*ಇಂದು ಡಾಲರ್ ಎದುರು ಸಾರ್ವಕಾಲಿಕ ಕನಿಷ್ಠ ಮಟ್ಟ 79.58ಕ್ಕೆ ಕುಸಿದ ರೂಪಾಯಿ*ನಿನ್ನೆ ಕೂಡ ಡಾಲರ್ ಎದುರು ರೂಪಾಯಿ ಮೌಲ್ಯ 22 ಪೈಸೆಗಳಷ್ಟು ಇಳಿಕೆ ಕಂಡು 79.48ಕ್ಕೆ ಕುಸಿತ* ಈ ವರ್ಷದ ಪ್ರಾರಂಭದಿಂದ ಇಲ್ಲಿಯ ತನಕ ರೂಪಾಯಿ ಮೌಲ್ಯದಲ್ಲಿ ಶೇ.6ರಷ್ಟು ಕುಸಿತ
ನವದೆಹಲಿ (ಜು.12): ಮಂಗಳವಾರ ಆರಂಭಿಕ ವಹಿವಾಟಿನಲ್ಲಿ ರೂಪಾಯಿ (Rupee) ಮೌಲ್ಯ ಡಾಲರ್ (Dollar) ಎದುರು ಸಾರ್ವಕಾಲಿಕ (lifetime) ಕನಿಷ್ಠ ಮಟ್ಟ 79.58 ಕ್ಕೆ ಕುಸಿತ ಕಂಡಿದೆ. ಕಳೆದ ಕೆಲವು ದಿನಗಳಿಂದ ಡಾಲರ್ ಎದುರು ರೂಪಾಯಿ ಮೌಲ್ಯ ದಿನದಿಂದ ದಿನಕ್ಕೆ ಕುಸಿತ ದಾಖಲಿಸುತ್ತಿದೆ. ಈ ವರ್ಷದ ಪ್ರಾರಂಭದಿಂದ ಇಲ್ಲಿಯ ತನಕ ರೂಪಾಯಿ ಮೌಲ್ಯದಲ್ಲಿ ಶೇ.6ರಷ್ಟು ಕುಸಿತ ಕಂಡುಬಂದಿದೆ.
ಡಾಲರ್ (Dllar) ಮೌಲ್ಯದಲ್ಲಿ ಏರಿಕೆ, ವ್ಯಾಪಾರ ಕೊರತೆಯಲ್ಲಿ ( trade deficit) ಹೆಚ್ಚಳ, ವಿದೇಶಿ ವಿನಿಮಯ ಸಂಗ್ರಹದಲ್ಲಿ (foreign exchange reserves) ಇಳಿಕೆ, ವಿದೇಶಿ ಸಾಂಸ್ಥಿಕ ಹೂಡಿಕೆದಾರರ (FII) ಹೊರ ಹರಿವು ಹಾಗೂ ಜಾಗತಿಕ ಇಂಧನ ಬೆಲೆಯಲ್ಲಿ ಹೆಚ್ಚಳ ರೂಪಾಯಿ ಮೌಲ್ಯದ ಇಳಿಕೆಗೆ ಕಾರಣವಾಗಿವೆ.
Bank FD Interest Rates:ಎಫ್ ಡಿ ಮೇಲೆ ಆಕರ್ಷಕ ಬಡ್ಡಿದರ ನೀಡುತ್ತಿವೆ ಈ 4 ಬ್ಯಾಂಕುಗಳು!
ಇಂಟರ್ ಬ್ಯಾಂಕ್ ಫೋರೆಕ್ಸ್ ಮಾರುಕಟ್ಟೆಯಲ್ಲಿ ಮಂಗಳವಾರ ರೂಪಾಯಿ ಮೌಲ್ಯ ಡಾಲರ್ ಎದುರು ಮತ್ತೆ 13 ಪೈಸೆ ಕುಸಿತದೊಂದಿಗೆ ದಿನಾರಂಭ ಮಾಡಿದೆ. ಸೋಮವಾರ (ಜು.11) ಕೂಡ ಅಮೆರಿಕ (US) ಡಾಲರ್ ಎದುರು ರೂಪಾಯಿ ಮೌಲ್ಯ 22 ಪೈಸೆಗಳಷ್ಟು ಇಳಿಕೆ ಕಂಡು 79.48 ತಲುಪಿತ್ತು. ಸೋಮವಾರ ಭಾರತೀಯ ಈಕ್ವಿಟಿ ಬೆಂಚ್ ಮಾರ್ಕ್ (Equity Benchmark) ಸೂಚ್ಯಂಕಗಳಾದ ಸೆನ್ಸೆಕ್ಸ್ (Sensex) ಮತ್ತು ನಿಫ್ಟಿ 50 (Nifty 50) ದಿನದ ಆರಂಭದಲ್ಲಿ ಭಾರೀ ಕುಸಿತ ಕಂಡರೂ ಆ ಬಳಿಕ ಸ್ವಲ್ಪ ಏರಿಕೆ ದಾಖಲಿಸಿದರೂ ಹಸಿರು ಬಣ್ಣಕ್ಕೆ ತಲುಪಲು ಸಾಧ್ಯವಾಗಲಿಲ್ಲ.
6 ಕರೆನ್ಸಿಗಳ ಗುಚ್ಛದ ವಿರುದ್ಧ ಡಾಲರ್ ಪ್ರಾಬಲ್ಯವನ್ನು ಅಳೆಯುವ ಯುಎಸ್ ಡಾಲರ್ ಸೂಚ್ಯಂಕ (US dollar index) ಸೋಮವಾರ 20 ವರ್ಷಗಳ ಅತ್ಯಧಿಕ ಮಟ್ಟವಾದ 108.02ಕ್ಕೆ ಸೋಮವಾರ ಏರಿಕೆಯಾಗಿತ್ತು. ಈ ವರ್ಷ ಡಾಲರ್ ಸೂಚ್ಯಂಕ ಸುಮಾರು ಶೇ.12ರಷ್ಟು ಏರಿಕೆ ಕಾಣುವ ಮೂಲಕ ಎರಡು ದಶಕಗಳ ಅಧಿಕ ಮಟ್ಟಕ್ಕೆ ತಲುಪಿದೆ. ಅಮೆರಿಕದ ಫೆಡರಲ್ ಬ್ಯಾಂಕ್ ಏರುತ್ತಿರುವ ಹಣದುಬ್ಬರಕ್ಕ ಕಡಿವಾಣಕ್ಕೆ ಬಡ್ಡಿದರದಲ್ಲಿ ಗಣನೀಯ ಏರಿಕೆ ಮಾಡಿತ್ತು. ಪರಿಣಾಮ ಡಾಲರ್ ಸೂಚ್ಯಂಕ ಕಳೆದ ಒಂದು ತಿಂಗಳಲ್ಲಿ ಹೊಸ ಮಟ್ಟಕ್ಕೆ ತಲುಪಿದೆ.
ವಿದೇಶಿ ಹೂಡಿಕೆಯ ನಿರಂತರ ಹೊರಹರಿವಿನಿಂದ ಭಾರತದ ವ್ಯಾಪಾರ ಕೊರತೆ ಹೆಚ್ಚುತ್ತಿದೆ. ಇದು ದೇಶೀಯ ಕರೆನ್ಸಿ ಮೇಲೆ ಪರಿಣಾಮ ಬೀರಿದೆ. ಈ ವರ್ಷ ಈಕ್ವಿಟಿಗಳಿಂದ ವಿದೇಶಿ ಪೋರ್ಟ್ ಫೋಲಿಯೋ ಹೂಡಿಕೆದಾರರ (FPIs) ನಿವ್ವಳ ಹೊರಹರಿವು 2.21 ಲಕ್ಷ ಕೋಟಿ ರೂ.ಗೆ ತಲುಪಿದೆ. ಜೂನ್ ತಿಂಗಳಂತೂ ವ್ಯಾಪಾರ ಕೊರತೆ ದಾಖಲೆಯ ಮಟ್ಟವನ್ನು ತಲುಪಿತ್ತು.
ಸೋಮವಾರದ ವಹಿವಾಟಿನಲ್ಲಿ ವಿದೇಶಿ ಬಂಡವಾಳ ಹೂಡಿಕೆದಾರರು ಭಾರತೀಯ ಮಾರುಕಟ್ಟೆಯಲ್ಲಿ ಒಟ್ಟು 170 ಕೋಟಿ ರೂ. ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ. ಇನ್ನು ಈ ತಿಂಗಳಲ್ಲಿ ಇಲ್ಲಿಯ ತನಕ ವಿದೇಶಿ ಹೂಡಿಕೆದಾರರು ಒಟ್ಟು ನಾಲ್ಕು ಸಾವಿರ ಕೋಟಿ ರೂ.ಗಿಂತ ಅಧಿಕ ಮೊತ್ತದ ಬಂಡವಾಳ ಹಿಂತೆಗೆದಿದ್ದಾರೆ.
ಠೇವಣಿ ಹಣ ವಾಪಾಸ್ ನೀಡುವಂತೆ ಚೀನಾದಲ್ಲಿ ಪ್ರತಿಭಟನೆ, ಸರ್ಕಾರದ ಶಕ್ತಿಪ್ರಯೋಗದ ವಿಡಿಯೋ ವೈರಲ್!
80ರೂ.ನತ್ತ ಹೆಜ್ಜೆ
ಡಾಲರ್ ಎದುರು ರೂಪಾಯಿ ಮೌಲ್ಯ ಮುಂದಿನ ದಿನಗಳಲ್ಲಿ ಇನ್ನಷ್ಟು ಇಳಿಕೆ ದಾಖಲಿಸಲಿದೆ ಎನ್ನುತ್ತಾರೆ ತಜ್ಞರು. ರೂಪಾಯಿ ಮೌಲ್ಯ 80ರ ಗಡಿ ದಾಟುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ.
ಭಾರತದಲ್ಲಿ ಹಣದುಬ್ಬರ ಭಾರತೀಯ ರಿಸರ್ವ್ ಬ್ಯಾಂಕಿನ ಸಹನಾ ಮಟ್ಟವನ್ನು ಮೀರಿದೆ. ದೇಶದಲ್ಲಿ ಚಿಲ್ಲರೆ ಹಣದುಬ್ಬರ ಮೇನಲ್ಲಿ ಶೇ. 7.04ರಷ್ಟಿತ್ತು. ಏಪ್ರಿಲ್ ಗಿಂತ ಮೇನಲ್ಲಿ ಚಿಲ್ಲರೆ ಹಣದುಬ್ಬರ ಇಳಿಕೆಯಾಗಿದ್ದರೂ ಭಾರತೀಯ ರಿಸರ್ವ್ ಬ್ಯಾಂಕ್ (RBI) ನಿಗದಿಪಡಿಸಿರುವ ಗರಿಷ್ಠ ಸಹನಾ ಮಟ್ಟಕ್ಕಿಂತ ಹೆಚ್ಚಿದೆ. ಏಪ್ರಿಲ್ ನಲ್ಲಿ ಚಿಲ್ಲರೆ ಹಣದುಬ್ಬರ ಶೇ.7.79ರಷ್ಟಿತ್ತು
