ಭಾರತದ ರೀತಿ ಯುಪಿಐ ಹಣ ವರ್ಗಾವಣೆ ಜಾರಿಗೆ ಅಮೆರಿಕಕ್ಕೆ ಗೂಗಲ್ ಶಿಫಾರಸು!
ಭಾರತದ ರೀತಿ ಯುಪಿಐ ಹಣ ವರ್ಗಾವಣೆ ಜಾರಿಗೆ ಅಮೆರಿಕಕ್ಕೆ ಗೂಗಲ್ ಶಿಫಾರಸು| ಬಳಕೆದಾರರು ತಮ್ಮ ಬ್ಯಾಂಕ್ ಖಾತೆಯಿಂದ ನೇರವಾಗಿ ಇನ್ನೊಬ್ಬರ ಖಾತೆಗೆ ಹಣ ವರ್ಗಾವಣೆ ಮಾಡುವ ಯುಪಿಐ ವ್ಯವಸ್ಥೆ
ನವದೆಹಲಿ[ಡಿ.17]: ಭಾರತದಲ್ಲಿ ಗೂಗಲ್ ಪೇ ಭಾರೀ ಯಶಸ್ಸು ಕಂಡಿರುವ ಬೆನ್ನಲ್ಲೇ, ಯುನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ (ಯುಪಿಐ) ಮಾದರಿಯ ಹಣ ವರ್ಗಾವಣೆ ವ್ಯವಸ್ಥೆಯನ್ನು ಅಮೆರಿಕದ ಫೆಡರಲ್ ರಿಸವ್‌ರ್ ಕೂಡ ಜಾರಿಗೊಳಿಸಬೇಕು ಎಂದು ಗೂಗಲ್ ಸಂಸ್ಥೆ ಶಿಫಾರಸು ಮಾಡಿದೆ.
ಬಳಕೆದಾರರು ತಮ್ಮ ಬ್ಯಾಂಕ್ ಖಾತೆಯಿಂದ ನೇರವಾಗಿ ಇನ್ನೊಬ್ಬರ ಖಾತೆಗೆ ಹಣ ವರ್ಗಾವಣೆ ಮಾಡುವ ಯುಪಿಐ ವ್ಯವಸ್ಥೆಯನ್ನು ಭಾರತದಲ್ಲಿ 2016ರಲ್ಲಿ ಜಾರಿಗೊಳಿಸಲಾಗಿದೆ. ಒಬ್ಬರ ಖಾತೆಯ ವಿವರಗಳನ್ನು ಇನ್ನೊಬ್ಬರಿಗೆ ನೀಡದೇ ಬೇರೆ ಬೇರೆ ಬ್ಯಾಂಕ್‌ನಿಂದ ಹಣವನ್ನು ಇನ್ನೊಬ್ಬರಿಗೆ ವರ್ಗಾಯಿಸಬಹುದಾಗಿದೆ.
ನವೆಂಬರ್‌ನಲ್ಲಿ ಯುಪಿಐ ಮೂಲಕ 120 ಕೋಟಿ ವಹಿವಾಟು ನಡೆಸಲಾಗಿದ್ದು, ಅವುಗಳ ಮೌಲ್ಯ 1.89 ಲಕ್ಷ ಕೋಟಿ ರು. ಆಗಿದೆ. ಭಾರತದಲ್ಲಿ ಯುಪಿಐನ ಯಸ್ಸನ್ನು ಉದಾಹರಣೆ ನೀಡಿ ಫೆಡರಲ್ ಬ್ಯಾಂಕ್‌ಗೆ ಪತ್ರವೊಂದನ್ನು ಬರೆದಿರುವ ಗೂಗಲ್ ಸಂಸ್ಥೆ, ಯುಪಿಐ ರೀತಿಯ ವ್ಯವಸ್ಥೆಯನ್ನು ಜಾರಿಗೊಳಿಸಬೇಕು ಎಂದು ಸಲಹೆ ಮಾಡಿದೆ.
ಡಿಸೆಂಬರ್ 17ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ