ಕಡಿಮೆ ಬಂಡವಾಳದಲ್ಲಿ ಈ ಉದ್ಯೋಗ ಆರಂಭಿಸಿ ಲಕ್ಷ ಲಕ್ಷ ಗಳಿಸಬಹುದು. ಈ ಉತ್ಪನ್ನಕ್ಕೆ ವರ್ಷದ 12 ತಿಂಗಳು ಬೇಡಿಕೆ ಇದ್ದು, ಸರ್ಕಾರದಿಂದಲೂ ಆರ್ಥಿಕ ನೆರವು ಲಭ್ಯವಿದೆ.
Big Earning Business Idea: ಇಂದು ಪ್ರತಿಯೊಬ್ಬರು ತಮ್ಮದೇ ಸ್ವಂತ ವ್ಯವಹಾರ ಆರಂಭಿಸಬೇಕು ಮತ್ತು ಸ್ವಾವಲಂಬಿಯಾಗಿ ಬದುಕು ನಡೆಸಬೇಕೆಂದು ಕನಸು ಕಾಣುತ್ತಾರೆ. ಯಾವುದೇ ವ್ಯವಹಾರ ಆರಂಭಿಸಿದರೂ ಅದು ಮಾರುಕಟ್ಟೆ ಅಪಾಯಗಳನ್ನು ಒಳಗೊಂಡಿರಬೇಕು. ಹಾಗಾಗಿ ವ್ಯವಹಾರವನ್ನು ಸಣ್ಣ ಪ್ರಮಾಣದಲ್ಲಿ ಆರಂಭಿಸಿ, ಲಾಭದಾಯಕವಾಗುತ್ತಿದ್ದಂತೆ ಭವಿಷ್ಯದಲ್ಲಿ ಹಂತ ಹಂತತವಾಗಿ ವಿಸ್ತರಣೆ ಮಾಡಿಕೊಳ್ಳಬೇಕು. ಇದರಿಂದ ನಷ್ಟದ ಆಪಾಯ ಕಡಿಮೆಯಾಗುತ್ತಿರುತ್ತದೆ. ಇಂದು ನಾವು ನಿಮಗೆ ಅಂತಹುದೇ ಒಂದು ಬ್ಯುಸಿನೆಸ್ ಬಗ್ಗೆ ಹೇಳುತ್ತಿದ್ದೇವೆ. ಕಡಿಮೆ ಬಂಡವಾಳದಲ್ಲಿ ಈ ವ್ಯವಹಾರವನ್ನು ಆರಂಭಿಸಬಹುದು. ಈ ಉತ್ಪನ್ನಕ್ಕೆ ವರ್ಷದ 12 ತಿಂಗಳು ಬೇಡಿಕೆ ಇರುತ್ತದೆ. ಈ ಬ್ಯುಸಿನೆಸ್ ಆರಂಭಿಸಲು ಸರ್ಕಾರದಿಂದಲೂ ಆರ್ಥಿಕ ನೆರವು ಸಿಗುತ್ತದೆ.
ನೀವು ಉತ್ಪಾದಿಸುವ ಉತ್ಪನ್ನ ಭಾರತದ ಪ್ರತಿ ಅಡುಗೆಮನೆಯಲ್ಲಿ ಬಳಕೆಯಾಗುತ್ತದೆ. ಹಾಗಾಗಿ ಮಾರುಕಟ್ಟೆಯಲ್ಲಿ ನಿಮ್ಮ ಉತ್ಪನ್ನವನ್ನು ಸರಳವಾಗಿ ಮಾಡಬಹುದು. ನಾವು ಅವಲಕ್ಕಿ ತಯಾರಿಕಾ ಬ್ಯುಸಿನೆಸ್ ಬಗ್ಗೆ ಹೇಳುತ್ತಿದ್ದೇವೆ. ಅವಲಕ್ಕಿ ಅಥವಾ ಪೋಹಾ ಎಂದು ಕರೆಯಲ್ಪಡುವ ಈ ವಸ್ತು ಬಹುತೇಕರ ಮನೆಯಲ್ಲಿನ ಬೆಳಗಿನ ತಿಂಡಿಯಾಗಿರುತ್ತದೆ. ಅವಲಕ್ಕಿ ಬಳಸಿ ವಿವಿಧ ಅಡುಗೆಗಳನ್ನು ಸಹ ಮಾಡಬಹುದು. ತೂಕ ಇಳಿಸೋರು ಸಹ ಅಧಿಕವಾಗಿ ಅವಲಕ್ಕಿ ಬಳಸುತ್ತಾರೆ. ಸ್ಥಳೀಯವಾಗಿ ಕಡಿಮೆ ಪ್ರಚಾರದೊಂದಿಗೆ ನಿಮ್ಮ ಉತ್ಪನ್ನಕ್ಕೆ ಮಾರುಕಟ್ಟೆ ಸೃಷ್ಟಿಸಿಕೊಳ್ಳಬಹುದು.
ಎಷ್ಟು ಬಂಡವಾಳ ಬೇಕು?
ಅವಲಕ್ಕಿ ಉತ್ಪಾದನಾ ತಯಾರಿಕಾ ಘಟಕ ಆರಂಭಿಸಲು ಸೂಕ್ತ ಸ್ಥಳದ ಅವಶ್ಯಕತೆ ಇರುತ್ತದೆ. ನಂತರ ಕೆಲವು ಯಂತ್ರೋಪಕರಣಗಳು ಸಹ ಬೇಕಾಗುತ್ತದೆ. ಸಣ್ಣ ಪ್ರಮಾಣದಲ್ಲಿ ವ್ಯವಹಾರ ಆರಂಭಿಸಲು 2 ರಿಂದ 3 ಲಕ್ಷ ರೂಪಾಯಿ ಬಂಡವಾಳ ಬೇಕಾಗುತ್ತದೆ. ಹಾಗೆ ಅವಲಕ್ಕಿ ಉತ್ಪಾದನೆಗೆ ಭತ್ತ ಬೇಕಾಗುತ್ತದೆ. ಭತ್ತದಿಂದ ಅವಲಕ್ಕಿ ಸಿದ್ಧವಾಗುತ್ತದೆ. ಉತ್ತಮ ಗುಣಮಟ್ಟದ ಭತ್ತ ಬಳಕೆ ಮಾಡೋದರಿಂದ ಮಾರುಕಟ್ಟೆಯಲ್ಲಿ ಬೇಡಿಕೆಯನ್ನು ಹೆಚ್ಚಿಸಿಕೊಳ್ಳಬಹುದು.
ಈ ವಿಷಯಗಳು ನೆನಪಿನಲ್ಲಿರಲಿ
ಅವಲಕ್ಕಿ ಉತ್ಪದನಾ ಘಟಕ ಆರಂಭಿಸಲು ಕೆಲವು ಪರವಾನಿಗೆಯನ್ನು ಕಡ್ಡಾಯವಾಗಿ ಪಡೆದುಕೊಳ್ಳಬೇಕಾಗುತ್ತದೆ. ತಿನ್ನಬಹುದಾದ ವಸ್ತುವನ್ನು ತಯಾರಿಸುತ್ತಿದ್ದರೆ, ನೀವು ಆಹಾರ ಪರವಾನಗಿಯನ್ನು ಪಡೆಯಬೇಕು. ಉತ್ಪದನಾ ಘಟಕ ಆರಂಭಿಸುವಾಗ ಸಂಬಂಧಿಸಿದ ಸ್ಥಳೀಯ ಇಲಾಖೆಗಳಿಂದಲೂ ಅನುಮತಿಯನ್ನು ಪಡೆಯಬೇಕು. ಆಹಾರ ಇಲಾಖೆಯಿಂದ ವ್ಯವಹಾರವನ್ನು ಪ್ರಾರಂಭಿಸಲು ಅಗತ್ಯವಾದ ಔಪಚಾರಿಕತೆಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳಬೇಕು. ಈ ವ್ಯವಹಾರವನ್ನು ಮಾಡುವಾಗ ನೀವು ತುಂಬಾ ಜಾಗರೂಕರಾಗಿರಬೇಕು, ಇಲ್ಲದಿದ್ದರೆ ಸಣ್ಣ ತಪ್ಪು ಕೂಡ ನಿಮ್ಮ ಪರವಾನಗಿಯನ್ನು ತೆಗೆದುಹಾಕಲು ಕಾರಣವಾಗಬಹುದು.
ಇದನ್ನೂ ಓದಿ: ದಿನವೂ ವ್ಯಾಪಾರ, ಹಣ ಸಂಪಾದನೆಗೆ ಮಿತಿಯೇ ಇಲ್ಲ; ಊರಿನಲ್ಲಿಯೇ ಆರಂಭಿಸಬಹುದು ಈ ಬ್ಯುಸಿನೆಸ್
ಸದ್ಯ ಮಾರುಕಟ್ಟೆಯಲ್ಲಿ ಅವಲಕ್ಕಿ ಕೆಜಿ 40 ರಿಂದ 50 ರೂ.ಗಳವರೆಗೆ ಮಾರಾಟವಾಗುತ್ತದೆ. ಅವಲಕ್ಕಿ ಗುಣಮಟ್ಟ ಮತ್ತು ಬ್ರ್ಯಾಂಡ್ ಬೆಲೆಗಳು ಬೇರೆ ಬೇರೆಯಾಗುತ್ತವೆ. ಒಂದು ಬಾರಿ ಗ್ರಾಹಕರು ನಿಮ್ಮ ಘಟಕದ ಅವಲಕ್ಕಿಯನ್ನು ಒಪ್ಪಿಕೊಂಡ್ರೆ ಪ್ರತಿ ತಿಂಗಳು ಲಕ್ಷ ಲಕ್ಷ ಹಣ ಎಣಿಸಬಹುದಾಗಿದೆ. ಇಂತಹ ಸಣ್ಣ ಪ್ರಮಾಣದ ಉದ್ದಿಮೆಗಳ ಆರಂಭಕ್ಕೆ ಕೇಂದ್ರ ಸರ್ಕಾರ ಮುದ್ರಾ ಯೋಜನೆಯಡಿಯಲ್ಲಿ ಆರ್ಥಿಕ ನೆರವು ನೀಡುತ್ತದೆ.
Disclaimer: ಯಾವುದೇ ವ್ಯವಹಾರವು ಮಾರುಕಟ್ಟೆಯ ಅಪಾಯವನ್ನು ಒಳಗೊಂಡಿರುತ್ತವೆ. ಇದು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಇದನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ದೃಢೀಕರಿಸುವದಿಲ್ಲ. ಬಳಕೆದಾರರು ಇವನ್ನು ಕೇವಲ ಮಾಹಿತಿಯನ್ನಾಗಿ ಮಾತ್ರ ಪರಿಗಣಿಸಬೇಕಾಗಿ ವಿನಂತಿ.
ಇದನ್ನೂ ಓದಿ: ಕಡಿಮೆ ಬಂಡವಾಳ ಈ ಬ್ಯುಸಿನೆಸ್ ಆರಂಭಿಸಿದ್ರೆ ಮೂರೇ ತಿಂಗಳಿಗೆ ಸಿಗುತ್ತೆ ಲಕ್ಷ ಲಕ್ಷ ಹಣ
