಿಸಲು ಅವಕಾಶವಿದೆ. ಭಾರತದ ಯಾವುದೇ ನಾಗರಿಕ ಈ ಯೋಜನೆಯಡಿ ಪ್ರತ್ಯೇಕವಾಗಿ ಅಥವಾ ಜಂಟಿಯಾಗಿ ಖಾತೆ ತೆರೆಯಲು ಅವಕಾಶವಿದೆ. 

Meta ಕಂಪನಿಯ Q3 ಲಾಭ ಶೇ. 52 ರಷ್ಟು ಕುಸಿತ, ಆದಾಯವೂ ಡೌನ್..!

ಎಸ್ ಬಿಐ ಸ್ಥಿರ ಠೇವಣಿಗಳ (ಎಫ್ ಡಿ) ಮೇಲಿನ ಬಡ್ಡಿದರವನ್ನು ಗರಿಷ್ಠ 80 ಮೂಲಾಂಕಗಳಷ್ಟು ಅಂದ್ರೆ ಶೇ.0.8ರಷ್ಟು ಏರಿಕೆ ಮಾಡಿದೆ. ಈ ಹೊಸ ದರವು 2 ಕೋಟಿ ರೂ.ಗಿಂತ ಕಡಿಮೆ ಮೊತ್ತದ ಎಫ್ ಡಿಗಳಿಗೆ ಅನ್ವಯಿಸಲಿದ್ದು, ಅಕ್ಟೋಬರ್ 22ರಿಂದಲೇ ಜಾರಿಗೆ ಬರಲಿದೆ. ಎಸ್ ಬಿಐ ವೆಬ್ ಸೈಟ್ ನಲ್ಲಿ ನೀಡಿರುವ ಮಾಹಿತಿ ಪ್ರಕಾರ ಎಫ್ ಡಿ ಬಡ್ಡಿದರ ಹೆಚ್ಚಳ 25 ಮೂಲಾಂಕಗಳಿಂದ 80 ಮೂಲಾಂಕಗಳ ತನಕ ಇರಲಿದೆ.  ಎಸ್ ಬಿಐ ಎಫ್ ಡಿ ಮೇಲಿನ ಬಡ್ಡಿದರ ಹೆಚ್ಚಳ ಮಾಡುತ್ತಿರೋದು ಈ ತಿಂಗಳಲ್ಲಿ ಇದು ಎರಡನೇ ಬಾರಿ. ಈ ಹಿಂದೆ ಅಕ್ಟೋಬರ್ 15ರಂದು ಎಸ್ ಬಿಐ ಎಫ್ ಡಿ ಮೇಲಿನ ಬಡ್ಡಿದರವನ್ನು 20 ಮೂಲಾಂಕಗಳಷ್ಟು ಹೆಚ್ಚಳ ಮಾಡಿತ್ತು.  
 

Follow Us:
Download App:
  • android
  • ios