ಮುಂಬೈ(ಫೆ.08): ಆರ್ಥಿಕ ದಿವಾಳಿತನದಿಂದ ಬಳಲಿ ಬೆಂಡಾಗಿರುವ ಅನಿಲ್ ಅಂಬಾನಿ ಅವರಿಗೆ ಸಹೋದರ ಮುಖೇಶ್ ಅಂಬಾನಿ ಸಹಾಯ ಮಾಡಲಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ.

ಆದರೆ ಕಿರಿಯ ಸಹೋದರ ಅನಿಲ್ ಅಂಬಾನಿ ಅವರ ಈ ಸಂಕಷ್ಟವೇ ಹಿರಿಯ ಸಹೋದರ ಮುಖೇಶ್ ಅಂಬಾನಿ ಅವರ ಪಾಲಿಗೆ ಭಾಗ್ಯದ ಬಾಗಿಲು ತೆರೆಯಲಿದೆ ಎಂಬುದು ಬಹುತೇಕರಿಗೆ ಗೊತ್ತಿಲ್ಲ.

ಹೌದು, ದಿವಾಳಿಯಾಗಿ ತಮ್ಮ ಸಂಸ್ಥೆಗೆ ಸೇರಿದ ಎಲ್ಲಾ ಆಸ್ತಿಯನ್ನು ಮಾರಬೇಕಾದ ಪರಿಸ್ಥಿತಿಗೆ ಅನಿಲ್ ಅಂಬಾನಿ ತಲುಪಿದ್ದಾರೆ. ಇತ್ತ ಅಣ್ಣ ಮುಖೇಶ್ ಅಂಬಾನಿ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದಾರಾದರೂ, ಇದಕ್ಕೆ ಪ್ರತಿಯಾಗಿ ಅನಿಲ್ ತಮ್ಮ ಸ್ಪೆಕ್ಟ್ರಮ್ ನ್ನು ಮುಖೇಶ್ ಅಂಬಾನಿಗೆ ನೀಡಬೇಕಾಗುತ್ತದೆ.

ಅನಿಲ್ ಅವರಿಂದ ಸ್ಪೆಕ್ಟ್ರಮ್ ಪಡೆದು ಅದಕ್ಕೆ ಪ್ರತಿಯಾಗಿ ಮುಖೇಶ್ ಸಹೋದರನಿಗೆ 17 ಸಾವಿರ ಕೋಟಿ ರೂ. ನೀಡಲಿದ್ದಾರೆ. ಇದರಿಂದ ಅನಿಲ್ ಅವರ ಸಾಲದ ಹೊರೆ ತುಸು ತಗ್ಗಲಿದೆ.

ಆದರೆ ಅನಿಲ್ ಅಂಬಾನಿ ಅವರ ಸ್ಪೆಕ್ಟ್ರಮ್ ಮುಖೇಶ್ ಅಂಬಾನಿ ಅವರ ಒಡೆತನದ ಜಿಯೋಗೆ ಬಳಕೆಯಾಗುವುದರಿಂದ, ತಮ್ಮ ನೆಟವರ್ಕ್ ವಿಸ್ತರಿಸುವ ಸುವರ್ಣಾವಕಾಶ ಮುಖೇಶ್ ಅಂಬಾನಿ ಅವರಿಗೆ ದೊರೆಯಲಿದೆ.

ಈ ಮೊದಲು 2010ರವರೆಗೆ ಮುಖೇಶ್ ಒಡೆತನದ ರಿಲಯನ್ಸ್ ಇಂಡಸ್ಟ್ರಿಸ್ ಟೆಲಿಕಾಂ ಕ್ಷೇತ್ರದಲ್ಲಿ ಕಾಲಿಡಬಾರದು ಎಂಬ ಸಹೋದರರ ನಡುವಿನ ಒಪ್ಪಂದ ಮುಗಿದು ದಶಕಗಳಾಗುತ್ತಾ ಬಂದಿದೆ.

ಈ ಮಧ್ಯೆ ರಿಲಯನ್ಸ್ ಜಿಯೋ ಸ್ಥಾಪನೆಯಾಗಿ ದೇಶದ ಟೆಲಿಕಾಂ ಕ್ಷೇತ್ರದಲ್ಲಿ ಹೊಸ ಕ್ರಾಂತಿಯನ್ನೇ ಉಂಟು ಮಾಡಿತು. ಇದೀಗ ಅನಿಲ್ ಅಂಬಾನಿ ಅವರ ಸ್ಪೆಕ್ಟ್ರಮ್ ಪಡೆಯಲಿರುವ ಮುಖೇಶ್, ತಮ್ಮ ಜಿಯೋ ನೆಟವರ್ಕ್ ಕ್ಷೇತ್ರವನ್ನು ಮತ್ತಷ್ಟು ವಿಸ್ತರಿಸಲಿರುವುದು ಸುಳ್ಳಲ್ಲ.

ಎಲ್ಲಾ ಮಾರಿಬಿಡಿ: ದಿವಾಳಿಯಾದ ಅಂಬಾನಿ ಮಾಡ್ತಿದ್ದಾರೆ ಗಡಿಬಿಡಿ!

ರಾಮ್-ಲಖನ್ ಕಹಾನಿ: ಅನಿಲ್ ಹಣೆಬರಹ ಬದಲಿಸಿದ ಮುಖೇಶ್ ಅಂಬಾನಿ!

ಬಂಗಲೆಯಿಂದ ಬೀದಿಗೆ: ಏನಾಗಿದೆ ಅಣ್ಣನ ಬಿಟ್ಟ ಅನಿಲ್ ಬುದ್ಧಿಗೆ?

ತಮ್ಮ ಸಂಕಷ್ಟದಲ್ಲಿ, ಮಗ ‘ಆಕಾಶ’ದಲ್ಲಿ: ಮುಖೇಶ್ ಬ್ಯುಸಿ ಮದುವೆಯಲ್ಲಿ!