Asianet Suvarna News Asianet Suvarna News

ವಿಶ್ವದ ಗಮನ ಸೆಳೆದ ಬೆಂಗಳೂರಿನ ಶುಮ್ಮೆ ಟಾಯ್ಸ್, ಮೋದಿ ಶ್ಲಾಘನೆ

 ಆಟಿಕೆ ರಫ್ತು . 400 ಕೋಟಿಯಿಂದ  2600 ಕೋಟಿಗೇರಿಕೆ ಎಂದ ಮೋದಿ, ಮನ್‌ ಕೀ ಬಾತ್‌ ನಲ್ಲಿ ಬೆಂಗಳೂರು ಕಂಪನಿಯನ್ನು ಪ್ರಸ್ತಾಪಿಸಿದ ಪ್ರಧಾನಿ ಮೋದಿ. ಪರಿಸರ ಸ್ನೇಹಿ ಆಟಿಕೆ ಉತ್ಪಾದಿಸುವ ಶುಮ್ಮೆ ಟಾಯ್ಸ್.

Bengaluru based eco-friendly toys attention to the world gow
Author
Bengaluru, First Published Aug 1, 2022, 12:22 PM IST

ನವದೆಹಲಿ (ಜು.1): ಭಾರತೀಯ ಆಟಿಕೆ ಉದ್ಯಮ ಯಾರೂ ನಿರೀಕ್ಷಿಸದ ಯಶಸ್ಸನ್ನು ಸಾಧಿಸಿದೆ. 300ರಿಂದ 400 ಕೋಟಿ ರು.ಗಳಷ್ಟಿದ್ದ ಆಟಿಕೆ ರಫ್ತು 2600 ಕೋಟಿ ರು.ಗೇರಿಕೆ ಆಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ. ಇದೇ ವೇಳೆ, ಬೆಂಗಳೂರಿನ ‘ಶುಮ್ಮೆ ಟಾಯ್ಸ್ ಎಂಬ ಕಂಪನಿ ಪರಿಸರ ಸ್ನೇಹಿ ಆಟಿಕೆ ತಯಾರಿಸಿ ವಿಶ್ವದ ಗಮನ ಸೆಳೆದಿದೆ ಎಂದು ಶ್ಲಾಘಿಸಿದ್ದಾರೆ. ಭಾನುವಾರ ‘ಮನ್‌ ಕೀ ಬಾತ್‌’ ರೇಡಿಯೋ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ವೋಕಲ್‌ ಫಾರ್‌ ಲೋಕಲ್‌’ ಕೂಗು ಎಲ್ಲೆಡೆ ಕೇಳಿಬರುತ್ತಿದೆ. ವಾರ್ಷಿಕ 3000 ಕೋಟಿ ರು.ಗಳಷ್ಟುಆಟಿಕೆಗಳನ್ನು ಭಾರತ ಆಮದು ಮಾಡಿಕೊಳ್ಳುತ್ತಿತ್ತು. ಅದು ಈಗ ಶೇ.70ರಷ್ಟುಕಡಿಮೆಯಾಗಿದೆ ಎಂದು ಹೇಳಿದರು. ನಮ್ಮ ಯುವಕರು, ಸ್ಟಾರ್ಚ್‌ಅಪ್‌ ಕಂಪನಿಗಳು ಹಾಗೂ ಉದ್ಯಮಗಳು, ನಮ್ಮ ಆಟಿಕೆ ಉದ್ಯಮದ ಸಾಧನೆ, ನಾವು ಸಾಧಿಸಿದ ಯಶಸ್ಸು ಇವ್ಯಾವುದನ್ನೂ ಯಾರೂ ಕಲ್ಪಿಸಿಕೊಂಡಿರಲಿಲ್ಲ ಎಂದು ಹೇಳಿದರು. ನಮ್ಮ ಸ್ಟಾರ್ಟಪ್‌ ವಲಯ ವಿಶ್ವ ಆಟಿಕೆ ಉದ್ಯಮದತ್ತ ಸಂಪೂರ್ಣ ಗಮನಹರಿಸಿದೆ ಎಂದು ಹೇಳಿದ ಅವರು. ಬೆಂಗಳೂರಿನ ಶುಮ್ಮೆ ಟಾಯ್ಸ್ ಕಂಪನಿ ಪರಿಸರ ಸ್ನೇಹಿ ಆಟಿಕೆ ಉತ್ಪಾದನೆಯತ್ತ ಗಮನಹರಿಸಿದೆ. ಗುಜರಾತ್‌ ಮೂಲದ ಅರ್ಕಿಡ್ಜೂ ಕಂಪನಿ ಎಆರ್‌ ಆಧರಿತ ಫ್ಲಾಷ್‌ ಕಾರ್ಡ್‌ ಹಾಗೂ ಕತೆ ಪುಸ್ತಕಗಳನ್ನು ತಯಾರಿಸುತ್ತಿದೆ ಸ್ಮರಿಸಿದರು. 

ಶುಮ್ಮೆಯ ಹೊರತಾಗಿ, ಆಟಿಕೆಗಳ ಜಗತ್ತಿನಲ್ಲಿ ಹೊಸತನವನ್ನು ಸೇರಿಸಲು ಪ್ರಯತ್ನಿಸುತ್ತಿರುವ ಇತರ ಕಂಪನಿಗಳನ್ನೂ ಅವರು ಉಲ್ಲೇಖಿಸಿದ್ದಾರೆ. ಶುಮ್ಮೆ ಆಟಿಕೆ ಕಂಪೆನಿಯನ್ನು 2014ರಲ್ಲಿ ಮೀಟಾ ಶರ್ಮಾ ಗುಪ್ತಾ ಅವರು ಆರಂಭಿಸಿದ್ದರು.

ಅಮೃತ ಭಾರತಿಗೆ ಕನ್ನಡದ ಆರತಿ ವಿಶಿಷ್ಟಕಾರ‍್ಯಕ್ರಮ,  ಸಚಿವ ಸುನೀಲ್‌ ಕುಮಾರ್‌ ಸಾರಥ್ಯದ ಅಭಿಯಾನಕ್ಕೆ ಮೋದಿ ಮೆಚ್ಚುಗೆ
ಸ್ವಾತಂತ್ರ್ಯದ ಅಮೃತ ಮಹೋತ್ಸವ ನಿಮಿತ್ತ ಕರ್ನಾಟಕದ ಸಚಿವ ಸುನೀಲ್‌ ಕುಮಾರ್‌ ನೇತೃತ್ವದ ಕನ್ನಡ ಸಂಸ್ಕೃತಿ ಇಲಾಖೆ ಹಮ್ಮೊಕೊಂಡಿದ್ದ ಹಮ್ಮಿಕೊಂಡಿರುವ ‘ಅಮೃತ ಭಾರತಿಗೆ ಕನ್ನಡದ ಆರತಿ’ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮಾಸಿಕ ರೇಡಿಯೋ ಕಾರ್ಯಕ್ರಮ ‘ಮನ್‌ ಕೀ ಬಾತ್‌’ನಲ್ಲಿ ಭಾನುವಾರ ಮಾತನಾಡಿದ ಅವರು, ಆಜಾದಿ ಕಾ ಅಮೃತ ಮಹೋತ್ಸವ ಅಭಿಯಾನ ಜನಾಂದೋಲನದ ರೂಪ ಪಡೆಯುತ್ತಿದೆ. ಸಮಾಜದ ಎಲ್ಲ ವಯೋಮಾನದ ಹಾಗೂ ಎಲ್ಲ ವರ್ಗಗಳ ಜನರೂ ಅದರಲ್ಲಿ ಭಾಗಿಯಾಗುತ್ತಿದ್ದಾರೆ. ಅಮೃತ ಮಹೋತ್ಸವಕ್ಕೆ ಸಂಪರ್ಕ ಬೆಸೆಯುವ ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಕೆಲವು ವಾರಗಳ ಹಿಂದೆ ಕರ್ನಾಟಕದಲ್ಲಿ ‘ಅಮೃತ ಭಾರತಿಗೆ ಕನ್ನಡದ ಆರತಿ’ ಎಂಬ ವಿಶೇಷ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಈ ಭವ್ಯ ಕಾರ್ಯಕ್ರಮವನ್ನು ಆ ರಾಜ್ಯದ 75 ಸ್ಥಳಗಳಲ್ಲಿ ಆಯೋಜನೆ ಮಾಡಲಾಗುತ್ತದೆ. ಕರ್ನಾಟಕದ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸಲಾಗುತ್ತದೆ. ಸ್ಥಳೀಯ ಸಾಹಿತ್ಯ ಸಾಧನೆಯನ್ನು ಮುನ್ನೆಲೆಗೆ ತರುವ ಪ್ರಯತ್ನ ನಡೆಸಲಾಗುತ್ತದೆ ಎಂದು ಹೇಳಿದರು.

ಬಾಕಿ ಉಳಿದಿರುವ ವಿದ್ಯುತ್ ಬಿಲ್‌ ಪಾವತಿಗೆ ರಾಜ್ಯ ಸರ್ಕಾರಗಳಿಗೆ ಪ್ರಧಾನಿ ಮೋದಿ ಕಿವಿಮಾತು

ಮೇಘಾಲಯದಲ್ಲೂ ಸ್ವಾತಂತ್ರ್ಯ ವೀರ ಯು. ತೀರೋತ್‌ ಸಿಂಗ್‌ ಅವರ ಪುಣ್ಯ ಸ್ಮರಣೆಯನ್ನು ಮಾಡಲಾಗಿದೆ. ಬ್ರಿಟಿಷರು ಖಾಸಿ ಹಿಲ್ಸ್‌ ವಶಕ್ಕೆ ಪಡೆಯಲು ಸಂಚು ರೂಪಿಸಿದಾಗ ಅದನ್ನು ವಿರೋಧಿಸಿದ್ದು ತಿರೋತ್‌ ಸಿಂಗ್‌. ಅವರ ಪುಣ್ಯ ಸ್ಮರಣೆ ಅಂಗವಾಗಿ ಹಲವು ಕಲಾವಿದರು ಸುಂದರ ಕಾರ್ಯಕ್ರಮಗಳನ್ನು ನೀಡಿದ್ದು, ಇತಿಹಾಸ ಮರುಕಳಿಸಿದಂತಾಗಿದೆ ಎಂದರು.

ಆಗಸ್ಟ್ 2 ರಿಂದ 15ರವರೆಗೆ ತಿರಂಗ ಬಾವುಟವನ್ನು ನಿಮ್ಮ ಪ್ರೊಫೈಲ್‌ ಫೋಟೋ ಮಾಡಿಕೊಳ್ಳಬಹುದು: ಮೋದಿ

ಇನ್ನು ಸ್ವಾತಂತ್ರ್ಯದ ಅಮೃತ ಮಹೋತ್ಸವದ ನಿಮಿತ್ತ ಆ.2ರಿಂದ 15ರವರೆಗೆ ಸಾಮಾಜಿಕ ಜಾಲತಾಣಗಳ ಪ್ರೊಫೈಲ್‌ ಪಿಕ್ಚರ್‌ ಆಗಿ ತಿರಂಗಾ ಹಾಕಿಕೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿದ್ದಾರೆ. ರಾಷ್ಟ್ರಧ್ವಜ ವಿನ್ಯಾಸ ಮಾಡಿದ ಪಿಂಗಾಳಿ ವೆಂಕಯ್ಯ ಅವರ ಜನ್ಮದಿನ ಆ.2ರಂದು ಇದೆ. ಆ.15 ಅಮೃತ ಮಹೋತ್ಸವ. ಹೀಗಾಗಿ ಈ ಅವಧಿಯಲ್ಲಿ ಪ್ರೊಫೈಲ್‌ ಪಿಕ್ಚರ್‌ನಲ್ಲಿ ರಾಷ್ಟ್ರಧ್ವಜ ಇರಲಿ ಎಂದು ಮಾಸಿಕ್‌ ರೇಡಿಯೋ ಕಾರ್ಯಕ್ರಮ ‘ಮನ್‌ ಕೀ ಬಾತ್‌’ನಲ್ಲಿ ಪ್ರಧಾನಿ ಸಲಹೆ ನೀಡಿದರು.

Follow Us:
Download App:
  • android
  • ios