ರಫೆಲ್ ಒಪ್ಪಂದ: ಡಸಾಲ್ಟ್ ಕಂಪನಿ ಸಿಇಒ ಸ್ಪಷ್ಟನೆ ಇದು!

First Published 12, Oct 2018, 6:23 PM IST
Reliance Has 10% Offset In Rafale says Dassault CEO
Highlights

ರಫೆಲ್ ಒಪ್ಪಂದಕ್ಕೆ ಸಂಬಂಧಿಸಿದಂತೆ ಡಸಾಲ್ಟ್ ಸಿಇಒ ಸ್ಪಷ್ಟನೆ! ಒಪ್ಪಂದದಲ್ಲಿ ರಿಲಯನ್ಸ್ ಕಂಪನಿಗೆ ಶೇ. 10 ರಷ್ಟು ಬಾಧ್ಯತೆ! 100 ಭಾರತೀಯ ಸಂಸ್ಥೆಗಳ ಜೊತೆ ಡಸಾಲ್ಟ್ ಮಾತುಕತೆ! ಡಸಾಲ್ಟ್ ಕಂಪನಿ ಸಿಇಒ ಎರಿಕ್‌ ಟ್ರಾಪ್ಪಿಯರ್ ಸ್ಪಷ್ಟನೆ

ನವದೆಹಲಿ(ಅ.12): ರಫೆಲ್‌ ಒಪ್ಪಂದದಲ್ಲಿ ರಿಲಯನ್ಸ್  ಕೇವಲ ಶೇ. 10 ರಷ್ಟು ಮಾತ್ರ ಬಾಧ್ಯತೆ ಹೊಂದಿದೆ ಎಂದು ಡಸಾಲ್ಟ್ ಕಂಪನಿ ಸ್ಪಷ್ಟಪಡಿಸಿದೆ. 

ಈ ಕುರಿತು ಮಾಹಿತಿ ನೀಡಿರುವ ಡಸಾಲ್ಟ್ ಕಂಪನಿ ಸಿಇಒ ಎರಿಕ್‌ ಟ್ರಾಪ್ಪಿಯರ್, ಶೇ.10 ರಷ್ಟು ಬಾಧ್ಯತೆಗಳನ್ನು ಪೂರೈಸಿಕೊಳ್ಳುವುದಕ್ಕಾಗಿ ನಾವು ರಿಲಯನ್ಸ್ ಜೊತೆ ಸೇರಿ ನಾಗ್ಪುರದಲ್ಲಿ ಜಂಟಿ ಕಾರ್ಖಾನೆ ಸ್ಥಾಪಿಸುತ್ತಿದ್ದೇವೆ. ಇದೇ ರೀತಿ, ನಾವು ಭಾರತದ ಸುಮಾರು 100 ಸಂಸ್ಥೆಗಳ ಜತೆ ಮಾತುಕತೆ ನಡೆಸುತ್ತಿದ್ದೇವೆ. ಈ ಪೈಕಿ, ಈಗಾಗಲೇ 30 ಕಂಪನಿಗಳ ಜತೆ ಒಪ್ಪಂದವಾಗಿದೆ ಎಂದು ತಿಳಿಸಿದ್ದಾರೆ.

'ಆಫ್‌ಸೆಟ್ಸ್‌ ಒಪ್ಪಂದಕ್ಕೆ ಸಹಿ ಹಾಕಿರುವುದು ಭಾರತದ ಕಾನೂನಿನಲ್ಲಿ ಇರುವ ಷರತ್ತು. ಆದರೆ, ಭಾರತದ ಕಾನೂನಿನ ಪ್ರಕಾರ ಪಾಲುದಾರರನ್ನು ಆಯ್ಕೆ ಮಾಡುವ ಅಧಿಕಾರ ನಮಗೇ ಇರುತ್ತದೆ' ಎಂದು ಎರಿಕ್ ತಿಳಿಸಿದ್ದಾರೆ.  ಸದ್ಯ ರಫೆಲ್ ಡೀಲ್ ವಿಚಾರವಾಗಿ ರಾಜಕೀಯ ವಿವಾದ ನಡೆಯುತ್ತಿದ್ದರೂ, ಭವಿಷ್ಯದ ಬಗ್ಗೆ ನಾವು ಆಶಾಭಾವನೆ ಹೊಂದಿದ್ದೇವೆ ಎಂದು ಅವರು ಭರವಸೆ ವ್ಯಕ್ತಪಡಿಸಿದ್ದಾರೆ.

ರಫೆಲ್ ಯುದ್ಧ ವಿಮಾನ ಖರೀದಿಗಾಗಿ ಭಾರತ ಫ್ರಾನ್ಸ್ ನೊಂದಿಗೆ ಮಾಡಿಕೊಂಡ ಒಪ್ಪಂದದ ಪ್ರಕಾರ ಫ್ರಾನ್ಸ್ ನ ಡಸಾಲ್ಟ್ ಏವಿಯೇಶನ್ ಕಂಪನಿಗೆ ಯುದ್ಧ ವಿಮಾನ ತಯಾರಿಕೆಯ ಹೊಣೆ ವಹಿಸಲಾಗಿತ್ತು. 

ಯುದ್ಧ ವಿಮಾನಗಳ ಬಿಡಿಭಾಗಗಳ ತಯಾರಿಕೆಗಾಗಿ ಭಾರತದ ಅನಿಲ್ ಅಂಬಾನಿ ಮಾಲೀಕತ್ವದ ರಿಲಯನ್ಸ್ ಡಿಫೆನ್ಸ್ ಕಂಪನಿಯನ್ನು ಪಾಲಿದಾರ ಕಂಪನಿಯನ್ನಾಗಿ ಡಸಾಲ್ಟ್ ಆರಿಸಿಕೊಂಡಿತ್ತು.

loader