ಭಾರತದಲ್ಲಿ ಸ್ಯಾಟ್‌ಲೈಟ್ ಇಂಟರ್‌ನೆಟ್ ಸ್ಥಾಪನೆಗೆ ಅನುಮತಿ ಪಡೆದ ಜಿಯೋ

ಅಮೇಜಾನ್, ಎಲಾನ್ ಮಸ್ಕ್ ದೈತ್ಯ ಕಂಪನಿಗಳನ್ನು ಹಿಂದಿಕ್ಕಿ ಭಾರತದಲ್ಲಿ ಸ್ಯಾಟ್‌ಲೈಟ್ ಇಂಟರ್‌ನೆಟ್ ಸ್ಥಾಪನೆಯ ಅನುಮತಿ ಪಡೆದ ಜಿಯೋ

Reliance Industries Jio Platforms gets approval to launch satellite internet in India mrq

ನವದೆಹಲಿ: ರಿಲಯನ್ಸ್ ಇಂಡಸ್ಟ್ರಿಯ ಜಿಯೋ ಪ್ಲಾಟ್‌ಫಾರಂ (Reliance Industries' Jio Platforms) ಲಕ್ಸಂಬರ್ಗ್‌ನ ಎಸ್‌ಇಎಸ್ (Luxembourg's SES) ಪಾಲುದಾರಿಕೆಯ ಭಾಗಿತ್ವದಲ್ಲಿ ಹೈಸ್ಪೀಡ್ ಇಂಟರ್‌ನೆಟ್‌ಗಾಗಿ ಸ್ಯಾಟ್‌ಲೈಟ್‌ ನಿರ್ವಹಣೆಯ ಅನುಮತಿಯನ್ನು ಭಾರತೀಯ ಬಾಹ್ಯಾಕಾಶ ಸಂಸ್ಥೆಯಿಂದ ಪಡೆದುಕೊಂಡಿದೆ ಎಂದು ರಾಯಟರ್ಸ್ ವರದಿ ಮಾಡಿದೆ. ಆರ್ಬಿಟ್ ಕನೆಕ್ಟ್ ಇಂಡಿಯಾಗೆ ಮೂರು ಅನುಮೋದನೆಗಳನ್ನು ನೀಡಲಾಗಿದ್ದು, ಇದು ಉಪಗ್ರಹದ ಮೂಲಕ ಇಂಟರ್ನೆಟ್ ಸಂಪರ್ಕ ಸಾಧಿಸುವ ಪ್ರಯತ್ನ ಇದಾಗಿದೆ. 

ಭಾರತೀಯ ರಾಷ್ಟ್ರೀಯ ಬಾಹ್ಯಾಕಾಶ ಪ್ರಚಾರ ಮತ್ತು ಅಧಿಕಾರ ಕೇಂದ್ರದಿಂದ (IN-SPAce) ಏಪ್ರಿಲ್, ಜೂನ್‌ನಲ್ಲಿ ಅನುಮತಿ ನೀಡಲಾಗಿದೆ. ಆರ್ಬಿಟ್‌ ಕನೆಕ್ಟ್‌ಗೆ ಭಾರತ ಭೂಭಾಗದ ಮೇಲಿರುವ ಉಪಗ್ರಹಗಳನ್ನ ಇರಿಸಲು ಅನುಕೂಲ ಮಾಡಿಕೊಡುತ್ತದೆ. ಈ ನಿರ್ವಹಣೆ ಮತ್ತು ಸೇವೆಯನ್ನು ಪ್ರಾರಂಭಿಸುವ ಮೊದಲು ದೂರಸಂಪರ್ಕ ಇಲಾಖೆಯಿಂದ ಹಲವು ಅನುಮತಿಗಳು ಬೇಕಿದೆ ಎಂದು ವರದಿಯಾಗಿದೆ.

ಸ್ಯಾಟ್‌ಲೈಟ್‌ ಕಮ್ಯುನಿಕೇಷನ್ ಸರ್ವಿಸ್ ಅನುಮತಿ ಪಡೆಯಲು ಅಮೇಜಾನ್, ಎಲಾನ್ ಮಸ್ಕ್ ಒಡೆತನದ ಸ್ಟಾರ್‌ಲಿಂಕ್‌ನಂತಹ ದೈತ್ಯ ಕಂಪನಿಗಳು ಪ್ರಯತ್ನಿಸಿದ್ದವು. ಅಂತಿಮವಾಗಿ ಜಿಯೋಗೆ ಅನುಮತಿ ಸಿಕ್ಕಿದೆ. ರಾಯಟರ್ಸ್‌ ಜೊತೆ ಮಾತನಾಡಿರುವ ಇನ್‌-ಸ್ಪೇಸ್‌ನ (IN-SPACe) ಚೇರ್‌ಮ್ಯಾನ್ ಪವನ್ ಗೋಯೆಂಕ್, ಸ್ಯಾಟ್‌ಲೈಟ್ ಬ್ರಾಡ್‌ಬ್ಯಾಂಡ್ ಮಾರುಕಟ್ಟೆ ವೇಗವಾಗಿ ಅಭಿವೃದ್ಧಿ ಹೊಂದುತ್ತಿದ್ದು, ಇನ್‌ಮಾರ್‌ಸ್ಯಾಟ್ ಹಾಗೂ ಇತರ ಉಪಗ್ರಹಗಳ ನಿರ್ವಹಣೆಯ ಅನುಮತಿಯನ್ನು ಸ್ವೀಕರಿಸಲಾಗಿದೆ. 

ಅಬ್ಬಬ್ಬಾ..ರಿಲಯನ್ಸ್ ಜಿಯೋ ನಿರ್ದೇಶಕಿ ಇಶಾ ಅಂಬಾನಿ, ಮಂತ್ಲೀ ಸ್ಯಾಲರಿ ಇಷ್ಟೊಂದಾ?

ವೇಗವಾಗಿ ಬೆಳವಣಿಗೆ ಆಗುತ್ತಿರೋ Deloitte

ಸ್ಯಾಟ್‌ಲೈಟ್ ಬ್ರಾಡ್‌ಬ್ಯಾಂಡ್ ಮಾರುಕಟ್ಟೆಯಲ್ಲಿ ಡಿಲೌಟ್ಟೆ (Deloitte) ಅತಿ ವೇಗವಾಗಿ ಬೆಳವಣಿಗೆಯಾಗುತ್ತಿದೆ. ಮುಂದಿನ ಐದು ವರ್ಷದಲ್ಲಿ ಶೇ.36ರಷ್ಟು ವಾರ್ಷಿಕ ಆದಾಯ ಹೆಚ್ಚಳವಾಗಲಿದೆ ಎಂದು ಅಂದಾಜಿಸಲಾಗಿದೆ. 2030ರ ವೇಳೆಗೆ ಡಿಲೌಟ್ಟೆ ಆದಾಯ 1.9 ಶತಕೋಟಿ ರೂಪಾಯಿ ತಲುಪುವ ನಿರೀಕ್ಷೆಗಳಿವೆ. ಉಪಗ್ರಹಗಳ ಮೂಲಕ ಇಂಟರ್‌ನೆಟ್ ಸ್ಥಾಪಿಸುವ ಮೂಲಕ ಗ್ರಾಮೀಣ ಪ್ರದೇಶಗಳನ್ನು ಸಂಪರ್ಕಿಸುವ ವೇಗ ಹೆಚ್ಚಲಿದೆ ಎಂದು ನಿರೀಕ್ಷಿಸಲಾಗಿದೆ. ಅಮೇಜಾನ್‌ನ ಕೈಪರ್ ಈ ಯೋಜನೆಯಲ್ಲಿ 10 ಬಿಲಿಯನ್ ಡಾಲರ್ ಕೋಟಿ ಹೂಡಿಕೆ ಮಾಡಿದೆ. ಅಮೇಜಾನ್ ಮತ್ತು ಸ್ಪೇಸ್‌ಎಕ್ಸ್ ನ ಸ್ಟಾರ್ ಲಿಂಕ್ ಈ ವಲಯದ ಪ್ರಮುಖ ಸ್ಪರ್ಧಿಗಳಾಗಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ಸ್ಟಾರ್‌ಲಿಂಕ್ ತನ್ನ ಸೇವೆಗಳನ್ನು ನೀಡಲು ಶ್ರೀಲಂಕಾದಿಂದ ಪ್ರಾಥಮಿಕ ಅನುಮೋದನೆಯನ್ನು ಸಹ ಪಡೆದುಕೊಂಡಿದೆ.

ಭಾರತದಲ್ಲಿ ಉಪಗ್ರಹ ನಿರ್ವಹಣೆಯ ಅಧಿಕಾರನ್ನು ಖಾಸಗಿ ಕಂಪನಿಗಳಿಗೆ ನೀಡಲು ಇನ್‌-ಸ್ಪೇಸ್‌ ಮುಂದಾಗಿದೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ವಿದೇಶಿ ನೇರ ಹೂಡಿಕೆಗೆ ಮುಕ್ತಗೊಳಿಸುವುದು ಸೇರಿದಂತೆ ಸರ್ಕಾರ ಹಲವು ಬದಲಾವಣೆಗಳನ್ನು ತಂದಿದೆ. 

ಡೇಟಾ ಬಳಕೆಯಲ್ಲಿ ಚೀನಾ ಹಿಂದಿಕ್ಕಿದ ಜಿಯೋ, ವಿಶ್ವದ ಅತೀ ದೊಡ್ಡ ಆಪರೇಟರ್ ಕಿರೀಟ!

ಭಾರತದ ಎಂಟ್ರಿ

ಉಪಗ್ರಹದ ಮೂಲಕ ಇಂಟರ್‌ನೆಟ್ ಸ್ಥಾಪಿಸುವ ಉದ್ಯಮದಲ್ಲಿ ಭಾರತ ಪ್ರವೇಶ ಮಾಡಿದ್ದು, ಪ್ರಮುಖ ಕಂಪನಿಗಳಿಗೆ ತೀವ್ರ ಸ್ಪರ್ಧೆ ನೀಡುತ್ತದೆ. ದೇಶದ ವಾಹನ ಉದ್ಯಮದಲ್ಲಿ ಏರಿಕೆ ಕಂಡಂತೆ ಇದು ಸಹ ಅಭಿವೃದ್ಧಿ ಆಗಬೇಕಿದೆ. ಕಳೆದ ವರ್ಷಕ್ಕಿಂತ ಈ ಬಾರಿ ಹೂಡಿಕೆ ಮೊತ್ತ ಏರಿಕೆಯಾಗಿದೆ. ಕಳೆದ ವರ್ಷ ಖಾಸಗಿ ಕಂಪನಿಗಳಿಂದ 2 ರಿಂದ 7 ಮಿಲಿಯನ್ ಡಾಲರ್‌ವರೆಗೆ ಹೂಡಿಕೆ ಆಗಿತ್ತು. ಈ ವರ್ಷ 20 ರಿಂದ 30 ಮಿಲಿಯನ್ ಹೂಡಿಕೆಯಾಗುವ ಸಾಧ್ಯತೆಗಳಿವೆ ಎಂದು ಗೋಯೆಂಕಾ ಹೇಳಿದ್ದಾರೆ.

Latest Videos
Follow Us:
Download App:
  • android
  • ios