ಯಾವುದ್ರಲ್ಲಿ ಹೂಡಿಕೆ ಮಾಡ್ಬೇಕು ಎನ್ನವು ಪ್ರಶ್ನೆ ಅನೇಕರನ್ನು ಕಾಡ್ತಿರುತ್ತದೆ. ಕಡಿಮೆ ಅವಧಿಯಲ್ಲಿ ಹೆಚ್ಚು ಲಾಭ ನೀಡುವ ಯೋಜನೆ ಬಗ್ಗೆ ಜನರು ಹುಡುಕಾಟ ನಡೆಸ್ತಾರೆ. ಸುರಕ್ಷತೆ ಹಾಗೂ ಲಾಭಕರ ಎಂಬ ಯೋಜನೆಯಲ್ಲಿ ಅಮೃತ ಕಲಶ ಯೋಜನೆ ಕೂಡ ಸೇರಿದೆ.
ಮುಂದಿನ ಭವಿಷ್ಯ ಸುಖಕರವಾಗಿರಬೇಕೆಂದು ಬಯಸುವ ಪ್ರತಿಯೊಬ್ಬ ಮಹಿಳೆ ಹೂಡಿಕೆ ಮಾಡಬೇಕು. ಬ್ಯಾಂಕ್ ಸೇರಿದಂತೆ ಸುರಕ್ಷಿತ ಹಣಕಾಸು ಸಂಸ್ಥೆಗಳಲ್ಲಿ ಆಕೆ ಹೂಡಿಕೆ ಮಾಡಬಹುದು. ನೀವೂ ಸುರಕ್ಷಿತ ಭವಿಷ್ಯಕ್ಕಾಗಿ ಹೂಡಿಕೆ ಮಾಡಲು ಬಯಸಿದರೆ ಅಮೃತ್ ಕಲಶ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಈ ಯೋಜನೆಯ ದಿನಾಂಕವನ್ನು ಜೂನ್ 30 ರವರೆಗೆ ವಿಸ್ತರಿಸಿದೆ. ಅಮೃತ್ ಕಲಶ ಯೋಜನೆಗೆ ಸಂಬಂಧಿಸಿದ ಎಲ್ಲಾ ಮಾಹಿತಿ ಇಲ್ಲಿದೆ.
ಅಮೃತ ಕಲಶ (Amrita Kalash) ಯೋಜನೆ ಅಂದ್ರೇನು? : ಅಮೃತ ಕಲಶ ಯೋಜನೆ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಯೋಜನೆಯಾಗಿದೆ. ಇದು 400 ದಿನಗಳ ಸ್ಥಿರ ಹೂಡಿಕೆ (Investment) ಯೋಜನೆಯಾಗಿದೆ. ಈ ಯೋಜನೆಯಲ್ಲಿ ಗ್ರಾಹಕರು ಶೇಕಡಾ 7.10 ರಷ್ಟು ಬಡ್ಡಿ ಪಡೆಯುತ್ತಿದ್ದಾರೆ. ಹಿರಿಯ ನಾಗರಿಕರಿಗೆ ಬಡ್ಡಿ (Interest) ದರ ಹೆಚ್ಚಿದೆ. ಈ ಯೋಜನೆಯಲ್ಲಿ ಹೂಡಿಕೆ ಮಾಡಿದ ಹಿರಿಯ ನಾಗರಿಕರು ಶೇಕಡಾ 7.60ರಷ್ಟು ಬಡ್ಡಿಯನ್ನು ಪಡೆಯುತ್ತಿದ್ದಾರೆ. ಅಂದ್ರೆ ಸಾಮಾನ್ಯ ಜನರಿಗಿಂತ ಹಿರಿಯ ನಾಗರಿಕರಿಗೆ ಶೇಕಡಾ 0.50ರಷ್ಟು ಹೆಚ್ಚುವರಿ ಲಾಭ (Profit) ಸಿಗುತ್ತಿದೆ. ಬ್ಯಾಂಕ್ ಸ್ಟಾಫ್ ಅಥವಾ ನಿವೃತ್ತ ನೌಕರರಿಗೆ ಶೇಕಡಾ 1ರಷ್ಟು ಹೆಚ್ಚುವರಿ ಬಡ್ಡಿ ಸಿಗುತ್ತದೆ.
ವೇತನ ಖಾತೆ ಹೊಂದಿರುವ ಗ್ರಾಹಕರಿಗೆ ಬ್ಯಾಂಕ್ ಎಷ್ಟೊಂದು ಸೌಲಭ್ಯ ನೀಡುತ್ತೆ ಗೊತ್ತಾ?
ಹೂಡಿಕೆಗೆ ಅವಕಾಶ : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (Sbi) ದ ಈ ಅಮೃತ ಕಲಶ ಯೋಜನೆಯಲ್ಲಿ ಹೂಡಿಕೆ ಮಾಡಲು ನಿಮಗೆ ಜೂನ್ 30ರವರೆಗೆ ಅವಕಾಶವಿದೆ. ಹಿಂದಿದ್ದ ಗಡವನ್ನು ಬ್ಯಾಂಕ್ ವಿಸ್ತರಿಸಿದೆ. ಈ ಯೋಜನೆಯಲ್ಲಿ ನೀವು ಗರಿಷ್ಠ 2 ಕೋಟಿ ರೂಪಾಯಿವರೆಗೆ ಹೂಡಿಕೆ ಮಾಡಲು ಅವಕಾಶವಿದೆ.
ಈ ಯೋಜನೆಯಲ್ಲಿ ಸಿಗುತ್ತಾ ಸಾಲ : ಅಮೃತ ಕಲಶ ಯೋಜನೆಯಲ್ಲಿ ನೀವು ಒಮ್ಮೆ ಹಣ ಹೂಡಿಕೆ ಮಾಡಿದ್ರೆ ಮಧ್ಯದಲ್ಲಿ ಅದನ್ನು ತೆಗೆಯಲು ಸಾಧ್ಯವಿಲ್ಲ. ಆದ್ರೆ ನಿಮಗೆ ಈ ಯೋಜನೆಯಡಿ ಸಾಲವನ್ನು ನೀಡಲಾಗುತ್ತದೆ. ಕಡಿಮೆ ಅವಧಿಯಲ್ಲಿ ಉತ್ತಮ ಬಡ್ಡಿ ಪಡೆಯಬೇಕೆನ್ನುವವರಿಗೆ ಇದೊಂದು ಒಳ್ಳೆಯ ಯೋಜನೆ ಎನ್ನಬಹುದು.
Business News : ಸಕ್ಕರೆ ತಿನ್ನೋದ ಈಗ್ಲೇ ಕಡಿಮೆ ಮಾಡಿಲ್ಲ ಅಂದ್ರೆ ಪರ್ಸ್ ಖಾಲಿಯಾಗುತ್ತೆ…
ಈ ಯೋಜನೆಯಲ್ಲಿ ಹೂಡಿಕೆ ಹೇಗೆ? : ಈ ಯೋಜನೆಯಲ್ಲಿ ಹೂಡಿಕೆ ಮಾಡುವುದು ಸುಲಭ. ನೀವು ಮೊದಲು ಬ್ಯಾಂಕ್ ಶಾಖೆಗೆ ಹೋಗಿ ಅರ್ಜಿ ಪಡೆಯಬೇಕು. ಇಲ್ಲವೆ ನೀವು ಬ್ಯಾಂಕ್ ನ ಆನ್ಲೈನ್ ಅಪ್ಲಿಕೇಶನ್ ಎಸ್ ಬಿಐ ಯೋನೋ ನೆರವಿನಿಂದ ಹೂಡಿಕೆಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ಭರ್ತಿ ಮಾಡಿದ ನಂತ್ರ ಕೇಳಿದ ಅವಶ್ಯಕ ದಾಖಲೆಗಳನ್ನು ನೀವು ನೀಡಬೇಕಾಗುತ್ತದೆ. ಅದಾದ್ಮೇಲೆ ಸ್ವಲ್ಪ ಮೊತ್ತವನ್ನು ಬ್ಯಾಂಕ್ ಗೆ ಪಾವತಿಸಿ ನೀವು ಅಮೃತ ಕಲಶ ಯೋಜನೆಯಲ್ಲಿ ಹೂಡಿಕೆ ಮಾಡಬಹುದು.
ಈ ಯೋಜನೆಯಿಂದಾಗುವ ಲಾಭ : ಇದು ಅಮೃತ ಕಲಶ ಯೋಜನೆ ಭಾರತೀಯ ಸ್ಟೇಟ್ ಬ್ಯಾಂಕ್ ನಿಂದ ಶುರುವಾಗಿದ್ದು, ಭದ್ರತೆ ಬಗ್ಗೆ ಎರಡು ಪ್ರಶ್ನೆಯಿಲ್ಲ. ಈ ಯೋಜನೆ ಲಾಭವನ್ನು ಬ್ಯಾಂಕ್ ಗ್ರಾಹಕರು ಸುಲಭವಾಗಿ ಪಡೆಯಬಹುದು. ಸೀಮಿತ ಅವಧಿಯ ಹೂಡಿಕೆ ಯೋಜನೆ ಇದಾಗಿದೆ.
ಅಮೃತ ಕಲಶ ಯೋಜನೆ ತೆಗೆದುಕೊಳ್ಳಲು ಏನು ಅಗತ್ಯ : ಅಮೃತ ಕಲಶ ಯೋಜನೆ ಪಡೆಯಲು ವ್ಯಕ್ತಿ ಭಾರತೀಯ ನಾಗರಿಕನಾಗಿರಬೇಕು. 19 ವರ್ಷ ಮೇಲ್ಪಟ್ಟ ಭಾರತದ ಎಲ್ಲ ನಾಗರಿಕರೂ ಈ ಯೋಜನೆಯಲ್ಲಿ ಹೂಡಿಕೆ ಮಾಡಿ, ಕಡಿಮೆ ಅವಧಿಯಲ್ಲಿ ಹೆಚ್ಚಿನ ಬಡ್ಡಿ ಪಡೆಯಬಹುದಾಗಿದೆ.
ಅಗತ್ಯವಿರುವ ದಾಖಲೆಗಳೇನು? : ಅಮೃತ ಕಲಶ ಯೋಜನೆಯಲ್ಲಿ ಹೂಡಿಕೆ ಮಾಡಲು ಆಧಾರ್ ಕಾರ್ಡ್, ವಯಸ್ಸಿನ ದಾಖಲೆ, ವಿಳಾಸ,ಮೊಬೈಲ್ ನಂಬರ್, ಇಮೇಲ್ ಐಡಿ,ಆದಾಯ ಪ್ರಮಾಣ ಪತ್ರ, ಪಾಸ್ ಪೋರ್ಟ್ ಸೈಜ್ ಫೋಟೋ ಅವಶ್ಯಕ.
