ಉದ್ಯಮಕ್ಕೆ ಹೊಡೆತ: ಕಳೆದ ವರ್ಷ ಸಂಬಳವೇ ಪಡೆದಿಲ್ಲ ಮುಕೇಶ್ ಅಂಬಾನಿ

ಕೊರೋನಾದಿಂದಾಗಿ ಉದ್ಯಮಕ್ಕಾದ ನಷ್ಟ ಎಲ್ಲರಿಗೂ ಗೊತ್ತು. ಈ ನಡುವೆ ದೇಶದ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಕಳೆದ ವರ್ಷದ ತಮ್ಮ ದುಡಿಮೆಗೆ ವೇತನವನ್ನೇ ಪಡೆದಿಲ್ಲ. ಕಂಪನಿಗೆ ಕೊರೋನಾದಿಂದ ಹೊಡೆತ ಬಿದ್ದ ಕಾರಣ ಸ್ಯಾಲರಿ ನಿರಾಕರಿಸಿದ್ದಾರೆ ಇವರು

RIL chief Mukesh Ambani draws nil salary in FY21 amid COVID 19 pandemic dpl

ದೆಹಲಿ(ಜೂ.03): ಮಾರ್ಚ್ 31 ಕ್ಕೆ ಕೊನೆಗೊಂಡ ಆರ್ಥಿಕ ವರ್ಷದಲ್ಲಿ ಶ್ರೀಮಂತ ಭಾರತೀಯ ಮುಕೇಶ್ ಅಂಬಾನಿ ತಮ್ಮ ಪ್ರಮುಖ ಸಂಸ್ಥೆ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನಿಂದ ಯಾವುದೇ ಸಂಬಳವನ್ನು ಪಡೆದಿಲ್ಲ.

ಅಚ್ಚರಿಯಾದರೂ ಇದು ಸತ್ಯ. ಅವರು ವ್ಯಾಪಾರ ಮತ್ತು ಆರ್ಥಿಕತೆಯ ಮೇಲೆ ಕೊರೋನಾ ಭಾರೀ ಹೊಡೆತ ನೀಡಿದ ಕಾರಣ ಸ್ವಯಂಪ್ರೇರಣೆಯಿಂದ ಸಂಭಾವನೆಯನ್ನು ತ್ಯಜಿಸಿದ್ದಾರೆ ಮುಕೇಶ್ ಅಂಬಾನಿ. ತನ್ನ ಇತ್ತೀಚಿನ ವಾರ್ಷಿಕ ವರದಿಯಲ್ಲಿ, ರಿಲಯನ್ಸ್ 2020-21ರ ಆರ್ಥಿಕ ವರ್ಷಕ್ಕೆ ಅಂಬಾನಿಗೆ ಸಂಭಾವನೆ ನೀಡಲಾಗಿಲ್ಲ ಎಂದು ದಾಖಲಿಸಲಾಗಿದೆ.

ಕೊರೋನಾ ಸಂಕಷ್ಟ: ಮೃತ ಉದ್ಯೋಗಿಗಳ ಕುಟುಂಬಕ್ಕೆ ಅಂಬಾನಿ ನೆರವು!...

ಹಿಂದಿನ 11 ವರ್ಷಗಳಂತೆಯೇ ಅವರು ಕಂಪನಿಯಿಂದ 15 ಕೋಟಿ ರೂ. ಸಂಬಳವನ್ನು ಪಡೆದಿದ್ದರು. ಅಂಬಾನಿ 2008-09 ರಿಂದ ಸಂಬಳ, ಅಗತ್ಯತೆಗಳು, ಭತ್ಯೆಯನ್ನು ಒಟ್ಟಿಗೆ 15 ಕೋಟಿ ರೂ.ಗಳಲ್ಲಿ ಇಟ್ಟುಕೊಂಡಿದ್ದು ವಾರ್ಷಿಕ 24 ಕೋಟಿ ರೂ ವೇತನ ಪಡೆಯುತ್ತಾರೆ.

ಭಾರತದಲ್ಲಿ COVID-19 ಏಕಾಏಕಿ ದಾಳಿ ಮಾಡಿದ್ದು, ಇದು ರಾಷ್ಟ್ರದ ಸಾಮಾಜಿಕ, ಆರ್ಥಿಕ ಮತ್ತು ಕೈಗಾರಿಕೆ ಮೇಲೆ ಭಾರಿ ನಷ್ಟವನ್ನುಂಟು ಮಾಡಿದೆ. ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಡಿ. ಅಂಬಾನಿ ಅವರು ತಮ್ಮ ಸಂಬಳವನ್ನು ತ್ಯಜಿಸಲು ಸ್ವಯಂಪ್ರೇರಣೆಯಿಂದ ನಿರ್ಧರಿಸಿದ್ದಾರೆ ಎಂದು ಕಂಪನಿಯು ಕಳೆದ ವರ್ಷ ಜೂನ್‌ನಲ್ಲಿ ಹೇಳಿತ್ತು.

Latest Videos
Follow Us:
Download App:
  • android
  • ios