ಭಾರತೀಯ ರಿಸರ್ವ್ ಬ್ಯಾಂಕ್ ರೆಪೋ ದರ ಏರಿಕೆ ಮಾಡಿದ ಬೆನ್ನಲ್ಲೇ ಅನೇಕ ಬ್ಯಾಂಕುಗಳು ಸ್ಥಿರ ಠೇವಣಿ ಮೇಲಿನ ಬಡ್ಡಿದರ ಹೆಚ್ಚಳ ಮಾಡಿವೆ. ಹಾಗಾದ್ರೆ ಎಫ್ ಡಿ ಮೇಲೆ ಉತ್ತಮ ಬಡ್ಡಿದರ ನೀಡುತ್ತಿರುವ ಬ್ಯಾಂಕುಗಳು ಯಾವುವು? ಇಲ್ಲಿದೆ ಮಾಹಿತಿ.
Business Desk:ಕಳೆದ ತಿಂಗಳು ಭಾರತೀಯ ರಿಸರ್ವ್ ಬ್ಯಾಂಕ್ (RBI) ರೆಪೋ ದರ (Repo rate) ಏರಿಕೆ ಮಾಡಿದ ಬೆನ್ನಲ್ಲೇ ದೇಶಾದ್ಯಂತ ಬ್ಯಾಂಕುಗಳು (Banks) ಸಾಲಗಳು (Loans) ಹಾಗೂ ಠೇವಣಿಗಳ (Deposits) ಮೇಲಿನ ಬಡ್ಡಿದರ (Interest rate) ಹೆಚ್ಚಳ ಮಾಡುತ್ತಿವೆ. ಇನ್ನು ಅಪಾಯವಿಲ್ಲದ ಸುರಕ್ಷಿತ ಹೂಡಿಕೆ (Investment) ಹಾಗೂ ಉತ್ತಮ ರಿಟರ್ನ್ (Return) ಬಯಸುವ ವ್ಯಕ್ತಿಗಳಿಗೆ ಬ್ಯಾಂಕ್ ಎಫ್ ಡಿಗಳು ಅತ್ಯುತ್ತಮ ಆಯ್ಕೆಗಳಾಗಿವೆ. ಹಾಗಾದ್ರೆ ಸ್ಥಿರ ಠೇವಣಿಗಳ (FD) ಮೇಲೆ ಆಕರ್ಷಕ ಬಡ್ಡಿದರ ಹಾಗೂ ರಿಟರ್ನ್ ಒದಗಿಸುವ ಬ್ಯಾಂಕುಗಳು ಯಾವುವು?
ಪಂಜಾಬ್ ನ್ಯಾಷನಲ್ ಬ್ಯಾಂಕ್
ಜುಲೈ 4ರಿಂದ ಅನ್ವಯಿಸುವಂತೆ ಪಂಜಾಬ್ ನ್ಯಾಷನಲ್ ಬ್ಯಾಂಕ್ (Punjab National Bank) ಅಥವಾ ಪಿಎನ್ ಬಿ ( PNB) ಸ್ಥಿರ ಠೇವಣಿ (fixed deposit) ಮೇಲಿನ ಬಡ್ಡಿದರವನ್ನು (Interest rate) ಹೆಚ್ಚಳ ಮಾಡಿದೆ. ಒಂದು ವರ್ಷ ಮೇಲ್ಪಟ್ಟ ಹಾಗೂ ಎರಡು ವರ್ಷಗಳ ನಡುವಿನ ಅವಧಿಯ ಠೇವಣಿಗಳ ಬಡ್ಡಿದರದಲ್ಲಿ 10 ಮೂಲ ಅಂಕಗಳಷ್ಟು ಏರಿಕೆ ಮಾಡಲಾಗಿದ್ದು, ಈ ಹಿಂದಿನ ಶೇ.5.20 ರಿಂದ ಶೇ.5.30ಕ್ಕೆ ಏರಿಕೆ ಮಾಡಲಾಗಿದೆ. ಇನ್ನು 2 ವರ್ಷಗಳಿಂದ 3 ವರ್ಷಗಳ ತನಕ ಮೆಚ್ಯುರಿಟಿ ಅವಧಿ ಹೊಂದಿರುವ ಎಫ್ ಡಿಗಳ ಮೇಲಿನ ಬಡ್ಡಿದರವನ್ನು 20 ಮೂಲ ಅಂಕಗಳಷ್ಟು ಏರಿಕೆ ಮಾಡಲಾಗಿದ್ದು, ಶೇ.5.50ರಷ್ಟಿದೆ. ಇನ್ನು ಹಿರಿಯ ನಾಗರಿಕರಿಗೆ ಪಿಎನ್ ಬಿ ಎಫ್ ಡಿ ಬಡ್ಡಿದರವನ್ನು ಹೆಚ್ಚುವರಿ 50 ಅಂಕಗಳಷ್ಟು ಏರಿಕೆ ಮಾಡಲಾಗಿದೆ.
New Labour Laws:ವಾರದಲ್ಲಿ4 ದಿನ ಕೆಲಸ, ಫೈನಲ್ ಸೆಟ್ಲ್ ಮೆಂಟ್ ಸೇರಿ ಹಲವು ನಿಯಮ ಬದಲಾವಣೆ ಜಾರಿ ವಿಳಂಬ
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ (Union Bank of India) 1 ವರ್ಷದಿಂದ 2 ವರ್ಷಗಳ ಅವಧಿಯ ಸ್ಥಿರ ಠೇವಣಿಗೆ (FD) ಶೇ.5.45ರಷ್ಟು ಬಡ್ಡಿ ನೀಡುತ್ತಿದೆ. 2 ವರ್ಷಗಳಿಂದ 3 ವರ್ಷಗಳ ಅವಧಿಯ ಎಫ್ ಡಿಗೆ ಶೇ.5.50 ಬಡ್ಡಿ ನೀಡುತ್ತಿದೆ. ಇನ್ನು 3 ವರ್ಷಗಳಿಂದ 5 ವರ್ಷಗಳ ಅವಧಿಯ ಎಫ್ ಡಿ ಮೇಲಿನ ಬಡ್ಡಿದರ ಶೇ.5.75ರಷ್ಟಿದೆ.
ಯುಕೋ ಬ್ಯಾಂಕ್
ಯುಕೋ ಬ್ಯಾಂಕ್ (UCO Bank) ಒಂದು ವರ್ಷ ಮೇಲ್ಪಟ್ಟ ಹಾಗೂ 2 ವರ್ಷಗಳೊಳಗಿನ ಅವಧಿಯ ಎಫ್ ಡಿಗೆ ಶೇ.2 ಬಡ್ಡಿದರ ನೀಡುತ್ತದೆ. ಇನ್ನು 2 ವರ್ಷ ಮೇಲ್ಪಟ್ಟ ಹಾಗೂ 3 ವರ್ಷಗಳ ತನಕದ ಎಫ್ ಡಿಗೆ ಕೂಡ ಇಷ್ಟೇ ಬಡ್ಡಿದರ ಇದೆ. ಇನ್ನು 5 ವರ್ಷದ ತನಕದ ಅವಧಿಯ ಎಫ್ ಡಿ ಮೇಲೆ ಶೇ.5.60 ಬಡ್ಡಿದರ ನೀಡಲಾಗುತ್ತಿದೆ. 5 ವರ್ಷ ಮೇಲ್ಪಟ್ಟ ಎಫ್ ಡಿಗೆ ಶೇ5.30 ಬಡ್ಡಿದರ ನೀಡಲಾಗುತ್ತಿದೆ. 2 ಕೋಟಿ ರೂ.ಗಿಂತ ಕಡಿಮೆ ಮೊತ್ತದ ಠೇವಣಿ ಮೇಲೆ ಹಿರಿಯ ನಾಗರಿಕರಿಗೆ (Senior Citizen) ಸಾಮಾನ್ಯ ಗ್ರಾಹಕರಿಗೆ ನೀಡುವ ಬಡ್ಡಿದರದ ಮೇಲೆ ಹೆಚ್ಚುವರಿ 50 ಮೂಲ ಅಂಕಗಳಷ್ಟು ಬಡ್ಡಿ ನೀಡಲಾಗುತ್ತದೆ.
ಬ್ಯಾಂಕ್ ವಂಚನೆ ಆರೋಪಿ ವಿಜಯ್ ಮಲ್ಯಗೆ 4 ತಿಂಗಳ ಜೈಲು , 2 ಸಾವಿರ ರೂ ದಂಡ!
ಪಂಜಾಬ್ ಹಾಗೂ ಸಿಂದ್ ಬ್ಯಾಂಕ್
ಪಂಜಾಬ್ ಹಾಗೂ ಸಿಂದ್ ಬ್ಯಾಂಕಿನ (Punjab and Sind Bank) ಸ್ಥಿರ ಠೇವಣಿ ಮೇಲೆ 1 ವರ್ಷದಿಂದ 2 ವರ್ಷಗಳ ತನಕ ಶೇ.5.35 ಬಡ್ಡಿದರ ನೀಡಲಾಗುತ್ತಿದೆ. ಇನ್ನು 2 ವರ್ಷ ಮೇಲ್ಪಟ್ಟ ಠೇವಣಿಗೆ ಶೇ.5.40 ಬಡ್ಡಿದರ ನೀಡಲಾಗುತ್ತದೆ. 3 ವರ್ಷದಿಂದ 5 ವರ್ಷಗಳೊಳಗಿನ ಎಫ್ ಡಿಗೆ ಶೇ. 5.60 ಬಡ್ಡಿದರ ನೀಡಲಾಗುತ್ತದೆ. 5 ವರ್ಷಗಳಿಂದ 10 ವರ್ಷಗಳ ಅವಧಿಯ ಎಫ್ ಡಿಗೆ ಕೂಡ ಇದೇ ಬಡ್ಡಿದರ ಇದೆ. 2 ಕೋಟಿ ರೂ.ಗಿಂತ ಕಡಿಮೆ ಮೊತ್ತದ ಠೇವಣಿಗಳಿಗೆ ಇದು ಅನ್ವಯಿಸುತ್ತದೆ.
