ಮುಂಬೈ[ನ. 24]   ರಿಲಯನ್ಸ್ ಕಮ್ಯುನಿಕೇಷನ್ಸ್ ನಿರ್ದೇಶಕ  ಅನಿಲ್ ಅಂಬಾನಿ ಮತ್ತು ಇತರ ನಾಲ್ವರು ನಿರ್ದೇಶಕರ ರಾಜೀನಾಮೆಯನ್ನು ಕಂಪನಿಯ ಸಾಲದಾತರು ತಿರಸ್ಕರಿಸಿದ್ದು ಮುಂದದಿನ ಪ್ರಕ್ರಿಯೆಯಲ್ಲಿ ಅಂಬಾನಿ ಪಾಲ್ಗೊಳ್ಳಲೇಬೇಕಿದೆ.

ಕಾರ್ಪೊರೇಟ್ ದಿವಾಳಿತನ ಪರಿಹಾರ ಪ್ರಕ್ರಿಯೆಯಲ್ಲಿ ರಾಜೀನಾಮೆ ನೀಡಿದ್ದವರು ಸಹಕಾರ ನೀಡಬೇಕು ಎಂದು ಸಾಲದಾತರು ಮನವಿ ಮಾಡಿಕೊಂಡಿದ್ದಾರೆ.

ಎಲ್ಲ ಮುಗಿದ ಮೇಲೆ ರಾಜೀನಾಮೆ ಕೊಟ್ಟ ಅನಿಲ್ ಅಂಬಾನಿ

ಅಂಬಾನಿ ಮತ್ತು ನಾಲ್ಕು ನಿರ್ದೇಶಕರಾದ ಅನಿಲ್ ಅಂಬಾನಿ, ಛಾಯಾ ವಿರಾನಿ, ರ್‍ಯಾನಾ ಕರಾನಿ, ಮಂಜರಿ ಕಾಕೆರ್ ಮತ್ತು ಸುರೇಶ್ ರಂಗಾಚಾರ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು.

2019 ರ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ 30,142 ಕೋಟಿ ರೂ.ನಷ್ಟವನ್ನು ರಿಲಯನ್ಸ್ ಕಮ್ಯೂನಿಕೇಶನ್ ತೋರಿಸಿದೆ.