ಮೇ 1ರಿಂದ ಜನಸಾಮಾನ್ಯರ ಜೇಬಿನ ಮೇಲೆ ಪರಿಣಾಮ ಬೀರಲಿವೆ ಈ 5 ಬದಲಾವಣೆಗಳು!

ಪ್ರತಿ ತಿಂಗಳ ಪ್ರಾರಂಭದಲ್ಲಿ ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದ ಕೆಲವು ನಿಯಮಗಳಲ್ಲಿ ಬದಲಾವಣೆಗಳಾಗುತ್ತವೆ. ಅದರಂತೆ ಮೇ 1ರಿಂದ ಕೂಡ ಕೆಲವು ನಿಯಮಗಳಲ್ಲಿ ಬದಲಾವಣೆಗಳಾಗಲಿದ್ದು, ಇವು ಜನಸಾಮಾನ್ಯರ ಜೇಬಿನ ಮೇಲೆ ನೇರ ಪರಿಣಾಮ ಬೀರಲಿವೆ. ಹಾಗಾದ್ರೆ ಆ ಬದಲಾವಣೆಗಳು ಯಾವುವು? ಇಲ್ಲಿದೆ ಮಾಹಿತಿ.
 

Rules Change From May 1 2023 These 5 big changes are going to happen anu

ನವದೆಹಲಿ (ಏ. 28): ಏಪ್ರಿಲ್ ತಿಂಗಳು ಅಂತ್ಯಗೊಳ್ಳಲು ಇನ್ನು ಎರಡು ದಿನಗಳಷ್ಟೇ ಬಾಕಿ ಉಳಿದಿವೆ. ಪ್ರತಿ ತಿಂಗಳ ಪ್ರಾರಂಭದಲ್ಲಿ ಅನೇಕ ಬದಲಾವಣೆಗಳಾಗುತ್ತವೆ. ಅದೇರೀತಿ ಮೇ ತಿಂಗಳ ಪ್ರಾರಂಭದಲ್ಲಿ ಅನೇಕ ಬದಲಾವಣೆಗಳಾಗುತ್ತವೆ. ಈ ಬದಲಾವಣೆಗಳು ನೇರವಾಗಿ ನಿಮ್ಮ ಪಾಕೆಟ್ ಮೇಲೆ ಪರಿಣಾಮ ಬೀರಲಿವೆ. ಮೇ ತಿಂಗಳಿಂದ ಸರ್ಕಾರ ಕೆಲವು ನಿಯಮಗಳನ್ನು ಬದಲಾಯಿಸಲಿದೆ. ಜಿಎಸ್ ಟಿ, ಸಿಎನ್ ಜಿ-ಪಿಎನ್ ಜಿ, ಗ್ಯಾಸ್ ಸಿಲಿಂಡರ್, ಮ್ಯೂಚುವಲ್ ಫಂಡ್  ಸೇರಿದಂತೆ ಅನೇಕ ನಿಯಮಗಳಲ್ಲಿ ಬದಲಾವಣೆಗಳಾಗಲಿವೆ. ಇನ್ನು ಬ್ಯಾಟರಿ ಚಾಲಿತ ವಾಹನಗಳಿಗೆ ಸಂಬಂಧಿಸಿದ ನಿಯಮಗಳಲ್ಲಿ ಕೂಡ ಕೆಲವು ಬದಲಾವಣೆ ಮಾಡಲಾಗಿದೆ. ಈ ಬದಲಾವಣೆಗಳು ಜನಸಾಮಾನ್ಯರ ಜೇಬಿನ ಮೇಲೆ ಕೂಡ ನೇರ ಪರಿಣಾಮ ಬೀರಲಿವೆ. ಹೀಗಾಗಿ ಈ ಬದಲಾವಣೆಗಳ ಬಗ್ಗೆ ತಿಳಿದುಕೊಳ್ಳುವುದು ಅಗತ್ಯ. ಹಾಗಾದ್ರೆ ಮೇ ತಿಂಗಳಿಂದ ಯಾವೆಲ್ಲ ನಿಯಮಗಳಲ್ಲಿ ಬದಲಾವಣೆಗಳಾಗಲಿವೆ? ಅದರಿಂದ ಏನೆಲ್ಲ ಪರಿಣಾಮಗಳಾಗಲಿವೆ? ಇಲ್ಲಿದೆ ಮಾಹಿತಿ.

ಸಿಎನ್ ಜಿ-ಪಿಎನ್ ಜಿ ಬೆಲೆ
ಪ್ರತಿ ತಿಂಗಳ ಮೊದಲ ದಿನ ಅಥವಾ ಮೊದಲ ವಾರ ಸಿಎನ್ ಜಿ ಹಾಗೂ ಪಿಎನ್ ಜಿ ಬೆಲೆಗಳಲ್ಲಿ ಬದಲಾವಣೆಯಾಗಲಿದೆ. ಪೆಟ್ರೋಲಿಯಂ ಕಂಪನಿಗಳು ತಿಂಗಳ ಮೊದಲ ವಾರ ಗ್ಯಾಸ್ ಬೆಲೆಯಲ್ಲಿ ಬದಲಾವಣೆ ಮಾಡುತ್ತವೆ. ಏಪ್ರಿಲ್ ನಲ್ಲಿ ಮುಂಬೈ ಮತ್ತು ದೆಹಲಿಯಲ್ಲಿ ಸಿಎನ್ ಜಿ ಹಾಗೂ ಪಿಎನ್ ಜಿ ಬೆಲೆಯಲ್ಲಿ ಇಳಿಕೆ ಮಾಡಲಾಗಿತ್ತು. ಈ ಹೊಸ ದರಗಳು ಏ.9ರಿಂದ ಜಾರಿಗೆ ಬಂದಿವೆ. ಹೀಗಾಗಿ ಮೇ 1ರಂದು ಕೂಡ ಸಿಎನ್ ಜಿ ಹಾಗೂ ಪಿಎನ್ ಜಿ ಬೆಲೆಗಳಲ್ಲಿ ಬದಲಾವಣೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ. 

ಹೂಡಿಕೆ ಮಾಡೋ ಮುನ್ನ ಟ್ರೆಂಡ್ ತಿಳಿದುಕೊಳ್ಳಿ; ಎಲ್ಲಿ ಹೂಡಿಕೆ ಮಾಡೋದು ಬೆಸ್ಟ್?

ಜಿಎಸ್ ಟಿ ನಿಯಮಗಳಲ್ಲಿ ಬದಲಾವಣೆ
ಜಿಎಸ್ ಟಿಗೆ ಸಂಬಂಧಿಸಿದ ಅನೇಕ ನಿಯಮಗಳಲ್ಲಿ ಬದಲಾವಣೆಗಳಾಗಿವೆ. ಈ ಬದಲಾದ ನಿಯಮಗಳನ್ನು ಉದ್ಯಮಿಗಳು ಅನುಸರಿಸೋದು ಅಗತ್ಯ. ಇನ್ ವಾಯ್ಸ್ ನೋಂದಣಿ ಪೋರ್ಟಲ್ ನಲ್ಲಿ ಯಾವುದೇ ವಹಿವಾಟಿನ ರಶೀದಿಯನ್ನು ಏಳು ದಿನಗಳೊಳಗೆ ಅಪ್ಲೋಡ್ ಮಾಡೋದು ಕಡ್ಡಾಯ. ಈ ಹೊಸ ನಿಯಮ ಮೇ 1ರಿಂದ ಜಾರಿಗೆ ಬರಲಿದೆ. ಈ ನಿಯಮವು 100 ಕೋಟಿ ಅಥವಾ ಅದಕ್ಕಿಂತ ಹೆಚ್ಚಿನ ವಹಿವಾಟು ನಡೆಸುವ ಕಂಪನಿಗಳಿಗೆ ಅನ್ವಯಿಸುತ್ತದೆ.

ಮ್ಯೂಚುವಲ್ ಫಂಡ್ ನಿಯಮಗಳಲ್ಲಿ ಬದಲಾವಣೆ
ಮಾರುಕಟ್ಟೆ ನಿಯಂತ್ರಕ ಸೆಬಿ ಮ್ಯೂಚುವಲ್ ಫಂಡ್ ಗಳ ನಿಯಮಗಳಲ್ಲಿ ಬದಲಾವಣೆ ಮಾಡಿದೆ. ಅದರ ಅನ್ವಯ ಮ್ಯೂಚುವಲ್ ಫಂಡ್ ಗಳಲ್ಲಿ ಹೂಡಿಕೆ ಮಾಡಲು ಬಳಸುವ ಡಿಜಿಟಲ್ ವ್ಯಾಲೆಟ್ ಆರ್ ಬಿಐ ಕೆವೈಸಿ ಪಡೆಯೋದು ಅಗತ್ಯ. ಈ ನಿಯಮ 2023ರ ಮೆ 1ರಿಂದ ಜಾರಿಗೆ ಬರಲಿದೆ.

ಈ 5 ಸಿದ್ಧತೆ ಮಾಡಿಕೊಂಡ್ರೆ ಸಾಕು, ನಿಮ್ಮ ITR ನೀವೇ ಸುಲಭವಾಗಿ ಸಲ್ಲಿಕೆ ಮಾಡಬಹುದು!

ಎಟಿಎಂ ವಹಿವಾಟಿಗೆ ಶುಲ್ಕ
ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್ ಬಿ) ಮೇ 1ರಿಂದ ಎಟಿಎಂ ವಹಿವಾಟು ನಡೆಸುವಾಗ ಖಾತೆಯಲ್ಲಿ ಅಗತ್ಯ ಪ್ರಮಾಣದಲ್ಲಿ ಬ್ಯಾಲೆನ್ಸ್ ಇಲ್ಲದೆ ವಹಿವಾಟು ಸ್ಥಗಿತಗೊಂಡರೆ 10ರೂ.+ಜಿಎಸ್ ಟಿ ದಂಡ ವಿಧಿಸಲಿದೆ. ಹಾಗೆಯೇ ಖಾತೆಯಲ್ಲಿ ಅಗತ್ಯ ಬ್ಯಾಲೆನ್ಸ್ ಇದ್ದರೂ ಎಟಿಎಂ ವಹಿವಾಟು ವಿಫಲವಾದ್ರೆ ಅದನ್ನು ಪರಿಹರಿಸಲು ಪಿಎನ್ ಬಿ ಮಾರ್ಗಸೂಚಿಗಳನ್ನು ರೂಪಿಸಿದೆ. ಎಟಿಎಂ ವಹಿವಾಟು ವಿಫಲವಾಗಿರುವ ಬಗ್ಗೆ ಗ್ರಾಹಕರು ದೂರು ಸಲ್ಲಿಕೆ ಮಾಡಿದರೆ ಬ್ಯಾಂಕ್ ದೂರು ಸ್ವೀಕರಿಸಿದ ಏಳು ದಿನಗಳೊಳಗೆ ಈ ಸಮಸ್ಯೆಯನ್ನು ಬಗೆಹರಿಸಲಿದೆ. ಒಂದು ವೇಳೆ ಬ್ಯಾಂಕ್ 30 ದಿನಗಳೊಳಗೆ ಸಮಸ್ಯೆ ಬಗೆಹರಿಸಲು ವಿಫಲವಾದ್ರೆ, ಗ್ರಾಹಕರು ಪ್ರತಿದಿನ 100ರೂ. ದರದಲ್ಲಿ ಪರಿಹಾರ ಪಡೆಯಲಿದ್ದಾರೆ ಎಂದು ಬ್ಯಾಂಕ್ ಮಾಹಿತಿ ನೀಡಿದೆ.

ಬ್ಯಾಟರಿ ಚಾಲಿತ ಪ್ರವಾಸಿ ವಾಹನ
ಕೇಂದ್ರ ಸರ್ಕಾರ ಮೇ 1ರಿಂದ ಬ್ಯಾಟರಿ ಚಾಲಿತ ಪ್ರವಾಸಿ ವಾಹನಗಳಿಂದ ಯಾವುದೇ ಪರವಾನಗಿ ಶುಲ್ಕ ವಸೂಲಿ ಮಾಡುವುದಿಲ್ಲ. 

Latest Videos
Follow Us:
Download App:
  • android
  • ios