ಮುಂಬೈ(ಮೇ.25): ಮನೆಮನೆಗೆ ದಿನಸಿ ವಸ್ತುಗಳನ್ನು ಪೂರೈಸುವ ವೇದಿಕೆಯಾದ ಜಿಯೋಮಾರ್ಟ್‌ ಅನ್ನು ರಿಲಯನ್ಸ್‌ ಸಂಸ್ಥೆ ಇದೀಗ ದೇಶವ್ಯಾಪಿ ವಿಸ್ತರಿಸಿದೆ.

ಕಳೆದೊಂದು ವರ್ಷದಿಂದ ಮುಂಬೈನ ಆಯ್ದ ಭಾಗಗಳಲ್ಲಿ ಪ್ರಾಯೋಗಿಕವಾಗಿ ನಡೆಯುತ್ತಿದ್ದ ಸೇವೆಯನ್ನು ಇದೀಗ ದೇಶದ ಬಹುತೇಕ ಪ್ರಮುಖ ನಗರಗಳಿಗೆ ವಿಸ್ತರಿಸಲಾಗಿದೆ. ಕರ್ನಾಟಕದಲ್ಲಿ ಬೆಂಗಳೂರಿನಲ್ಲೂ ಈ ಸೇವೆ ಲಭ್ಯವಿರಲಿದೆ.

ಆನ್‌ಲೈನ್‌ ಮಾರಾಟ ಕ್ಷೇತ್ರಕ್ಕೆ ರಿಲಯನ್ಸ್‌ ಜಿಯೋ ಮಾರ್ಟ್‌ ಲಗ್ಗೆ!

ಆನ್‌ಲೈನ್‌ ಕ್ಷೇತ್ರಕ್ಕೆ ಜಿಯೋಮಾರ್ಟ್‌ ಪ್ರವೇಶದಿಂದಾಗಿ ಈ ವಲಯದಲ್ಲಿ ಈಗಾಗಲೇ ಬೇರುಬಿಟ್ಟಿದ್ದ ಫ್ಲಿಪ್‌ಕಾರ್ಟ್‌ ಮತ್ತು ಅಮೆಜಾನ್‌ ಸೇರಿದಂತೆ ಹಲವು ದೊಡ್ಡ ಮತ್ತು ಸಣ್ಣ ಕಂಪನಿಗಳು ತೀವ್ರ ಸ್ಪರ್ಧೆ ಎದುರಿಸಬೇಕಾಗಿ ಬರಲಿದೆ.

ಅಧಿಕೃತ ಜಿಯೋಮಾರ್ಟ್‌ ವೆಬ್‌ಸೈಟ್‌ಗೆ ಭೇಟಿ ಅಲ್ಲಿ ಸೈನ್‌ ಅಪ್‌ ಬಟನ್‌ ಕ್ಲಿಕ್ಕಿಸಿ, ಮೊಬೈಲ್‌ ಸಂಖ್ಯೆ ನಮೂದಿಸಬೇಕು. ಆ ನಂತರ ಮೊಬೈಲ್‌ಗೆ ಬರುವ ಒಟಿಪಿ ನಮೂದಿಸಬೇಕು. ಬಳಿಕ ಗ್ರಾಹಕರು ತಮಗೆ ಬೇಕಾದ ವಸ್ತುಗಳನ್ನು ವೀಕ್ಷಿಸಿ ಖರೀದಿಸಬಹುದು.