ವೈಯಕ್ತಿಕ ಸಾಲಕ್ಕೆ ಸಂಬಂಧಿಸಿ RBI ಮಹತ್ವದ ಸೂಚನೆ; ಸ್ಥಿರ, ಫ್ಲೋಟಿಂಗ್ ಬಡ್ಡಿದರದ ನಡುವೆ ಬದಲಾವಣೆಗೆ ಅವಕಾಶ

ವೈಯಕ್ತಿಕ ಸಾಲಗಾರರಿಗೆ ಸ್ಥಿರ ಹಾಗೂ ಫ್ಲೋಟಿಂಗ್ ಎರಡೂ ಬಡ್ಡಿದರ ಆಯ್ಕೆಗಳನ್ನು ಬ್ಯಾಂಕ್ ಹಾಗೂ ಎನ್ ಬಿಎಫ್ ಸಿ ನೀಡಬೇಕು ಎಂದು ಆರ್ ಬಿಐ ಸೂಚಿಸಿದೆ. ಹಾಗೆಯೇ  ವೈಯಕ್ತಿಕ ಸಾಲಕ್ಕೆ ಸಂಬಂಧಿಸಿ ನೀಡಿರುವ ನಿರ್ದೇಶನಗಳನ್ನು 2023ರ ಡಿಸೆಂಬರ್ 31ರೊಳಗೆ ಅನುಷ್ಠಾನಗೊಳಿಸುವಂತೆ ತಿಳಿಸಿದೆ. 

RBI says personal loans will have both categories of fixed floating interest rates anu

ಮುಂಬೈ(ಆ.18): ಬ್ಯಾಂಕ್ ಸಾಲಗಳಿಗೆ ಸಂಬಂಧಿಸಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಕೆಲವು ನಿರ್ದೇಶನಗಳನ್ನು ಜಾರಿ ಮಾಡಿದೆ. ಅದರಲ್ಲೂ ವೈಯಕ್ತಿಕ ಸಾಲಕ್ಕೆ ಸಂಬಂಧಿಸಿ ಮಹತ್ವದ ಸೂಚನೆ ನೀಡಿದೆ. ಬ್ಯಾಂಕ್ ಗಳಿಗೆ ಎಲ್ಲ ಸ್ವಾತಂತ್ರ್ಯ ನೀಡಲಾಗಿದೆ. ಹೀಗಾಗಿ ವೈಯಕ್ತಿಕ ಸಾಲಕ್ಕೆ ಸಂಬಂಧಿಸಿ ಸ್ಥಿರ ಹಾಗೂ ಫ್ಲೋಟಿಂಗ್ ಎರಡೂ ಬಡ್ಡಿದರ ವಿಭಾಗಗಳನ್ನು ಹೊಂದಿರಬೇಕು ಎಂದು ಶುಕ್ರವಾರ ತಿಳಿಸಿದೆ. ಈ ಎರಡರಲ್ಲಿ ಒಂದನ್ನು ಆಯ್ಕೆ ಮಾಡುವ ಅವಕಾಶವನ್ನು ಸಾಲಗಾರರಿಗೆ ನೀಡಬೇಕು. ಇದರಿಂದ ವೈಯಕ್ತಿಕ ಸಾಲ ಪಡೆಯೋರಿಗೆ ಬಡ್ಡಿದರಕ್ಕೆ ಸಂಬಂಧಿಸಿ ಆಯ್ಕೆಗಳಿರುತ್ತವೆ ಎಂದು ಆರ್ ಬಿಐ ಹೇಳಿದೆ. ಅಲ್ಲದೆ, ವೈಯಕ್ತಿಕ ಸಾಲಕ್ಕೆ ಸಂಬಂಧಿಸಿ ನೀಡಿರುವ ನಿರ್ದೇಶನಗಳನ್ನು 2023ರ ಡಿಸೆಂಬರ್ 31ರೊಳಗೆ ಅನುಷ್ಠಾನಗೊಳಿಸುವಂತೆ ಬ್ಯಾಂಕ್ ಹಾಗೂ ಎನ್ ಬಿಎಫ್ ಸಿಗಳಿಗೆಆರ್ ಬಿಐ ಸೂಚಿಸಿದೆ. ಇನ್ನು ಈಗಾಗಲೇ ಸಾಲ ಪಡೆದಿರೋರಿಗೆ ಬಡ್ಡಿದರಕ್ಕೆ ಸಂಬಂಧಿಸಿ ಎರಡು ಆಯ್ಕೆಗಳಿರುವ ಬಗ್ಗೆ ಸೂಕ್ತ ಮಾಧ್ಯಮದ ಮೂಲಕ ಮಾಹಿತಿ ನೀಡುವಂತೆ ಕೂಡ ತಿಳಿಸಿದೆ. 

ಇಎಂಐ ಆಧಾರಿತ ಫ್ಲೋಟಿಂಗ್ ದರದ ವೈಯಕ್ತಿಕ ಸಾಲಗಳನ್ನು ನೀಡುವ ಸಮಯದಲ್ಲಿ ಬ್ಯಾಂಕ್ ಗಳು ಸಾಲ ಪಡೆಯುವವರ ಮರುಪಾವತಿ ಸಾಮರ್ಥ್ಯವನ್ನು ಅರಿತುಕೊಳ್ಳೋದು ಅಗತ್ಯ. ಇದರಿಂದ ಐಎಂಐ ಹೆಚ್ಚಳ ಅಥವಾ ಸಾಲದ ಅವಧಿ ವಿಸ್ತರಣೆಗೆ ಸಾಲಗಾರರಿಗೆ ಸಾಕಷ್ಟು ಅವಕಾಶ ಇರುವಂತೆ ನೋಡಿಕೊಳ್ಳಲು ಸಾಧ್ಯವಾಗುತ್ತದೆ. ಸಾಲದ ಅವಧಿಯಲ್ಲಿ ಬಡ್ಡಿದರದಲ್ಲಿ ಹೆಚ್ಚಳವಾದ್ರೆ ಅಧಿಕ ಇಎಂಐ ಪಾವತಿಸಲು ಅಥವಾ ಅವಧಿ ವಿಸ್ತರಣೆಗೆ ಸಾಲಗಾರರಿಗೆ ಅವಕಾಶ ಸಿಗುತ್ತದೆ ಎಂದು ಆರ್ ಬಿಐ ಹೇಳಿದೆ.\

ಸಾಲದ ಮೇಲೆ ಬ್ಯಾಂಕ್ ದಂಡ ರೂಪದಲ್ಲಿ ಹೆಚ್ಚುವರಿ ಬಡ್ಡಿ ವಿಧಿಸುವಂತಿಲ್ಲ; ಹೊಸ ಮಾರ್ಗಸೂಚಿ ಬಿಡುಗಡೆಗೊಳಿಸಿದ RBI

ಇನ್ನು ಸಾಲ ನೀಡುವ ಸಮಯದಲ್ಲೇ ಬ್ಯಾಂಕ್ ಗಳು ಸಾಲಗಾರರಿಗೆ ರೆಪೋ ದರದಲ್ಲಿ ಬದಲಾವಣೆಯಾದ್ರೆ ಹೇಗೆ ಅದು ಬಡ್ಡಿದರದ ಮೇಲೆ ಪರಿಣಾಮ ಬಿರುತ್ತದೆ ಎಂಬುದನ್ನು ತಿಳಿಸಬೇಕು. ಹಾಗೆಯೇ ಸಾಲದ ಮೇಲಿನ ಬಡ್ಡಿದರ ಹೆಚ್ಚಳವಾದ ಸಂದರ್ಭದಲ್ಲಿ ಇಎಂಐ ಮೊತ್ತದಲ್ಲಿ ಅಥವಾ ಸಾಲದ ಅವಧಿಯಲ್ಲಿ ಇಲ್ಲವೇ ಎರಡರಲ್ಲೂ ಬದಲಾವಣೆಯಾಗುವ ಬಗ್ಗೆ ಅವರಿಗೆ ಮಾಹಿತಿ ನೀಡಬೇಕು. ಹಾಗೆಯೇ ಇಎಂಐ /ಸಾಲದ ಅವಧಿ ಅಥವಾ ಎರಡರಲ್ಲೂ ಯಾವುದೇ ಏರಿಕೆಯಾದ್ರೆ ಸಾಲಗಾರರಿಗೆ ಸೂಕ್ತ ಮಾಧ್ಯಮದ ಮೂಲಕ ತಕ್ಷಣ ಮಾಹಿತಿ ನೀಡಬೇಕು ಎಂದು ಆರ್ ಬಿಐ ನಿರ್ದೇಶನ ನೀಡಿದೆ. 

ಬಡ್ಡಿದರವನ್ನು ಮರುನಿಗದಿಪಡಿಸುವ ಸಮಯದಲ್ಲಿ ಬ್ಯಾಂಕ್ ಗಳು ಮಂಡಳಿಯಿಂದ ಅನುಮೋದನೆ ಪಡೆದ ನೀತಿಗೆ ಅನುಗುಣವಾಗಿ ಸಾಲಗಾರರಿಗೆ ಸ್ಥಿರ ಬಡ್ಡಿದರಕ್ಕೆ ಬದಲಾಯಿಸಿಕೊಳ್ಳಲು ಅವಕಾಶ ಕಲ್ಪಿಸಬೇಕು ಎಂದು ನಿರ್ದೇಶನ ನೀಡಲಾಗಿದೆ. ಇನ್ನು ಸಾಲಗಾರರು ಸಾಲದ ಅವಧಿಯಲ್ಲಿ ಎಷ್ಟು ಬಾರಿ ಈ ರೀತಿ ಬಡ್ಡಿದರದ ವಿಧವನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶವಿದೆ ಎಂಬುದನ್ನು ಕೂಡ ನಿಯಮದಲ್ಲಿ ಉಲ್ಲೇಖಿಸುವಂತೆ ಬ್ಯಾಂಕ್ ಗಳಿಗೆ ಸಲಹೆ ನೀಡಲಾಗಿದೆ.

ಇನ್ನು ಸಾಲವನ್ನು ಅವಧಿಗೂ ಮುನ್ನ ಪಾವತಿಸುವ ಅವಕಾಶ ನೀಡುವಂತೆ ತಿಳಿಸಲಾಗಿದೆ. ಸಾಲವನ್ನು ಭಾಗವಾಗಿ ಅಥವಾ ಪೂರ್ಣ ಪ್ರಮಾಣದಲ್ಲಿ ಸಾಲದ ಅವಧಿಯಲ್ಲಿ ಯಾವುದೇ ಸಮಯದಲ್ಲಿ ಪಾವತಿಸಲು ಅವಕಾಶ ನೀಡುವಂತೆ ಆರ್ ಬಿಐ ಬ್ಯಾಂಕ್ ಗಳಿಗೆ ಮಾಹಿತಿ ನೀಡಿದೆ. 
ದಂಡವನ್ನು ಬಡ್ಡಿ ರೂಪದಲ್ಲಿ ವಿಧಿಸುವಂತಿಲ್ಲ

Udgam Portal: ಅಜ್ಜ-ಅಜ್ಜಿ ಇಟ್ಟ ನಿಧಿಗಾಗಿ ಇನ್ನು ಹುಡುಕಾಟ ಬೇಕಿಲ್ಲ.. ಆರ್‌ಬಿಐ ಪರಿಚಯಿಸಿದೆ ಉದ್ಗಮ್‌ ಪೋರ್ಟಲ್‌..!

ಸಾಲ ಖಾತೆಗಳ ಮೇಲೆ ಬ್ಯಾಂಕ್ ಗಳು ದಂಡ ವಿಧಿಸುವ ಪ್ರಕ್ರಿಯೆ ಕುರಿತು ಕೂಡ ಆರ್ ಬಿಐ ಇಂದು (ಆ.18) ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ.  ಈ ಹೊಸ ಮಾರ್ಗಸೂಚಿಗಳು 2024ರ ಜನವರಿ 1ರಿಂದ ಜಾರಿಗೆ ಬರಲಿವೆ. ಇದರ ಅನ್ವಯ ಸಾಲ ಒಪ್ಪಂದದಲ್ಲಿನ ನಿಯಮಗಳು ಹಾಗೂ ಷರತ್ತುಗಳನ್ನು ಪಾಲಿಸದ ಸಂದರ್ಭದಲ್ಲಿ ಬ್ಯಾಂಕ್ ಗಳು ದಂಡ ವಿಧಿಸುವಾಗ ಅದನ್ನು 'ದಂಡ ಶುಲ್ಕ' ಎಂದು ಪರಿಗಣಿಸಬೇಕೇ ಹೊರತು 'ದಂಡ ಬಡ್ಡಿ'ಯ ರೂಪದಲ್ಲಿ ವಿಧಿಸುವಂತಿಲ್ಲ. ಅಂದರೆ ಸಾಲದ ಬಡ್ಡಿದರಕ್ಕೆ ಈ ದಂಡ ಬಡ್ಡಿಯನ್ನು ಸೇರಿಸಿ ಸಾಲಗಾರರ ಮೇಲೆ ಹೆಚ್ಚಿನ ಹೊರೆ ವಿಧಿಸುವಂತಿಲ್ಲ ಎಂದು ಆರ್ ಬಿಐ ಬ್ಯಾಂಕ್ ಗಳಿಗೆ ಸೂಚನೆ ನೀಡಿದೆ.

Latest Videos
Follow Us:
Download App:
  • android
  • ios