ಕಡಿಮೆ ಬಂಡವಾಳ ಈ ಬ್ಯುಸಿನೆಸ್ ಆರಂಭಿಸಿದ್ರೆ ಮೂರೇ ತಿಂಗಳಿಗೆ ಸಿಗುತ್ತೆ ಲಕ್ಷ ಲಕ್ಷ ಹಣ
Millionaire in three months: ಕಡಿಮೆ ಬಂಡವಾಳದಲ್ಲಿ ಸ್ವಂತ ಬ್ಯುಸಿನೆಸ್ ಆರಂಭಿಸಲು ಬಯಸುವವರಿಗೆ ಇದು ಉತ್ತಮ ಆಯ್ಕೆಯಾಗಿದೆ. ಕೇವಲ ಮೂರು ತಿಂಗಳಲ್ಲಿ ಲಕ್ಷಾಂತರ ರೂಪಾಯಿ ಗಳಿಸಬಹುದು. ಈ ಉತ್ಪನ್ನಕ್ಕೆ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ಇದೆ.

Business Idea: ಸರ್ಕಾರಿ ಅಥವಾ ಖಾಸಗಿ ಕಂಪನಿಗಳಲ್ಲಿ 9 ರಿಂದ 5ರ ಜಾಬ್ ಮಾಡುವ ಬಹುತೇಕ ಉದ್ಯೋಗಿಗಳು ಸ್ವಂತದಾದ ಬ್ಯುಸಿನೆಸ್ ಆರಂಭಿಸಬೇಕೆಂದು ಕನಸು ಕಾಣುತ್ತಿರುತ್ತಾರೆ. ಆದರೆ ಈ ಕನಸು ನನಸು ಆಗಲು ಬಂಡವಾಳದ ಕೊರತೆ ಎದುರಾಗುತ್ತದೆ. ಮಾರುಕಟ್ಟೆ ಅಪಾಯಗಳಿಂದಲೂ ಸ್ವಂತ ಬ್ಯುಸಿನೆಸ್ ಆರಂಭಿಸಲು ಜನರು ಹಿಂದೇಟು ಹಾಕುತ್ತಾರೆ. ಇಂದು ನಾವು ಹೇಳುವ ಬ್ಯುಸಿನೆಸ್ ಆರಂಭಿಸಲು ದೊಡ್ಡ ಬಂಡವಾಳ ಬೇಕಾಗಲ್ಲ ಮತ್ತು ಕೇವಬಲ ಮೂರು ತಿಂಗಳಲ್ಲಿಯೇ ನಿಮಗೆ ರಿಟರ್ನ್ ಸಿಗಲು ಶುರುವಾಗುತ್ತದೆ. ಈ ವಸ್ತುವಿಗೆ ಮಾರುಕಟ್ಟೆಯಲ್ಲಿ ಸದಾ ಬೇಡಿಕೆಯಿರುತ್ತದೆ.
ಕೊರೊನಾ ಸಾಂಕ್ರಾಮಿಕ ಕಾಲಘಟ್ಟದ ಬಳಿಕ ಜನರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಗಮನ ನೀಡುತ್ತಾರೆ. ಅದರಲ್ಲಿಯೂ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಆಹಾರ ಸೇವನೆಗೆ ಮೊದಲ ಆದ್ಯತೆ ನೀಡುತ್ತಾರೆ. ತಮ್ಮ ದೇಹದಲ್ಲಿನ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಸಹ ಜನರು ಪ್ರಯತ್ನಿಸುತ್ತಾರೆ. ಹಾಗಾಗಿ ಆಯುರ್ವೇದದ ಉತ್ಪನ್ನಗಳಿಗೆ ಮಾರುಕಟ್ಟೆಯೂ ಹೆಚ್ಚಾಗಿದೆ. ಇಂತಹ ಆರೋಗ್ಯಕರ ಉತ್ಪನ್ನಗಳನ್ನು ಔಷಧಿ ತಯಾರಿಸುವ ಕಂಪನಿಗಳೇ ಉತ್ತಮ ಬೆಲೆಗೆ ನೇರವಾಗಿ ಖರೀದಿಸುತ್ತವೆ.
ಇಂದು ನಾವು ತುಳಸಿ ಕೃಷಿ ಬಗ್ಗೆ ಹೇಳುತ್ತಿದ್ದೇವೆ. ತುಳಸಿ ತನ್ನಲ್ಲಿ ಅಪಾರ ಆರೋಗ್ಯಕರ ಗುಣಗಳನ್ನು ಹೊಂದಿದೆ. ತುಳಸಿಯನನ್ನು ಔಷಧಿ ತಯಾರಿಕೆಯಲ್ಲಿಯೂ ಬಳಕೆ ಮಾಡಲಾಗುತ್ತದೆ. ತುಳಸಿ ಕೃಷಿ ಆರಂಭಿಸಿದ್ರೆ ನಿಮಗೆ ಕೇವಲ ಮೂರು ತಿಂಗಳಲ್ಲಿಯೇ ಒಳ್ಳೆಯ ಆದಾಯ ಬರುತ್ತದೆ. ಔಷಧಿ ಮಾತ್ರವಲ್ಲ ಪೂಜೆಯಲ್ಲಿಯೂ ಇದನ್ನು ಬಳಸಲಾಗುತ್ತದೆ. ಮಹಾನಗರಗಳಲ್ಲಿ ಹೂವಿನಂತೆ ತುಳಸಿ ಮಾಲೆ ಮಾರಾಟ ಮಾಡಲಾಗುತ್ತದೆ. ಹಬ್ಬ ಮತ್ತು ವಿಶೇಷ ದಿನಗಳಲ್ಲಿ ತುಳಸಿ ಮಾಲೆಗೆ ಹೆಚ್ಚು ಬೇಡಿಕೆ ಹೊಂದಿದ್ದು, ಅತ್ಯಧಿಕ ಬೆಲೆಗೂ ಮಾರಾಟವಾಗುತ್ತದೆ.
ಈ ವ್ಯವಹಾರವು ಕೆಲವೇ ದಿನಗಳಲ್ಲಿ ನಿಮ್ಮನ್ನು ಲಕ್ಷಾಧಿಪತಿಯನ್ನಾಗಿ ಮಾಡುತ್ತದೆ. ಇತ್ತೀಚಿನ ದಿನಗಳಲ್ಲಿ ಜನರು ತುಳಸಿಯ ಮಹತ್ವವನ್ನು ಅರಿತುಕೊಂಡಿದ್ದಾರೆ. ತುಳಸಿಯಲ್ಲಿ ಆ್ಯಂಟಿ ಬ್ಯಾಕ್ಟೀರಿಯಾ ಮತ್ತು ಆ್ಯಂಟಿ ಫಂಗಲ್ ಗುಣಗಳಿವೆ. ಮಾರುಕಟ್ಟೆಯಲ್ಲಿ ತುಳಸಿ ಎಲೆಗಳಿಗೆ ಮಾತ್ರ ಬೇಡಿಕೆಯಿಲ್ಲ. ತುಳಸಿಯ ಬೇರು ಮತ್ತು ಕಾಂಡಕ್ಕೂ ಬೇಡಿಕೆಯಿದೆ. ಈ ಸಂಪೂರ್ಣ ಬೇಸಾಯವು ಬಿತ್ತನೆಯಿಂದ ಕೊಯ್ಲುವರೆಗೆ ಕೇವಲ 3 ತಿಂಗಳುಗಳನ್ನು ತೆಗೆದುಕೊಳ್ಳುತ್ತದೆ. ಒಂದು ತುಳಸಿ ಬೆಳೆ ಸುಮಾರು 3 ಲಕ್ಷಕ್ಕೆ ಮಾರಾಟವಾಗಿದ್ದು, ಬಿತ್ತನೆಯಿಂದ ಕಟಾವಿನವರೆಗೆ 15 ರಿಂದ 18 ಸಾವಿರ ರೂಪಾಯಿ ಖರ್ಚು ಆಗುತ್ತದೆ. ನಿಮ್ಮ ಬಳಿ ಜಮೀನು ಇದ್ರೆ ಅಲ್ಪಾವಧಿಯಲ್ಲಿಯೇ ದೊಡ್ಡ ಲಾಭ ನೀಡುವ ತುಳಸಿಯನ್ನು ಬೆಳೆಯಬಹುದಾಗಿದೆ.
ಇದನ್ನೂ ಓದಿ: ಕೆಲಸ ಸಿಗದಕ್ಕೆ ನೊಂದು ಬ್ಯುಸಿನೆಸ್ ಅರಂಭ: ಇಂದು 4000 ಸಿಬ್ಬಂದಿಗೆ ಸಂಬಳ ನೀಡುವ ನೀರಜ್ ಸಕ್ಸಸ್ ಕಥೆ
ತುಳಸಿ ಕೃಷಿ ಮತ್ತು ಮಾರಾಟ
ತುಳಸಿ ಕೃಷಿ ಮಾಡಲು ಜುಲೈ ತಿಂಗಳು ಉತ್ತಮ ಸಮಯ. ಈ ತಿಂಗಳಿನಲ್ಲಿ ಭಾರತದಲ್ಲಿ ಮಾನ್ಸೂನ್ ಸೀಸನ್ ಇರುತ್ತದೆ. ಮಳೆಯ ನೀರಿನಿಂದಲೇ ತುಳಸಿ ಬೆಳೆಯುತ್ತದೆ. ತುಳಸಿ ಗಿಡದ ಉದ್ದ 15 ರಿಂದ 20 ಸೆಂ.ಮೀ.ಗೆ ತಲುಪಿದಾಗ ಅದನ್ನು ಕೊಯ್ಲು ಮಾಡಲಾಗುತ್ತದೆ. ಕೊಯ್ಲು ಮಾಡುವ 10 ದಿನಗಳ ಮೊದಲು ತುಳಸಿಗೆ ನೀರು ಹಾಯಿಸೋದನ್ನು ನಿಲ್ಲಿಸಬೇಕು. ನೀವು ತುಳಸಿಯನ್ನು ಯಾವುದೇ ಮಾರುಕಟ್ಟೆಯಲ್ಲಿ ಮಾರಾಟ ಮಾಡಬಹುದು. ಇದಲ್ಲದೇ, ರೈತರು ಬಯಸಿದರೆ, ಅವರು ತುಳಸಿ ಗಿಡವನ್ನು ಔಷಧಿ ತಯಾರಿಕಾ ಕಂಪನಿಗೆ ಮಾರಾಟ ಮಾಡಬಹುದು. ಔಷಧಿ ಕಂಪನಿಗಳಿಂದ ಮುಂಚಿತವಾಗಿ ಆರ್ಡರ್ ಪಡೆದುಕೊಂಡು ತುಳಸಿ ಬೆಳೆಯಲು ಮುಂದಾಗಬಹುದು.
ಇದನ್ನೂ ಓದಿ: 1 ಎಕರೆ ಭೂಮಿಯಿಂದ ತಿಂಗಳಿಗೆ 1 ಕೋಟಿ ಸಂಪಾದಿಸುವ ವಿಧಾನ; ಶ್ರೀಮಂತರಾಗುವ ಟಿಪ್ಸ್