Asianet Suvarna News Asianet Suvarna News

ಸಲೂನ್ ಉದ್ಯಮಕ್ಕೆ ಶೀಘ್ರದಲ್ಲೇ ರಿಲಯನ್ಸ್ ಪ್ರವೇಶ; ನ್ಯಾಚುರಲ್ಸ್ ಶೇ.49 ಷೇರು ಖರೀದಿಸಲಿದ್ದಾರೆಯೇ ಅಂಬಾನಿ?

*'ನ್ಯಾಚುರಲ್ಸ್ ಸಲೂನ್ ಆ್ಯಂಡ್ ಸ್ಪಾ' ಸಲೂನ್ ಕಂಪನಿಯ ಷೇರುಗಳ ಖರೀದಿಗೆ ಮಾತುಕತೆ
*ಒಪ್ಪಂದದ ಬಗ್ಗೆ ಎಲ್ಲಿಯೂ ಮಾಹಿತಿ ನೀಡದ ರಿಲಯನ್ಸ್
*20 ರಾಜ್ಯಗಳಲ್ಲಿ 700 ಸಲೂನ್ ಗಳನ್ನು ಹೊಂದಿರುವ ನ್ಯಾಚುರಲ್ಸ್ ಸಂಸ್ಥೆ
 

Reliance to step into salon business plans to buy 49 percent stake in Naturals
Author
First Published Nov 4, 2022, 7:56 PM IST

ನವದೆಹಲಿ (ನ.4): ರಿಲಯನ್ಸ್ ಇಂಡ ಸ್ಟ್ರೀಸ್ ಅಂಗಸಂಸ್ಥೆ ರಿಲಯನ್ಸ್ ರಿಟೇಲ್ ಸಲೂನ್ ಉದ್ಯಮಕ್ಕೆ ಕಾಲಿಡಲು ಸಜ್ಜಾಗಿದೆ. ಚೆನ್ನೈ ಮೂಲದ  'ನ್ಯಾಚುರಲ್ಸ್ ಸಲೂನ್ ಆ್ಯಂಡ್ ಸ್ಪಾ' ಸಲೂನ್ ಕಂಪನಿಯ ಶೇ.49ರಷ್ಟು ಷೇರುಗಳನ್ನು ಖರೀದಿಸಲು ಮುಂದಾಗಿದೆ ಎಂದು ವರದಿಯಾಗಿದೆ. ಈ ಬಗ್ಗೆ ನ್ಯಾಚುರಲ್ಸ್ ಸಲೂನ್ ಆ್ಯಂಡ್ ಸ್ಪಾ ಕಂಪನಿಯ ಸಿಇಒ ಕುಮಾರವೇಲ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ ಕೂಡ. ಸದ್ಯ  ನ್ಯಾಚುರಲ್ಸ್ ಸಲೂನ್ ಆ್ಯಂಡ್ ಸ್ಪಾ ಸಂಸ್ಥೆ ಗ್ರೂಮ್ ಇಂಡಿಯಾ ಸಲೂನ್ಸ್ ಆ್ಯಂಡ್ ಸ್ಪಾ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಈ ಸಂಸ್ಥೆಯ ಶೇ.49ರಷ್ಟು ಷೇರುಗಳನ್ನು ರಿಲಯನ್ಸ್ ರಿಟೇಲ್ ಖರೀದಿಸುವ ಬಗ್ಗೆ ಮಾತುಕತೆಗಳು ನಡೆಯುತ್ತಿವೆ. ಕೆಲವು ಮೂಲಗಳ ಪ್ರಕಾರ ಗ್ರೂಮ್ ಇಂಡಿಯಾ ಸಲೂನ್ಸ್ ಆ್ಯಂಡ್ ಸ್ಪಾ ಸಂಸ್ಥೆಯೇ ನ್ಯಾಚುರಲ್ಸ್ ಸಲೂನ್ ಕಾರ್ಯನಿರ್ವಹಣೆಯ ಉಸ್ತುವಾರಿ ನೋಡಿಕೊಳ್ಳಲಿದ್ದು, 20 ರಾಜ್ಯಗಳಲ್ಲಿ 700 ಸಲೂನ್ ಗಳನ್ನು ಹೊಂದಿರುವ ಈ ಸಂಸ್ಥೆಯ ನೆಟ್ ವರ್ಕ್ ಅನ್ನು ನಾಲ್ಕರಿಂದ ಐದು ಪಟ್ಟು  ವಿಸ್ತರಿಸಲು ರಿಲಯನ್ಸ್ ಹಣಕಾಸಿನ ನೆರವು ಒದಗಿಸಲಿದೆ ಎಂದು ‘ಎಕಾನಾಮಿಕ್ ಟೈಮ್ಸ್’ವರದಿ ಮಾಡಿದೆ. 'ರಿಲಯನ್ಸ್ ರಿಟೇಲ್ ನ್ಯಾಚುರಲ್ಸ್ ನ ಶೇ.49ರಷ್ಟು ಷೇರುಗಳನ್ನು ಇನ್ನಷ್ಟೇ ಸ್ವಾಧೀನಪಡಿಸಿಕೊಳ್ಳಬೇಕಿದೆ' ಎಂದು ನ್ಯಾಚುರಲ್ಸ್ ಸಿಇಒ ಸಿ.ಕೆ.ಕುಮಾರವೆಲ್ ಲಿಂಕ್ಡ್ ಇನ್ ಪೋಸ್ಟ್ ಮೂಲಕ ಮಾಹಿತಿ ನೀಡಿದ್ದಾರೆ. 

ರಿಲಯನ್ಸ್ ರಿಟೇಲ್ (Reliance Retail) ಹಾಗೂ ನ್ಯಾಚುರಲ್ಸ್ ಸಲೂನ್ ಆ್ಯಂಡ್ ಸ್ಪಾ (Naturals Saloon and Spa) ನಡುವೆ ಎಷ್ಟು ಮೊತ್ತದ ಒಪ್ಪಂದ (Agrement) ನಡೆದಿದೆ ಎಂಬ ಬಗ್ಗೆ ಎಲ್ಲಿಯೂ ಮಾಹಿತಿ ಲಭ್ಯವಾಗಿಲ್ಲ. ಈ ಬಗ್ಗೆ ನ್ಯಾಚುರಲ್ಸ್ ಅಥವಾ ರಿಲಯನ್ಸ್ ಪ್ರತಿಕ್ರಿಯೆ ನೀಡಿಲ್ಲ ಎಂದು ರಾಯ್ಟಿರ್ಸ್ (Reuters) ಸುದ್ದಿಸಂಸ್ಥೆ ಹೇಳಿದೆ. ಚೆನ್ನೈ ಮೂಲದ ನ್ಯಾಚುರಲ್ಸ್ 2000ರಲ್ಲಿ ಪ್ರಾರಂಭವಾಗಿದ್ದು, 2025ರ ವೇಳೆಗೆ ದೇಶಾದ್ಯಂತ 3,000 ಸಲೂನ್ ಗಳನ್ನು ತೆರೆಯುವ ಗುರಿ ಹೊಂದಿದೆ ಎಂದು ಸಂಸ್ಥೆಯ ವೆಬ್ ಸೈಟ್ ನಲ್ಲಿ ಮಾಹಿತಿ ನೀಡಲಾಗಿದೆ. 

60 ವಯಸ್ಸಿಗೆ ಗೃಹೋದ್ಯಮದಲ್ಲಿ ಯಶಸ್ಸು ಕಂಡ ನಾಗಮಣಿ

ಕೋವಿಡ್ -19 ಸಾಂಕ್ರಾಮಿಕದಿಂದ ಸಲೂನ್ (Saloon) ಉದ್ಯಮ ಸಾಕಷ್ಟು ಹೊಡೆತ ಅನುಭವಿಸಿತ್ತು. 2020ರ ಮೇನಲ್ಲಿ ನ್ಯಾಚುರಲ್ಸ್ ಸಿಇಒ (CEO) ಕುಮಾರ್ ವೆಲ್ ಸರ್ಕಾರದ ನೆರವನ್ನು ಕೂಡ ಕೋರಿದ್ದರು. ಆದರೆ, ಸಲೂನ್ ಉದ್ಯಮ ಈಗ ಮತ್ತೆ ಮರಳಿ ಬೇಡಿಕೆ ಪಡೆದುಕೊಂಡಿದೆ. ಕಚೇರಿಗಳು ಹಾಗೂ ಶುಭ ಕಾರ್ಯಕ್ರಮಗಳು ಮತ್ತೆ ಪ್ರಾರಂಭವಾಗಿದ್ದು, ಎಲ್ಲವೂ ಮರಳಿ ಸಹಜ ಸ್ಥಿತಿಗೆ ಬಂದಿರುವ ಕಾರಣ ಸಲೂನ್ಗೆ ಬರುವ ಗ್ರಾಹಕರ (Customers) ಸಂಖ್ಯೆಯೂ ಹೆಚ್ಚಿದೆ. 

ರಿಲಯನ್ಸ್ ಸಂಸ್ಥೆ ಇತ್ತೀಚೆಗೆ ಮೊದಲ ಇನ್ -ಹೌಸ್ ಪ್ರೀಮಿಯಂ ಫ್ಯಾಷನ್ ಹಾಗೂ ಲೈಫ್ ಸ್ಟೈಲ್ ಸ್ಟೋರ್ (Lifestyle store) ಪ್ರಾರಂಭಿಸಿತ್ತು. ಇದಾಗಿ ಕೆಲವೇ ದಿನಗಳು ಕಳೆಯುವುದರೊಳಗೆ ನ್ಯಾಚುರಲ್ಸ್ ಷೇರು (Share) ಖರೀದಿಗೆ ಮುಂದಾಗಿದೆ. ರಿಲಯನ್ಸ್ ಇಂಡ ಸ್ಟ್ರೀಸ್ ಇತ್ತೀಚೆಗೆ ತನ್ನ ಉದ್ಯಮ (Business) ವಿಸ್ತರಿಸುತ್ತಿದೆ. ಈಗಾಗಲೇ ಹಲವು ಕ್ಷೇತ್ರಗಳಲ್ಲಿ ಹೂಡಿಕೆ (Invest) ಮಾಡಿದೆ ಕೂಡ. ಈಗ ಸಲೂನ್ (Saloon) ಕ್ಷೇತ್ರಕ್ಕೆ ರಿಲಯನ್ಸ್ (Reliance) ಪ್ರವೇಶಿಸುತ್ತಿರೋದ್ರಿಂದ ಸ್ಥಳೀಯ ಸಲೂನ್ ಮಾಲೀಕರಿಗೆ ಹೊಡೆತ ಬೀಳುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. 

ಜಗತ್ತಿನ ಬಲಿಷ್ಠ ಆರ್ಥಿಕತೆಗಳಿಗಿಂತ ಭಾರತದಲ್ಲಿ ಹಣದುಬ್ಬರ ಕಡಿಮೆ; ಹಾಗಾದ್ರೆ ಯಾವ ರಾಷ್ಟ್ರಗಳಲ್ಲಿ ಹೆಚ್ಚಿದೆ?

217 ಬಿಲಿಯನ್ ಡಾಲರ್‌ ಮೌಲ್ಯದ ರಿಲಯನ್ಸ್‌ ಇಂಡಸ್ಟ್ರೀಸ್‌ (Reliance Industries) ಸಂಸ್ಥೆಯ ಅಂಗ ಸಂಸ್ಥೆಯಾಗಿರುವ ರಿಲಯನ್ಸ್‌ ರೀಟೇಲ್‌ (Reliance Retail) ಕಂಪನಿಯ ಮುಖ್ಯಸ್ಥೆಯನ್ನಾಗಿ (Chairperson) ಇಶಾ ಅಂಬಾನಿಯನ್ನು ತಂದೆ ಮುಖೇಶ್‌ ಅಂಬಾನಿ ಆಗಸ್ಟ್ ನಲ್ಲಿ ನೇಮಕ ಮಾಡಿದ್ದರು. 
 

Follow Us:
Download App:
  • android
  • ios