12ನೇ ಬಾರಿಗೆ ಅಂಬಾನಿ ಸಿರಿವಂತ ನಂ.1, ಟಾಪ್ 100ರಲ್ಲಿ 7 ಕನ್ನಡಿಗರು!
ಸತತ 12ನೇ ಬಾರಿಗೆ ಮುಕೇಶ್ ಅಂಬಾನಿ ಸಿರಿವಂತ ನಂ.1| ಫೋರ್ಬ್ಸ್ ಇಂಡಿಯಾ ಶ್ರೀಮಂತರ ಪಟ್ಟಿ ಪ್ರಕಟ| ಅಂಬಾನಿ ಆಸ್ತಿ 3.7 ಲಕ್ಷ ಕೋಟಿ ರು.| ಅದಾನಿ ನಂ.2, ಹಿಂದೂಜಾ ನಂ.3
ನವದೆಹಲಿ[ಅ.12]: ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಸತತ 12ನೇ ಬಾರಿಗೂ ಫೋಬ್ಸ್‌ರ್ ಭಾರತೀಯ ಶ್ರೀಮಂತರ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ. 3.7 ಲಕ್ಷ ಕೋಟಿ ರು. ಮೌಲ್ಯದ ಆಸ್ತಿಯೊಂದಿಗೆ ಅವರು ಅಗ್ರಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
ರಿಲಯನ್ಸ್‌ನದ್ದೇ ಆದ ಜಿಯೋ ಕಂಪನಿಯು ದೂರಸಂಪರ್ಕ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದ ಕಾರಣ ಅವರ ಆಸ್ತಿ ಮೌಲ್ಯ 51.4 ಶತಕೋಟಿ ಡಾಲರ್‌ಗೆ (3.7 ಲಕ್ಷ ಕೋಟಿ ರು.ಗೆ) ಏರಿದ್ದು, ಜಿಯೋ ಒಂದರಿಂದಲೇ 4.1 ಶತಕೋಟಿ ಡಾಲರ್(29 ಸಾವಿರ ಕೋಟಿ ರು.) ಮೌಲ್ಯವು ಅವರ ಆಸ್ತಿಗೆ ಸೇರ್ಪಡೆಯಾಗಿದೆ.
ಇನ್ನು ಕಳೆದ ಸಲ 8ನೇ ಸ್ಥಾನದಲ್ಲಿದ್ದ ಅದಾನಿ ಸಮೂಹದ ಗೌತಮ್ ಅದಾನಿ ಈ ಸಲ 15.7 ಶತಕೋಟಿ ಡಾಲರ್(1.11 ಲಕ್ಷ ಕೋಟಿ ರು) ಆಸ್ತಿಯೊಂದಿಗೆ 2ನೇ ಸ್ಥಾನಕ್ಕೇರಿದ್ದಾರೆ. 3ನೇ ಸ್ಥಾನದಲ್ಲಿ ಹಿಂದೂಜಾ ಸೋದರರು (1.1 ಲಕ್ಷ ಕೋಟಿ ರು.), 4ರಲ್ಲಿ ಪಲ್ಲೋನ್‌ಜಿ ಮಿಸ್ತ್ರಿ 15 ಶತಕೋಟಿ ಡಾಲರ್ (1 ಲಕ್ಷ ಕೋಟಿ ರು.) ಹಾಗೂ 5ರಲ್ಲಿ ಉದಯ್ ಕೋಟಕ್ 14.8 ಶತಕೋಟಿ ಡಾಲರ್(1 ಲಕ್ಷ ಕೋಟಿ ರು.) ಇದ್ದಾರೆ.
ಟಾಪ್ 100ರಲ್ಲಿ 7 ಕನ್ನಡಿಗರು
ಫೋಬ್ಸ್‌ರ್ ಟಾಪ್-100 ಭಾರತೀಯ ಸಿರಿವಂತರ ಪಟ್ಟಿಯಲ್ಲಿ 7 ಮಂದಿ ಕನ್ನಡಿಗರಿದ್ದಾರೆ. ಬೆಂಗಳೂರು ಮೂಲದ ಉದ್ಯಮಿ, ವಿಪ್ರೋದ ಅಜೀಂ ಪ್ರೇಂಜಿ 17ನೇ ಸ್ಥಾನ 7.2 (51 ಸಾವಿರ ಕೋಟಿ ರು.), ದಕ್ಷಿಣ ಕನ್ನಡ ಮೂಲದವರಾದ ದುಬೈ ಉದ್ಯಮಿ ಬಿ.ಆರ್. ಶೆಟ್ಟಿ42ನೇ ಸ್ಥಾನ (22 ಸಾವಿರ ಕೋಟಿ ರು.), ಇಸ್ಫೋಸಿಸ್‌ನ ಎನ್.ಆರ್. ನಾರಾಯಣಮೂರ್ತಿ 51ನೇ ಸ್ಥಾನ (17 ಸಾವಿರ ಕೋಟಿ ರು.), ಬಯೋಕಾನ್‌ನ ಕಿರಣ್ ಮಜುಂದಾರ್ ಶಾ 54ನೇ ಸ್ಥಾನ (16 ಸಾವಿರ ಕೋಟಿ ರು.), ಇಸ್ಫೋಸಿಸ್‌ನ ನಂದನ್ ನಿಲೇಕಣಿ 78ನೇ ಸ್ಥಾನ (8400 ಕೋಟಿ ರು.), ಮಣಿಪಾಲ ಸಮೂಹದ ರಂಜನ್ ಪೈ 92ನೇ ಸ್ಥಾನ (11 ಸಾವಿರ ಕೋಟಿ ರು.), ಇಸ್ಫೋಸಿಸ್‌ನ ಶಿಬುಲಾಲ್ 100ನೇ ಸ್ಥಾನ (9 ಸಾವಿರ ಕೋಟಿ ರು.) ಆಸ್ತಿ ಹೊಂದಿದ್ದು, ಟಾಪ್ 100ರಲ್ಲಿ ಸ್ಥಾನ ಪಡೆದಿದ್ದಾರೆ.