ರೆಪೊ ದರದಲ್ಲಿ ಬದಲಾವಣೆ ಮಾಡದ ಆರ್ಬಿಐ ಬ್ಯಾಂಕ್ ಗಳಿಗೆ ನೀಡಿದೆ ಗಿಫ್ಟ್
ಆರ್ ಬಿಐ ಮತ್ತೆ ಜನಸಾಮಾನ್ಯರನ್ನು ನಿರಾಶೆಗೊಳಿಸಿದೆ. ರೆಪೊ ದರದಲ್ಲಿ ಇಳಿಕೆ ಮಾಡದ ಆರ್ ಬಿಐ, ಬ್ಯಾಂಕ್ ಗಳಿಗೆ ಖುಷಿ ಸುದ್ದಿ ನೀಡಿದೆ. ಶಕ್ತಿಕಾಂತ್ ದಾಸ್ ದ್ವೈಮಾಸಿಕ ಪರಿಶೀಲನಾ ಸಭೆ ನಿರ್ಧಾರವನ್ನು ಮಾಧ್ಯಮಗಳ ಮುಂದಿಟ್ಟಿದ್ದಾರೆ.
ರಿಸರ್ವ್ ಬ್ಯಾಂಕ್ (Reserve Bank), ನಾಗರಿಕರಿಗೆ ಬೇಸರದ ಸುದ್ದಿ ನೀಡಿದೆ. ಆದ್ರೆ ಬ್ಯಾಂಕ್ (Bank) ಗಳಿಗೆ ಭರ್ಜರಿ ಉಡುಗೊರೆ ನೀಡಿದೆ. ಹಣಕಾಸು ನೀತಿ ಸಮಿತಿಯ (PMC) ದ್ವೈಮಾಸಿಕ ಪರಿಶೀಲನಾ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರಗಳನ್ನು ರಿಸರ್ವ್ ಬ್ಯಾಂಕ್ ಇಂದು ಪ್ರಕಟಿಸಿದೆ. ರಿಸರ್ವ್ ಬ್ಯಾಂಕ್ ಈ ಬಾರಿಯೂ ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಈ ಬಗ್ಗೆ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್ (Reserve Bank Governor Shaktikanta Das) ಮಾಹಿತಿ ನೀಡಿದ್ದಾರೆ.
ಹಣಕಾಸು ನೀತಿ ಸಮಿತಿಯ ದ್ವೈಮಾಸಿಕ ಸಭೆ ಬುಧವಾರ ಆರಂಭವಾಗಿತ್ತು. ಇಂದು ಸಭೆಯ ನಿರ್ಧಾರ ಹೊರ ಬಿದ್ದಿದೆ. ಸಭೆ, ರೆಪೊ ದರ (repo rate )ದಲ್ಲಿ ಬದಲಾವಣೆ ಮಾಡದಿರುವ ನಿರ್ಧಾರ ತೆಗೆದುಕೊಂಡಿದೆ. ಈ ಬಾರಿಯೂ ರಿಸರ್ವ್ ಬ್ಯಾಂಕ್, ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡುವುದಿಲ್ಲ ಎಂದು ತಜ್ಞರು ನಂಬಿದ್ರು. ಆದ್ರೆ ಹಣದುಬ್ಬರದ ದೃಷ್ಟಿಯಿಂದ ಈ ಬಾರಿ ರಿಸರ್ವ್ ಬ್ಯಾಂಕ್ ರೆಪೊ ದರವನ್ನು ತಗ್ಗಿಸಲಿದೆ ಎಂದು ನಿರೀಕ್ಷಿ ಜನಸಾಮಾನ್ಯರಿಗಿತ್ತು.
ಜಿಯೋ ಹೊಸ ವರ್ಷದ ಬಂಪರ್, ಕೇವಲ 200 ರೂಪಾಯಿ ಒಳಗೆ 3 ಹೈಸ್ಪೀಡ್ 5ಜಿ ಪ್ಲಾನ್!
ಈಗಿನ ರೆಪೊ ದರ ಎಷ್ಟಿದೆ? : ಈ ಹಿಂದೆ ರೆಪೊ ದರ ಶೇಕಡಾ 6.5ರಷ್ಟಿತ್ತು. ಇದನ್ನೇ ಮುಂದುವರೆಸಲು ರಿಸರ್ವ್ ಬ್ಯಾಂಕ್ ನಿರ್ಧರಿಸಿದೆ. ರಿಸರ್ವ್ ಬ್ಯಾಂಕ್ 11ನೇ ಬಾರಿಯೂ ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಎಸ್ ಡಿಎಫ್ (SDF) ದರವು ಶೇಕಡಾ 6.25 ಮತ್ತು ಎಂಎಸ್ಎಫ್ (MSF) ದರವು ಶೇಕಡಾ 6.75ರಷ್ಟೇ ಇದ್ದು, ಅದ್ರಲ್ಲೂ ಯಾವುದೇ ಬದಲಾವಣೆಯಾಗಿಲ್ಲ.
ರಿಸರ್ವ್ ಬ್ಯಾಂಕ್ ಈ ನಿರ್ಧಾರದ ಪರಿಣಾಮ ಏನು? : ರಿಸರ್ವ್ ಬ್ಯಾಂಕ್ ಈ ಬಾರಿಯೂ ರೆಪೊ ದರದಲ್ಲಿ ಇಳಿಕೆ ಮಾಡಿಲ್ಲ. ಇದ್ರಿಂದ ದುಬಾರಿ ಸಾಲಗಳಿಂದ ಜನರಿಗೆ ಪರಿಹಾರ ಸಿಕ್ಕಿಲ್ಲ. ರೆಪೊ ದರ ಇಳಿಕೆಯಾದ್ರೆ, ಬ್ಯಾಂಕ್‌ಗಳು ಜನರಿಗೆ ಅಗ್ಗದ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ನೀಡ್ತಿದ್ದವು. ಆದ್ರೆ ಈಗ ಹಳೆ ದರವೇ ಮುಂದುವರೆಯಲಿದೆ. ಇದ್ರಿಂದಾಗಿ ಜನರ ಆದಾಯದ ಮೇಲೆ ಹೆಚ್ಚಿನ ಹೊಣೆ ಮುಂದುವರೆಯಲಿದೆ.
3 ಕೋಟಿ ಎಫ್‌ಡಿ ಹಣ ಕದ್ದ ಎಚ್‌ಡಿಎಫ್‌ಸಿ ಬ್ಯಾಂಕ್ ಉದ್ಯೋಗಿ, ಆರ್‌ಬಿಐಗೆ ನೋಟಿಸ್ ಕಳಿಸಿದ
ಬ್ಯಾಂಕ್ ಗಳಿಗೆ ಭರ್ಜರಿ ಉಡುಗೊರೆ : ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ್ ದಾಸ್, ಬ್ಯಾಂಕ್ಗಳಿಗೆ ಉಡುಗೊರೆ ನೀಡಿದ್ದಾರೆ. ನಗದು ಮೀಸಲು ಅನುಪಾತ (CRR) ದಲ್ಲಿ ಇಳಿಕೆ ಮಾಡಲಾಗಿದೆ. ಇದು ಶೇಕಡಾ 4.5 ರಿಂದ ಶೇಕಡಾ 4 ಕ್ಕೆ ಇಳಿದಿದೆ. ಅಂದ್ರೆ 50 ಬೇಸಿಸ್ ಪಾಯಿಂಟ್‌ಗಳಷ್ಟು ಕಡಿಮೆಯಾಗಿದೆ. ಈ ಕಡಿತವನ್ನು ಎರಡು ಬಾರಿ ಮಾಡಲಾಗುವುದು. ಡಿಸೆಂಬರ್ 14 ರಿಂದ 25 ಬೇಸಿಕ್ ಪಾಯಿಂಟ್ ಕಡಿತವಾದ್ರೆ, ಎರಡನೇ ಕಟ್ ಡಿಸೆಂಬರ್ 28 ರಿಂದ ಅನ್ವಯವಾಗಲಿದೆ. ಆಗ 25 ಬೇಸಿಕ್ ಪಾಯಿಂಟ್ ಇಳಿಕೆಯಾಗಲಿದೆ. ಸಿಆರ್‌ಆರ್ ಕಡಿತ, ಬ್ಯಾಂಕ್‌ಗಳಿಗೆ ದೊಡ್ಡ ರಿಲೀಫ್ ನೀಡಿದೆ. ಬ್ಯಾಂಕ್‌ಗಳು ನಗದು ಸಮಸ್ಯೆ ಎದುರಿಸುತ್ತಿವೆ ಎಂದು ಕೆಲ ಸಮಯದಿಂದ ಹೇಳಲಾಗುತ್ತಿತ್ತು. ಲಿಕ್ವಿಡಿಟಿ ಸಮಸ್ಯೆಯಿಂದ ಬ್ಯಾಂಕ್‌ಗಳಿಗೆ ಸಹಾಯ ಮಾಡಲು ಆರ್‌ಬಿಐ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಇದ್ರಿಂದಾಗಿ ಬ್ಯಾಂಕ್‌ಗಳು ನಗದು ಹರಿವಿನ ಕೊರತೆಯನ್ನು ಎದುರಿಸುವುದಿಲ್ಲ. ಈ ಹಿಂದೆ ಅಕ್ಟೋಬರ್ 2022 ರಲ್ಲಿ, ಸಿಆರ್ ಆರ್ನಲ್ಲಿ ಬದಲಾವಣೆ ಮಾಡಲಾಗಿತ್ತು. ಅಂದರೆ ಸುಮಾರು 24 ತಿಂಗಳ ನಂತರ ಈಗ ಮತ್ತೆ ಬದಲಾವಣೆಯಾಗಿದೆ. ಸಿಆರ್‌ಆರ್‌ನಲ್ಲಿನ ಕಡಿತವು ಆರ್‌ಬಿಐನ ಸುಲಭ ಹಣದ ನೀತಿಯ ಭಾಗವಾಗಿದೆ.