Asianet Suvarna News Asianet Suvarna News

ಆರ್ಥಿಕತೆ ಏರುಗತಿಯಲ್ಲಿರುವುದಕ್ಕೆ ಮತ್ತಷ್ಟು ಸಾಕ್ಷ್ಯ : ಆದಾಯ ಗರಿಷ್ಠ ಹೆಚ್ಚಳ

  • ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ದೇಶದ ಜಿಡಿಪಿ ಬೆಳವಣಿಗೆ ದರ ದಾಖಲೆಯ ಶೇ.20ರಷ್ಟುಏರಿಕೆ 
  • ಜುಲೈ ತಿಂಗಳ ಕೇಂದ್ರದ ಆದಾಯ ಸ್ವೀಕೃತಿ ಕಳೆದ 18 ವರ್ಷಗಳಲ್ಲೇ ಗರಿಷ್ಠ ಪ್ರಮಾಣ ಮುಟ್ಟಿದೆ 
Revenue for the center in July were the highest in the past 18 years snr
Author
Bengaluru, First Published Sep 3, 2021, 10:03 AM IST

ನವದೆಹಲಿ (ಸೆ.03): ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ದೇಶದ ಜಿಡಿಪಿ ಬೆಳವಣಿಗೆ ದರ ದಾಖಲೆಯ ಶೇ.20ರಷ್ಟುಏರಿಕೆ ಕಂಡಿರುವ ಶುಭ ಸುದ್ದಿಯ ಬೆನ್ನಲ್ಲೇ, ಜುಲೈ ತಿಂಗಳ ಕೇಂದ್ರದ ಆದಾಯ ಸ್ವೀಕೃತಿ ಕಳೆದ 18 ವರ್ಷಗಳಲ್ಲೇ ಗರಿಷ್ಠ ಪ್ರಮಾಣ ಮುಟ್ಟಿದೆ ಎಂದು ಅಂಕಿ ಅಂಶಗಳು ಹೇಳಿವೆ. ಇದು ಕೋವಿಡ್‌ 2ನೇ ಅಲೆಯ ಹೊಡೆತದ ಹೊರತಾಗಿಯೂ ಆರ್ಥಿಕತೆ ಮತ್ತೆ ಏರುಮುಖವಾಗಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

ಪ್ರಸಕ್ತ ವರ್ಷದ ಬಜೆಟ್‌ನ ಒಟ್ಟು ಮೊತ್ತ ಅಂದಾಜು ಸ್ವೀಕೃತಿಯಲ್ಲಿ ಶೇ.7ರಷ್ಟುಜುಲೈ ತಿಂಗಳೊಂದರಲ್ಲೇ ಸಂಗ್ರಹವಾಗಿದೆ. ಈ ಪ್ರಮಾಣ ಕಳೆದ 18 ವರ್ಷಗಳಲ್ಲೇ ಗರಿಷ್ಠ ಪ್ರಮಾಣದ್ದಾಗಿದೆ. ಈ ಹಣಕಾಸು ವರ್ಷದ ಈವರೆಗಿನ ಆದಾಯವು ಬಜೆಟ್‌ ಅಂದಾಜಿನ ಶೇ.35ರಷ್ಟಿದೆ. ಈ ಹಿಂದಿನ 24 ವರ್ಷಗಳ ಸರಾಸರಿಯಾದ ಶೇ.19ಕ್ಕೆ ಹೋಲಿಸಿದರೆ ಇದು ಗಮರ್ನಾರ್ಹ ಬೆಳವಣಿಗೆ.

ಭಾರತದ ಆರ್ಥಿಕ ಸಾಧನೆ: ಜಿಡಿಪಿ ಏರಿಕೆ ಬಗ್ಗೆ ತುಂಬಾ ಸಂಭ್ರಮ ಪಡುವಂತದ್ದಿಲ್ಲ: ತಜ್ಞರು!

ಈ ಪ್ರಮಾಣದ ಏರಿಕೆಗೆ ವೆಚ್ಚದಲ್ಲಿ ಭಾರೀ ಇಳಿಕೆ ಕಾರಣವಾಗಿದೆಯಾದರೂ, ದೇಶದ ಆರ್ಥಿಕತೆಯ ಆರೋಗ್ಯ ನಿರೀಕ್ಷಿಸಿದ್ದಕ್ಕಿಂತ ಉತ್ತಮವಾಗಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

ಇನ್ನೊಂದೆಡೆ ಜುಲೈ ತಿಂಗಳಲ್ಲಿ ರಾಜ್ಯ ಜಿಎಸ್‌ಟಿ ಸಂಗ್ರಹ ಕೂಡಾ ಏರಿಕೆಯಾಗಿದೆ. ಮತ್ತೊಂದೆಡೆ ಹೆಚ್ಚಿನ ವ್ಯಾಟ್‌ ದರದ ಕಾರಣ ಒಟ್ಟಾರೆ ಸ್ವೀಕೃತಿಯಲ್ಲೂ ಮುಂದಿನ ದಿನಗಳಲ್ಲಿ ಹೆಚ್ಚಳದ ನಿರೀಕ್ಷೆ ಇದೆ. ಇದರ ಜೊತೆಗೆ ಆಗಸ್ಟ್‌ನಲ್ಲೂ ಜಿಎಸ್‌ಟಿ ಸಂಗ್ರಹ ಏರಿಕೆಯಾಗಿದೆ. ಇವೆಲ್ಲಾ ಮುಂದಿನ ದಿನಗಳು ಇನ್ನಷ್ಟುಉತ್ತಮವಾಗಿರಲಿವೆ ಎಂಬ ನಿರೀಕ್ಷೆ ಹುಟ್ಟುಹಾಕಿವೆ ಎನ್ನಲಾಗಿದೆ.

Follow Us:
Download App:
  • android
  • ios