ನಟ ಯಶ್‌ ಈ ಬಾರಿ ಕೋಕೋ ಕೋಲಾ ಬ್ರ್ಯಾಂಡ್‌ ಫೇಸ್‌ ಆಗಿದ್ದಾರೆ. 

ಬೆಂಗಳೂರು: ಕೋಕ್ ಹಾಫ್‌ಟೈಮ್ ಪ್ರಚಾರದಲ್ಲಿ ನಟ ಯಶ್ ಅವರನ್ನು ಬ್ರ್ಯಾಂಡ್‌ನ ಹೊಸ ಮುಖವಾಗಿ ಘೋಷಿಸಲು ಕೋಕ-ಕೋಲಾ (Coca-Cola®) ಉತ್ಸುಕಗೊಂಡಿದೆ. 

ಗಿಜಿಗುಡುವ ಮಾರುಕಟ್ಟೆ ಸ್ಥಳದಲ್ಲಿ ಇದರ ಶೂಟಿಂಗ್‌ ನಡೆದಿದೆ. ಯಶ್ ಅವರು ಸಖತ್‌ ಆಗಿ ಕಾಣಿಸುತ್ತಾರೆ. ಅಕ್ಕಪಕ್ಕದಲ್ಲಿದ್ದವರು ಬೃಹತ್ತಾದ ಕಟೌಟ್‌ ಜೋಡಿಸಲು ಹೆಣಗುತ್ತಿದ್ದಾಗ, ಯಶ್, ಸೂಚನೆಗಳೊಂದಿಗಲ್ಲದೆ, ತಣ್ಣಗಿನ ಕೋಕ-ಕೋಲಾದೊಂದಿಗೆ ಒಂದು ಅಲ್ಪವಿರಾಮಕ್ಕೆ ಸಂಜ್ಞೆ ನೀಡುತ್ತಾರೆ. ಅವರೆಲ್ಲರೂ ಒಂದುಗೂಡುತ್ತಿದ್ದಂತೆ, ಈ ಬ್ರೇಕ್, ತಣ್ಣಗಿನ ಕೋಕ್‌ನೊಂದಿಗೆ ಅವರಿಗೆ ಅತ್ಯಾವ್ಯಶಕವಾಗಿ ಬೇಕಾಗಿದ್ದ ಬ್ರೇಕ್ ನೀಡಿ ಅವರನ್ನು ತಾಜಾಗೊಳಿಸಿ, ಮತ್ತೆ ತಮ್ಮ ಕೆಲಸವನ್ನು ಪೂರೈಸಲು ಅವರಿಗೆ ಹುರುಪು ನೀಡುತ್ತದೆ. ಕಟೌಟ್‌ನ ಅನಾವರಣವು ಸ್ವತಃ ಯಶ್ ಅವರದೇ ಆಗಿರುತ್ತದೆ. 

ಮಾ.23ರಂದು ಈ ಒಂದು ಕಾರಣಕ್ಕೆ ಬೆಂಗಳೂರಿನ ಲುಲ್ ಮಾಲ್‌ಗೆ ಬರ್ತಾರೆ ರಾಕಿಂಗ್‌ ಸ್ಟಾರ್‌ ಯಶ್‌!

ಕೋಕ-ಕೋಲಾ ಕಂಪನಿಯ ಭಾರತ, ಸೌತ್‌ವೆಸ್ಟ್ ಏಶ್ಯ ಆಪರೇಟಿಂಗ್ ಘಟಕದ ಕೋಕ-ಕೋಲ ವರ್ಗದ ಮಾರ್ಕೆಟಿಂಗ್ ವಿಭಾಗದ ಹಿರಿಯ ನಿರ್ದೇಶಕ ಕೌಶಿಕ್ ಪ್ರಸಾದ್ , “ಕೋಕ-ಕೋಲಾ ಎಂದರೆ, ಪ್ರತಿದಿನದ ಕ್ಷಣಗಳನ್ನು ಉನ್ನತೀಕರಿಸುವುದರ ಕುರಿತಾಗಿದೆ. ಕೋಕ್ ಹಾಫ್‌ಟೈಮ್, ಅಂತ್ಯವಿಲ್ಲದ ನಿತ್ಯಕರ್ಮಗಳ ನಡುವೆ ಒಂದು ಅಲ್ಪವಿರಾಮ ತೆಗೆದುಕೊಳ್ಳಲು, ಇನ್ನೂ ಉತ್ತಮವಾಗಬೇಕೆಂದರೆ, ಸ್ವಾದಿಷ್ಟವಾದ, ಮಂಜಿನಷ್ಟು ತಣ್ಣಗಿರುವ ಕೋಕ-ಕೋಲಾದೊಂದಿಗೆ ವಿಶೇಷವಾಗಿ ಒಂದು ಅಲ್ಪವಿರಾಮ ತೆಗೆದುಕೊಳ್ಳುವುದಕ್ಕೆ ಒಂದು ಆಹ್ವಾನವಾಗಿದೆ. ಕೋಕ-ಕೋಲ ಕುಟುಂಬಕ್ಕೆ ರಾಕಿಂಗ್ ಸ್ಟಾರ್ ಯಶ್ ಅವರನ್ನು ಸ್ವಾಗತಿಸುವುದಕ್ಕೆ ನಮಗೆ ಕೌತುಕ ಮತ್ತು ಉತ್ಸಾಹವೆನಿಸುತ್ತಿದೆ. ಯಶ್‌ ಅವರ ಪ್ರೇರಣೆ ನೀಡುವ ವ್ಯಕ್ತಿತ್ವ ಹಾಗೂ ಜನರೊಂದಿಗಿನ ಸಂಬಂಧವು ಕೋಕ-ಕೋಲಾಕ್ಕೆ ತಕ್ಕ ವ್ಯಕ್ತಿ ಎಂದು ನಿರೂಪಿಸುವುದು” ಎಂದರು. 

ನಟ ಯಶ್‌ ಏನಂದ್ರು?
ಯಶ್ ಮಾತನಾಡಿ, “ಹಾಫ್‌ಟೈಮ್ ಕೇವಲ ಒಂದು ಬ್ರೇಕ್ ಅಲ್ಲ- ಇದು ಮುಂದಿನ ದೊಡ್ಡ ಕ್ಷಣದ ಮಿಂಚು. ಕೋಕ್, ಪ್ರತಿಯೊಂದು ಅಲ್ಪವಿರಾಮವನ್ನೂ ಒಂದು ಆಚರಣೆಯಾಗಿ ಭಾಸವಾಗುವಂತೆ ಮಾಡುತ್ತದೆ. ಕೋಕ ಕೋಲಾದೊಂದಿಗೆ ಸಹಭಾಗಿತ್ವ ಏರ್ಪಡಿಸಿಕೊಂಡಿರುವುದಕ್ಕೆ ನನಗೆ ಬಹಳ ಸಂತೊಷವಾಗಿದೆ- ಏಕೆಂದರೆ, ಕೋಕ್‌ನೊಂದಿಗೆ ಹಾಫ್‌ಟೈಮ್ ವಿಭಿನ್ನವಾಗಿರುತ್ತದೆ" ಎಂದರು.

ಯಶ್‌ ನನ್ನ ಬರ್ತಡೇ ಪಾರ್ಟಿಗೆ ಬರ್ತಿದ್ರು, ತಂದೆ ಫ್ರೆಂಡ್‌ ಮೇಲೆ ಕ್ರಶ್ ಆಗಲ್ಲ: ಸಾನ್ವಿ ಸುದೀಪ್ ಹೇಳಿಕೆ ವೈರಲ್

ದೆಹಲಿಯ VML ತಂಡವು ರಚಿಸಿ, ಕಿಶೋರ್ ಐಯ್ಯರ್ ನಿರ್ದೇಶಿಸಿರುವ ಈ ಜಾಹೀರಾತು ಚಿತ್ರವು, IPL, ದೂರದರ್ಶನ, ಡಿಜಿಟಲ್ ಟಚ್‌ಪಾಯಿಂಟ್‌ಗಗಳ ಜೊತೆಗೆ ಲಗ್ಗೆ ಹಾಕಿ, ಪ್ರತಿದಿನದ ಜೀವನದಲ್ಲಿ ಹಾಫ್‌ಟೈಮ್‌ನ ಶಕ್ತಿಗೇ ಶಕ್ತಿ ಒದಗಿಸಲಿದೆ!

ʼಕೆಜಿಎಫ್‌ 2ʼ ಬಳಿಕ ನಟ ಯಶ್‌ ಖ್ಯಾತಿ ಇನ್ನಷ್ಟು ಹೆಚ್ಚಾಗಿದೆ. ಈಗಾಗಲೇ ಸಾಕಷ್ಟು ಬ್ರ್ಯಾಂಡ್‌ ಜಾಹೀರಾತುಗಳಲ್ಲಿ ಪತ್ನಿ ರಾಧಿಕಾ ಪಂಡಿತ್‌ ಜೊತೆಗೆ ಕಾಣಿಸಿಕೊಂಡಿದ್ದಾರೆ. ಇನ್ನು ಬೆಟ್ಟಿಂಗ್‌ ಆಪ್‌ಗಳಿಗೆ ಅವರು ನೋ ಎಂದು ಹೇಳಿದ್ದಾರಂತೆ.