Asianet Suvarna News Asianet Suvarna News

ಬಯಲಾಯ್ತು ಅಂಬಾನಿ ಬಂಡವಾಳ: ಅಂಬಾರಿ ಮೇಲೆ ಕುಳಿತೇ ಆಡಿಸ್ತಾರೆ ದಾಳ!

ಮುಖೇಶ್ ಅಂಬಾನಿ 'ಬಂಡವಾಳ' ಬಯಲು ಮಾಡಿದ ಷೇರು ಮಾರುಕಟ್ಟೆ| 9 ಲಕ್ಷ ಕೋಟಿ ರೂ. ತಲುಪಿದ ರಿಲಯನ್ಸ್ ಇಂಡಸ್ಟ್ರೀಸ್ ಮಾರುಕಟ್ಟೆ ಮೌಲ್ಯ| ಗರಿಷ್ಠ ಮೌಲ್ಯ ತಲುಪಿದ ಮೊದಲ ಭಾರತೀಯ ಕಂಪನಿ ಎಂಬ ಹೆಗ್ಗಳಿಕೆ| ಮುಂಬೈ ಷೇರು ಮಾರುಕಟ್ಟೆಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಷೇರು ಏರುಗತಿಯಲ್ಲಿ| ಮಾರುಕಟ್ಟೆಯಲ್ಲಿ ಬಂಡವಾಳ ಹೂಡಿಕೆ ಮೌಲ್ಯಮಾಪನ ಆಧಾರ|

Reliance Industries Cross 9 Lakh Crore Market Valuation
Author
Bengaluru, First Published Oct 18, 2019, 2:35 PM IST

ನವದೆಹಲಿ(ಅ.18): ತನ್ನ ವ್ಯಾವಹಾರಿಕ ಕ್ಷಮತೆಯಿಂದಲೇ ವಿಶ್ವದ ಮನೆ ಮಾತಾಗಿರುವ ರಿಲಯನ್ಸ್ ಇಂಡಸ್ಟ್ರೀಸ್, ವ್ಯಾಪಾರ ಕ್ಷೇತ್ರದಲ್ಲಿ ದಿನಕ್ಕೊಂದು ಮೈಲುಗಲ್ಲು ಸಾಧಿಸುತ್ತಾ ಮುನ್ನಡೆದಿದೆ.

12ನೇ ಬಾರಿಗೆ ಅಂಬಾನಿ ಸಿರಿವಂತ ನಂ.1, ಟಾಪ್‌ 100ರಲ್ಲಿ 7 ಕನ್ನಡಿಗರು!

ರಿಲಯನ್ಸ್ ಇಂಡಸ್ಟ್ರೀಸ್ ಮಾರುಕಟ್ಟೆ ಮೌಲ್ಯ ಬರೋಬ್ಬರಿ 9 ಲಕ್ಷ ಕೋಟಿ ರೂ. ಗಡಿ ದಾಟಿದ್ದು, ಗರಿಷ್ಠ ಮೌಲ್ಯ ತಲುಪಿದ ಮೊದಲ ಭಾರತೀಯ ಕಂಪನಿ ಎಂಬ ಹೆಗ್ಗಳಿಕೆಗೆ ಭಾಜನವಾಗಿದೆ.

ಜಿಯೋ ಫೈಬರ್: ಅಂಬಾನಿಯಿಂದ ನಿಮಗೆಲ್ಲಾ ಸೂಪರ್ ಆಫರ್!

ಮುಂಬೈ ಷೇರು ಮಾರುಕಟ್ಟೆಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಷೇರು ಬೆಲೆ ನಿರಂತರವಾಗಿ ಏರುತ್ತಲೇ ಇದೆ. ಕಂಪನಿಯ ಮಾರುಕಟ್ಟೆ ಬಂಡವಾಳದ ಮೌಲ್ಯ ಈಗಾಗಲೇ 9 ಲಕ್ಷ ಕೋಟಿ ರೂ.ಗೂ ಅಧಿಕವಾಗಿದೆ.

 3.80 ಲಕ್ಷ ಕೋಟಿ ಆಸ್ತಿ: ಮುಕೇಶ್‌ ಭಾರತದ ನಂ.1 ಶ್ರೀಮಂತ!

ಮಾರುಕಟ್ಟೆಯಲ್ಲಿ ಬಂಡವಾಳ ಹೂಡಿಕೆ ಮೌಲ್ಯಮಾಪನ ಆಧಾರದಲ್ಲಿ ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ದೇಶೀಯ ಕಂಪೆನಿಗಳ ಪೈಕಿ ರಿಲಯನ್ಸ್ ಇಂಡಸ್ಟ್ರೀಸ್ 8 ಲಕ್ಷ ಕೋಟಿ ರೂ. ಗಡಿ ದಾಟಿತ್ತು.

ವಿಶ್ವದ ಪ್ರಭಾವಿ ಸಿಇಒಗಳಲ್ಲಿ ಅಂಬಾನಿ, ಶಶಿಶಂಕರ್‌ ಸೇರಿ 10 ಭಾರತೀಯರು!

ಷೇರು ಮಾರುಕಟ್ಟೆಯಲ್ಲಿ ಕಂಪೆನಿಯ ಷೇರುಗಳ ಕೊಡು-ಕೊಳ್ಳುವಿಕೆ ಆಧಾರದ ಮೇಲೆ ಬಂಡವಾಳ ಮೌಲ್ಯವನ್ನು ನಿರ್ಧರಿಸಲಾಗುತ್ತದೆ. ಅದರಂತೆ ವರ್ಷ ವರ್ಷವೂ ರಿಲಯನ್ಸ್ ಇಂಡಸ್ಟ್ರೀಸ್ ತನ್ನ ಮಾರುಕಟ್ಟೆ ಮೌಲ್ಯವನ್ನು ವೃದ್ಧಿಸಿಕೊಳ್ಳುತ್ತಿದ್ದು, ಒಂದೇ ವರ್ಷದಲ್ಲಿ 1 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ.

Follow Us:
Download App:
  • android
  • ios