Asianet Suvarna News Asianet Suvarna News

ಆರ್‌ಬಿಐನಿಂದ ಆನ್‌ಲೈನ್‌ ಪೇಮೆಂಟ್‌ ಅಗ್ರಿಗೇಟರ್‌ ಒಪ್ಪಿಗೆ ಪಡೆದ ಜೊಮೋಟೋ!

ಆನ್‌ಲೈನ್‌ ಪೇಮೆಂಟ್‌ ಅಗ್ರಿಗೇಟರ್‌ ಆಗಿ  ಭಾರತೀಯ ರಿಸರ್ವ್ ಬ್ಯಾಂಕ್‌ನಿಂದ ಒಪ್ಪಿಗೆ ಪಡೆದುಕೊಂಡಿರುವುದಾಗಿ ಜೊಮೋಟೋ ಗುರುವಾರ ತಿಳಿಸಿದೆ.

Reserve Bank of India Gives Online Payment Aggregator approval to Zomato san
Author
First Published Jan 25, 2024, 11:49 PM IST

ನವದೆಹಲಿ (ಜ.25): ಆನ್‌ಲೈನ್ ಫುಡ್‌ ಡೆಲಿವರಿ ವೇದಿಕೆ ಜೊಮೋಟೋ ಗುರುವಾರ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ 'ಆನ್‌ಲೈನ್‌ ಪೇಮೆಂಟ್‌ ಅಗ್ರಿಗೇಟರ್‌ ' ಒಪ್ಪಿಗೆಯನ್ನು ಪಡೆದುಕೊಂಡಿರುವುದಾಗಿ ಘೋಷಣೆ ಮಾಡಿದೆ. 2021ರ ಆಗಸ್ಟ್ 4ರ ದಿನ ನಮ್ಮ ಹಿಂದಿನ ಮಾಹಿತಿಯ ಪ್ರಕಾರ, ಜೊಮಾಟೊ ಲಿಮಿಟೆಡ್ ("ಕಂಪನಿ") ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾದ ಜೊಮಾಟೊ ಪೇಮೆಂಟ್ಸ್ ಪ್ರೈವೇಟ್ ಲಿಮಿಟೆಡ್ ("ಜೆಡ್‌ಪಿಪಿಎಲ್") ಅನ್ನು ಸಂಯೋಜಿತವಾಗಿ, ವ್ಯವಹಾರವನ್ನು ಇತರರ ನಡುವೆ ಪಾವತಿ ಸಂಗ್ರಾಹಕರಾಗಿ ನಿರ್ವಹಿಸಲು ಒಪ್ಪಿಗೆ ಸಿಕ್ಕಿದೆ. ZPPL ಗೆ ಭಾರತದಲ್ಲಿ 'ಆನ್‌ಲೈನ್‌ ಪೇಮೆಂಟ್‌ ಅಗ್ರಿಗೇಟರ್‌' ಆಗಿ ಕಾರ್ಯನಿರ್ವಹಿಸಲು ಭಾರತೀಯ ರಿಸರ್ವ್ ಬ್ಯಾಂಕ್ ("RBI") ನಿಂದ ಜನವರಿ 24 ರಂದು ಅಧಿಕೃತ ಪ್ರಮಾಣಪತ್ರವನ್ನು ನೀಡಲಾಗಿದೆ ಎಂದು ತಿಳಿಸಲು ನಾವು ಬಯಸುತ್ತೇವೆ. ಆರ್‌ಬಿಐ ಹೊರಡಿಸಿದ ಮಾರ್ಗಸೂಚಿಗಳ ಪ್ರಕಾರ ಜನವರಿ 24ರಿಂದ ಜಾರಿಗೆ ಇದು ಬರಲಿದೆ” ಎಂದು ಜೊಮೋಟೋ ವಿನಿಮಯ ಫೈಲಿಂಗ್‌ನಲ್ಲಿ ತಿಳಿಸಿದೆ.

ಗುರುವಾರ ಷೇರು ಮಾರುಕಟ್ಟೆಯ ಅಂತ್ಯದ ವೇಳೆಗೆ ಜೊಮೋಟೋ ಕಂಪನಿಯ ಪ್ರತಿ ಷೇರುಗಳು 136 ರೂಪಾಯಿಗೆ ಮಾರಾಟವಾಗಿದ್ದವು. ಬಿಎಸ್‌ಇ ವೆಬ್‌ಸೈಟ್ ಪ್ರಕಾರ ಕಂಪನಿಯ ಮಾರುಕಟ್ಟೆ ಮೌಲ್ಯವು ಪ್ರಸ್ತುತ ₹1,18,468 ಕೋಟಿಗಳಷ್ಟಿದೆ.  2015, 16, 17, 18, 19, ಮತ್ತು 2020ಕ್ಕೆ ಹೋಲಿಸಿದರೆ, 2023ರ ಹೊಸ ವರ್ಷದ ಮುನ್ನಾದಿನದಂದು ಫುಡ್‌ ಡೆಲಿವರಿ ಆಪ್‌ ದೊಡ್ಡ ಮಟ್ಟದ ಆರ್ಡರ್‌ಗಳನ್ನು ಸ್ವೀಕರಿಸಿದೆ ಎಂದು ಇತ್ತೀಚೆಗೆ Zomato CEO ದೀಪಿಂದರ್ ಗೋಯಲ್ ತಿಳಿಸಿದ್ದಾರೆ.

 

ನ್ಯೂ ಇಯರ್ ಪಾರ್ಟಿ ಮತ್ತಲ್ಲಿ ಭಾರತೀಯರು ನೀಡಿದ ಟಿಪ್ಸ್ ಎಷ್ಟು ಲಕ್ಷ : ಧನ್ಯವಾದ ಹೇಳಿದ ಝೋಮ್ಯಾಟೋ ಸಿಇಒ

ಭಾರತೀಯ ಇ-ಕಾಮರ್ಸ್ ಶಿಪ್ಪಿಂಗ್ ಸ್ಟಾರ್ಟ್ಅಪ್ ಶಿಪ್ರೋಕೆಟ್ ಅನ್ನು ಸ್ವಾಧೀನಪಡಿಸಿಕೊಳ್ಳಲು ಜೊಮಾಟೊ ಪ್ರಸ್ತಾಪವನ್ನು ಮಾಡಿದೆ ಎಂದು ಕಳೆದ ಡಿಸೆಂಬರ್‌ನಲ್ಲಿ ಬ್ಲೂಮ್‌ಬರ್ಗ್ ವರದಿ ಮಾಡಿತ್ತು. ಈ ಆಫರ್ ಸುಮಾರು $2 ಬಿಲಿಯನ್ ಪ್ಲಾಟ್‌ಫಾರ್ಮ್ ಮೌಲ್ಯವನ್ನು ಹೊಂದಿದೆ ಎನ್ನಲಾಗಿದೆ. ಈ ಕುರಿತಾಗಿ ಜೊಮೋಟೋ ಯಾವುದೇ ಅಂತಿಮ ನಿರ್ಧಾರ ಮಾಡಿಲ್ಲ ಎನ್ನಲಾಗಿದೆ.

ಆನ್‌ಲೈನ್‌ ಫುಡ್‌ ಬುಕ್ಕಿಂಗ್‌ ಇನ್ನು ದುಬಾರಿ, ಫ್ಲಾಟ್‌ಫಾರ್ಮ್‌ ಫೀ ಏರಿಸಿದ Zomato!

Latest Videos
Follow Us:
Download App:
  • android
  • ios