Asianet Suvarna News Asianet Suvarna News

ದೀಪಾವಳಿಗೆ ಮನೆ ಕ್ಲೀನ್‌ ಮಾಡೋ ಟೈಮ್‌ನಲ್ಲಿ ಸಿಕ್ತು 2 ಸಾವಿರ ನೋಟ್‌, ಆರ್‌ಬಿಐ ಕಚೇರಿ ಮುಂದೆ ಫುಲ್‌ ಕ್ಯೂ!

ಮಂಗಳವಾರ ಭೋಪಾಲ್‌ನಲ್ಲಿನ ಆರ್‌ಬಿಐ ಪ್ರಾದೇಶಿಕ ಕಚೇರಿ ಎದುರು ಫುಲ್‌ ಕ್ಯೂ ಇತ್ತು. ಎಲ್ಲರೂ ತಮ್ಮ ಕೈಯಲ್ಲಿ 2 ಸಾವಿರ ರೂಪಾಯಿಯ ನೋಟ್‌ಗಳನ್ನೇ ಇರಿಸಿಕೊಂಡಿದ್ದರು. ಸಡನ್‌ ಆಗಿ 2 ಸಾವಿರ ರೂಪಾಯಿ ನೋಟು ಎಕ್ಸ್‌ಚೇಂಜ್‌ಗೆ ಬಂದ ಜನರನ್ನು ಕಂಡು ಆರ್‌ಬಿಐ ಪ್ರಾದೇಶಿಕ ಕಚೇರಿಯ ಅಧಿಕಾರಿಗಳಿಗೂ ಅಚ್ಚರಿಯಾಗಿತ್ತು.
 

Rs 2000 notes found in Diwali House cleaning long queue at RBI office in Bhopal san
Author
First Published Oct 31, 2023, 8:32 PM IST

ನವದೆಹಲಿ (ಅ.31): ದೀಪಾವಳಿ ಹಬ್ಬ ಸಮೀಪವಾಗುತ್ತಿದ್ದಂತೆ ಆರ್‌ಬಿಐ ಕಚೇರಿಯ ಅಧಿಕಾರಿಗಳಿಗೆ ತಲೆಬಿಸಿ ಪ್ರಾರಂಭವಾಗಿದೆ. ಅದಕ್ಕೆ ಕಾರಣವೂ ಇದೆ. ಈಗಾಗಲೇ ಆರ್‌ಬಿಐ 2 ಸಾವಿರ ರೂಪಾಯಿ ನೋಟುಗಳನ್ನು ವಾಪಾಸ್‌ ಮಾಡಲು ಅಕ್ಟೋಬರ್‌ 7 ಕೊನೆಯ ದಿನಾಂಕ ಎಂದು ಹೇಳಿತ್ತು. ಆ ಬಳಿಕವೂ ಯಾರ ಬಳಿಯಲ್ಲಾದರೂ 2 ಸಾವಿರ ರೂಪಾಯಿ ನೋಟುಗಳಿದ್ದರೆ ಅದರನ್ನು ದೇಶದ 19 ಆರ್‌ಬಿಐ ಪ್ರಾದೇಶಿಕ ಕಚೇರಿಗಳಲ್ಲಿ ನೀಡಿ ಬೇರೆ ನೋಟುಗಳನ್ನು ಪಡೆದುಕೊಳ್ಳಬೇಕು ಎಂದು ಮಾಹಿತಿ ನೀಡಿತ್ತು. ಹೆಚ್ಚಿನ 2 ಸಾವಿರ ರೂಪಾಯಿ ನೋಟುಗಳು ವಾಪಾಸ್‌ ಬಂದ ಕಾರಣ ಸಮಾಧಾನದಲ್ಲಿದ್ದ ಆರ್‌ಬಿಐಗೆ ದೀಪಾವಳಿ ಹತ್ತಿರ ಬರುತ್ತಿರುವ ಹಾಗೆ ಹೊಸ ತಲೆನೋವು ಆರಾಂಭವಾಗಿದೆ. ಹೌದು, ಆರ್‌ಬಿಐನ ಭೋಪಾಲ್‌ ಕಚೇರಿಯಲ್ಲಿ ಕಳೆದ ಕೆಲವು ದಿನಗಳಿಂದ 2 ಸಾವಿರ ರೂಪಾಯಿ ನೋಟುಗಳನ್ನು ಎಕ್ಸ್‌ಚೇಂಜ್‌ ಮಾಡಿಕೊಳ್ಳುವವರ ಸಂಖ್ಯೆ ವಿಪರೀತವಾಗಿ ಜಾಸ್ತಿಯಾಗುತ್ತದೆ. ಅದರಲ್ಲೂ ಮಂಗಳವಾರ ನೋಟು ಎಕ್ಸ್‌ಚೇಂಜ್‌ ಮಾಡಿಕೊಳ್ಳಲು ದೊಡ್ಡ ಪ್ರಮಾಣ ಕ್ಯೂ ಕೂಡ ನಿರ್ಮಾಣವಾಗಿತ್ತು.

2000 ರೂಪಾಯಿ ನೋಟುಗಳನ್ನು ಬದಲಾಯಿಸಿಕೊಳ್ಳಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ಭೋಪಾಲ್‌ನಲ್ಲಿರುವ ಭಾರತೀಯ ರಿಸರ್ವ್ ಬ್ಯಾಂಕ್ (RBI) ಪ್ರಾದೇಶಿಕ ಕಚೇರಿಗೆ ಬರುತ್ತಿದ್ದಾರೆ. ದೀಪಾವಳಿಯ ಸಮಯ ಆಗಿರುವ ಕಾರಣ ಮನೆಗಳನ್ನು ಕ್ಲೀನ್‌ ಮಾಡುತ್ತಿದ್ದಾರೆ. ಈ ವೇಳೆ  ದೇವರ ಮನೆ, ತಿಜೋರಿ, ಸೀರೆಗಳ ನಡುವೆ, ಬಾಕ್ಸ್‌ಗಳಲ್ಲಿ ಇಟ್ಟಿದ್ದ 2 ಸಾವಿರ ರೂಪಾಯಿ ನೋಟುಗಳು ಸಿಗುತ್ತಿವೆ. ಮನೆಯ ಮೂಲೆ ಮೂಲೆಯಲ್ಲಿ 2 ಸಾವಿರ ರೂಪಾಯಿ ನೋಟುಗಳನ್ನು ಕಂಡ ಜನರು ನೇರವಾಗಿ ಆರ್‌ಬಿಐ ಕಚೇರಿಗೆ ಬಂದು ಅದನ್ನು ಎಕ್ಸ್‌ಚೇಂಜ್‌ ಮಾಡಿಕೊಳ್ಳಲು ನಿಂತುಕೊಂಡಿದ್ದಾರೆ. 

ಆರ್‌ಬಿಐ ಕಚೇರಿಯ ಎದುರು ನಿಂತಿದ್ದ ಜನರು, 'ನೋಟು ಬದಲಾವಣೆ ಪ್ರಕ್ರಿಯೆಗೆ 2 ಗಂಟೆಗೂ ಹೆಚ್ಚು ಸಮಯ ಹಿಡಿಯುತ್ತಿದೆ. ಭದ್ರತಾ ಪರಿಶೀಲನೆಯ ನಂತರ ಫಾರ್ಮ್‌ಗಳನ್ನು ಭರ್ತಿ ಮಾಡಲಾಗುತ್ತಿದೆ. ಜನಸಂದಣಿ ಹೆಚ್ಚಿರುವುದರಿಂದ ಟೋಕನ್ ನೀಡಲಾಗಿದೆ. ಸಂಖ್ಯೆ ಬಂದಾಗ, ಆಧಾರ್ ಕಾರ್ಡ್ ತೋರಿಸಿ ನೋಟು ಬದಲಾಯಿಸಲು ಕೌಂಟರ್‌ಗೆ ಹೋಗಲು ಅವಕಾಶ ನೀಡಲಾಗುತ್ತಿದೆ' ಎಂದು ಹೇಳಿದ್ದಾರೆ.

ಆರ್‌ಬಿಐ ಮೇ 19 ರಂದು ರೂ 2000 ನೋಟುಗಳ ಅಮಾನ್ಯೀಕರಣವನ್ನು ಘೋಷಿಸಿತು. ಇವುಗಳನ್ನು ಈಗಾಗಲೇ ಚಲಾವಣೆಯಿಂದ ತೆಗೆದುಹಾಕಲಾಗಿದೆ. ಈ ನೋಟುಗಳನ್ನು ಬ್ಯಾಂಕ್‌ಗಳಲ್ಲಿ ಠೇವಣಿ ಇಡಲು ಅಥವಾ ಬದಲಾಯಿಸಲು ಸೆಪ್ಟೆಂಬರ್ 30 ರಂದು ಕೊನೆಯ ದಿನಾಂಕವನ್ನು ನಿಗದಿಪಡಿಸಲಾಯಿತು. ನಂತರ ಅದನ್ನು ಅಕ್ಟೋಬರ್ 7 ರವರೆಗೆ ವಿಸ್ತರಣೆ ಮಾಡಿತ್ತು.
ಅಕ್ಟೋಬರ್‌ 7 ರ ನಂತರ,  ಈಗ ಆರ್‌ಬಿಐನ 19 ಪ್ರಾದೇಶಿಕ ಕಚೇರಿಗಳಲ್ಲಿ 2000 ರೂಪಾಯಿ ನೋಟುಗಳನ್ನು ವಿನಿಮಯ ಮಾಡಿಕೊಳ್ಳಬಹುದು ಅಥವಾ ಠೇವಣಿ ಮಾಡಬಹುದು. ಒಂದು ಬಾರಿಗೆ 20,000 ರೂಪಾಯಿ ಠೇವಣಿ ಮಿತಿಯನ್ನು ನಿಗದಿಪಡಿಸಲಾಗಿದೆ. ಹಾಗಿದ್ದರೂ, ಈ ನೋಟುಗಳು ಇನ್ನೂ ಮಾನ್ಯವಾಗಿರುತ್ತವೆ. ಪ್ರಸ್ತುತ, ಅದರ ಕೊನೆಯ ದಿನಾಂಕವನ್ನು ಘೋಷಿಸಲಾಗಿಲ್ಲ.

10,000 ಕೋಟಿ ರೂ. ಮೌಲ್ಯದ 2000ರೂ. ನೋಟು ಹಿಂತಿರುಗಲು ಬಾಕಿ: ಆರ್ ಬಿಐ ಗವರ್ನರ್

ಕಳೆದ ವರ್ಷದ ದೀಪಾವಳಿಯ ವೇಳೆ 2 ಸಾವಿರ ರೂಪಾಯಿ ನೋಟುಗಳನ್ನು ದೇವರ ಮನೆ ಹಾಗೂ ಮನೆಯ ಹಣದ ಬಾಕ್ಸ್‌ನಲ್ಲಿ ಇಡಲಾಗಿತ್ತು. ಈ ಬಾರಿಯ ದೀಪಾವಳಿ ಸಂದರ್ಭ ಮನೆಯನ್ನು ಕ್ಲೀನ್‌ ಮಾಡುವ ವೇಳೆ ಇದು ಪತ್ತೆಯಾಗಿದೆ. ಈ ಬಗ್ಗೆ ಮನೆಯಲ್ಲಿ ಯಾರಿಗೂ ನೆನಪಿರಲಿಲ್ಲ. ನಮ್ಮ ಮನೆಯಲ್ಲಿ 10 ನೋಟುಗಳಿದ್ದವು. ಇದರ ಬದಲಿಗೆ ನನಗೆ 15 ಸಾವಿರ ರೂಪಾಯಿಯ ನೋಟುಗಳು ಮತ್ತು 5 ಸಾವಿರ ರೂಪಾಯಿಯನ್ನು ಅಧಿಕಾರಿಗಳು ನಾಣ್ಯದ ರೂಪದಲ್ಲಿ ನೀಡಿದ್ದಾರೆ.

2,000ರೂ. ನೋಟು ಬದಲಾವಣೆ ಗಡುವು ಅಕ್ಟೋಬರ್ 7ರ ತನಕ ವಿಸ್ತರಣೆ;ಆ ಬಳಿಕ ಏನಾಗುತ್ತದೆ? ಆರ್ ಬಿಐ ಮಾಹಿತಿ ಇಲ್ಲಿದೆ

Follow Us:
Download App:
  • android
  • ios