Asianet Suvarna News Asianet Suvarna News

Retail Inflation: 17 ತಿಂಗಳಲ್ಲೇ ಗರಿಷ್ಠ ಮಟ್ಟಕ್ಕೆ ಚಿಲ್ಲರೆ ಹಣದುಬ್ಬರ; ಮಾರ್ಚ್ ನಲ್ಲಿ ಶೇ.6.95ಕ್ಕೆ ಏರಿಕೆ

*ಆರ್ ಬಿಐ ನಿಗದಿಪಡಿಸಿರೋ ಗರಿಷ್ಠ ಹಣದುಬ್ಬರ ಮಟ್ಟವನ್ನು ಮೀರಿದ ಚಿಲ್ಲರೆ ಹಣದುಬ್ಬರ
*ಸತತ ಮೂರು ತಿಂಗಳಿಂದ ಗರಿಷ್ಠ ಮಿತಿ ಮೀರಿದ ಗ್ರಾಹಕ ದರ ಸೂಚ್ಯಂಕ ಆಧಾರಿತ ಹಣದುಬ್ಬರ
*ರಷ್ಯಾ-ಉಕ್ರೇನ್ ಯುದ್ಧವೇ ಹಣದುಬ್ಬರ ಏರಿಕೆಗೆ ಕಾರಣ

Retail inflation jumps to 17 month high of 6.95 percent in March reasons here
Author
Bangalore, First Published Apr 13, 2022, 11:49 AM IST

ಮುಂಬೈ (ಏ.13): ದೇಶದಲ್ಲಿ ಆಹಾರ ಪದಾರ್ಥಗಳ (Food items) ಬೆಲೆ (Price) ಹೆಚ್ಚಳದ ಪರಿಣಾಮ ಚಿಲ್ಲರೆ (Retail) ಹಣದುಬ್ಬರ (Inflation) 17 ತಿಂಗಳಲ್ಲೇ ಗರಿಷ್ಠ ಮಟ್ಟಕ್ಕೆ ತಲುಪಿದೆ. ಮಾರ್ಚ್ ನಲ್ಲಿ ಚಿಲ್ಲರೆ ಹಣದುಬ್ಬರ  ಶೇ.6.95ಕ್ಕೆ ಏರಿಕೆಯಾಗಿದೆ. ಇದು ಭಾರತೀಯ ರಿಸರ್ವ್ ಬ್ಯಾಂಕ್ (RBI) ನಿಗದಿಪಡಿಸಿರೋ ಗರಿಷ್ಠ ಸಹನಾ ಮಟ್ಟಕ್ಕಿಂತ (Tolerance level) ಸಾಕಷ್ಟು ಹೆಚ್ಚಿದೆ ಎಂದು ಕೇಂದ್ರ ಸರ್ಕಾರ (Central Government) ಮಂಗಳವಾರ ಬಿಡುಗಡೆ ಮಾಡಿರೋ ಅಂಕಿಅಂಶಗಳು ಸ್ಪಷ್ಟಪಡಿಸಿವೆ.

ಸತತ ಮೂರು ತಿಂಗಳಿಂದ ಗ್ರಾಹಕ ದರ ಸೂಚ್ಯಂಕ (CPI) ಆಧಾರಿತ ಹಣದುಬ್ಬರ (Inflation) ಗರಿಷ್ಠ ಮಿತಿ ಶೇ.6ಕ್ಕಿಂತ ಹೆಚ್ಚಿನ ಮಟ್ಟ ತಲುಪಿದೆ. 2020ರ ಅಕ್ಟೋಬರ್‌ ತಿಂಗಳಲ್ಲಿ ಚಿಲ್ಲರೆ ಹಣದುಬ್ಬರ (Retail Inflation) ಶೇ. 7.61 ತಲುಪಿರೋದು ಈ ತನಕದ ಗರಿಷ್ಠ ಮಟ್ಟವಾಗಿದೆ. ಆಹಾರ ಹಣದುಬ್ಬರ 2022ರ ಮಾರ್ಚ್ ನಲ್ಲಿ ಶೇ.5.85ನಿಂದ ಶೇ.7.68ಕ್ಕೆ ಏರಿಕೆಯಾಗಿತ್ತು.ಅದೇ ಕಳೆದ ಸಾಲಿನ (2021) ಮಾರ್ಚ್ ನಲ್ಲಿ ಚಿಲ್ಲರೆ ಹಣದುಬ್ಬರ ಶೇ.5.52ರಷ್ಟಿದ್ದರೆ, ಆಹಾರ ಹಣದುಬ್ಬರ (Food Inflation) ಶೇ.4.87ರಷ್ಟಿತ್ತು.

Market Trading:ಏ.18ರಿಂದ ಮಾರುಕಟ್ಟೆಯಲ್ಲಿ ಬೆಳಗ್ಗೆ 9ರಿಂದಲೇ ಟ್ರೇಡಿಂಗ್ ಆರಂಭ: RBI

ಹಣದುಬ್ಬರ ಗರಿಷ್ಠ ಮಿತಿ ಎಷ್ಟು?
ಭಾರತೀಯ ರಿಸರ್ವ್ ಬ್ಯಾಂಕ್ (RBI) ಚಿಲ್ಲರೆ ಹಣದುಬ್ಬರ ಸಹನಾ ಮಿತಿಯನ್ನು ಶೇ.4ಕ್ಕೆ ನಿಗದಿಪಡಿಸಿದ್ದು, ಉಭಯ ಕಡೆ ಶೇ.2ರಷ್ಟು ಮಾರ್ಜಿನ್ ನೀಡಿದೆ. ಹೀಗಾಗಿ ಹಣದುಬ್ಬರದ ಗರಿಷ್ಠ ಮಿತಿ ಶೇ.6 ಎಂದು ಹೇಳಬಹುದು.  ಜನವರಿ-ಮಾರ್ಚ್ ತ್ರೈಮಾಸಿಕದಲ್ಲಿ ಚಿಲ್ಲರೆ ಹಣದುಬ್ಬರ ಶೇ.6.34ರಷ್ಟಿತ್ತು. ರಷ್ಯಾ-ಉಕ್ರೇನ್ (Russia-Ukraine) ಯುದ್ಧದ ಪರಿಣಾಮ ಉಂಟಾದ ಭೌಗೋಳಿಕ-ರಾಜಕೀಯ ಬಿಕ್ಕಟ್ಟಿನಿಂದ ಅಡುಗೆ ಎಣ್ಣೆ (Edible oil) ಬೆಲೆ ಗಗನಕ್ಕೇರಿದೆ. ಇದ್ರಿಂದ ಅಡುಗೆ ಎಣ್ಣೆ ಹಣದುಬ್ಬರ ಶೇ.18.79ಕ್ಕೆ ಏರಿಕೆಯಾಗಿದೆ. ಉಕ್ರೇನ್ ಸೂರ್ಯಕಾಂತಿ (Sunflower) ಎಣ್ಣೆಯ ಪ್ರಮುಖ ರಫ್ತು ರಾಷ್ಟ್ರವಾಗಿರೋ ಕಾರಣ ಬೆಲೆಯಲ್ಲಿ ಭಾರೀ ಏರಿಕೆ ಕಂಡುಬಂದಿದೆ ಎಂದು ರಾಷ್ಟ್ರೀಯ ಸಾಂಖ್ಯಿಕ ಕಚೇರಿ (NSO) ಅಂಕಿಅಂಶಗಳು ಹೇಳಿವೆ.

ರಷ್ಯಾ-ಉಕ್ರೇನ್ ಯುದ್ಧ ಜಾಗತಿಕ ಪೂರೈಕೆ ಸರಪಳಿ ಮೇಲೆ ಪರಿಣಾಮ ಬೀರಿದೆ. ಕಳೆದೆರಡು ವರ್ಷಗಳಿಂದ ಕೋವಿಡ್ ಕಾರಣದಿಂದ ಸಾಕಷ್ಟು ಹೊಡೆತ ಅನುಭವಿಸಿದ್ದ ವಿವಿಧ ರಾಷ್ಟ್ರಗಳ ಆರ್ಥಿಕತೆಗೆ ರಷ್ಯಾ-ಉಕ್ರೇನ್ ಸಂಘರ್ಷ ಮತ್ತಷ್ಟು ಸಂಕಷ್ಟ ತಂದಿಟ್ಟಿದೆ. ಕಚ್ಚಾ ತೈಲ ಬೆಲೆ ಹೆಚ್ಚಳ ಹಣದುಬ್ಬರ ಹೆಚ್ಚಳಕ್ಕೆ ತುಪ್ಪ ಸುರಿದಿದೆ. ಇನ್ನು ತರಕಾರಿಗಳು, ಮಾಂಸ ಹಾಗೂ ಮೀನಿನ ಬೆಲೆ ಕೂಡ ಗಗನಕ್ಕೇರಿದೆ. ಪರಿಣಾಮ ಜನಸಾಮಾನ್ಯರು ನಿತ್ಯದ ವೆಚ್ಚಗಳನ್ನು ನಿಭಾಯಿಸಲು ಹೆಣಗಾಡೋ ಸ್ಥಿತಿ ನಿರ್ಮಾಣವಾಗಿದೆ. ಮಾರ್ಚ್ ನಲ್ಲಿ ತರಕಾರಿಗಳ ಹಣದುಬ್ಬರ ಶೇ.11.64ಕ್ಕೆ ಏರಿಕೆಯಾಗಿದೆ. ಇನ್ನು ಮಾಂಸ ಹಾಗೂ ಮೀನಿನ ದರ ಕೂಡ ಹೆಚ್ಚಳಗೊಂಡಿದ್ದು, ಹಣದುಬ್ಬರ ಶೇ.9.63ಕ್ಕೆ ತಲುಪಿದೆ. 

Twitter Board:ಟ್ವಿಟ್ಟರ್ ಅತೀದೊಡ್ಡ ಷೇರುದಾರನಾಗಿದ್ದರೂ ಎಲಾನ್ ಮಸ್ಕ್ ನಿರ್ದೇಶಕರ ಮಂಡಳಿ ಸೇರಿಲ್ಲ ಏಕೆ?

ಕಳೆದ ವಾರ 2022-23ನೇ ಸಾಲಿನ ಮೊದಲ ದ್ವಿಮಾಸಿಕ ಹಣಕಾಸು ನೀತಿ ಪ್ರಕಟಿಸಿದ ಆರ್ ಬಿಐ, ಪ್ರಸಕ್ತ ಆರ್ಥಿಕ ಸಾಲಿನಲ್ಲಿ ಚಿಲ್ಲರೆ ಹಣದುಬ್ಬರವನ್ನು ಶೇ. 5.7ಕ್ಕೆ ಅಂದಾಜಿಸಿತ್ತು. ಈ ಹಿಂದೆ ಈ ಸಾಲಿನ ಚಿಲ್ಲರೆ ಹಣದುಬ್ಬರವನ್ನು ಶೇ.4.5ಕ್ಕೆ ಅಂದಾಜಿಸಲಾಗಿತ್ತು. ಫೆಬ್ರವರಿಯಲ್ಲಿ ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಭಾರೀ ಹೆಚ್ಚಳವಾಗಿದೆ ಹಾಗೂ ಭೌಗೋಳಿಕ-ರಾಜಕೀಯ ಬಿಕ್ಕಟ್ಟಿನಿಂದ ಸೃಷ್ಟಿಯಾಗಿರೋ ಸಂದಿಗ್ಧತೆಯಿಂದ ಪ್ರಗತಿ ಹಾಗೂ ಹಣದುಬ್ಬರ ದರವನ್ನು ಅಂದಾಜಿಸೋದು ಕಷ್ಟವಾಗಿದೆ ಎಂದು ಆರ್ ಬಿಐ ಹೇಳಿದೆ. ಕೈಗಾರಿಕಾ ಉತ್ಪಾದನೆ ಸೂಚ್ಯಂಕದಲ್ಲಿ (IIP) ಕೂಡ ಫೆಬ್ರವರಿಯಲ್ಲಿ ಶೇ. 1.7 ಏರಿಕೆಯಾಗಿದೆ. ಕಳೆದ ಸಾಲಿನ ಡಿಸೆಂಬರ್ ನಲ್ಲಿ ಐಐಪಿ ಬೆಳವಣಿಗೆ ದರ 10 ತಿಂಗಳಲ್ಲೇ ಕನಿಷ್ಠ ಮಟ್ಟಕ್ಕೆ ಶೇ.0.4ಕ್ಕೆ ಇಳಿದಿತ್ತು. 

Follow Us:
Download App:
  • android
  • ios