ಅತಿ ಹೆಚ್ಚು ಸಂಬಳ ಕೊಡುವ ನಗರ: ಬೆಂಗಳೂರು ನಂ.1!

ಅತಿ ಹೆಚ್ಚು ಸಂಬಳ ಕೊಡುವ ನಗರ ಎಂಬ ಹಿರಿಮೆಗೆ ಸಿಲಿಕಾನ್ ಸಿಟಿ ಪಾತ್ರ |  ಸತತ 3ನೇ ವರ್ಷವೂ ದೇಶದಲ್ಲಿ ಪ್ರಥಮ ಸ್ಥಾನ ಪಡೆದ ಐಟಿ ರಾಜಧಾನಿ | ದೇಶದಲ್ಲಿ ಅತಿ ಹೆಚ್ಚು ಸಂಬಳ ಸಿಗುವ ಕ್ಷೇತ್ರ ಮಾಹಿತಿ ತಂತ್ರಜ್ಞಾನ: ವರದಿ

Report says Bengaluru highest paying city IT employees bag highest salaries

ನವದೆಹಲಿ (ಡಿ. 20): ವಿವಿಧ ಕ್ಷೇತ್ರಗಳ ಉದ್ಯೋಗಿಗಳಿಗೆ ದೇಶದಲ್ಲೇ ಅತಿ ಹೆಚ್ಚು ಸಂಬಳ ಕೊಡುವ ನಗರ ಎಂಬ ಹಿರಿಮೆಗೆ ದೇಶದ ಐಟಿ ರಾಜಧಾನಿ ಎಂದೇ ಬಿರುದಾಂಕಿತವಾಗಿರುವ ಕರ್ನಾಟಕದ ರಾಜಧಾನಿ ಬೆಂಗಳೂರು ಸತತ ಮೂರನೇ ವರ್ಷವೂ ಪಾತ್ರವಾಗಿದೆ. ಬೇರೆಲ್ಲಾ ಕೆಲಸಗಳಿಗೆ ಹೋಲಿಸಿದರೆ ಮಾಹಿತಿ ತಂತ್ರಜ್ಞಾನ ಉದ್ಯೋಗಿಗಳು ದೇಶದಲ್ಲಿ ಅತಿ ಹೆಚ್ಚು ಸಂಬಳ ಪಡೆಯುತ್ತಿದ್ದಾರೆ ಎಂಬುದು ಅಧ್ಯಯನವೊಂದರಿಂದ ತಿಳಿದುಬಂದಿದೆ.

ಬೆಂಗಳೂರಿನಲ್ಲಿ ಕಿರಿಯ ಶ್ರೇಣಿಯವರಿಗೆ ವಾರ್ಷಿಕ ಸರಾಸರಿ .5.27 ಲಕ್ಷ, ಮಧ್ಯಮ ಶ್ರೇಣಿಯವರಿಗೆ .16.46 ಲಕ್ಷ ಹಾಗೂ ಹಿರಿಯ ಶ್ರೇಣಿಯವರಿಗೆ .35.45 ಲಕ್ಷ ವೇತನ (ಕಾಸ್ಟ್‌ ಟು ಕಂಪನಿ- ಸಿಟಿಸಿ) ದೊರೆಯುತ್ತಿದೆ.

ಕೇಂದ್ರದಿಂದ ಜಿಎಸ್‌ಟಿ ಶಾಕ್‌ ಇಲ್ಲ, ಉದ್ಯಮಿಗಳು ಬಚಾವ್!

ಇಷ್ಟೊಂದು ವೇತನ ದೇಶದ ಯಾವುದೇ ನಗರದಲ್ಲೂ ಸಿಗುತ್ತಿಲ್ಲ. 2017 ಹಾಗೂ 2018ರ ಪಟ್ಟಿಯಲ್ಲೂ ಬೆಂಗಳೂರು ಪ್ರಥಮ ಸ್ಥಾನ ಪಡೆದಿತ್ತು ಎಂದು ರ್ಯಾಂಡ್‌ಸ್ಟರ್‌ ಇನ್‌ಸೈಟ್ಸ್‌ ಸಂಸ್ಥೆಯ ‘ಸ್ಯಾಲರಿ ಟ್ರೆಂಡ್ಸ್‌ ರಿಪೋರ್ಟ್‌ 2019’ ವರದಿ ತಿಳಿಸಿದೆ.

ಕಿರಿಯ ಶ್ರೇಣಿಯವರ ವೇತನದಲ್ಲಿ ಬೆಂಗಳೂರು ನಂತರದ ಸ್ಥಾನದಲ್ಲಿ ಹೈದರಾಬಾದ್‌ (.5 ಲಕ್ಷ) ಹಾಗೂ ಮುಂಬೈ (.4.59 ಲಕ್ಷ) ಇವೆ. ಮಧ್ಯಮ ಶ್ರೇಣಿಯವರ ವೇತನದಲ್ಲಿ ಮುಂಬೈ (.15.07 ಲಕ್ಷ) ಹಾಗೂ ರಾಷ್ಟ್ರ ರಾಜಧಾನಿ ವಲಯ (.14.5 ಲಕ್ಷ) ಬೆಂಗಳೂರು ನಂತರದ ರ್ಯಾಂಕ್ ಪಡೆದಿವೆ.

ಭಾರತದ ರೀತಿ ಯುಪಿಐ ಹಣ ವರ್ಗಾವಣೆ ಜಾರಿಗೆ ಅಮೆರಿಕಕ್ಕೆ ಗೂಗಲ್‌ ಶಿಫಾರಸು!

ಹಿರಿಯ ಶ್ರೇಣಿಯ ವೇತನದಲ್ಲಿ ಮುಂಬೈ (.33.95 ಲಕ್ಷ) ಹಾಗೂ ಪುಣೆ (.32.68 ಲಕ್ಷ) ನಗರಗಳು ಬೆಂಗಳೂರು ಬಳಿಕ ಕ್ರಮವಾಗಿ 2 ಮತ್ತು ಮೂರನೇ ಸ್ಥಾನದಲ್ಲಿವೆ ಎಂದು ವರದಿ ತಿಳಿಸಿದೆ.

ದೇಶದಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಹೆಚ್ಚಿನ ಸಂಬಳ ದೊರೆಯುತ್ತಿದೆ. ಆ ಕ್ಷೇತ್ರದಲ್ಲಿ ಕಿರಿಯ ಶ್ರೇಣಿಯವರಿಗೆ ವಾರ್ಷಿಕ ಸರಾಸರಿ .4.96 ಲಕ್ಷ ವೇತನ ದೊರೆಯುತ್ತಿದೆ. ಹಿರಿಯ ಶ್ರೇಣಿಯ ವೇತನ .35.84 ಲಕ್ಷವಾಗಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

ದೇಶದ 8 ನಗರಗಳ 15 ಉದ್ಯಮಗಳಲ್ಲಿ ಇರುವ 1 ಲಕ್ಷ ಉದ್ಯೋಗಿಗಳನ್ನು ವಿಶ್ಲೇಷಣೆ ಮಾಡಿ ಈ ವರದಿಯನ್ನು ಸಿದ್ಧಪಡಿಸಿದೆ.

3 ವಿಭಾಗದಲ್ಲೂ ಬೆಂಗಳೂರು ನಂ.1

ರ್ಯಾಂಕ್ ನಗರ ವೇತನ

1. ಬೆಂಗಳೂರು .5.27 ಲಕ್ಷ

2. ಹೈದರಾಬಾದ್‌ .5 ಲಕ್ಷ

3. ಮುಂಬೈ .4.59 ಲಕ್ಷ

ಮಧ್ಯಮ ಶ್ರೇಣಿ

ರಾರ‍ಯಂಕ್‌ ನಗರ ವೇತನ

1. ಬೆಂಗಳೂರು .16.45 ಲಕ್ಷ

2. ಮುಂಬೈ .15.07 ಲಕ್ಷ

3. ಎನ್‌ಸಿಆರ್‌ .14.5 ಲಕ್ಷ

ಹಿರಿಯ ಶ್ರೇಣಿ

ರ್ಯಾಂಕ್ ನಗರ ವೇತನ

1. ಬೆಂಗಳೂರು .35.45 ಲಕ್ಷ

2. ಮುಂಬೈ .33.95 ಲಕ್ಷ

3. ಪುಣೆ .32.68 ಲಕ್ಷ

ಡಿಸೆಂಬರ್ 20ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Latest Videos
Follow Us:
Download App:
  • android
  • ios