ಮುಂಬೈ(ನ.16): ಮಹತ್ವದ ಬೆಳವಣಿಗೆಯೊಂದರಲ್ಲಿ ರಿಲಯನ್ಸ್‌ ಕಮ್ಯುನಿಕೇಷನ್ಸ್ ಅಧ್ಯಕ್ಷ ಅನಿಲ್ ಅಂಬಾನಿ, ಕಂಪನಿಯ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

"

ಸೋದರ ಅನಿಲ್‌ರ ಆರ್‌ಕಾಂ ಮುಕೇಶ್‌ ಅಂಬಾನಿ ತೆಕ್ಕೆಗೆ?

ಅಲ್ಲದೇ ಛಾಯಾ ವಿರಾನಿ, ರ್‍ಯಾನಾ ಕರಾನಿ, ಮಂಜರಿ ಕಾಕೆರ್ ಮತ್ತು ಸುರೇಶ್ ರಂಗಾಚಾರ್ ಕೂಡ ಏಕಕಾಲದಲ್ಲಿ ಕಂಪನಿಯ ನಿರ್ದೇಶಕ ಹುದ್ದಗೆ ರಾಜೀನಾಮೆ ಸಲ್ಲಿಸಿದ್ದಾರೆ. 

ಕಳೆದ ಅಕ್ಟೋಬರ್ 4ರಂದು ವಿ. ಮಣಿಕಂಠನ್ ಕೂಡ  ಕಂಪನಿಯ ನಿರ್ದೇಶಕ ಹಾಗೂ ಮುಖ್ಯ ಹಣಕಾಸು ಅಧಿಕಾರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಸಾಲ ತೀರಿಸಲು ಮುಂಬೈನ ಕೇಂದ್ರ ಕಚೇರಿಯನ್ನೇ ಮಾರಲು ಅನಿಲ್‌ ಅಂಬಾನಿ ನಿರ್ಧಾರ?

ದಿವಾಳಿ ಪ್ರಕ್ರಿಯೆ ಎದುರಿಸುತ್ತಿರುವ ರಿಲಯನ್ಸ್ ಕಮ್ಯುನಿಕೇಷನ್ಸ್, ಕಳೆದ ಜುಲೈ-ಸೆಪ್ಟೆಂಬರ್ ಅವಧಿಯಲ್ಲಿ 30,142 ರೂ. ನಷ್ಟ ಅನುಭವಿಸಿದೆ.