ಜಿಯೋ ಮಾರ್ಟ್:‌ ಕಿರಾಣಿ ಮಾರಾಟ ಕರ್ನಾಟಕದ ಸಣ್ಣ ಪಟ್ಟಣಗಳಿಗೂ ವಿಸ್ತರಣೆ

ವಾಟ್ಸಾಪ್ ಮೂಲಕ ಆರ್ಡರ್ ಪಡೆದು, ಆನ್ ಲೈನ್ ಸೇವೆ ನೀಡುವುದನ್ನು ರಿಲಯನ್ಸ್ ಜಿಯೋ ಮಾರ್ಟ್ ಕಿರಾಣಿ ಮಾರಾಟ ಈಗ ಕರ್ನಾಟಕದ ಸಣ್ಣ ಪಟ್ಟಣಗಳಿಗೂ ವಿಸ್ತರಿಸಿದೆ.

reliance jio mart products service available at various Town In Karnataka

ಬೆಂಗಳೂರು, (ಮೇ.28): ಜಿಯೋ ಮಾರ್ಟ್ ಈಗ ದೇಶಾದ್ಯಂತ ಸುಮಾರು 200 ನಗರಗಳಲ್ಲಿ ವಿತರಣೆಯನ್ನು ಆರಂಭಿಸಿದ್ದು ಮತ್ತು ಹಲವಾರು ಹೊಸ ಪಟ್ಟಣಗಳನ್ನು ತಲುಪುವ ಮೂಲಕ ಅಗತ್ಯ ವಸ್ತುಗಳ ಆನ್‌ಲೈನ್‌ ಆಧುನಿಕ ಚಿಲ್ಲರೆ ವ್ಯಾಪಾರದಲ್ಲಿ ತನ್ನ ಛಾಪು ಮೂಡಿಸುತ್ತಿದೆ.

ಈಗಾಗಲೇ ಕರ್ನಾಟಕದ ಸಣ್ಣ ಪಟ್ಟಣಗಳಿಗೂ ಸೇವೆಯನ್ನು ವಿಸ್ತರಿಸಿದೆ. ಜಿಯೋಮಾರ್ಟ್ ಆಧುನಿಕ ಮತ್ತು ಆನ್‌ಲೈನ್ ಚಿಲ್ಲರೆ ಅನುಭವವನ್ನು ಹೊಂದಿರದ ಅನೇಕ ಭಾರತೀಯರಿಗೆ ಮತ್ತು ಪಟ್ಟಣಗಳಿಗೆ ಸೇವೆಯನ್ನು ವಿಸ್ತರಿಸುತ್ತಿದೆ.

ಜಿಯೋ ಮಾರ್ಟ್‌ ಶುರು: ಫ್ಲಿಪ್‌ಕಾರ್ಟ್‌, ಅಮೆಜಾನ್‌ಗೆ ಸಡ್ಡು!

ಜನರು ತಮ್ಮ ದೈನಂದಿನ ಅಗತ್ಯಗಳಿಗಾಗಿ ಕಡಿಮೆ ಬೆಲೆಗೆ ಮತ್ತು ಅತೀ ವೇಗವಾಗಿ ಡೆಲಿವರಿ ನೀಡುವ ಜಿಯೋಮಾರ್ಟ್ ಸೇವೆಯನ್ನು ಬಳಕೆ ಮಾಡುವಂತೆ ಯೋಜನೆಯನ್ನು ರೂಪಿಸುತ್ತಿದೆ.  ಕೋವಿಡ್ -19 ನಂತರದಲ್ಲಿ ಜಿಯೋ ಮಾರ್ಟ್‌ ಸೇವೆಯೂ ಹೆಚ್ಚಿನ ಪ್ರಮಾಣದಲ್ಲಿ ಹೆಚ್ಚಿನ ನಗರಗಳಲ್ಲಿ ದೊರೆಯಲಿದೆ.

ರಾಜ್ಯದ ವಿವಿಧ ಪಟ್ಟಣಗಳಲ್ಲಿ ಜಿಯೋ ಮಾರ್ಟ್‌
reliance jio mart products service available at various Town In Karnataka

ಜಿಯೋ ಮಾರ್ಟ್‌ ಹೊಸ ಪಟ್ಟಣಗಳು ಮತ್ತು ಹೊಸ ನಗರಗಳಲ್ಲಿ ಹೆಚ್ಚಿನ ಅಗತ್ಯತೆಗಳನ್ನು ಪೂರೈಸಲು ವೇಗವಾಗಿ ವಿತರಣೆ ಮತ್ತು ಗ್ರಾಹಕರಿಗೆ ಉತ್ತಮ ಬೆಲೆಗಳನ್ನು ಒದಗಿಸುತ್ತದೆ. ಜಿಯೋಮಾರ್ಟ್‌ನಿಂದಾಗೊ ಕೆಲವು ಸಣ್ಣ / ಅರೆ-ನಗರ ಮತ್ತು ಪಟ್ಟಣಗಳು ಮೊದಲ ಬಾರಿಗೆ ವಿಶೇಷ "ಅಗತ್ಯ ಮೀಸಲಾದ ಇ-ಕಾಮರ್ಸ್" ಸೇವೆಯನ್ನು ಪಡೆಯುವಂತಾಗಲಿದೆ.

ಈಗ ಹಲವಾರು ಪಟ್ಟಣಗಳಲ್ಲಿ ಜಿಯೋಮಾರ್ಟ್ ವಿತರಣೆಯನ್ನು ಆರಂಭಿಸಿದೆ. ಇವುಗಳಲ್ಲಿ ಕರ್ನಾಟಕದ ಉಡುಪಿ ಮತ್ತು ಗೋಕಾಕ್, ಪಂಜಾಬ್‌ನ ಕಪುರ್ಥಾಲಾ, ಮಧ್ಯಪ್ರದೇಶದ ಗುನಾ ಮತ್ತು ಸಾಗರ್, ರಾಜಸ್ಥಾನದ ನೋಖಾ ಮತ್ತು ಭಿವಾಡಿ, ಜುನಗರ್ ಮತ್ತು ಗುಜರಾತ್‌ನ ಹಿಮಾತ್‌ನಗರ, ಹರಿಯಾಣದ ಪಾಲ್ವಾಲ್ ಪಟ್ಟಣಗಳು ಸೇರಿಕೊಂಡಿವೆ.

ಜಿಯೋ ಕಡಿಮೆ ಅವಧಿಯಲ್ಲಿ ಡೆಲಿವರಿ
reliance jio mart products service available at various Town In Karnataka
ಜಿಯೋ ಮಾರ್ಟ್‌ ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಡೆಲಿವರಿಯನ್ನು ಮಾಡುತ್ತಿದೆ. ಹಾಗಾಗಿ ಬೇರೆಯವರಿಗೆ ಹೋಲಿಸಿಕೊಂಡರೆ ಜಿಯೋ ಮಾರ್ಟ್‌ ಕನಿಷ್ಠ ವಿತರಣಾ ಸಮಯವನ್ನು ಹೊಂದಿದೆ. ಜಿಯೋಮಾರ್ಟ್ ಎರಡು ದಿನಗಳಲ್ಲಿ ಡೆಲಿವರಿ ಭರವಸೆ ನೀಡುತ್ತಿದೆ ಆದರೆ ಹೆಚ್ಚಿನ ಆರ್ಡರ್‌ಗಳನ್ನು ನಿಗದಿತ ಸಮಯಕ್ಕಿಂತ ಮುಂಚಿತವಾಗಿ ತಲುಪಿಸಲಾಗುತ್ತಿದೆ. ಆದರೆ ಇದೇ ಬಿಗ್‌ ಬಾಸ್ಕೆಟ್‌ನಲ್ಲಿ ಡೆಲಿವರಿಗೆ ಯಾವುದೇ ಸ್ಲಾಟ್‌ಗಳು ಲಭ್ಯವಿಲ್ಲ, ಇನ್ನು ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ನಲ್ಲಿನ ಹೆಚ್ಚಿನ ಅಗತ್ಯ ವಸ್ತುಗಳ ವಿತರಣೆಗೆ ಸರಾಸರಿ 5-7 ದಿನಗಳಾಗುತ್ತಿದೆ. ಇದಕ್ಕೆ ಹೋಲಿಸಿದರೆ ಜಿಯೋ ಕಡಿಮೆ ಅವಧಿಯಲ್ಲಿ ವಿತರಣೆಯನ್ನು ಮಾಡುತ್ತಿದೆ.

ಅಗತ್ಯ ವಸ್ತುಗಳ ಆಯ್ಕೆಯ ವಿಷಯದಲ್ಲಿ ಹೆಚ್ಚಿನ ಪ್ಲ್ಯಾಟ್‌ ಫಾರ್ಮ್‌ಗಳು ಆಯ್ದ ಶ್ರೇಣಿಯ ಪ್ಯಾಕೇಜ್ಡ್ ಉತ್ಪನ್ನಗಳನ್ನು ಮಾತ್ರವೇ ನೀಡುತ್ತಿವೆ ಮತ್ತು ಸೀಮಿತ ಆಯ್ಕೆಯನ್ನು ಹೊಂದಿವೆ. ಇಲ್ಲವೇ ಯಾವುದೇ ಹಣ್ಣುಗಳು ಮತ್ತು ತರಕಾರಿಗಳನ್ನು (ಎಫ್ & ವಿ) ಮಾರಾಟ ಮಾಡುತ್ತಿಲ್ಲ. ಹಾಗೆ ನೋಡುವುದಾದರೆ ಫ್ಲಿಪ್‌ಕಾರ್ಟ್‌ನಲ್ಲಿ ಯಾವುದೇ ಹಣ್ಣುಗಳು ಮತ್ತು ತರಕಾರಿಗಳ ಆಯ್ಕೆಗಳಿಲ್ಲ. ಅಮೆಜಾನ್ ಪ್ಯಾಂಟ್ರಿ ದೊಡ್ಡ ಪಟ್ಟಣಗಳಲ್ಲಿ ಮಾತ್ರವೇ ಸೀಮಿತ ಹಣ್ಣುಗಳು ಮತ್ತು ತರಕಾರಿ ಆಯ್ಕೆಗಳನ್ನು ಹೊಂದಿದೆ ಮತ್ತು ಸಣ್ಣ ಪಟ್ಟಣಗಳಲ್ಲಿ ಕನಿಷ್ಠ ಆಯ್ಕೆಯನ್ನು (ಈರುಳ್ಳಿ ಮತ್ತು ಆಲೂಗಡ್ಡೆ) ಮಾತ್ರವೇ ಹೊಂದಿದೆ.

ಅದೇ ಜಿಯೋ ಮಾರ್ಟ್‌ನಲ್ಲಿ  ಸಣ್ಣ ಪಟ್ಟಣಗಳಲ್ಲಿ ವಿತರಣೆಗಾಗಿ ಪಟ್ಟಿ ಮಾಡಲಾದ ಉತ್ಪನ್ನಗಳ ಲಭ್ಯತೆಯು ಇತರ ಪ್ಲ್ಯಾಟ್‌ಫಾರ್ಮ್‌ಗಳಿಗಿಂತ ಹೆಚ್ಚಾಗಿದೆ. ಬೆಲೆಯೂ ಸ್ಪರ್ಧಾತ್ಮಕವಾಗಿದೆ. ಒಟ್ಟಾರೆ ವ್ಯಾಪ್ತಿಗೆ ಸಂಬಂಧಿಸಿದಂತೆ ಜಿಯೋಮಾರ್ಟ್ ದೇಶಾದ್ಯಂತ ಸುಮಾರು 200 ಸ್ಥಳಗಳಲ್ಲಿ ವಿತರಣೆಯನ್ನು ಮಾಡುತ್ತಿದೆ. ಅಮೆಜಾನ್ ಪ್ಯಾಂಟ್ರಿ ಕೆಲವು ನಗರಗಳು ಮತ್ತು ಪಟ್ಟಣಗಳಲ್ಲಿ ಮಾತ್ರ ಸೇವೆ ನೀಡುತ್ತಿದೆ, ಪ್ರಸ್ತುತ ಸುಮಾರು 100 ನಗರಗಳಿಗೆ ಸೀಮಿತವಾಗಿದೆ. ಕೆಲವು ನಗರಗಳಲ್ಲಿ ಅಮೆಜಾನ್‌ನಲ್ಲಿ ಥರ್ಡ್‌ ಪಾರ್ಟಿ ಮಾರಾಟಗಾರರು ಆಯ್ದ ಅಗತ್ಯ / ದಿನಸಿ ವಸ್ತುಗಳನ್ನು ಪೂರೈಸುತ್ತಿದ್ದಾರೆ.

ಎಂಆರ್‌ಪಿ ಮೇಲೆ ಕನಿಷ್ಠ 5 % ರಷ್ಟು ಕಡಿತ
reliance jio mart products service available at various Town In Karnataka

ಇದೇ ಮಾದರಿಯಲ್ಲಿ ಸುಮಾರು 30 ನಗರಗಳಲ್ಲಿ ಬಿಗ್‌ ಬಾಸ್ಕೆಟ್ ಲಭ್ಯವಿದೆ. ವಿಶಾಲ್ ಮೆಗಾ ಮಾರ್ಟ್ ಮಳಿಗೆಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಮೂಲಕ ಫ್ಲಿಪ್‌ ಕಾರ್ಟ್‌ ತನ್ನ ಆಯ್ದ 26 ನಗರಗಳಲ್ಲಿ ತನ್ನ ಫ್ಲಿಪ್ಕಾರ್ಟ್ ಸೂಪರ್‌ ಮಾರ್ಟ್‌ ಸೇವೆಯನ್ನು ನೀಡುತ್ತಿದೆ. ಇನ್ನು ಜಿಯೋಮಾರ್ಟ್ ಗ್ರಾಹಕರಿಗೆ ಉತ್ತಮ ಬೆಲೆಗೆ ಅಗತ್ಯ ವಸ್ತುಗಳನ್ನು ನೀಡುತ್ತಿದೆ ಮತ್ತು ಪ್ಯಾಕೇಜ್ ಮಾಡಿದ ಉತ್ಪನ್ನಗಳಲ್ಲಿ ಎಂಆರ್‌ಪಿ ಮೇಲೆ ಕನಿಷ್ಠ 5 % ರಷ್ಟು ಕಡಿತವನ್ನು ಮಾಡುತ್ತಿದೆ.

ಜಿಯೋಮಾರ್ಟ್‌ ಬೆಲೆ
reliance jio mart products service available at various Town In Karnataka

ಜಿಯೋಮಾರ್ಟ್‌ನಲ್ಲಿ ಹೆಚ್ಚು ಸ್ಪರ್ಧಾತ್ಮಕ ಬೆಲೆ ಇದೆ. ಹಾಗಾಗಿ ಜಿಯೋಮಾರ್ಟ್‌ಗೆ ಹೋಲಿಸಿದರೆ ಸಾಮಾನ್ಯವಾಗಿ ವಿಶೇಷವಾಗಿ ಸಣ್ಣ ಪಟ್ಟಣಗಳಲ್ಲಿ ಅಗತ್ಯ ವಸ್ತುಗಳ ಬೆಲೆ ಇತರ ಪ್ಲ್ಯಾಟ್‌ಫಾರ್ಮ್‌ಗಳಲ್ಲಿ ಹೆಚ್ಚಾಗಿದೆ. ಉದಾಹರಣೆಗೆ ನೋಡುವುದಾದರೆ ಸೋಮವಾರ ಸಂಜೆ ಮುಂಬೈನಲ್ಲಿ ರೆಡ್ ಲೇಬಲ್ ಟೀ 1 ಕೆಜಿ ಪ್ಯಾಕೆಟ್ ಡಿಮಾರ್ಟ್‌ನಲ್ಲಿ 423 ರೂ, ಬಿಗ್‌ಬಾಸ್ಕೆಟ್‌ನಲ್ಲಿ 450 ರೂ, ಅಮೆಜಾನ್‌ನಲ್ಲಿ 410 ರೂ ಗಳಾದರೆ ಜಿಯೋಮಾರ್ಟ್‌ನಲ್ಲಿ ಕೇವಲ 408 ರೂಪಾಯಿಗಳಿಗೆ ಲಭ್ಯವಿದೆ.

ಇದೇ ಮಾದರಿಯಲ್ಲಿ ಸಫೊಲಾ ಗೋಲ್ಡ್ 1 ಲೀಟರ್‌ಗೆ ಡಿಮಾರ್ಟ್‌ನಲ್ಲಿ 135 ರೂ., ಬಿಗ್‌ಬಾಸ್ಕೆಟ್‌ನಲ್ಲಿ 149 ರೂ., ಅಮೆಜಾನ್‌ನಲ್ಲಿ 137  ರೂಗಳಾದರೆ ಜಿಯೋಮಾರ್ಟ್‌ನಲ್ಲಿ 132 ರೂ ಮಾತ್ರ.

ಪಾರ್ಲೆ ಜಿ 800 ಗ್ರಾಂ ಡಿಮಾರ್ಟ್‌ನಲ್ಲಿ 65 ರೂ., ಬಿಗ್‌ಬಾಸ್ಕೆಟ್‌ನಲ್ಲಿ 70 ರೂ., ಅಮೆಜಾನ್‌ನಲ್ಲಿ 68 ರೂ. ಗೆ ದೊರೆಯುತ್ತಿದ್ದರೆ, ಜಿಯೋಮಾರ್ಟ್‌ನಲ್ಲಿ ಕೇವಲ 63 ರೂಗಳಿಗೆ ಸಿಗುತ್ತಿದೆ.

ಆಲೂಗಡ್ಡೆ ಡಿಮಾರ್ಟ್‌ನಿಂದ 36 ರೂ,ಗೆ, ಬಿಗ್‌ಬಾಸ್ಕೆಟ್‌ನಲ್ಲಿ 39 ರೂ,ಗೆ ಮತ್ತು ಅಮೆಜಾನ್‌ನಿಂದ 39 ರೂಪಾಯಿಗಳಿಗೆ ಮಾರಾಟವಾದರೆ ಜಿಯೋಮಾರ್ಟ್‌ನಿಂದ 32 ರೂ.ಕ್ಕೆ ಮಾರಾಟವಾಗುತ್ತಿದೆ.

Latest Videos
Follow Us:
Download App:
  • android
  • ios