Asianet Suvarna News Asianet Suvarna News

ಕೋ-ಆಪರೇಟಿವ್ ಬ್ಯಾಂಕ್ ವಿತ್ ಡ್ರಾ ಮಿತಿ ಹೆಚ್ಚಳ!

ವರ್ಷಾಂತ್ಯಕ್ಕೆ ಸಿಹಿ ಸುದ್ದಿ ನೀಡಿದ ರಿಸರ್ವ್ ಬ್ಯಾಂಕ್| ಕೋ-ಆಪರೇಟಿವ್ ಬ್ಯಾಂಕ್ ವಿತ್ ಡ್ರಾ ಮಿತಿ ಹೆಚ್ಚಿಸಿದ ಆರ್‌ಬಿಐ| ಮುಂಬೈನ ಸಿಟಿ ಕೋ-ಆಪರೇಟಿವ್ ಬ್ಯಾಂಕ್ ಮಿತಿ ಹೆಚ್ಚಳ| 1 ಸಾವಿರ ರೂ.ದಿಂದ 5 ಸಾವಿರ ರೂ. ಗೆ ಮಿತಿ ಹೆಚ್ಚಳ

RBI Relaxes Withdrawal Limit for Depositors of Mumbai Co-Operative Bank
Author
Bengaluru, First Published Dec 28, 2018, 5:08 PM IST

ಮುಂಬೈ(ಡಿ.28): ಮುಂಬೈನ ಸಿಟಿ ಕೋ-ಆಪರೇಟಿವ್ ಬ್ಯಾಂಕ್‌ನಲ್ಲಿ ಖಾತೆ ಹೊಂದಿರುವವರ ವಿತ್​​​ ಡ್ರಾ ಮಾಡುವ ಹಣದ ಮಿತಿಯನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 5 ಸಾವಿರ ರೂ.ಗೆ ಹೆಚ್ಚಿಸಿದೆ.

ಸಹಕಾರಿ ಬ್ಯಾಂಕ್ ಹಣಕಾಸಿನ ಮುಗ್ಗಟ್ಟು ಎದುರಿಸುತ್ತಿದ್ದ ಹಿನ್ನೆಲೆಯಲ್ಲಿ ಕಳೆದ ಏಪ್ರಿಲ್‌ನಲ್ಲಿ ಆರ್‌ಬಿಐ ವಿತ್ ಡ್ರಾ ಮಿತಿಯನ್ನು 1 ಸಾವಿರ ರೂ. ಗೆ ಮಿತಿಗೊಳಿಸಿತ್ತು.

ಇದೀಗ ಬ್ಯಾಂಕ್ ಹಣಕಾಸಿನ ಸ್ಥಿತಿ ಸುಧಾರಿಸಿದ ಹಿನ್ನೆಲೆಯಲ್ಲಿ ಎಸ್‌ಬಿ ಅಕೌಂಟ್ ಅಥವಾ ಚಾಲ್ತಿ ಖಾತೆ ಹೊಂದಿರುವವರ ವಿತ್ ಡ್ರಾ ಮಿತಿಯನ್ನು 5 ಸಾವಿರ ರೂ.ಗೆ ಹೆಚ್ಚಿಸಿದೆ.

ಆರ್ ಬಿಐ ಅನುಮತಿ ಇಲ್ಲದೆಯೇ ಸಿಟಿ ಕೋ-ಆಪರೇಟಿವ್ ಬ್ಯಾಂಕ್ ಯಾವುದೇ ಸಾಲ ನೀಡುವುದು, ಮುಂಗಡ ಹಣ ನೀಡುವುದು ಅಥವಾ ಹೂಡಿಕೆ ಮಾಡುವುದಕ್ಕೆ ಅವಕಾಶ ಇಲ್ಲ.
 

Follow Us:
Download App:
  • android
  • ios