ಆಮದು ಸುಂಕ ಕಡಿತಗೊಳಿಸಿದ ಬಾಂಗ್ಲಾ; ಭಾರತದಲ್ಲಿ ದಿಢೀರ್ ಏರಿಕೆ ಕಂಡ ಅಕ್ಕಿ ಬೆಲೆ

*ಆಮದು ಸುಂಕವನ್ನು ಶೇ.25ರಿಂದ ಶೇ.15.25ಕ್ಕೆ ಇಳಿಸಿದ ಬಾಂಗ್ಲಾದೇಶ
*ಬಾಂಗ್ಲಾದೇಶದಿಂದ ಹೆಚ್ಚಿದ ಅಕ್ಕಿ ಬೇಡಿಕೆ
*ಒಂದೇ ವಾರದಲ್ಲಿ ಅಕ್ಕಿ ಬೆಲೆಯಲ್ಲಿ ಶೇ.5ರಷ್ಟು ಹೆಚ್ಚಳ
*ಕರ್ನಾಟಕದಿಂದಲೂ ಬಾಂಗ್ಲಾದೇಶಕ್ಕೆ ಅಕ್ಕಿ ರಫ್ತು 
 

Rice Prices In India Jump 5percent Within A Week As Bangladesh Cuts Import Duty Check Details

ನವದೆಹಲಿ (ಸೆ.8): ಭಾರತದಲ್ಲಿ ಅಕ್ಕಿ ಬೆಲೆಯಲ್ಲಿ ಕಳೆದ ಒಂದು ವಾರದಲ್ಲಿ ಸುಮಾರು ಶೇ.5ರಷ್ಟು ಹೆಚ್ಚಳವಾಗಿದೆ. ನೆರೆಯ ಬಾಂಗ್ಲಾದೇಶ ಅಕ್ಕಿ ಮೇಲಿನ ಆಮದು ಸುಂಕವನ್ನು ಇನ್ನೊಮ್ಮೆ ಕಡಿತಗೊಳಿಸಿದ್ದು, ಶೇ.25ರಿಂದ ಶೇ.15.25ಕ್ಕೆ ಇಳಿಕೆ ಮಾಡಿದೆ. ಆಮದು ಸುಂಕದಲ್ಲಿನ ಇಳಿಕೆ ಬಾಂಗ್ಲಾದೇಶದಿಂದ ಅಕ್ಕಿ ಬೇಡಿಕೆ ಹೆಚ್ಚಿಸಲಿದೆ ಎಂಬ ನಿರೀಕ್ಷೆಯಿದೆ ಎಂದು ಮಾಧ್ಯಮ ವರದಿಯೊಂದು ತಿಳಿಸಿದೆ. ಉತ್ತರ ಪ್ರದೇಶ, ಮಧ್ಯ ಪ್ರದೇಶ, ಕರ್ನಾಟಕ, ಪಶ್ಚಿಮ ಬಂಗಾಳ ಹಾಗೂ ಬಿಹಾರದಿಂದ ಬಾಂಗ್ಲಾದೇಶಕ್ಕೆ ಅಕ್ಕಿ ರಫ್ತು ಮಾಡಲಾಗುತ್ತದೆ. ಸಂಭಾ ಮನ್ಸೂರಿ, ಸೋನಮ್ ಹಾಗೂ ಕೋಲಂ ಅಕ್ಕಿ ತಳಿಗಳನ್ನು ಬಾಂಗ್ಲಾದೇಶ ಆಮದು ಮಾಡಿಕೊಳ್ಳುತ್ತದೆ. ಹೀಗಾಗಿ ಈ ತಳಿಯ ಅಕ್ಕಿಗಳ ಬೆಲೆ ಕಳೆದ ಒಂದು ವಾರದಲ್ಲಿ ಶೇ.3-4ರಷ್ಟು ಏರಿಕೆಯಾಗಿದೆ. ಪಶ್ಚಿಮ ಬಂಗಾಳವು  ಹತ್ತಿರವಿರುವ ಕಾರಣ ಬಾಂಗ್ಲಾದೇಶ ಅಲ್ಲಿಂದ ಮಿನಿಕೆಟ್ ಅಕ್ಕಿಯನ್ನು ಖರೀದಿಸುತ್ತದೆ. ಈ ಅಕ್ಕಿ ಬೆಲೆಯಲ್ಲಿ ಶೇ.5ರಷ್ಟು ಏರಿಕೆಯಾಗಿದೆ. ಚೀನಾದ ಬಳಿಕ ಭಾರತ ವಿಶ್ವದ ಎರಡನೇ ಅತೀದೊಡ್ಡ ಅಕ್ಕಿ ಉತ್ಪಾದಕ ರಾಷ್ಟ್ರವಾಗಿದೆ. ವಿಶ್ವದ ಒಟ್ಟು ಅಕ್ಕಿ ಉತ್ಪಾದನೆಯ ಶೇ.40ರಷ್ಟನ್ನು ಹೊಂದಿದೆ. ಅಕ್ಕಿಗೆ ಈ ವರ್ಷ ಹೆಚ್ಚಿನ ಬೇಡಿಕೆ ಸೃಷ್ಟಿಯಾಗಿರೋದರ ಹೊರತಾಗಿ ಕೃಷಿಯಲ್ಲಿ ಕೂಡ ಇಳಿಕೆ ಕಂಡಿದೆ. ಇದು ಕೂಡ ಅಕ್ಕಿ ಬೆಲೆ ಏರಿಕೆಗೆ ಕಾರಣವಾಗಿದೆ. ಸೆಪ್ಟೆಂಬರ್ 2ರ ಮಾಹಿತಿ ಅನ್ವಯ ಭತ್ತ ಕೃಷಿ ನಡೆಸಿರುವ ಒಟ್ಟು ಪ್ರದೇಶದಲ್ಲಿ ಶೇ.5.6ರಷ್ಟು ಇಳಿಕೆಯಾಗಿದೆ. ಕಳೆದ ವರ್ಷ 406.89ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ಕೃಷಿ ನಡೆಸಿದ್ರೆ ಈ ವರ್ಷ 383.99ಲಕ್ಷ ಹೆಕ್ಟೇರ್ ಪ್ರದೇಶದಲ್ಲಷ್ಟೇ ವ್ಯವಸಾಯ ಮಾಡಲಾಗಿದೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೇಡಿಕೆ ಹೆಚ್ಚಿದ ಹಿನ್ನೆಲೆಯಲ್ಲಿ ಇತ್ತೀಚೆಗೆ ಗೋಧಿ (Wheat) ಬೆಲೆಯಲ್ಲಿ (Price) ಕೂಡ ಹೆಚ್ಚಳವಾಗಿದೆ. ರಷ್ಯಾ (Russia) ಹಾಗೂ ಉಕ್ರೇನ್ (Ukraine) ಜಗತ್ತಿನ ಪ್ರಮುಖ ಗೋಧಿ ರಫ್ತು (Export) ರಾಷ್ಟ್ರಗಳಾಗಿವೆ. ಆದರೆ, ಈ ಎರಡು ರಾಷ್ಟ್ರಗಳ (Countries) ನಡುವಿನ ಸಂಘರ್ಷ ಜಾಗತಿಕ ಗೋಧಿ ಪೂರೈಕೆ ಸರಪಳಿಯಲ್ಲಿನ ವ್ಯತ್ಯಯಕ್ಕೆ ಕಾರಣವಾಗಿದೆ. ಇದು ಭಾರತದ ಗೋಧಿಗೆ (Wheat) ಬೇಡಿಕೆ ಹೆಚ್ಚಿಸಿದೆ. ಪರಿಣಾಮ ದೇಶೀಯ ಮಾರುಕಟ್ಟೆಯಲ್ಲಿ ಗೋಧಿ ಬೆಲೆಯಲ್ಲಿ ಹೆಚ್ಚಳ ಕಂಡುಬಂದಿದೆ. ದೇಶದ 1.4 ಬಿಲಿಯನ್ ಜನರಿಗೆ ಆಹಾರ ಭದ್ರತೆ (Food Security) ಒದಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ (Central Government) ಗೋಧಿ ರಫ್ತಿನ (Wheat export) ಮೇಲೆ 2022ರ ಮೇನಲ್ಲಿ ನಿರ್ಬಂಧ ಹೇರಿತ್ತು. ಇನ್ನು ಮೈದಾ (Maida), ರವೆ ಹಾಗೂ ಗೋಧಿ ಹಿಟ್ಟಿನ ರಫ್ತಿನ ಮೇಲೆ ಕೂಡ ಆಗಸ್ಟ್ 14ರಿಂದ ಜಾರಿಗೆ ಬರುವಂತೆ ಕೇಂದ್ರ ಸರ್ಕಾರ (Central Government) ನಿರ್ಬಂಧ ಹೇರಿದೆ. ಈ ಮೂಲಕ ದೇಶದಲ್ಲಿ ಏರಿಕೆಯಾಗುತ್ತಿರುವ ಗೋಧಿ ಹಿಟ್ಟಿನ ಬೆಲೆ ನಿಯಂತ್ರಿಸೋದು ಸರ್ಕಾರದ ಉದ್ದೇಶವಾಗಿದೆ. 

ಅ.1ರಿಂದ ಡಿಮ್ಯಾಟ್ ಖಾತೆಗೆ ಲಾಗಿ ಇನ್ ಆಗಲು 2-ಫ್ಯಾಕ್ಟರ್ ಅಥೆಂಟಿಕೇಶನ್ ಕಡ್ಡಾಯ

ದೇಶೀಯ ಮಾರುಕಟ್ಟೆಯಲ್ಲಿ ಆಹಾರ ಬೆಲೆಗಳ (Food prices) ನಿಯಂತ್ರಣಕ್ಕೆ ಮೇನಲ್ಲಿ ಸರ್ಕಾರ ಗೋಧಿ (Wheat) ರಫ್ತನ್ನು (Export) ನಿಷೇಧಿಸಿದೆ. ಗೋಧಿ (Wheat) ನಿತ್ಯದ ಸರಾಸರಿ ಚಿಲ್ಲರೆ ಬೆಲೆಯಲ್ಲಿ ಶೇ. 19.34ರಷ್ಟು ಏರಿಕೆಯಾಗಿದೆ. ಒಂದು ವರ್ಷದ ಹಿಂದೆ ಕೆಜಿಗೆ 24.71 ರೂ.ಇದ್ದ ಗೋಧಿ (Wheat) ಬೆಲೆ 29.49ರೂ.ಗೆ ಹೆಚ್ಚಳವಾಗಿದೆ. 2022ನೇ ಆರ್ಥಿಕ ಸಾಲಿನಲ್ಲಿ ಭಾರತದ ಗೋಧಿ ಹಿಟ್ಟಿನ ರಫ್ತಿನಲ್ಲಿ ಏರಿಕೆಯಾಗಿದೆ. 2022ನೇ ಹಣಕಾಸು ಸಾಲಿನಲ್ಲಿ ಭಾರತ (India) 7 ಮಿಲಿಯನ್ ಟನ್ ದಾಖಲೆಯ ಗೋಧಿ ರಫ್ತು (Export) ಮಾಡಿತ್ತು.ಇದು ಸುಮಾರು 2.12 ಬಿಲಿಯನ್ ಡಾಲರ್ ಮೌಲ್ಯದಾಗಿದೆ.ಇದು ಕಳೆದ ವರ್ಷದ ಇದೇ ಅವಧಿಗಿಂತ ಶೇ.274ರಷ್ಟು ಹೆಚ್ಚು ಮೌಲ್ಯವನ್ನು ಹೊಂದಿದೆ.

Social Media ಸ್ಟಾರ್‌ಗಳಿಗೆ ಸರ್ಕಾರದ ಶಾಕ್: ರೆಡಿಯಾಗ್ತಿದೆ ಹೊಸ ಮಾರ್ಗಸೂಚಿ

 

Latest Videos
Follow Us:
Download App:
  • android
  • ios