ಬಹಳ ಸಮಯದ ಬಳಿಕ ಗುಡ್ ನ್ಯೂಸ್ ಕೊಟ್ಟ RBI: ಸಾಲದ ಬಡ್ಡಿದರ...!
2019-20ನೇ ಸಾಲಿನ 6ನೇ ದ್ವೈಮಾಸಿಕ ವಿತ್ತೀಯ ನೀತಿ ಪ್ರಕಟ| 2019-20ನೇ ಸಾಲಿನ ವಿತ್ತೀಯ ನೀತಿ ಪ್ರಕಟಿಸಿದ RBI| ಈ ಹಿಂದಿನ ಶೇ. 5.15ರ ರೆಪೋ ದರದ ಯಥಾಸ್ಥಿತಿ ಮುಂದುವರಿಕೆ| ವಿತ್ತೀಯ ನೀತಿ ಪ್ರಕಟಿಸಿದ RBI ಗವರ್ನರ್ ಶಕ್ತಿಕಾಂತ್ ದಾಸ್| ಈ ಹಿಂದಿನ ಶೇ.4.9ರ ಯಥಾಸ್ಥಿತಿಯಲ್ಲಿ ರಿವರ್ಸ್ ರೆಪೋ ದರ| 2020-21ರ ಆರ್ಥಿಕ ವರ್ಷದಲ್ಲಿ ದೇಶದ ಜಿಡಿಪಿ ಶೇ. 6 ಎಂದು ಅಂದಾಜಿಸಿದ RBI|
ನವದೆಹಲಿ(ಫೆ.06): ಭಾರತೀಯ ರಿಸರ್ವ್ ಬ್ಯಾಂಕ್ 2019-20ನೇ ಸಾಲಿನ 6ನೇ ದ್ವೈಮಾಸಿಕ ವಿತ್ತೀಯ ನೀತಿ ಪ್ರಕಟಿಸಿದ್ದು, ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡದಿರುವ ನಿರ್ಣಯ ಕೈಗೊಂಡಿದೆ.
ಈ ಹಿಂದಿನ ಶೇ. 5.15ರ ರೆಪೋ ದರದ ಯಥಾಸ್ಥಿತಿ ಮುಂದುವರೆಯಲಿದ್ದು, ರಿವರ್ಸ್ ರೆಪೋ ದರ ಕೂಡ ಈ ಹಿಂದಿನ ಶೇ.4.9ರ ಯಥಾಸ್ಥಿತಿಯಲ್ಲಿ ಮುಂದುವರೆಯಲಿದೆ.
ಈ ಕುರಿತು ಮಾಹಿತಿ ನೀಡಿರುವ RBI ಗವರ್ನರ್ ಶಕ್ತಿಕಾಂತ್ ದಾಸ್, ವಿತ್ತೀಯ ಸಮಿತಿ ಹಣದುಬ್ಬರದ ಸ್ಥಿತಿಗತಿ ಮತ್ತು ಕಾರಣಗಳನ್ನು ತಿಳಿದುಕೊಳ್ಳುವವರೆಗೆ ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ರೆಪೋ ದರ ಕಡಿತ: ಇದೆಯಾ ತಿಳಿದುಕೊಳ್ಳುವ ತುಡಿತ?
ಪ್ರಸಕ್ತ ಹಣಕಾಸು ವರ್ಷದ ಕೊನೆಯ ವಿತ್ತೀಯ ನೀತಿ ಇದಾಗಿದ್ದು 2020-21ರ ಆರ್ಥಿಕ ವರ್ಷದಲ್ಲಿ ದೇಶದ ಜಿಡಿಪಿ ಶೇ. 6ರ ಆಸುಪಾಸಿನಲ್ಲಿರಲಿದೆ ಎಂದು ಅಂದಾಜಿಲಸಾಗಿದೆ.
ಇನ್ನು ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡದಿರುವುದರಿಂದ ಸಾಲದ ಮೇಲಿನ ಬಡ್ಡಿದರದಲ್ಲಿ ಯಾವುದೇ ವ್ಯತ್ಯಾಸವಾಗುವುದಿಲ್ಲ ಎಂದು RBI ಸ್ಪಷ್ಟಪಡಿಸಿದೆ.
ರೆಪೋ ದರ ಎಂದರೆ ರೀಪರ್ಚೇಸ್ ರೇಟ್ (ಮರುಕೊಳ್ಳುವ ದರ) ಎಂದಾಗುತ್ತದೆ. RBI ತನ್ನ ಅಧೀನ ಬ್ಯಾಂಕ್‌ಗಳಿಗೆ ನೀಡುವ ಸಾಲದ ಮೇಲಿನ ಬಡ್ಡಿಗೆ ರೆಪೋ ದರ ಎಂದು ಕರೆಯಲಾಗುತ್ತದೆ. ಇದು ಹಣಕಾಸಿನ ವಹಿವಾಟಿನಲ್ಲಿ ಒಂದು ಮುಖ್ಯವಾದ ಅಂಶವಾಗಿದ್ದು, ಬ್ಯಾಂಕ್‌ಗಳು ತಮ್ಮ ಅವಶ್ಯಕತೆಗನುಗುಣವಾಗಿ RBIನಿಂದ ಸಾಲ ಪಡೆಯುತ್ತವೆ.
ಇದಕ್ಕೆ RBI ಕಾಲ ಕಾಲಕ್ಕೆ ನಿರ್ದಿಷ್ಟ ಬಡ್ಡಿ ವಿಧಿಸುತ್ತದೆ. ಕೇಂದ್ರ ಬ್ಯಾಂಕ್ ರೆಪೋ ದರ ಕಡಿತಗೊಳಿಸಿದಾಗ ಸಹಜವಾಗಿ ಅಧೀನ ಬ್ಯಾಂಕ್‌ಗಳು ಗೃಹ ಸಾಲ ಸೇರಿದಂತೆ ಇತರ ಸಾಲಗಳ ಮೇಲಿನ ಬಡ್ಡಿದರವನ್ನು ಕಡಿತ ಮಾಡುತ್ತವೆ.
ಫೆಬ್ರವರಿ 6ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ